ಪುನಃ ರಾಷ್ಟ್ರಾಧ್ಯಕರಾದರೆ, ಇಸ್ಲಾಮಿಕ್ ದೇಶಗಳ ನಾಗರಿಕರಿಗೆ ಅಮೇರಿಕಾ ಪ್ರವಾಸದ ಮೇಲೆ ನಿರ್ಬಂಧ ! – ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಇವರ ಘೋಷಣೆ ! 

ನ್ಯೂಯಾರ್ಕ್ (ಅಮೇರಿಕಾ) – ನಾನು ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷನಾದರೆ, ಮತ್ತೊಮ್ಮೆ ಜಿಹಾದಿ ರಾಷ್ಟ್ರಗಳನ್ನು ನಿಷೇಧಿಸುತ್ತೇನೆ ಹಾಗೂ ಅವರ ಅಮೇರಿಕೆಯ ಪ್ರವಾಸದ ಮೇಲೆಯೂ ನಿರ್ಬಂಧ ಹೇರಲಾಗುವುದು ಎಂದು ಅಮೇರಿಕೆಯ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಗಾಗಿ ಉಮೇದುವಾರರಾಗಲು ಪ್ರಯತ್ನಿಸುತ್ತಿರುವ ಡೊನಾಲ್ಡ ಟ್ರಂಪ ಹೇಳಿದ್ದಾರೆ.

ಟ್ರಂಪ ತಮ್ಮ ಮಾತನ್ನು ಮುಂದುವರಿಸಿ, ರಾಷ್ಟ್ರಾಧ್ಯಕ್ಷರಾದ ನಂತರ ನಾನು ಅಕ್ರಮವಾಗಿ ವಲಸೆ ಬರುವ ಜನರ ವಿಚಾರಧಾರೆಯ ಬಗ್ಗೆ ತನಿಖೆ ನಡೆಸುತ್ತೇನೆ. ಒಂದು ವೇಳೆ ಅವರು ಅಮೇರಿಕೆಯನ್ನು ದ್ವೇಷಿಸುತ್ತಿದ್ದರೆ, ಇಸ್ರೇಲ್ ಅನ್ನು ನಷ್ಟಗೊಳಿಸುವ ವಿಚಾರ ಮಾಡುತ್ತಿದ್ದರೆ, ಜಿಹಾದಿಗಳ ವಿಷಯದಲ್ಲಿ ಸಹಾನುಭೂತಿ ಹೊಂದಿದ್ದರೆ ಅವರನ್ನು ಅಮೇರಿಕೆಯಲ್ಲಿ ಪ್ರವೇಶಿಸಲು ಬಿಡುವುದಿಲ್ಲ. ನಮಗೆ ಅಂತಹವರ ಆವಶ್ಯಕತೆಯಿಲ್ಲ ಎಂದು ಹೇಳಿದರು.

ರಾಷ್ಟ್ರಾಧ್ಯಕ್ಷರಾಗಿರುವಾಗ ಟ್ರಂಪ್ ಕೆಲವು ಇಸ್ಲಾಮಿಕ್ ಮತ್ತು ಇತರ ದೇಶಗಳ ನಾಗರಿಕರಿಗೆ ಅಮೇರಿಕಕ್ಕೆ ಪ್ರಯಾಣಿಸದಂತೆ ನಿರ್ಬಂಧವನ್ನು ವಿಧಿಸಿದ್ದರು! 

ಅಧ್ಯಕ್ಷ ಡೊನಾಲ್ಡ್ ಟ್ರಂಪ ಇವರು ರಾಷ್ಟ್ರಾಧ್ಯಕ್ಷರಾಗಿದ್ದಾಗ 2017 ರಲ್ಲಿ, ಲಿಬಿಯಾ, ಇರಾನ್, ಸೊಮಾಲಿಯಾ, ಸಿರಿಯಾ, ಯೆಮೆನ್ ಮತ್ತು ಬಹುಸಂಖ್ಯಾತ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ದೇಶಗಳ ಜನರಿಗೆ ಅಮೇರಿಕೆಯ ಪ್ರವಾಸದ ಮೇಲೆ ನಿಷೇಧ ಹೇರಿದ್ದರು. ಇದಲ್ಲದೇ ಉತ್ತರ ಕೊರಿಯಾ, ವೆನೆಜುವೆಲಾ, ಮ್ಯಾನ್ಮಾರ್, ಕಿರ್ಗಿಸ್ತಾನ್, ನೈಜೀರಿಯಾ, ತಾಂಜಾನಿಯಾ, ಸುಡಾನ್ ನಾಗರಿಕರನ್ನು ಕೂಡ ನಿರ್ಬಂಧಿಸಲಾಗಿತ್ತು; ಆದರೆ ಜೋ ಬೈಡೆನ್ ಅವರ ಸರಕಾರ ಅಧಿಕಾರಕ್ಕೆ ಬಂದ ನಂತರ ನಿಷೇಧವನ್ನು ಹಿಂಪಡೆಯಲಾಯಿತು.