ದಾವೂದ್ ಇಬ್ರಾಹಿಂಗೆ ಕರಾಚಿಯಲ್ಲಿ ಅಪರಿಚಿತರಿಂದ ವಿಷಪ್ರಾಶನ !

  • ಆಸ್ಪತ್ರೆಯಲ್ಲಿ ಚಿಕಿತ್ಸೆ !

  • ಭಾರತೀಯ ಅಧಿಕಾರಿಗಳಿಂದ ಇನ್ನೂ ಯಾವುದೇ ದೃಢೀಕರಣವಿಲ್ಲ !

ನವದೆಹಲಿ – ಕುಖ್ಯಾತ ಜಿಹಾದಿ ಭಯೋತ್ಪಾದಕನೊಬ್ಬನ ಮೇಲೆ ವಿಷ ಪ್ರಾಶನ ಮಾಡಿಸಿದ್ದರಿಂದ ಆತನಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ‘ಅವನ ಸ್ಥಿತಿ ಚಿಂತಾಜನಕವಾಗಿದೆ’, ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ; ಆದರೆ, ಇದನ್ನು ಪಾಕಿಸ್ತಾನ ಅಥವಾ ಭಾರತದ ತನಿಖಾ ಸಂಸ್ಥೆಗಳು ಖಚಿತಪಡಿಸಿಲ್ಲ. ಈ ಸುದ್ದಿಯ ನಂತರ ಪಾಕಿಸ್ತಾನದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ‘ಈ ಘಟನೆ ನಿಜವೇ ಇರಬಹುದು’ ಎಂಬ ವಾದ ಕೇಳಿ ಬರುತ್ತಿದೆ. ದಾವೂದ್‌ಗೆ ವಿಷ ನೀಡಿದ ಘಟನೆ 2 ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಅವನ ದಾಖಲಾಗಿರುವ ಆಸ್ಪತ್ರೆಯ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆಸ್ಪತ್ರೆಯ ಮೇಲಿನ ಮಹಡಿಯಲ್ಲಿ ಒಬ್ಬನೇ ಇದ್ದಾನೆ ಎಂದೂ ಹೇಳಲಾಗಿದೆ. ಈ ಮಹಡಿಯಲ್ಲಿ ಅವರ ಕುಟುಂಬ ಸದಸ್ಯರು ಮಾತ್ರ ಅಲ್ಲಿಗೆ ಹೋಗಬಹುದು. ಮುಂಬಯಿ ಪೊಲೀಸರು ಕೂಡ ಈ ಬಗ್ಗೆ ನಿಗಾ ಇಟ್ಟಿದ್ದಾರೆ. ಮುಂಬಯಿನಲ್ಲಿರುವ ದಾವೂದ್ ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮುಂದುವರಿದಿದೆ.

ದಾವೂದ್ ಇಬ್ರಾಹಿಂ ಭಾರತದ ಪರಾರಿಯಾಗಿರುವ ಭಯೋತ್ಪಾದಕನಾಗಿದ್ದಾನೆ. ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ 25 ಲಕ್ಷ ರೂಪಾಯಿ ಬಹುಮಾನ ನೀಡಲು ಮುಂದಾಗಿದೆ. ವಿಶ್ವಸಂಸ್ಥೆ ಕೂಡ ದಾವೂದ್‌ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿದೆ. ದಾವೂದ್ ಇಬ್ರಾಹಿಂ 1993ರಲ್ಲಿ ಮುಂಬಯಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ್ದ. ಈ ಬಾಂಬ್ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿದರು ಮತ್ತು 700 ಜನರು ಗಾಯಗೊಂಡಿದ್ದರು.

ಪೇಚಿಗೆ ಸಿಲುಕಿದ ಪಾಕಿಸ್ತಾನ ! – ವಕೀಲ ಉಜ್ವಲ್ ನಿಕಮ್

ಈ ವರದಿಗೆ ಸಂಬಂಧಿಸಿದಂತೆ ವಕೀಲ ಉಜ್ವಲ್ ನಿಕಮ್ ಅವರು, ಈಗ ಪಾಕಿಸ್ತಾನ ಪೇಚಿಗೆ ಸಿಲುಕಿದೆ; ಏಕೆಂದರೆ ಇಲ್ಲಿಯವರೆಗೆ ಪರ್ವೇಜ್ ಮುಷರಫ್ ಸೇರಿದಂತೆ ಪಾಕಿಸ್ತಾನದ ಎಲ್ಲರೂ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ವಾಸಿಸುತ್ತಿಲ್ಲ ಎಂದು ಬಲವಾಗಿ ಹೇಳಿದ್ದರು. ಪಾಕಿಸ್ತಾನದ ನಿಜವಾದ ಸಮಸ್ಯೆ ಇರುವುದು ಇಲ್ಲಿಯೇ; ಏಕೆಂದರೆ ಈಗ ಪಾಕಿಸ್ತಾನವು ‘ದಾವೂದ್‌ನನ್ನು ಭಾರತವು ವಿಷ ನೀಡಿದೆ’ ಎಂದು ಹೇಳಿಕೊಳ್ಳುವಂತಿಲ್ಲ; ‘ದಾವೂದ್ ಪಾಕಿಸ್ತಾನದ ನೆಲದಲ್ಲಿ ಇಲ್ಲ’ ಎಂಬ ಕಾರಣಕ್ಕೆ ಪಾಕಿಸ್ತಾನ ಅಧಿಕೃತ ನಿಲುವು ತಳೆದಿತ್ತು.

ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ ನ ಪಿತೂರಿ ಎಂದು ಚರ್ಚೆ !

ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಜಿಹಾದಿ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ ಅಥವಾ ವಿಷಪ್ರಾಶನ ಮಾಡಲಾಗುತ್ತಿದೆ. ‘ಈ ಕೊಲೆಗಳನ್ನು ಯಾರು ಮಾಡುತ್ತಿದ್ದಾರೆ?’ ಅಥವಾ ಯಾವುದೇ ಆರೋಪಿಯನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಇದರ ಹಿಂದೆ ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆ ಐ.ಎಸ್‌.ಐ. ಕೈವಾಡವಿದೆ, ಎಂಬ ಚರ್ಚೆ ನಡೆಯುತ್ತಿದೆ. ‘ಈ ಭಯೋತ್ಪಾದಕರನ್ನು ಪೋಷಿಸಲು ಮತ್ತು ರಕ್ಷಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದ ಕಾರಣ, ಪಾಕಿಸ್ತಾನವೇ ಅವರನ್ನು ಕೊಲ್ಲುತ್ತಿದೆ’, ಎಂದು ಹೇಳಲಾಗುತ್ತಿದೆ. ‘ಪಾಕಿಸ್ತಾನ ಉಳಿದ ದೊಡ್ಡ ಭಯೋತ್ಪಾದಕರನ್ನೂ ಕೊಲ್ಲಬಹುದು’ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.