ಸನಾತನ ಧರ್ಮದ ವಿರುದ್ಧ ಸಮ್ಮೇಳನ ನಡೆಸಬೇಕು ಎನ್ನುವವರಿಗೆ ಕಪಾಳಮೋಕ್ಷ ಮಾಡಿದ ಚೆನ್ನೈ ಉಚ್ಚ ನ್ಯಾಯಾಲಯದ ತೀರ್ಪು !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ದ್ರಾವಿಡ ವಿಚಾರಸರಣಿಯ ಸಮ್ಮೇಳನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಉಚ್ಚ ನ್ಯಾಯಾಲಯ

ಮಂಗೇಶ ಕಾರ್ತಿಕೇಯನ್‌ ಇವರು ದ್ರಾವಿಡಿಯನ್‌ ವಿಚಾರಸರಣಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಸಮ್ಮೇಳನವನ್ನು ನಡೆಸಲು ನಿರ್ಧರಿಸಿದ್ದರು. ಈ ಕುರಿತು ಅವರು ಸಲ್ಲಿಸಿದ್ದ ಅರ್ಜಿಯನ್ನು ಪೊಲೀಸರು ಪರಿಗಣಿಸಿರಲಿಲ್ಲ. ಹೀಗಾಗಿ ಅವರು ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ದೀಪಾವಳಿ ರಜೆಯ ಮೊದಲು ೩೧.೧೦.೨೦೨೩ ರಂದು ನ್ಯಾಯಮೂರ್ತಿ ಜಿ. ಜಯಚಂದ್ರ ಇವರು ಅರ್ಜಿಯನ್ನು ತಿರಸ್ಕರಿಸಿದರು. ಈ ಅರ್ಜಿಯಲ್ಲಿ ಕಾರ್ತಿಕೇಯನ್‌ ಇವರು ಚೆನ್ನೈ ಪೊಲೀಸ್‌ ಆಯುಕ್ತರು ಮತ್ತು ಅಹ್ವಾಡಿ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಇವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ಅರ್ಜಿದಾರರು ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಪೊಲೀಸ್‌ ಆಯುಕ್ತರು ಆ ಬಗ್ಗೆ ಸೂಕ್ತ ವಿಚಾರ ಮಾಡ
ಬೇಕು’, ಎಂದು ಆದೇಶ ನೀಡಿ ಚೆನ್ನೈ ಉಚ್ಚ ನ್ಯಾಯಾಲಯವು ಮೊದಲ ಅರ್ಜಿ ಮೇಲೆ ತೀರ್ಪು ನೀಡಿ ವಿಲೇವಾರಿ ಮಾಡಿತು.

೨. ಆಕ್ರೋಶಗೊಂಡ ನ್ಯಾಯಾಲಯದಿಂದ ಕಾರ್ತಿಕೇಯನ್‌ ಇವರ ಎರಡನೇ ಅರ್ಜಿಯೂ ವಜಾ

ಸನಾತನ ಧರ್ಮದ ನಿರ್ಮೂಲನೆಗಾಗಿ ಸಮ್ಮೇಳನ ನಡೆಸಲು ಕಾರ್ತಿಕೇಯನ್‌ ಅವರು ಅರ್ಜಿ ಸಲ್ಲಿಸಿದ್ದರು. ಅವರಿಗೆ ಅನುಮತಿ ಸಿಗಲಿಲ್ಲ.
ಹೀಗಾಗಿ ಅವರು ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯವು ಮೊದಲ ‘ರಿಟ್’ ಅರ್ಜಿಯನ್ನು ಸಿಂಥಿಲ ಮಲ್ಲಾರ ಎಂಬವರು ಸಲ್ಲಿಸಿದ್ದರು. ಈಗ ಅರ್ಜಿ ಸಲ್ಲಿಸಿದ ವ್ಯಕ್ತಿ ಮಂಗೇಶ ಕಾರ್ತಿಕೇಯನ್‌ ಆಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಅರ್ಜಿದಾರರು, ‘‘ಎರಡೂ ಹೆಸರುಗಳು ನನ್ನವೇ ಆಗಿವೆ’’ ಎಂದರು, ಮೊದಲ ಮತ್ತು ಎರಡನೇ ಅರ್ಜಿಯಲ್ಲಿ ಪೊಲೀಸ್‌ ಠಾಣೆಗಳು ಬೇರೆ ಬೇರೆಯಾಗಿದ್ದರೂ ವಿಷಯ ಒಂದೇ ಆಗಿರುವುದರಿಂದ, ನ್ಯಾಯಾಲಯವು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು.

೩. ದ್ವೇಷ ಹುಟ್ಟಿಸುವ ವಿಷಯದ ಕುರಿತು ಸಮ್ಮೇಳನವನ್ನು ನಡೆಸುವುದು ಅಯೋಗ್ಯವಾಗಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !

ಉಚ್ಚ ನ್ಯಾಯಾಲಯವು ಹೇಳಿದ ಅಂಶಗಳು ಮುಂದಿ ನಂತಿವೆ, ಕೆಲವು ದಿನಗಳ ಹಿಂದೆ ಆಡಳಿತ ಪಕ್ಷದ ಕೆಲವು ಸಚಿವರು ಮತ್ತು ಜವಾಬ್ದಾರ ವ್ಯಕ್ತಿಗಳು ಸನಾತನ ಧರ್ಮವನ್ನು ಕೊನೆಗೊಳಿಸುವ ವಿಷಯ, ಹಾಗೆಯೇ ಈ ವಿಚಾರಸರಣಿಯನ್ನು ಕೊನೆಗೊಳಿಸುವ ಹೇಳಿಕೆಗಳನ್ನು ನೀಡಿದ್ದರು. ಎರಡು ವಿಚಾರಗಳಲ್ಲಿ ಅಸಮಾಧಾನ ಹರಡು ವುದು ಅವರ ಉದ್ದೇಶವಾಗಿದೆ. ವಾಸ್ತವದಲ್ಲಿ ಸಚಿವ ಹುದ್ದೆಯಲ್ಲಿರುವ ವ್ಯಕ್ತಿಯು ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿಯಬೇಕು. ದೇಶದಲ್ಲಿ ವಿವಿಧ ಧರ್ಮಗಳ ಜನರು ವಾಸಿಸುತ್ತಾರೆ. ಇಂತಹ ಸಮಯದಲ್ಲಿ ‘ಸನಾತನ ಧರ್ಮವನ್ನು ಮುಗಿಸಬೇಕು’ ಎನ್ನುವಂತಹ ಹೇಳಿಕೆಯನ್ನು ನೀಡಿ ಸಂಪೂರ್ಣ ದೇಶದಲ್ಲಿ ಹೊಲಸು ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ. ದ್ವೇಷವನ್ನು ಹುಟ್ಟಿಸುವ ವ್ಯಕ್ತಿಗಳಿಗೆ ನ್ಯಾಯಾಲಯ ಸಹಾಯ ಮಾಡಲಾರದು. ಜಾತಿ, ಸಿದ್ಧಾಂತ ಅಥವಾ ಇತರ ಕಾರಣ ಗಳಿಂದ ದ್ವೇಷವನ್ನು ಬೆಳೆಸುವ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ನಿಮಗೆ ಸಮ್ಮೇಳನ ನಡೆಸಲಿಕ್ಕಿದ್ದರೆ, ಸಮಾಜದಲ್ಲಿನ ಜಾತಿಭೇದ ದೂರ ಮಾಡುವುದು, ದುಷ್ಕೃತ್ಯ ಗಳನ್ನು ದೂರ ಮಾಡುವುದು, ವ್ಯಸನಾಧೀನತೆ ತೊಡೆದು ಹಾಕುವ ಬಗ್ಗೆ ಜಾಗೃತಿ ಮೂಡಿಸಿ. ಇದನ್ನು ಮಾಡದೆ ಸಮಾಜದಲ್ಲಿ ದ್ವೇಷ ಹುಟ್ಟಿಸುವ ವಿಷಯದ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೆಲವು ದಿನಗಳ ಹಿಂದೆ ‘ಸನಾತನ ಧರ್ಮವನ್ನು ನಷ್ಟಗೊಳಿಸಿ’ ಎಂದು ಹೇಳಿಕೆ ನೀಡಿದ ನೇತಾರರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯದಲ್ಲಿಯೂ ನ್ಯಾಯಾಲಯ ವಿಷದ ವ್ಯಕ್ತಪಡಿಸಿ ರಿಟ್‌ ಅರ್ಜಿಯನ್ನು ವಜಾಗೊಳಿಸಿತು. ಇಲ್ಲಿಯವರೆಗೆ ಇಂತಹ ವಿಷಯಗಳನ್ನು ನ್ಯಾಯಾಲಯವು ಉತ್ತಮ ರೀತಿಯಲ್ಲಿ ನಿಭಾಯಿಸಿದೆ. ‘ಸಂವಿಧಾನವು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ’ ಎಂಬಂತಹ ದೊಡ್ಡದೊಡ್ಡ ಶಬ್ದಗಳನ್ನು ಬಳಸಿ, ಸನಾತನ ಹಿಂದೂ ಧರ್ಮದ ವಿರುದ್ಧ ವಿಷಕಾರುವವರಿಗೆ ಕಪಾಳಮೋಕ್ಷ ಮಾಡಿದೆ. ಕೇವಲ ಪೊಲೀಸರಿಗೆ ಕಿವಿಹಿಂಡಿದ ಮಾತ್ರಕ್ಕೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಅದಕ್ಕಾಗಿ ಜವಾಬ್ದಾರಿಯುತ ಪೊಲೀಸ ಅಧಿಕಾರಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಅವರಿಗೆ ‘ನಾಯಕರು ದ್ವೇಷಯುಕ್ತ ಹೇಳಿಕೆ ನೀಡಿದವರ ವಿರುದ್ಧ ಪೊಲೀಸರು ಅಪರಾಧ ದಾಖಲಿಸಿದ್ದಾರೆಯೇ ?’ ಎಂಬ ವಿಚಾರವಾಗಿ ಛೀಮಾರಿ ಹಾಕಬೇಕು; ಏಕೆಂದರೆ ಈಗಲೂ ೧೩೦ ಕೋಟಿ ಜನರಿಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಪೊಲೀಸರು ಮತ್ತು ಆಡಳಿತ ಭೇದಭಾವ ಮಾಡುತ್ತಿರುವುದು ಹಲವು ಬಾರಿ ಸಾಬೀತಾಗಿದೆ.

|| ಶ್ರೀ ಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೬.೧೧.೨೦೨೩)