ಸಾಧಕರೇ, ಸಂತರ ಸತ್ಸಂಗದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಆದ್ಯತೆ ನೀಡುವಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಒಂದು ಸಲ ಓರ್ವ ಸಾಧಕರಿಗೆ ಓರ್ವ ಸಂತರ ಭೇಟಿಯಾಯಿತು. ಆ ಸಮಯದಲ್ಲಿ ಆ ಸಂತರು ಸಾಧಕರಿಗೆ, ”ಒಬ್ಬರೇ ಭೇಟಿಗೆ ಬಂದಿದ್ದೀರಿ. ನೀವು ನಿಮ್ಮ ಪತ್ನಿ ಮತ್ತು ಇತರ ಕುಟುಂಬದವರನ್ನು ಜೊತೆಗೆ ಕರೆತಂದಿಲ್ಲವಲ್ಲ !”, ಎಂದು ಕೇಳಿದರು. ಆಗ ಸಂಬಂಧಿತ ಸಾಧಕರು, ”ಮನೆಯಲ್ಲಿ ಎರಡು ನಾಯಿಮರಿಗಳಿವೆ. ಅವುಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಪತ್ನಿ ಮತ್ತು ಇತರ ಕುಟುಂಬದವರನ್ನು ಭೇಟಿಗಾಗಿ ಕರೆತರಲಿಲ್ಲ”, ಎಂದು ಹೇಳಿದರು.

ಇದರಲ್ಲಿ ‘ಸಂತರ ಮಾರ್ಗದರ್ಶನದಿಂದ ಸಾಧನೆ ಯಲ್ಲಿನ ಅಡಚಣೆಗಳು ದೂರಾಗುತ್ತವೆ ಮತ್ತು ಸಾಧನೆಗೆ ವೇಗ ಬಂದು ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬ ದೃಷ್ಟಿಕೋನವನ್ನು ಗಮನದಲ್ಲಿಟ್ಟು ಸಾಧಕರು ಸಂತರ ಸಾಧನೆಯ ಬಗೆಗಿನ ಅಮೂಲ್ಯ ಮಾರ್ಗದರ್ಶನಕ್ಕೆ ಆದ್ಯತೆ ನೀಡಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಇಂತಹ ಪ್ರಸಂಗದಲ್ಲಿ ‘ಸಾಧಕರು ತಾರತಮ್ಯವನ್ನು ಬಳಸಿ ಪ್ರಾಣಿಗಳನ್ನು ನೋಡಿಕೊಳ್ಳಲು ಸಂಬಂಧಿಕರು, ಅಕ್ಕಪಕ್ಕದವರು ಅಥವಾ ಇತರರ ಸಹಾಯ ಪಡೆಯಬೇಕು ಅಥವಾ ‘ಇತರ ಯಾವ ಉಪಾಯಯೋಜನೆಯನ್ನು ಕಂಡು ಹಿಡಿಯಬಹುದು ?’, ಎಂದು ನೋಡಬೇಕು. ಆದರೂ ಅಡಚಣೆಗಳು ಬಂದರೆ ಎಲ್ಲ ಕುಟುಂಬದವರು ಮನೆಯಲ್ಲಿ ನಿಲ್ಲುವ ಬದಲು ಒಬ್ಬರು ನಿಂತು ಉಳಿದ ಸದಸ್ಯರನ್ನು ಮಾರ್ಗದರ್ಶನಕ್ಕಾಗಿ ಕರೆದುಕೊಂಡು ಬರುವ ದೃಷ್ಟಿಯಿಂದ ಸಾಧಕರು ಆಯೋಜನೆ ಮಾಡಬಹುದು.

‘ಸಾಧಕರೇ, ‘ಈ ಆಪತ್ಕಾಲದಲ್ಲಿ ಸಾಧನೆಗಾಗಿ ಸಂತರ ಅಮೂಲ್ಯ ಮಾರ್ಗದರ್ಶನ ನಮಗೆ ಲಭಿಸುತ್ತಿದೆ’, ಈ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೧೧.೨೦೨೩)