ಸನಾತನ ಪ್ರಭಾತ ಪತ್ರಿಕೆಯಲ್ಲಿ ‘ಇಂದಿನಿಂದ ಸನಾತನದ ಸಾಧಕರು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಎಂದು ಸಂಬೋಧಿಸಬೇಕು’, ಎಂದು ೧೪.೫.೨೦೨೦ ರಂದು ಪ್ರಕಟಿಸಲಾಗಿತ್ತು. ಅವರಿಬ್ಬರನ್ನು ಈ ರೀತಿ ಸಂಬೋಧಿಸಲು ಸಪ್ತರ್ಷಿಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯ’ ಮಾಧ್ಯಮದಿಂದ ಹೇಳಿದ್ದಾರೆ. ಹೀಗಿದ್ದರೂ ಇಂದಿಗೂ ಬಹಳಷ್ಟು ಸಾಧಕರು ‘ಸದ್ಗುರು ಬಿಂದಾತಾಯಿ’ ಅಥವಾ ‘ಪೂ. ತಾಯಿ’, ಅದೇ ರೀತಿ ‘ಸದ್ಗುರು ಗಾಡಗೀಳಕಾಕು’ ಅಥವಾ ‘ಪೂ. ಕಾಕು’, ಎಂದು ಉಲ್ಲೇಖಿಸುತ್ತಾರೆ. ಸನಾತನದ ಸಾಧಕರು ಸಪ್ತರ್ಷಿಗಳ ಆಜ್ಞಾಪಾಲನೆ ಮಾಡಿ ‘ಶ್ರೀಸತ್‌ಶಕ್ತಿ ಮತ್ತು ‘ಶ್ರೀಚಿತ್‌ಶಕ್ತಿ’ ಈ ಶಬ್ದಗಳನ್ನು ಉಚ್ಚರಿಸಿದರೆ ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿಗಳು ಒಟ್ಟಿಗೆ ಇರುತ್ತವೆ’, ಎಂಬ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ಆ ಶಬ್ದಗಳಿಂದ ದೈವೀ ಶಕ್ತಿಯು ಕಾರ್ಯನಿರತವಾಗಿ ಅದು ಸಾಧಕರಿಗೆ ಸಿಗುತ್ತದೆ. ಆದುದರಿಂದ ಸಾಧಕರು ಮಾತನಾಡುವಾಗ ಅಥವಾ ಬರೆಯುವಾಗ ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ’ ಮತ್ತು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ’, ಎಂದೇ ಉಲ್ಲೇಖಿಸಬೇಕು !’
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೧೧.೨೦೨೩)