ಸನಾತನ ಧರ್ಮವನ್ನು ಅವಮಾನಿಸುವುದೆಂದರೆ, ತನ್ನ ಅಜ್ಞಾನವನ್ನು ಪ್ರದರ್ಶಿಸುವುದು !

ದುರ್ಗೇಶ ಪರುಳಕರ, ಲೇಖಕರು ಮತ್ತು ವ್ಯಾಖ್ಯಾನಕಾರರು, ಠಾಣೆ

ಸದ್ಯ ಸನಾತನ ಧರ್ಮದ ವಿಷಯದಲ್ಲಿ ಏನು ಬೇಕಾದರೂ ಮಾತನಾಡುವ ಮತ್ತು ಬರೆಯುವ ಜನರು ನಮ್ಮ ಸುತ್ತಮುತ್ತಲಿದ್ದಾರೆ. ‘ಏನಾದರೂ ಮಾಡುವುದು ಮತ್ತು ಸನಾತನ ಧರ್ಮಕ್ಕೆ ಹೆಸರನ್ನಿಡುವುದು ಮತ್ತು ಆ ಧರ್ಮವನ್ನು ನಷ್ಟಗೊಳಿಸಬೇಕು ಎಂಬ ತಮ್ಮ ಮಾನಸಿಕತೆಯನ್ನು ವ್ಯಕ್ತಗೊಳಿಸುವುದು, ಇದು ಬುದ್ಧಿವಾದದ ಲಕ್ಷಣವಲ್ಲ. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಂತವಾಙ್ಮಯ ಮುಂತಾದವುಗಳ ಅಭ್ಯಾಸವಿಲ್ಲದಿದ್ದರೂ ಸನಾತನ ಧರ್ಮದ ವಿರುದ್ಧ ಬರೆಯುತ್ತಾರೆ ಮತ್ತು ಮಾತನಾಡುತ್ತಾರೆ. ಇದು ಪಾಂಡಿತ್ಯದ ಅಥವಾ ಅಧ್ಯಯನಕಾರರ ಲಕ್ಷಣವೆಂದು ಹೇಳಲು ಬರುವುದಿಲ್ಲ. ಸನಾತನ ಧರ್ಮವು ದ್ವೇಷವನ್ನು ಹರಡುವ ಧರ್ಮವಲ್ಲ, ಅದು ಸರ್ವಸಮಾವೇಶಕವಾಗಿದೆ. ಜನರು ಅದರ ಅಪಕೀರ್ತಿಯನ್ನು ಮಾಡಿದರು. ಕೆಲವರು ಉದ್ದೇಶಪೂರ್ವಕವಾಗಿ ‘ಸನಾತನ ಧರ್ಮ, ಎಂದರೆ ವಿಕೃತಿ’, ಹೀಗೆ ಅರ್ಥವನ್ನು ಹಚ್ಚಿದರು. ಋಷಿಮುನಿಗಳ ಯೋಗ್ಯತೆ ಯನ್ನು ಗುರುತಿಸದೆ ‘ಎಲ್ಲವೂ ಹುರುಳಿಲ್ಲದ್ದಾಗಿದೆ’, ಎಂದು ಅಪಪ್ರಚಾರ ಮಾಡಲಾಯಿತು. ಬುದ್ಧಿ ಮತ್ತು ವಿಜ್ಞಾನದ ಸತ್ವಪರೀಕ್ಷೆಗೆ ಒಳಪಡುವ ಜಗತ್ತಿನ ಏಕೈಕ ಧರ್ಮವೆಂದರೆ, ಸನಾತನ ಧರ್ಮವಾಗಿದೆ. ಈ ವಾಸ್ತವಿಕತೆಯನ್ನು ಕಡೆಗಣಿಸಿ ಸನಾತನ ಧರ್ಮಕ್ಕೆ ಅಪಕೀರ್ತಿಯನ್ನು ತರುವ ಕಾರ್ಯವು ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಅನೇಕ ಪರಕೀಯ ಆಕ್ರಮಣಕಾರರು ಕೂಡ ಸನಾತನ ಧರ್ಮವನ್ನು ನಾಶ ಮಾಡಲು ಬಹಳಷ್ಟು ಪ್ರಯತ್ನಿಸಿದರು; ಆದರೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ.

ಸಮಾಜ ಜೀವನದ ವಿವಿಧ ಕಾಲಖಂಡಗಳಲ್ಲಿ ಸನಾತನ ಧರ್ಮದ ಮೇಲೆ ಮೇಲಿಂದಮೇಲೆ ಆಘಾತಗಳನ್ನು ಮಾಡಲಾಯಿತು; ಆದರೆ ಅದು ಈ ಹಿಂದೆಯೂ ಇತ್ತು, ಇಂದೂ ಅಸ್ತಿತ್ವದಲ್ಲಿದೆ, ಮುಂದೆಯೂ ಹಾಗೆಯೆ ಇರಲಿದೆ. ಸನಾತನ ಧರ್ಮದ ಈ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿ ಅದನ್ನು ಆಳವಾಗಿ ಅಧ್ಯಯನ ಮಾಡುವ ಬುದ್ಧಿಯು ಅದನ್ನು ಟೀಕಿಸುವವರಲ್ಲಿ ಇಲ್ಲ, ಇದು ಆಶ್ಚರ್ಯದ ಸಂಗತಿ ಆಗಿದೆ. ಸಮಾಜದಲ್ಲಿನ ಜನರು ಅದಕ್ಕೆ ಬೇಕಾದಂತೆ ಅರ್ಥವನ್ನು ಕಲ್ಪಿಸುತ್ತಾರೆ. ಇದರಿಂದ ಕೆಲವು ಮೂಲಭೂತ ತತ್ತ್ವಗಳ ವಿಷಯ ದಲ್ಲಿ ಸಂಶಯ ನಿರ್ಮಾಣವಾಗುತ್ತದೆ. ಮೂಲ ಗ್ರಂಥವನ್ನು ಓದದೆ

ಬೇರೆಯವರು ಹೇಳುವ ಅರ್ಥವನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಸಾರ ಲೇಖನ ಬರೆಯಲು ಪ್ರಯತ್ನಿಸಿದರೆ ನಾವು ನಮಗೆ ತಿಳಿಯದಂತೆಯೇ ಆ ಸರ್ವೋತ್ಕೃಷ್ಟ ಗ್ರಂಥದ ಮೇಲೆ ಅನ್ಯಾಯ ಮಾಡುತ್ತಿದ್ದೇವೆ, ಎನ್ನುವ ವಿವೇಕವೂ ಉಳಿಯುವುದಿಲ್ಲ.

ಕೇಳಿರುವ ವಿಷಯಗಳ ಮೇಲೆ ವಿಶ್ವಾಸವನ್ನಿಟ್ಟರೆ ನಮ್ಮ ವೈಚಾರಿಕ ವಿಚಾರಧಾರೆ ಎಂದಿಗೂ ಗಟ್ಟಿಯಾಗುವುದಿಲ್ಲ. ಅದು ಪೊಳ್ಳೇ ಆಗಿರುವುದು. ಇಂತಹ ಅಪರಿಪಕ್ವ ವಿಚಾರವನ್ನು ಆಧರಿಸಿರುವ ಯಾವುದೇ ಲೇಖನ ಅಥವಾ ಹೇಳಿಕೆಗಳು ಪಾಂಡಿತ್ಯ ಅಥವಾ ತತ್ವಜ್ಞಾನಿ ಗಳಿಗೆ ಸರಿಸಾಟಿಯಾಗಲಿಕ್ಕಿಲ್ಲ. ಯಾವುದಾದರೊಂದು ಸುಳ್ಳು ವಿಷಯ ಅಥವಾ ಚಾಣಾಕ್ಷದ ವಿಷಯವನ್ನು ಇತರರಿಗೆ ತಿಳಿಯದೇ ಪ್ರಚಾರ ಮಾಡಲಿಕ್ಕಿದ್ದರೆ, ಅದಕ್ಕೆ ಸತ್ಯದ ಆಧಾರ ನೀಡಲೇ ಬೇಕಾಗುವುದು, ಎಂಬುದು ಬುದ್ಧಿಭ್ರಷ್ಟರಿಗೆ ಚೆನ್ನಾಗಿ ತಿಳಿದಿರುತ್ತದೆ. ಅದೇ ರೀತಿ ಯಾರಿಗೆ ಸನಾತನ ಧರ್ಮವನ್ನು ಭ್ರಷ್ಟಗೊಳಿಸಲಿಕ್ಕಿದೆಯೋ, ಅವರೇ ಈ ಧರ್ಮದಲ್ಲಿನ ಅತ್ಯುತ್ತಮ ತತ್ತ್ವಗಳಿಗೆ ವಿಪರೀತ ಅರ್ಥವನ್ನು ತೆಗೆದರು. ಇದು ಅವರ ಈ ಬುದ್ಧಿಭ್ರಷ್ಟತನವನ್ನು ಅಡಗಿಸಲು ಅವರು ಮಾಡಿರುವ ತಂತ್ರವಾಗಿದೆ. ಯಾರ ಬುದ್ಧಿ ಸರಿಯಾಗಿದೆಯೋ ಅಂತಹವನು ಇಂತಹ ಮೋಸಕ್ಕೆ ಮರುಳಾಗುವುದಿಲ್ಲ. ಅವನು ಮೂಲದ ವರೆಗೆ ಹೋಗಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಹೀಗೆ ಪ್ರಯತ್ನಿಸದೆ ಯಾರ ಮೇಲೆಯೂ ಟೀಕೆಯನ್ನು ಮಾಡಲಾಗುತ್ತದೆಯೋ. ಅದಕ್ಕೆ ಬುದ್ಧಿವಾದದ ಲಕ್ಷಣವೆಂದು ಹೇಳಲಾಗುವುದಿಲ್ಲ. ಸದ್ಯ ಬುದ್ಧಿಭ್ರಷ್ಟ ಜನರು ಸನಾತನ ಧರ್ಮಕ್ಕೆ ಅಪಕೀರ್ತಿಯನ್ನು ತರಲು ಆಂದೋಲನವನ್ನೇ ಆರಂಭಿಸಿದ್ದಾರೆ, ಅದರಲ್ಲಿ ಸಾಮಾನ್ಯ ಜನರು ಸಿಲುಕಬಾರದೆಂಬುದೇ ಈ ಲೇಖನದ ಪ್ರಯತ್ನವಾಗಿದೆ.

೧. ‘ಭಗವದ್ಗೀತೆ’ ಇದು ಸನಾತನ ಧರ್ಮದ ಆಧಾರಭೂತ ಗ್ರಂಥ

ಸನಾತನ ಧರ್ಮವು ಪ್ರಳಯದ ಮೊದಲಿಗೂ ಇತ್ತ್ತು ಮತ್ತು ಅದರ ನಂತರವೂ ಅಸ್ತಿತ್ವದಲ್ಲಿ ಇರಲಿದೆ. ‘ಸನಾತನ’ ಈ ಶಬ್ದದ ವ್ಯಾಖ್ಯೆಯನ್ನು ಈ ಮುಂದಿನಂತೆ ಮಾಡಲಾಗಿದೆ. – ‘ಸನಾತನೋ ನಿತ್ಯನೂತನಃ’ ಅಂದರೆ ಸನಾತನ ನಿತ್ಯನೂತನವಾಗಿದೆ. ಇದರ ಅರ್ಥ ಸನಾತನ ಧರ್ಮದಲ್ಲಿನ ತತ್ತ್ವಗಳು ತ್ರಿಕಾಲಾಬಾಧಿತವಾಗಿವೆ. ‘ಭಗವದ್ಗೀತೆ’ ಸನಾತನ ಧರ್ಮದ ಆಧಾರಭೂತ ಗ್ರಂಥ, ಉಪನಿಷತ್ತು, ಬ್ರಹ್ಮವಿದ್ಯೆ ಮತ್ತು ಯೋಗಶಾಸ್ತ್ರದ ಗ್ರಂಥವಾಗಿದೆ. ಏಕೆಂದರೆ ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಗೆ ‘ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಯಾಃ ಯೋಗಶಾಸ್ತ್ರೆ…’, ಅಂದರೆ ‘ಶ್ರೀಮದ್ಭಗವದ್ಗೀತಾರೂಪಿ ಉಪನಿಷತ್ ಮತ್ತು ಬ್ರಹ್ಮವಿದ್ಯೆ ಮತ್ತು ಯೋಗಶಾಸ್ತ್ರದ ವಿಷಯದಲ್ಲಿ ಈ ರೀತಿಯ ಶಬ್ದರಚನೆಯನ್ನು ಮಾಡಲಾಗಿದೆ. ಈ ಗ್ರಂಥವು ಎಂದಿಗೂ ಕಾಲಬಾಹ್ಯವಾಗುವುದಿಲ್ಲ. ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಜ್ಞಾನೇಶ್ವರಿ’ಯ ಕೊನೆಯ ಅಧ್ಯಾಯದಲ್ಲಿ ಸ್ಪಷ್ಟವಾದ ಶಬ್ದಗಳಲ್ಲಿ ಏನು ಹೇಳಿದ್ದಾರೆಂದರೆ. ‘ತೈಸೆಂ ಹೇಂ ನಿತ್ಯ ನೂತನ ದೇಖಿಜೆ | ಗೀತಾತತ್ತ್ವ ||’ (ಜ್ಞಾನೇಶ್ವರಿ, ಅಧ್ಯಾಯ ೧, ದ್ವಿಪದಿ ೭೧), ಅಂದರೆ ‘ಈ ಗೀತಾತತ್ತ್ವವು ನಿತ್ಯನೂತನವಾಗಿದೆ.’ ‘ಶ್ರೀಮದ್ಭಗವದ್ಗೀತೆ’ಯು ವೇದ ಮತ್ತು ಉಪನಿಷತ್‌ಗಳ ಸಾರವಾಗಿದೆ. ಅದ್ವೈತವಾದವು ಸನಾತನ ಧರ್ಮದ ಸಾರವಾಗಿದೆ.

೨. ಸನಾತನ ಧರ್ಮದ ಕಲಿಕೆಯನ್ನು ಆಚರಣೆಯಲ್ಲಿ ತರದೆ ಅದಕ್ಕೆ ದೋಷ ನೀಡುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ ?

ಈ ಕೆಳಗಿನ ಮಂತ್ರವು ಋಷಿಮುನಿಗಳಿಗೆ ಅದ್ವೈತದಲ್ಲಿ ಹೊಳೆಯಿತು. ಎಲ್ಲ ಜಗತ್ತಿನೊಂದಿಗೆ, ಚರಾಚರಸೃಷ್ಟಿಯೊಂದಿಗೆ ನಾವು ಏಕರೂಪವಾಗಬೇಕು. ಈ ಏಕರೂಪತೆಯನ್ನು ಅನುಭವಿಸಲು ನಮ್ಮ ಮನಸ್ಸು, ಬುದ್ಧಿ ಎಲ್ಲರನ್ನು ಸುಖಿಗೊಳಿಸಲು ಆತುರವಾಗಿರಬೇಕು, ಆಗ ಮಾತ್ರ ಈ ಸರ್ವೋಚ್ಚ ಆನಂದ ವನ್ನು ಸಹಜವಾಗಿ ಉಪಭೋಗಿಸಬಹುದು. ಇಂತಹ ಈ ಪರಮಾನಂದವನ್ನು ಅನುಭವಿಸಲು ಏನು ಮಾಡಬೇಕು ? ಎಂಬುದು ಈ ಮುಂದಿನ ಮಂತ್ರದಲ್ಲಿ ಹೇಳಲಾಗಿದೆ.

ಸಹ ನಾವವತು | ಸಹ ನೌ ಭುನಕ್ತು | ಸಹವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||

ಅರ್ಥ : ಪರಮಾತ್ಮಾ ನಮ್ಮನ್ನು ಗುರು-ಶಿಷ್ಯರನ್ನು ಒಟ್ಟಿಗೆ ರಕ್ಷಿಸಲಿ, ನಮಗೆ ಜೀವನದಲ್ಲಿ ಒಟ್ಟಿಗೆ ಆನಂದವನ್ನು ಪಡೆಯಲು ಸಾಧ್ಯವಾಗಲಿ. ನಮಗೆ ಒಟ್ಟಿಗೆ ಪರಾಕ್ರಮದಲ್ಲಿ ಹೆಸರುವಾಸಿ ಆಗಲು ಸಾಧ್ಯವಾಗಲಿ. ನಮ್ಮಿಬ್ಬರ ಅಧ್ಯಯನ ತೇಜಸ್ವಿಯಾಗಲಿ, ನಮ್ಮಿಬ್ಬರಲ್ಲಿ ಪರಸ್ಪರರ ಬಗ್ಗೆ ದ್ವೇಷಭಾವನೆ ಉತ್ಪನ್ನವಾಗದಿರಲಿ.

ಈ ಮಂತ್ರ ಕೇವಲ ಗುರು-ಶಿಷ್ಯರಿಗಷ್ಟೇ ಸೀಮಿತವಾಗಿಲ್ಲ್ಲ, ಎಂಬುದನ್ನು ಮೊದಲು ನಾವು ಗಮನದಲ್ಲಿಡಬೇಕು. ಸನಾತನ ಧರ್ಮವು ನೀಡಿರುವ ಈ ಕಲಿಕೆಯನ್ನು ಜನರು ಆಚರಿಸದಿದ್ದರೆ ಅದು ಸನಾತನ ಧರ್ಮದ ದೋಷವಾಗಿದೆಯೇ ಅಥವಾ ಜನರ ದೋಷವಾಗಿದೆ ? ರಸ್ತೆಯ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಅಪಘಾತವಾಗುವುದು, ಅಪಂಗತ್ವ ಬರುವುದು ಅಥವಾ ಅದರಲ್ಲಿ ಪ್ರಾಣವೇ ಹೋಗಬಹುದು. ರಸ್ತೆಯ ನಿಯಮಗಳನ್ನು ಪಾಲನೆ ಮಾಡದಿರುವುದರಿಂದ ಆಗುವ ಹಾನಿಗೆ ನಾವೇ ಕಾರಣ. ರಸ್ತೆಯ ನಿಯಮಗಳಲ್ಲ.
ಸಮರ್ಥ ರಾಮದಾಸಸ್ವಾಮಿಯವರು ಈ ಅದ್ವೈತದ ಸಿದ್ಧಾಂತವನ್ನು ಒಂದು ದ್ವಿಪದಿಯಲ್ಲಿ ಬಹಳ ಸುಲಭ ಭಾಷೆಯಲ್ಲಿ ತಿಳಿಸಿ ಹೇಳಿದ್ದಾರೆ. ಅದು ಹೀಗಿದೆ.

‘ಆಪಣಾಸ್ ಚಿಮೋಟ್ ಘೆತಲಾ | ತೇಣೆಂ ಕಾಸಾವಿಸ ಜಾಲಾ |
ಆಪಣಾವರೂನ ದುಸಾಯಾಲಾ | ರಾಖತ ಜಾವೆಂ ||
– ದಾಸಬೋಧ, ದಶಕ ೧೨, ಸಮಾಸ ೧೦, ದ್ವಿಪದಿ ೨೪

ಅರ್ಥ : ನಮಗೆ ಯಾರಾದರೂ ಚಿವುಟಿದರೆ, ನಮ್ಮ ಜೀವಕ್ಕೆ ಕಸಿವಿಸಿಯಾಗುತ್ತದೆ, ಹಾಗೆಯೇ ನಾವು ಜನರ ದುಃಖದ ಕಲ್ಪನೆಯನ್ನು ಮಾಡಿಕೊಂಡು ಅವರಿಗೆ ದುಃಖವಾಗದಂತೆ ವರ್ತಿಸಬೇಕು. ಅವರನ್ನು ಪ್ರಸನ್ನರಾಗಿಡಬೇಕು.
– ಶ್ರೀ. ದುರ್ಗೇಶ ಜಯವಂತ ಪರೂಳಕರ್

ಇಂತಹ ಕಲಿಕೆಯನ್ನು ಪ್ರತಿಯೊಬ್ಬರೂ ತಮ್ಮ ಆಚರಣೆಯಲ್ಲಿ ತಂದರೆ, ಯಾರಿಗೂ ಯಾವುದೇ ರೀತಿಯ ತೊಂದರೆಯಾಗಲಿಕ್ಕಿಲ್ಲ; ಆದರೆ ಈ ಕಲಿಕೆ, ಈ ವಿಚಾರ, ಈ ಸಂಸ್ಕಾರವನ್ನು ನಾವು ತಿರಸ್ಕರಿಸಿದರೆ ಮತ್ತು ಅದರಿಂದ ಸಮಾಜದಲ್ಲಿ ದ್ವೇಷ ನಿರ್ಮಾಣವಾದರೆ, ಇತರರನ್ನು ಪೀಡಿಸುವ ಪ್ರವೃತ್ತಿ ಹೆಚ್ಚಾದರೆ, ಆ ದೋಷ ಆ ಬೋಧನೆ ಅಥವಾ ಸಂಸ್ಕಾರವನ್ನು ತಿರಸ್ಕರಿಸುವವರದ್ದಾಗಿರುತ್ತದೆ, ಎಂಬುದನ್ನು ನಾವು ಗಮನದಲ್ಲಿಡಬೇಕು. ಸನಾತನ ಧರ್ಮದ ಕಲಿಕೆಯಂತೆ ನಾವು ಕೃತಿ ಮಾಡದೆ ಅನಾವಶ್ಯಕ ಅದರಲ್ಲಿನ ದೋಷಗಳನ್ನು ತೋರಿಸುತ್ತಾ ಸಮಾಜದಲ್ಲಿ ತಿರುಗಾಡುವುದು, ಇದು ಸಜ್ಜನರ ಲಕ್ಷಣವೇ ? ಎಂಬುದನ್ನು ಅವರವರು ವಿಚಾರ ಮಾಡಬೇಕು.

೩. ಸಮಾಜದಲ್ಲಿ ದೋಷ ಉತ್ಪನ್ನವಾಗಿರುವುದರಿಂದ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆ ನಿರ್ಮಾಣವಾಗಿರುವುದು

ಋಷಿಮುನಿಗಳು ಯಾವುದೇ ವಿಷಯವನ್ನು ತಮಗಾಗಿ ಕೇಳಲಿಲ್ಲ. ಪೂರ್ಣ ಮನುಕುಲ ಮತ್ತು ಜೀವಸೃಷ್ಟಿ ಸುಖದಿಂದ ಬಾಳಬೇಕೆಂದು ಋಷಿಮುನಿಗಳು ತಮ್ಮ ಸಂಪೂರ್ಣ ಜೀವನವನ್ನು ನೀಡಿದರು. ಸಮಾಜದಲ್ಲಿನ ಸರ್ವಸಾಮಾನ್ಯ ಜನರಿಗೆ ಮಾತ್ರವಲ್ಲ, ದೊಡ್ಡವರ, ಗಣ್ಯರ ದೈನಂದಿನ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಯಾವ ಯೋಗದಾನವನ್ನು ನೀಡುತ್ತಾರೋ, ಶ್ರಮಪಡುತ್ತಾರೋ, ಅಂತಹ ಶ್ರಮಜೀವಿಗಳಿಗೂ ರುದ್ರಸೂಕ್ತದಲ್ಲಿ ವಿನಮ್ರ ಸಾಷ್ಟ್ಟಾಂಗ ನಮಸ್ಕಾರವನ್ನು ಮಾಡಿದೆ. ಇದರಲ್ಲಿ, ಬಡಗಿ, ರಥ ತಯಾರಿಸುವವರು, ಕುಂಬಾರ, ಅಕ್ಕಸಾಲಿಗ, ಬೇಟೆಗಾರ, ಮೀನುಗಾರರು, ಧನುಷ್ಯ-ಬಾಣ ತಯಾರಿಸುವವರು, ಬೇಟೆಯ ನಾಯಿಗಳನ್ನು ಸಾಕುವವರು, ಇವರೆಲ್ಲರಿಗೂ ವಂದನೆಯನ್ನು ಮಾಡಲಾಗಿದೆ. (ಆಧಾರ : ರುದ್ರಾಧ್ಯಾಯ)
ಈಶ್ವರನ ದೃಷ್ಟಿಯಲ್ಲಿ ಯಾರೂ ಶ್ರೇಷ್ಠ ಅಥವಾ ಕನಿಷ್ಠರಿಲ್ಲ. ಸಮಾಜದಲ್ಲಿ ದೋಷ ನಿರ್ಮಾಣವಾದರೆ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆ ಬೆಳೆಯುತ್ತದೆ. ಈ ಭಾವನೆ ಬೆಳೆಯಬಾರದೆಂದು, ಸನಾತನ ಧರ್ಮಕ್ಕನುಸಾರ ಸಂಸ್ಕಾರಗಳನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಸನಾತನ ಧರ್ಮವನ್ನು ನಷ್ಟಗೊಳಿಸಲು ಹಾತೊರೆಯುವವರು ಈ ವಿಷಯದ ಕಡೆಗೆ ಗಮನ ಹರಿಸುವುದು ಅತ್ಯಂತ ಆವಶ್ಯಕವಾಗಿದೆ.

೪. ಮೂರ್ತಿಪೂಜೆಯ ಮಹತ್ವ

ಸನಾತನ ಧರ್ಮದಲ್ಲಿ ಮೂರ್ತಿಪೂಜೆಯನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇದಕ್ಕೆ ಅನೇಕ ಜನರ ವಿರೋಧವಿದೆ. ವಿರೋಧ ಮಾಡುವವರು ಮೂರ್ತಿಪೂಜೆಯ ಹಿಂದಿನ ಮಹತ್ವವನ್ನು ಗಮನಿಸಬೇಕು. ನಮಗೆಲ್ಲರಿಗೂ ನಮ್ಮ ತಾಯಿ ಶ್ರೇಷ್ಠವೆನಿಸುತ್ತಾಳೆ, ಇದರಲ್ಲಿ ಯಾವುದೇ ದೋಷವಿಲ್ಲ; ಆದರೆ ಹೇಗೆ ತನ್ನ ವಿಕಾಸವಾಗುತ್ತಾ ಹೋಗುತ್ತದೆಯೋ, ಹಾಗೆಯೇ ನಮಗೆ ಮಾತೆಯ ವಿಷಯದಲ್ಲಿ ಗೌರವವಿದ್ದರೂ ನಾವು ಭಾರತಮಾತೆಯನ್ನು ಶ್ರೇಷ್ಠವೆಂದು ಪರಿಗಣಿಸಬಹುದು. ಇದು ನಮ್ಮ ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸವಾಗಿದೆ. ಭಾರತಮಾತೆಯ ಪೂಜೆಯನ್ನು ಮಾಡಿದೆವೆಂದು ನಮಗೆ ಜನ್ಮ ನೀಡಿದ ಮಾತೆ ಕನಿಷ್ಠ ಅಥವಾ ದುರ್ಲಕ್ಷಿತಳಾಗುವುದಿಲ್ಲ. ವಿವಿಧ ದೇವಿದೇವತೆಗಳ ಉಪಾಸನೆಯನ್ನು ಮಾಡುತ್ತಾ ನಾವು ನಮ್ಮ ವಿಕಾಸವನ್ನು ಸಾಧಿಸುವುದಿದೆ. ಈ ವಿಕಾಸ ಮಾಡುತ್ತಾ ಮಾಡುತ್ತಾ ನಾವು ವಿಶ್ವಾಸವಿರುವ ದೇವರ ಮೂರ್ತಿಯನ್ನು ಪೂಜಿಸಬೇಕು. ಯೋಗಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ಯಮ-ನಿಯಮಗಳಿಂದ ಪ್ರಾರಂಭಿಸಿ ಸಮಾಧಿಯ ವರೆಗಿನ ಪ್ರವಾಸ ಮಾಡುವುದೇ ವಿಕಾಸವಾಗಿದೆ. ಮೂರ್ತಿಪೂಜೆಯ ಹಿಂದಿನ ಈ ವಿಕಾಸದ ಕಲ್ಪನೆಯನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ.

೫. ಸನಾತನ ಧರ್ಮವು ಸೂಕ್ಷ್ಮಾತಿಸೂಕ್ಷ್ಮ, ಅನಂತ ಮತ್ತು ವಿದ್ವಾಂಸರಿಂದ ಹಿಡಿದು ಸಾಮಾನ್ಯ ಜನರಿಗಾಗಿ ಇದೆ

ಸನಾತನ ಧರ್ಮ ಇಷ್ಟು ಸೂಕ್ಷ್ಮಾತಿಸೂಕ್ಷ್ಮವಾಗಿದ್ದರೂ ಅನಂತವಾಗಿದೆ. ಸನಾತನ ಧರ್ಮ ಸಗುಣ ಮತ್ತು ನಿರ್ಗುಣ ಈ ಎರಡೂ ಉಪಾಸನೆಯ ಮಾರ್ಗಗಳನ್ನು ಅವಲಂಬಿಸಿದೆ. ನಿರ್ಗುಣಕ್ಕೆ ಸಗುಣದ ಆಧಾರ ಸಿಗದೆ ಮನುಷ್ಯ ಸಂತುಷ್ಟ (ಸಮಾಧಾನಿ) ಅಗಿರಲು ಸಾಧ್ಯವಿಲ್ಲ. ಇದರ ವ್ಯಾವಹಾರಿಕ ಉದಾಹರಣೆಯೆಂದರೆ, ಮನುಷ್ಯನಿಗೆ ಹಸಿವಾಗುತ್ತದೆ, ಆ ಹಸಿವೆ ನಿರ್ಗುಣವಾಗಿದೆ. ಆ ಹಸಿವೆಯನ್ನು ಶಾಂತಗೊಳಿಸಲು ಸಗುಣ ಅನ್ನ ಹೊಟ್ಟೆಗೆ ಹೋಗಬೇಕಾಗುತ್ತದೆ, ಆಗ ಮನುಷ್ಯನು ತೃಪ್ತನಾಗುತ್ತಾನೆ. ಆದ್ದರಿಂದ ನಿರ್ಗುಣ ಮತ್ತು ಸಗುಣ ಇವೆರಡೂ ಉಪಾಸನೆಗಳು ಮಾನವನಿಗೆ ಅತ್ಯಂತ ಆವಶ್ಯಕವಾಗಿವೆ. ಇವೆರಡರಲ್ಲಿ ಯಾವುದೇ ಒಂದನ್ನು ತ್ಯಜಿಸಿದರೆ, ತೃಪ್ತನಾಗಲು ಸಾಧ್ಯವಿಲ್ಲ ಅಥವಾ ಸಮಾಧಾನ ಲಭಿಸುವುದಿಲ್ಲ. ಮೂರ್ತಿ ಪೂಜೆಯ ಹಿಂದಿನ ಈ ಭಾವವನ್ನು ತಿಳಿದುಕೊಳ್ಳದೆ ಮೂರ್ತಿಪೂಜೆಗೆ ಟೀಕೆಯನ್ನು ಮಾಡುತ್ತಾ ಸನಾತನ ಧರ್ಮದ ಅವಮಾನ ಮಾಡುವುದೆಂದರೆ ತನ್ನ ಅಜ್ಞಾನವನ್ನು ಪ್ರದರ್ಶಿಸಿದಂತಾಗಿದೆ.

ಸನಾತನ ಧರ್ಮ ಕೇವಲ ವಿದ್ವಾಂಸರಿಗಾಗಿ ಇಲ್ಲ, ಅದು ಸಾಮಾನ್ಯ ಜನರಿಗಾಗಿಯೂ ಇದೆ. ಯಾರ ಬೌದ್ಧಿಕ, ಮಾನಸಿಕ, ವೈಚಾರಿಕ ಕ್ಷಮತೆ ಹೇಗಿರುತ್ತದೆಯೋ, ಅದಕ್ಕನುಸಾರ ಅವನು ಅದರಲ್ಲಿನ ಯಾವುದೇ ವಿಷಯವನ್ನು ಅವಲಂಬಿಸಬಹುದು ಮತ್ತು ತನ್ನ ವಿಕಾಸವನ್ನು ಮಾಡಿಕೊಳ್ಳಬೇಕು. ಸನಾತನ ಧರ್ಮದ ಕೃತಜ್ಞತೆಯ ಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ಜೋಪಾನ ಮಾಡಬೇಕು, ಅದಕ್ಕಾಗಿ ಸೂರ್ಯ, ಸಮುದ್ರ, ವನಸ್ಪತಿ, ಸರ್ಪ ಇತ್ಯಾದಿ ಇವೆಲ್ಲವುಗಳ ಪೂಜೆ ಮಾಡುವ ಅನೇಕ ಪ್ರಕಾರಗಳನ್ನು ಸನಾತನ ಧರ್ಮವು ಸ್ವೀಕರಿಸಿದೆ. ‘ಸನಾತನ ಧರ್ಮ ಕಲ್ಲನ್ನು ದೇವರೆಂದು ನಂಬುವುದಿಲ್ಲ, ಆದರೆ ಕಲ್ಲಿನಲ್ಲಿನ ದೇವರನ್ನು ನೋಡುತ್ತದೆ’, ಈ ವಿಷಯವು ಎಲ್ಲಕ್ಕಿಂತ ಮಹತ್ವದ್ದಾಗಿದೆ. ಯಾವ ಯಾವ ವಿಷಯಗಳು ಉಪಯುಕ್ತವಾಗಿವೆಯೋ, ಅವುಗಳನ್ನು ದೇವರ ಹಾಗೆ ಪವಿತ್ರ ಶುದ್ಧವೆಂದು ಅವುಗಳ ಸ್ವೀಕಾರ ಮಾಡುವ ಸಂಸ್ಕಾರವನ್ನು ಸನಾತನ ಧರ್ಮ ಮಾಡುತ್ತದೆ.

೬. ವೇದ ಜ್ಞಾನಗಂಗಾ ಆಗಿದೆ !

ಜ್ಞಾನಕ್ಕೆ ವಿಶೇಷ ಮಹತ್ವವಿದೆ. ಜ್ಞಾನದ ಹೊರತು ಭಕ್ತಿ ಕುರುಡಾಗಿದೆ. ಭಕ್ತಿಯ ಹೊರತು ಜ್ಞಾನ ಶುಷ್ಕವಾಗುತ್ತದೆ. ಜ್ಞಾನ ಮತ್ತು ಭಕ್ತಿ ಕರ್ಮದಲ್ಲಿ ಅವತರಿಸದೆ ಜೀವನಕ್ಕೆ ಅರ್ಥ ನಿರ್ಮಾಣ ಆಗುವುದಿಲ್ಲ. ಆದ್ದರಿಂದ ತಿಳಿದವರು ಹೇಳುತ್ತಾರೆ, ‘ಜ್ಞಾನದಗಂಗೆ ಭಕ್ತಿಯ ಯಮುನೆಯಲ್ಲಿ ಬೆರೆಯಬೇಕು ಮತ್ತು ಕರ್ಮಮಯ ಸರಸ್ವತಿಗೆ ಭಕ್ತಿಯ ಮತ್ತು ಜ್ಞಾನದ ಸ್ಪರ್ಶವಾಗಬೇಕು, ಜ್ಞಾನ, ಭಕ್ತಿ ಮತ್ತು ಕರ್ಮದ ಸಂಗಮ ಮಾನವ ಜೀವನದಲ್ಲಿ ಆದನಂತರ ಮಾನವನ ಜೀವನ ಪ್ರಯಾಗಕ್ಷೇತ್ರದಂತೆ ಶುದ್ಧ, ಪವಿತ್ರ ಮತ್ತು ಪಾವನವಾಗುತ್ತದೆ.’

೭. ಸನಾತನ ಧರ್ಮವನ್ನು ಟೀಕಿಸುವವರು ತಮ್ಮ ಬುದ್ಧಿಯನ್ನು ಪರಿಶೀಲಿಸಿಕೊಳ್ಳಬೇಕು !

ಸನಾತನ ಧರ್ಮವು ಅನೇಕ ದೇವಿದೇವತೆಗಳನ್ನು ನಿರ್ಮಾಣ ಮಾಡಿದೆ. ಅವು ಒಂದೇ ಶಕ್ತಿಯ ವಿವಿಧ ರೂಪಗಳಾಗಿವೆ. ಸನಾತನ ಧರ್ಮದ ಈ ಸಂಕಲ್ಪನೆ ವಿಜ್ಞಾನದ ಸಂಕಲ್ಪನೆಯ ಹಾಗೆಯೇ ಶಾಸ್ತ್ರಶುದ್ಧ ಮತ್ತು ತರ್ಕಶುದ್ಧವಾಗಿದೆ. ವಿದ್ಯುತ್ ಶಕ್ತಿಯೂ ಒಂದು ಪ್ರಕಾರದ ಶಕ್ತಿಯೇ ಆಗಿದೆ, ಯಾವಾಗ ಅದು ವಿದ್ಯುತ್ತಿನ ದೀಪದಲ್ಲಿ (ಬಲ್ಬ) ಪ್ರವೇಶ ಮಾಡುತ್ತದೆಯೋ, ಆಗ ಅದು ಪ್ರಕಾಶ ಊರ್ಜೆಯಲ್ಲಿ ರೂಪಾಂತರವಾಗುತ್ತದೆ. ಇದೇ ವಿದ್ಯುತ್ ಶಕ್ತಿ ಯಾವಾಗ ಧ್ವನಿವರ್ಧಕದಲ್ಲಿ ಪ್ರವೇಶ ಮಾಡುತ್ತದೆಯೋ, ಆಗ ಅದು ಧ್ವನಿ ಊರ್ಜೆಯಲ್ಲಿ ರೂಪಾಂತರವಾಗುತ್ತದೆ. ಇದೇ ವಿದ್ಯುತ್ ಊರ್ಜೆ ಯಂತ್ರದಲ್ಲಿ ಪ್ರವೇಶ ಮಾಡಿದಾಗ ಅದು ವೇಗತ್ವಕ್ಕೆ ರೂಪಾಂತರವಾಗುತ್ತದೆ. ಇವು ವಿದ್ಯುತ್ ಶಕ್ತಿಯ ವಿವಿಧ ರೂಪಗಳಾಗಿವೆ. ಅದೇ ರೀತಿ ದೇವತೆಗಳು ವಿಶ್ವದಲ್ಲಿನ ಒಂದು ಮಹಾಶಕ್ತಿಯ ವಿವಿಧ ರೂಪಗಳಾಗಿವೆ. ವಿಜ್ಞಾನ ಹೇಳುತ್ತದೆ ಶಕ್ತಿ ನಿರ್ಮಾಣವಾಗುವುದಿಲ್ಲ ಮತ್ತು ನಷ್ಟವೂ ಆಗುವುದಿಲ್ಲ. ಸನಾತನ ಧರ್ಮ ಅದನ್ನೇ ಹೇಳುತ್ತದೆ, ಈಶ್ವರ ಜನ್ಮತಾಳಲಿಲ್ಲ ಅದೇರೀತಿ ಅವನಿಗೆ ಅಂತ್ಯವೂ ಇಲ್ಲ; ಆದರೆ ಅದರ ವಿವಿಧ ರೂಪಗಳು ನಮಗೆ ಕಾಣಿಸುತ್ತವೆ. ಆ ವಿವಿಧ ರೂಪಗಳಲ್ಲಿರುವ ಶಕ್ತಿ ನಮಗೆ ಸಹಾಯ ಮಾಡುತ್ತದೆ. ಇಂತಹ ಶಕ್ತಿಯ ಉಪಾಸನೆ ಮತ್ತು ಅದರ ಪೂಜೆ ಮಾಡುವುದೆಂದರೆ ಕೃತಜ್ಞತೆಯ ಭಾವನೆಯಾಗಿದೆ. ಭಾವನೆ ಮತ್ತು ಬುದ್ಧಿಯನ್ನು ಸುಂದರವಾಗಿ ಕೂಡಿಸುವುದೆಂದರೆ ಸನಾತನ ಧರ್ಮವಾಗಿದೆ. ಸನಾತನ ಧರ್ಮದ ಈ ನಿಜವಾದ ಪರಿಚಯವನ್ನು ಗಮನಿಸದೆ ಅದನ್ನು ಟೀಕಿಸುವವರು ತಮ್ಮ ಬುದ್ಧಿಯನ್ನು ಪರಿಶೀಲಿಸಿಕೊಳ್ಳಬೇಕು. ಅದಕ್ಕೆ ಸಹಾಯ ವಾಗುವ ಪರಿಚ್ಛೇದ ಈ ಕೆಳಗಿದೆ…

ಸಾವರಕರರು ವಿಜ್ಞಾನನಿಷ್ಟರಾಗಿದ್ದರು. ವೇದಗಳ ವಿಷಯದಲ್ಲಿ ಸಾವರಕರರು ಹೇಳುತ್ತಾರೆ, “ವೇದಮಂತ್ರಗಳಲ್ಲಿ ಯಾವ ಓಜಸ್ಸು ಇದೆಯೋ, ಗಂಭೀರ ಅರ್ಥವು ತಿಳಿದರೆ, ವೇದವಿದ್ಯೆಯನ್ನು ಜೀವಂತ ಇಡಬೇಕೋ ಅಥವಾ ಇಲ್ಲ ಎಂಬ ಪ್ರಶ್ನೆಯೇ ಉದ್ಭವಿಸಲಿಕ್ಕಿಲ್ಲ. ವೇದವಿದ್ಯೆ ಹೋದರೆ ಹಿಂದುತ್ವ ಹೋದಂತೆಯೇ. ವೇದ ವಿದ್ಯೆಯು ಸಂಸಾರದ ಎಲ್ಲ ವಿಷಯಗಳ ಮೂಲವಾಗಿದೆ. ಆಲದ ಮರದ ಬೀಜ ಸಣ್ಣದಾಗಿದ್ದರೂ ವೃಕ್ಷ ಪ್ರಚಂಡ ಆಕಾರದ್ದಾಗಿರುತ್ತದೆ. ಅದೇ ರೀತಿ ವೇದದಲ್ಲಿ ಔದ್ಯೋಗಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವಲ್ಪದರಲ್ಲಿ ಅಂದರೆ ಎಲ್ಲ ಚರಾಚರಸೃಷ್ಟಿಯ ತತ್ತ್ವಜ್ಞಾನವಿದೆ.”

(ಆಧಾರ : ‘ಸಾವರಕರಾಂಚೀ ಸಾಮಾಜಿಕ ಭಾಷಣೆ-೩೩ ವೇದಾಮೃತ ಸರ್ವಾನಾ ಪಿವೂ ದ್ಯಾ ! ‘ಸಮಗ್ರ ಸಾವರ್ಕರ’ ಖಂಡ ೯) – ಶ್ರೀ. ದುರ್ಗೇಶ ಜಯವಂತ ಪರೂಳಕರ್, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ. (೨೦.೯.೨೦೨೩)