ಸಂಸತ್ತಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೆ 10 ಲಕ್ಷ ರೂಪಾಯಿಗಳ ಕಾನೂನು ನೆರವು ನೀಡಲಾಗುವುದು!- ಖಲಿಸ್ತಾನಿ ಭಯೋತ್ಪಾದಕ ಪನ್ನೂ

ಖಲಿಸ್ತಾನಿ ಭಯೋತ್ಪಾದಕ ಪನ್ನೂನ ಘೋಷಣೆ!

ನವದೆಹಲಿ – ಸಂಸತ್ತಿನ ಹೊರಗೆ ಮತ್ತು ಲೋಕಸಭೆಯಲ್ಲಿ ನುಸುಳಿ ಬಣ್ಣದ ಹೊಗೆ ಬಿಟ್ಟಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳಿಗೆ ನಿಷೇಧಿಸಲ್ಪಟ್ಟಿರುವ ‘ಸಿಖ್ ಫಾರ್ ಜಸ್ಟಿಸ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರಪತವಂತ ಸಿಂಹ ಪನ್ನು 10 ಲಕ್ಷ ರೂಪಾಯಿಗಳ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾನೆ. ವಿಶೇಷವೆಂದರೆ ಪನ್ನೂ ಡಿಸೆಂಬರ 5 ರಂದು ಒಂದು ವಿಡಿಯೋ ಪ್ರಸಾರ ಮಾಡಿ, 13ನೇ ಡಿಸೆಂಬರ್ 2023 ರಂದು ಭಾರತದ ಸಂಸತ್ತಿನ ಮೇಲಿನ ದಾಳಿಯ ಸ್ಮರಣಾರ್ಥ ಮತ್ತೊಂದು ದಾಳಿಯನ್ನು ನಡೆಸಲಾಗುವುದು ಎಂದು ಬೆದರಿಕೆಯನ್ನು ಹಾಕಿದ್ದನು.

ಸಂಪಾದಕರ ನಿಲುವು

* ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿರುವ ಮತ್ತು ದಾಳಿ ನಡೆಸಿರುವವರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿರುವ, ಅಮೇರಿಕೆಯ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನ ಮೇಲೆ ಈಗ ಅಮೇರಿಕಾ ಏನು ಕ್ರಮ ತೆಗೆದುಕೊಳ್ಳುತ್ತದೆ? ಎಂದು ಅಮೇರಿಕಾ ಹೇಳಬೇಕು. ಹಾಗೆಯೇ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತವು ಅಮೇರಿಕೆಯ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ.