ಇದು ವೈದ್ಯಕೀಯ ಜಿಹಾದಿಗಳ ನಿಜ ಸ್ವರೂಪ !

ವೈದ್ಯ ಪರೀಕ್ಷಿತ ಶೆವಡೆ

ಭಾರತ ದೇಶದ ರಾಷ್ಟ್ರೀಯ ಆಯುರ್ವಿಜ್ಞಾನ ಆಯೋಗ ಹೊಸದಾದ ಲಾಂಛನವನ್ನು ಸ್ವೀಕರಿಸಿದ್ದು ಅದರಲ್ಲಿ ಆಯುರ್ವೇದದ ದೇವತೆಯಾದ ಭಗವಾನ ಧನವಂತರಿಯವರ ಬಣ್ಣದ ಪ್ರತಿಮೆಯನ್ನು ಅಳವಡಿಸಲಾಗಿದೆ. ಇದನ್ನು ‘ಎಕ್ಸ್ (ಹಿಂದಿನ ಟ್ವಿಟರ್) ನಂತಹ ಸಮಾಜಮಾಧ್ಯಮದಲ್ಲಿ ಪಾಶ್ಚಾತ್ಯ ವೈದ್ಯಕೀಯ ಪದವೀಧರರು ಟೀಕಿಸಲು ಆರಂಭಿಸಿದ್ದಾರೆ. ‘ಐ.ಎಮ್.ಎ. (ಇಂಡಿಯನ್ ಮೆಡಿಕಲ್ ಎಸೋಸಿಯೇಶನ್) ಈ ಪಾಶ್ಚಾತ್ಯ ವೈದ್ಯಕೀಯ ಪದವೀಧರರ ಎಲ್ಲಕ್ಕಿಂತ ದೊಡ್ಡ ಖಾಸಗಿ ಸಂಘಟನೆಯು ಈ ಬದಲಾವಣೆಯು ಅಸ್ವೀಕಾರವೆಂದು ಆಯೋಗಕ್ಕೆ ಪತ್ರ ಕಳುಹಿಸಿದೆ. ಒಂದೆಡೆ ‘ಧನ್ವಂತರಿ ದೇವರು ಆಯುರ್ವೇದದ ಗುತ್ತಿಗೆದಾರರಾಗಿರದೆ ಆರೋಗ್ಯದೇವತೆ ಆಗಿರುವುದರಿಂದ ಅದು ಎಲ್ಲರಿಗೂ ಅನ್ವಯವಾಗುತ್ತದೆ, ಎಂದು ಹೇಳುತ್ತಾ ಆಯುರ್ವೇದದ ಅಸ್ತಿತ್ವವನ್ನೇ ಅಳಿಸಿ ಹಾಕಲು ಪ್ರಯತ್ನಿಸಲು ಭಾರತೀಯತ್ವದ ಮುಖವಾಡ ಧರಿಸುವುದು, ಇನ್ನೊಂದೆಡೆ ಈ ಪ್ರತ್ಯೇಕ ಲಾಂಛನಕ್ಕೆ ಮತಾಂಧರು ಮಾತ್ರವಲ್ಲ, ಕಪಟ ವಿಜ್ಞಾನದ ಪ್ರತೀಕ ಎಂದು ಹೇಳುತ್ತಾ ಅಣಕಿಸುತ್ತಾ ತಮ್ಮ ನಿಜಸ್ವರೂಪವನ್ನು ತೋರಿಸುವುದು, ಇದು ವೈದ್ಯಕೀಯ ಜಿಹಾದಿಗಳ ನಿಜಸ್ವರೂಪ ! ತುಂಬಾ ಕಡಿಮೆ ಪ್ರಮಾಣದಲ್ಲಿ ಪಾಶ್ಚಾತ್ಯ ವೈದ್ಯಕೀಯ ಪದವೀಧರು ಈ ಸ್ವಾಗತಾರ್ಹ ನಿರ್ಣಯದ ಪರವಾಗಿ ಸಮಾಜದ ಮಾಧ್ಯಮದಲ್ಲಿ ಮಾತನಾಡುತ್ತಿದ್ದಾರೆ, ಇದು ಖೇದಕರವಾಗಿದೆ. ಯಾರು ಮಾತನಾಡುತ್ತಿದ್ದಾರೊ, ಅವರಿಗೆ ಮನಃಪೂರ್ವಕ ಅಭಿನಂದನೆ.

ಈ ಸ್ವಾಗತಾರ್ಹ ನಿರ್ಣಯಕ್ಕಾಗಿ ಭಾರತ ಸರಕಾರಕ್ಕೆ ಧನ್ಯವಾದ ! ಯಾವುದೇ ಒತ್ತಡಕ್ಕೆ ಮಣಿಯದೆ ಈ ನಿರ್ಣಯವನ್ನು ಬದಲಾಯಿಸಬಾರದು ಎಂದು ವಿನಂತಿ ! ಪ್ರಶ್ನೆ ಕೇವಲ ಆಯುರ್ವೇದದ್ದಾಗಿರದೆ ಭಾರತೀಯ ಸಂಸ್ಕೃತಿ ಹಾಗೂ ಭಾರತೀಯತ್ವದ್ದಾಗಿದೆ. – ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೧.೧೨.೨೦೨೩) (ಆಧಾರ : ಫೇಸ್‌ಬುಕ್)