ಹವನ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ

ನವನರಸಿಂಹ ಯಾಗದ ಲಘು ಹವನ ಮಾಡುವಾಗ ತೆಗೆದ ಛಾಯಾಚಿತ್ರದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕೊರಳಿನಲ್ಲಿ ಧರಿಸಿದ ‘ಶ್ರೀ’ ಯಂತ್ರದಿಂದ ಅಗ್ನಿಯ ಜ್ಯೋತಿಯು ಹೊರಗೆ ಬರುತ್ತಿರುವುದು ಕಾಣಿಸುತ್ತಿದೆ. (ಜ್ಯೋತಿಯನ್ನು ಬಾಣದಿಂದ ತೋರಿಸಲಾಗಿದೆ.)

೧. ಮಹರ್ಷಿಗಳು ನವನರಸಿಂಹ ಯಾಗವನ್ನು ಮಾಡಲು ಹೇಳುವುದು, ಆ ಯಾಗವು ರಾಮನಾಥಿ ಆಶ್ರಮದಲ್ಲಿ ಆರಂಭವಾಗುವುದು ‘ಮಹರ್ಷಿಗಳು ೧೬೪ ಕ್ರಮಾಂಕದ ನಾಡಿವಾಚನದಲ್ಲಿ ನಮಗೆ ಕೊಳ್ಳಿಮಲಯಿ ಪರ್ವತಕ್ಕೆ ಹೋಗಿರಲು ಹೇಳಿದ್ದರು. ಮಹರ್ಷಿಗಳು, ‘೧೫.೧.೨೦೨೧ ರಿಂದ ನವನರಸಿಂಹ ಯಾಗವನ್ನು ಪ್ರಾರಂಭಿಸಬೇಕು. ಸನಾತನದ ಮೂವರು ಗುರುಗಳಿಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ) ಆಗುವ ಕರಣಿಯ ತೊಂದರೆಯಿಂದ ಈಗ ನರಸಿಂಹನೇ ರಕ್ಷಿಸುವನು’, ಎಂದರು. ಅದಕ್ಕನುಸಾರ ರಾಮನಾಥಿ ಆಶ್ರಮದಲ್ಲಿ ನವನರಸಿಂಹ ಯಾಗ ಆರಂಭಿಸಲಾಯಿತು.

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಹ ಕೊಳ್ಳಿಮಲಯಿ ಪರ್ವತದ ಮೇಲೆ ನವನರಸಿಂಹ ಯಾಗದ ಮಂತ್ರವನ್ನು ಹೇಳಿ ಲಘುಹವನ ಮಾಡುವುದು ಈ ಯಾಗದಲ್ಲಿ ಪ್ರಧಾನ ಆಹುತಿ ಚಕ್ರಮೊಗ್ಗು ವಿನದ್ದಾಗಿತ್ತು. ಕೊಳ್ಳಿಮಲಯಿ ಪರ್ವತದಲ್ಲಿ ನಾವಿರುವಲ್ಲಿ ಪೂ. ಡಾ. ಉಲಗನಾಥನ್‌ ಇವರ ಮಾಧ್ಯಮದಿಂದ ಮಹರ್ಷಿಗಳು ಹೇಳಿದ ನವನರಸಿಂಹದ ಮಂತ್ರವನ್ನು ಹೇಳಿ ಲಘುಹವನ ಮಾಡಿದೆನು. ದೇವರ ಕೃಪೆಯಿಂದ ಅಲ್ಲಿ ಚಕ್ರಮೊಗ್ಗು ಸಿಕ್ಕಿತು. ಇತರ ಹವನ ದ್ರವ್ಯ ಸಿಗಲಿಲ್ಲವೆಂದು ಅಗ್ನಿಹೋತ್ರದ ಪಾತ್ರೆಯಲ್ಲಿ ತುಪ್ಪದ ಆಹುತಿ ಕೊಟ್ಟೆನು.

೩. ಅನುಭೂತಿ

೩ ಅ. ಹವನದಲ್ಲಿ ಸಿಂಹದ ತೆರೆದ ದವಡೆಯ ಬಾಯಿ ಕಾಣಿಸುವುದು : ಶ್ರೀ ನರಸಿಂಹದೇವರು ಆ ಹವನವನ್ನು ನನ್ನಿಂದ ಭಾವಪೂರ್ಣವಾಗಿ ಮಾಡಿಸಿಕೊಂಡು ಅನುಭೂತಿಯನ್ನೂ ನೀಡಿದರು. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಹವನವನ್ನು ಮಾಡುವಾಗ ನನಗೆ ಅಗ್ನಿಯಲ್ಲಿ ಸಿಂಹದ ಬಾಯಿ ತೆರೆದಿರುವ ಮುಖವು ಕಾಣಿಸುತ್ತಿತ್ತು. ನಿಜವೆಂದರೆ ಅದರ ರೂಪವು ಉಗ್ರವಾಗಿತ್ತು, ಆದರೂ ಆ ಸಿಂಹದ ಕಡೆಗೆ ನೋಡಿ ನನಗೆ ಭಾವಜಾಗೃತಿಯಾಗುತ್ತಿತ್ತು. ಆಗ ನನಗೆ, ‘ನರಸಿಂಹ ಅಂದರೆ ಶ್ರೀವಿಷ್ಣುವೇ ಆಗಿದ್ದಾನೆ’ ಎಂದು ಗಮನಕ್ಕೆ ಬಂದಿತು.

೩ ಆ. ಕೊರಳಲ್ಲಿದ್ದ ಶ್ರೀ ಯಂತ್ರದಿಂದ ಅಗ್ನಿಯ ಜ್ಯೋತಿಯು ಹೊರಗೆ ಬರುವುದು ಕಾಣಿಸುವುದು : ಆಗ ನಾನು ಸಹಜವಾಗಿ ಶ್ರೀ. ವಿನಾಯಕ ಶಾನಭಾಗ ಇವರ ಬಳಿ, ”ಅನೇಕಬಾರಿ ‘ಶ್ರೀಲಕ್ಷ್ಮಿನರಸಿಂಹ’, ಎಂದೇ ಕರೆಯುತ್ತಾರಲ್ಲವೇ ? ಅಂದರೆ ಎಲ್ಲಿ ಲಕ್ಷ್ಮೀ ಇರುವಳೋ, ಅಲ್ಲಿ ನರಸಿಂಹನೂ ಇರುವನಲ್ಲ !’’ ಎಂದು ಹೇಳಿ ನಗುತ್ತ ಆ ವಿಷಯವನ್ನು ಬಿಟ್ಟುಬಿಟ್ಟೆನು; ಆದರೆ ದೇವರು ನನಗೆ ಈ ಮಾತಿನ ಅನುಭೂತಿ ಕೊಟ್ಟನು. ನನ್ನ ಕೊರಳಲ್ಲಿ ಗುರುದೇವರು ನೀಡಿದ ಲಕ್ಷ್ಮೀಯಂತ್ರ (ಶ್ರೀ ಯಂತ್ರ)ವಿದೆ. ನಾನು ಮಾಡಿದ ಹವನದ ಛಾಯಾಚಿತ್ರವನ್ನು ತೆಗೆದಿದ್ದೇವೆ. ಅದರಲ್ಲಿ ಈ ಲಕ್ಷ್ಮೀಯಂತ್ರದಿಂದ ಪ್ರತ್ಯಕ್ಷ ಅಗ್ನಿಯ ಜ್ಯೋತಿಯು ಹೊರಗೆ ಬರುತ್ತಿರುವುದು ಕಾಣಿಸುತ್ತಿದೆ, ಅಂದರೆ ನರಸಿಂಹನು ನನಗೆ, ‘ಶ್ರೀ ಅಂದರೆ ಲಕ್ಷ್ಮೀಯಾಗಿದ್ದಾಳೆ, ಅಲ್ಲಿ ಅಗ್ನಿಯ ಜ್ವಾಲೆಯ ರೂಪದಲ್ಲಿ ನಾನು ಸಹ ಇದ್ದೇನೆ !’ ಎಂದು ಹೇಳಿದನು.

ಈ ರೀತಿ ಸಾಕ್ಷಾತ್‌ ಲಕ್ಷ್ಮೀನರಸಿಂಹ ರೂಪದಲ್ಲಿ ದೇವರು ನನಗೆ ಅನುಭೂತಿ ನೀಡಿದ್ದರಿಂದ ಅವನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು. (೧೭.೧.೨೦೨೧)