ಪ್ರಸಕ್ತ ಶಾಲಾ ಮತ್ತು ಆಧ್ಯಾತ್ಮಿಕ ಶಿಕ್ಷಣದ ನಡುವಿನ ಅಂತರ !

‘ಶಿಕ್ಷಕರು ಭೂಪಟದಲ್ಲಿ ತೋರಿಸಿದ ಅಮೇರಿಕವನ್ನು ಸತ್ಯವೆಂದು ತಿಳಿದು ಅಧ್ಯಯನ ಮಾಡುವವರು; ಆದರೆ ಸಂತರು ತೋರಿಸಿದ ದೇವರ ಚಿತ್ರದ ಬಗ್ಗೆ ಶ್ರದ್ಧೆ ಇಟ್ಟು ಅಧ್ಯಾತ್ಮದ ಬಗ್ಗೆ ಅಧ್ಯಯನ ಮಾಡದವರು ಬುದ್ಧಿವಾದಿಗಳಲ್ಲ ಅಧ್ಯಾತ್ಮವಿರೋಧಿಗಳಾಗಿದ್ದಾರೆ, ಎನ್ನಬಹುದು ಇದಕ್ಕೆ ಸಂಬಂಧಿಸಿದ ವಿವರಣಾತ್ಮಕ ಲೇಖನವನ್ನು ಪ್ರಸ್ತುತ ಪಡಿಸಲಾಗಿದೆ.

೧. ‘ದೇವರನ್ನು ತೋರಿಸು’ ಎಂದ ಶಿಕ್ಷಕರು ನಂತರ ಅಧ್ಯಾತ್ಮದ ವಿದ್ಯಾರ್ಥಿಯಾಗಲು ಒಪ್ಪುವುದು

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಸಾಧನೆಯನ್ನು ಪ್ರಾರಂಭಿಸಿದ ನಂತರ ನಾನು ಒಮ್ಮೆ ಹಳ್ಳಿಗೆ ಹೋಗಿದ್ದೆ. ಅಲ್ಲಿ ನನಗೆ ನನ್ನ ಪರಿಚಯದ ಭೂಗೋಲ ಶಿಕ್ಷಕರು ಸಿಕ್ಕಿದರು. ಅವರು ಮಾತನಾಡುತ್ತಾ, ”ಪಿಂಗಳೆ, ನೀನು ವೈದ್ಯಕೀಯ ಕ್ಷೇತ್ರದಲ್ಲಿ ಓರ್ವ ತಜ್ಞನಾಗಿದ್ದರೂ ಅಧ್ಯಾತ್ಮದತ್ತ ಒಲವು ತೋರಿದ್ದಿ. ಇದರಿಂದ ವೈದ್ಯಕೀಯ ಶಿಕ್ಷಣದ ಒಂದು ಸ್ಥಾನವನ್ನು ವ್ಯರ್ಥ ಮಾಡಿದೆ ಎಂದು ನಿನಗೆ ಅನಿಸುವುದಿಲ್ಲವೇ ?’ ಎಂದು ಕೇಳಿದರು ಆಗ ನಾನು ಹೇಳಿದೆನು, ”ಇಲ್ಲ ಸರ್, ನನಗೆ ಹಾಗೆ ಅನಿಸುವುದಿಲ್ಲ, ಏಕೆಂದರೆ ಈಗ ನಾನು ಕೇವಲ ವೈದ್ಯಕೀಯ ವಿಜ್ಞಾನ ಮಾತ್ರವಲ್ಲ; ಅದನ್ನೂ ಮೀರಿದ ಆಧ್ಯಾತ್ಮಿಕ ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದೇನೆ. ಈ ಕಾರಣದಿಂದ ‘ಏನಾದರೂ ವ್ಯರ್ಥವಾಗಿದೆ’ ಹೀಗೆ ನನಗೆ ಅನಿಸುವುದಿಲ್ಲ.’ ಆಗ ಅವರು ”ನೀನು ಅಧ್ಯಾತ್ಮ ವಿಜ್ಞಾನದ ಅಧ್ಯಯನ ಮಾಡುತ್ತಿದ್ದಿ ಅಂದ ಮೇಲೆ ದೇವರನ್ನು ನೋಡಿದ್ದೀಯಾ ? ದೇವರನ್ನು ತೋರಿಸು ಇಲ್ಲದಿದ್ದರೆ ದೇವರಿಲ್ಲ ಎಂದು ಬರೆದುಕೊಡು !”, ಎಂದರು. ಆಗ ನಾನು ನನ್ನ ಜೇಬಿನಿಂದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆದೆನು ಹಾಗೂ ಅವರಿಗೆ ಹೇಳಿದೆನು ”ಇದು ನೋಡಿ ದೇವರು, ನಾನು ಈ ದೇವರನ್ನು ನೋಡಿದ್ದೇನೆ”, ಎಂದೆನು. ಅದಕ್ಕೆ ಅವರು, ”ಇದು ಚಿತ್ರ, ದೇವರು ಎಲ್ಲಿದ್ದಾನೆ ?” ಎಂದರು. ಆಗ ನಾನು ಅವರಿಗೆ ಹೇಳಿದೆ, ‘ಸರ್, ನಮಗೆಲ್ಲ ವಿದ್ಯಾರ್ಥಿಗಳಿಗೆ ಭೂಗೋಲವನ್ನು ಕಲಿಸಿದ್ದೀರಿ. ಗೋಡೆಯ ಮೇಲೆ ಭೂಪಟವನ್ನು ನೇತುಹಾಕಿ ನಮಗೆ ಕಲಿಸಿದ್ದೀರಿ. ಈ ಭೂಪಟದಲ್ಲಿ ಕಂಡ ಪ್ರದೇಶ ಅಮೇರಿಕಾ ಎಂದು ನೀವು ಹೇಳುತ್ತಿದ್ದೀರಿ. ಇದು ಅಮೇರಿಕಾ ಅಲ್ಲ ಎಂದು ನನಗೆ ತಿಳಿದಿತ್ತು, ಆದರೆ ನೀವು ಅದರ ಪ್ರಾತಿನಿಧಿಕ ರೂಪವನ್ನು ಕಾಗದದ ಭೂಪಟದಲ್ಲಿ ತೋರಿಸುತ್ತಿದ್ದೀರಿ. ಆಗ ಶಿಕ್ಷಣವನ್ನು ಪಡೆಯುತ್ತಿದ್ದ ಸಮಯದಲ್ಲಿ ಶಿಕ್ಷಕರ ಮೇಲೆ ಶ್ರದ್ಧೆಯನ್ನು ಇಟ್ಟುಕೊಂಡು ನೀವು ಏನು ಹೇಳುವುದು ಸತ್ಯವಾಗಿದೆ’ ನಾವು ಭೂಪಟದ ಅಮೇರಿಕಾವನ್ನು ಸತ್ಯವೆಂದು ಒಪ್ಪಿ ಕೊಳ್ಳುತ್ತಿದ್ದೆವು. ಅದೇ ರೀತಿ ನನ್ನ ಗುರುದೇವರು ದೇವರು ಗಳ ಚಿತ್ರಗಳನ್ನು ತೋರಿಸಿ ‘ದೇವರು ಹೀಗಿದ್ದಾನೆ’ ಎಂದು ಹೇಳಿ ‘ಈ ದೇವರನ್ನು ಪಡೆಯಲು ಸಾಧನೆ ಮಾಡು’ ಎಂದು ಮಾರ್ಗವನ್ನೂ ತೋರಿಸಿದರು. ನಾನು ಅವರು ಹೇಳಿದಂತೆ ಸಾಧನೆ ಮಾಡಿದೆನು ಹಾಗೂ ಅವರ ಮಾರ್ಗದರ್ಶವನ್ನು ಪಡೆದುಕೊಂಡೆನು. ಹಾಗಾಗಿ ನನಗೆ ಭಗವಂತನ ದರ್ಶನವಾಯಿತು. ಹಾಗಾಗಿ ‘ನಾನು ದೇವರನ್ನು ನೋಡಿದ್ದೇನೆ ಮತ್ತು ಅವನು ಈ ಭಾವಚಿತ್ರದಂತೆಯೇ ಇದ್ದಾನೆ, ಎಂದು ನಿಮಗೆ ಹೇಳಿದೆನು”.

ನಾನು ಮಾತು ಮುಂದುವರಿಸುತ್ತಾ, ‘ಸರ್, ನಾವು ವಿದ್ಯಾರ್ಥಿಗಳು ಶಾಲೆಯಲ್ಲಿ ನಿಮಗೆ ಪ್ರಶ್ನೆಗಳನ್ನು ಕೇಳ ಬಹುದು, ಇಷ್ಟು ಸಣ್ಣದಾದ ಭೂಪಟದಲ್ಲಿ ಇಷ್ಟು ದೊಡ್ಡದಾದ ಅಮೇರಿಕಾ ಹೇಗೆ ಇರುತ್ತದೆ ? ಈಗಲೇ ನಮಗೆ ಅಮೇರಿಕಾವನ್ನು ತೋರಿಸಿ ಇಲ್ಲದಿದ್ದರೆ ಅಮೇರಿಕಾ ಇಲ್ಲ, ಬರೆದು ಕೊಡಿ. ಆದರೆ ಕಲಿಯುವ ವಿದ್ಯಾರ್ಥಿಗಳ ಈ ಪಾತ್ರವು ಯೋಚನಾರಹಿತ ಎಂದು ಸಾಬೀತುಪಡಿಸುತ್ತದೆ. ಅದೇ ರೀತಿ ‘ದೇವರನ್ನು ತೋರಿಸು, ಇಲ್ಲದಿದ್ದರೆ ದೇವರಿಲ್ಲ, ಹೀಗೆ ಬರೆದುಕೊಡು’ ಎಂಬ ನಿಮ್ಮ ಮಾತು ತರ್ಕಕ್ಕೆ ತಕ್ಕುದಲ್ಲ, ಅದು ಇತರರಿಗೆ ಅನಿಸಬಹುದು, ಎಂದು ಹೇಳಿದೆ. ಆಗ ನಮ್ಮ ಭೂಗೋಲದ ಸರ್‌ ಹೇಳಿದರು, ‘ಅಮೇರಿಕವನ್ನು ನಿಮಗೆ ಹೀಗೆ ತೋರಿಸಲಾಗುವುದಿಲ್ಲ. ಅದಕ್ಕಾಗಿ ನೀನು ಸಾಕಷ್ಟು ಹಣವನ್ನು ಗಳಿಸಬೇಕಾಗುತ್ತದೆ. ಪಾಸ್ಪೋರ್ಟ್ ಮಾಡಬೇಕಾಗುತ್ತದೆ. ಅದನ್ನು ಪಡೆದ ನಂತರ, ನೀನು ಅಮೇರಿಕ ‘ವೀಸಾ’ ತೆಗೆದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ನೀನು ಅಮೇರಿಕವನ್ನು ನೋಡಲು ಸಾಧ್ಯವಾಗುತ್ತದೆ. ಹೀಗಾಗಿ ‘ಅಮೇರಿಕಾ ನೋಡಲು ಹೋಗುತ್ತಿದ್ದೇನೆ’ ಎಂದು ಯಾರೋ ಎದ್ದು ಹೇಳುವಂತಿಲ್ಲ’, ಎಂದರÀÄ. ಆಗ ನಾನು ಅವರಿಗೆ ಹೇಳಿದೆ, ”ನೀವು ದೇವರನ್ನು ಕಾಣಬೇಕಾದರೆ ಗುರುದೇವರು ಅಥವಾ ಸಂತರಲ್ಲಿ ಶರಣಾಗಬೇಕು. ಅವರು ತೋರಿಸಿದ ಮಾರ್ಗದಲ್ಲಿ ನಾವು ಶ್ರದ್ಧೆಯೊಂದಿಗೆ ಸಾಧನೆಗಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಯಾವಾಗ ಶ್ರದ್ಧೆ ಹಾಗೂ ಪ್ರಯತ್ನಗಳನ್ನು ಜೊತೆಗೂಡಿಸುವಿರೋ ನಿಮಗೆ ಭಗವಂತನ ದರ್ಶನವು ನಿಶ್ಚಿತವಾಗಿಯೂ ಆಗುವುದು. ಯಾರಾದರೂ ಹೇಳಿದರೆ, ‘ನನಗೆ ಭಗವಂತನನ್ನು ತೋರಿಸಿ ಮತ್ತು ನಿಮಗೆ ಸಾಧ್ಯವಾಗದಿದ್ದರೆ, ದೇವರು ಅಸ್ತಿತ್ವದಲ್ಲಿಲ್ಲ ಎಂದು ಬರೆದುಕೊಡಿ ಎನ್ನಲು ಸಾಧ್ಯವೇ? ಒಂದು ಸರಳವಾದ ಭೂಪಟದಲ್ಲಿ ತೋರಿಸಿರುವ ಹಾಗೂ ಪ್ರತ್ಯಕ್ಷ ಕಣ್ಣುಗಳಿಂದ ನೋಡಬಹುದಾದ ಅಮೇರಿಕವನ್ನು ನೋಡಲು ಎಷ್ಟು ಕಷ್ಟಪಡಬೇಕು ಎಂದರೆ ಯಾವ ಸಾಮಾನ್ಯ ವ್ಯಕ್ತಿಯೂ ಅದನ್ನು ನೋಡಬೇಕೆಂದು ಯೋಚಿಸುವುದಿಲ್ಲ, ಹಾಗಾದರೆ, ಯಾರೋ ಒಬ್ಬರು ನನಗೆ ದರ್ಶನ ಬೇಕು ಎಂದು ಹೇಳುವುದರಿಂದ ಅಷ್ಟು ಸುಲಭವಾಗಿ ಮನಸ್ಸು ಮತ್ತು ಬುದ್ಧಿಯ ಆಚೆ ಇರುವ ಸೂಕ್ಷ್ಮ ದೇವತೆಯ (ದೇವರ) ದರ್ಶನ ಸಾಧ್ಯವೇ ?’’

ಭೂಗೋಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಮೇರಿಕವನ್ನು ನಕ್ಷೆಯಲ್ಲಿ ಮಾತ್ರ ತೋರಿಸಬಹುದು ಪ್ರತ್ಯಕ್ಷದಲ್ಲಲ್ಲ, ಇದು ಅವರ ಮಿತಿಯಾಗಿದೆ. ಅದೇ ರೀತಿಯಲ್ಲಿ ಓರ್ವ ಬುದ್ಧಿವಾದಿ ಅಥವಾ ನಾಸ್ತಿಕನಿಗೆ ಅನಿಸುತ್ತದೆಯೆಂದು ದೇವರನ್ನು ತೋರಿಸುವುದರಲ್ಲಿ ಸಹ ಮಿತಿ ಇರಬಹುದು, ಎಂಬ ವಿಚಾರವನ್ನು ಮಾಡಿರಿ. ಶ್ರದ್ಧಾರಹಿತ ಮತ್ತು ಬುದ್ಧಿವಾದಿಗಳಿಗೆ ದೇವರನ್ನು ನೋಡುವ ಅಥವಾ ಗುರುತಿಸುವ ಸಾಮರ್ಥ್ಯವಿದೆಯೇ ? ಇದರ ವಿಚಾರವನ್ನು ಮಾಡಿದ ನಂತರ, ‘ದೇವರನ್ನು ತೋರಿಸಿ ಇಲ್ಲದಿದ್ದರೆ ದೇವರಿಲ್ಲ, ಎಂದು ಬರೆದು ಕೊಡಿ’, ಎಂದು ಸಂತರಿಗೆ ಇಂತಹ ತರ್ಕರಹಿತ ಹಾಗೂ ಬುದ್ಧಿ ಇಲ್ಲದ ಪ್ರಶ್ನೆಗಳನ್ನು ಕೇಳುವುದಿಲ್ಲ, ಇದರ ಸಂಪೂರ್ಣ ವಿಶ್ವಾಸ ನನಗಿದೆ. ಕೊನೆ ಯಲ್ಲಿ ಭೂಗೋಲದ ಶಿಕ್ಷಕರು ಹೇಳಿದರು, ‘ನೀನು ನನ್ನ ವ್ಯಾವಹಾರಿಕ ಶಿಕ್ಷಣದ ವಿದ್ಯಾರ್ಥಿಯಾಗಿದ್ದಿ. ಇಂದು ನಾನು ನಿಮ್ಮ ಆಧ್ಯಾತ್ಮಿಕ ಶಿಕ್ಷಣದ ವಿದ್ಯಾರ್ಥಿಯಾದೆನು’, ಎಂದರು.

೨. ದೇವರನ್ನು ನೋಡುವ ದೃಷ್ಟಿ ಪ್ರಾಪ್ತಿಯಾಗಲು ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವುದು ಅವಶ್ಯಕವಾಗಿದೆ !

ತದನಂತರ, ನಾನು ಅವರಿಗೆ ಆಧುನಿಕ ವಿಜ್ಞಾನ ಅಂದರೆ ವೈದ್ಯಕೀಯ ವಿಜ್ಞಾನದ ಸಂದರ್ಭದಲ್ಲಿ ಒಂದು ಉದಾಹರಣೆಯನ್ನು ನೀಡುತ್ತಾ ನಾನು ವೈದ್ಯಕೀಯ ವಿಜ್ಞಾನ (ಮೆಡಿಕಲ್‌ ಸಾಯನ್ಸ್‌) ಕಲಿಯುತ್ತಿದ್ದ ಸಂದರ್ಭದಲ್ಲಿ, ನಮಗೆ ತಾತ್ತ್ವಿಕ ದೃಷ್ಟಿಕೋನದಿಂದ ಎಲ್ಲ ಮಾಹಿತಿಯನ್ನು ನೀಡಲಾಗುತ್ತಿತ್ತು. ಸೂಕ್ಷ್ಮಜೀವಶಾಸ್ತ್ರ ತರಗತಿಯಲ್ಲಿ ಸೂಕ್ಷ್ಮದರ್ಶಕ ಯಂತ್ರದ ಮೂಲಕ (‘ಮೈಕ್ರೋಸ್ಕೊಪ್’ ಮೂಲಕ) ಮಲೇರಿಯಾ ಪ್ಯಾರಾಸೈಟ್‌ ಇದನ್ನು ಅವರು ನಮಗೆ ತೋರಿಸುವವರಿದ್ದರು. ನಮಗೆ ಅನಿಸುತ್ತಿತ್ತು ‘ಥಿಯರಿ’ (ತಾತ್ತ್ವಿಕ) ಮಾಹಿತಿ ಇದೆ, ಹಾಗಾಗಿ ನಾವು ಸುಲಭವಾಗಿ ನೋಡಬಹುದು; ಆದರೆ ಸೂಕ್ಷ್ಮದರ್ಶಕಯಂತ್ರದಲ್ಲಿ ನೋಡಿ ದರೆ ಏನೂ ಅರ್ಥವಾಗುತ್ತಿರಲಿಲ್ಲ. ಸೂಕ್ಷ್ಮ ಜೀವಶಾಸ್ತ್ರದ ಸರ್‌ ಅವರು ನಮಗೆ ೧೦-೧೦ ಬಾರಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನಮಗೆ ತೋರಿಸಬೇಕಾಗುತ್ತಿತ್ತು. ಅವರು ಹೇಳುತ್ತಿದ್ದರು, ‘ನೀನು ಅದು ಇಲ್ಲ ಎಂದು ಹೇಳುತ್ತಿದ್ದೀಯಾ, ಆದರೆ ಇಲ್ಲಿ ಪಕ್ಕದಲ್ಲಿರುವುದೇ ಮಲೇರಿಯಾ ಜಂತು’ ಎನ್ನುತ್ತಿದ್ದರು, ಒಂದರ್ಥದಲ್ಲಿ ಯಾರಿಗೆ ಮಲೇರಿಯಾ ಜೀವಾಣುವಿನ ಬಗ್ಗೆ ಉತ್ತಮ ಪರಿಚಯವಿತ್ತು. ಅವರು ನನಗೆ ಸೂಕ್ಷ್ಮದರ್ಶಕ ಯಂತ್ರದಲ್ಲಿ ಇದು ಮಲೇರಿಯಾ ಜೀವಾಣು ಎಂದು ಹೇಳುತ್ತಿದ್ದರು. ಎಲ್ಲಿಯವರೆಗೆ ಸೂಕ್ಷ್ಮಜೀವಶಾಸ್ತ್ರದ ಥಿಯರಿಯನ್ನು ಪ್ರತ್ಯಕ್ಷ ಸೂಕ್ಷ್ಮದರ್ಶಕ ಯಂತ್ರದ ಮೂಲಕ ತೋರಿಸುವ ಶಿಕ್ಷಕರು ಜೀವನದಲ್ಲಿ ಬರುವವರೆಗೆ ‘ಮಲೇರಿಯಾ ಪಾರಾ ಸೈಟ್’ ಜಂತುವನ್ನು ಗುರುತಿಸಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಠಿಣವಾಗುತ್ತದೆ. ಹೀಗಿರುವಾಗ ಶ್ರದ್ಧೆ ಇಲ್ಲದವರಿಗೆ, ಅಧ್ಯಾತ್ಮದ ಥಿಯರಿಯ ಅಧ್ಯಯನ ಮಾಡದವರಿಗೆ, ಅಧ್ಯಯನ ಮಾಡಿದರೂ ತಪ್ಪನ್ನು ಎತ್ತಿ ತೋರಿಸುವುದಕ್ಕಾಗಲಿ ಅಥವಾ ಟೀಕೆ ಮಾಡುವುದಕ್ಕಾಗಲಿ ಒಂದು ವೇಳೆ ನೀವು ಅವರಿಗೆ ಭಗವಂತನ ದರ್ಶನವನ್ನು ಮಾಡಿಸಿದರೂ, ಅವರು ಅವನನ್ನು ಹೇಗೆ ಗುರುತಿಸುತ್ತಾರೆ ? ಭಗವಂತನ ದರ್ಶನವನ್ನು ಪಡೆಯಲು ಗುರುಗಳಿರುವುದು ಮಹತ್ವದ್ದಾಗಿದೆ ಹಾಗೂ ಅದರೊಂದಿಗೆ ಸಾಧನೆಯನ್ನು ಮಾಡುವುದು ಆವಶ್ಯವಾಗಿದೆ. – (ಸದ್ಗುರು) ಡಾ. ಚಾರುದತ್ತ ಪಿಂಗಳೆ

ಸಾಧನೆ ಮಾಡುವುದೆಂದರೆ ಒಂದು ಪ್ರಕಾರದ ತಪಸ್ಸನ್ನು ಮಾಡುವುದಾಗಿರುತ್ತದೆ. ಭಗವಂತನನ್ನು ನೋಡಲು ಬಯಸುವ ಜನರಲ್ಲಿ ಜಿಜ್ಞಾಸೆ ಮತ್ತು ಮುಮುಕ್ಷುತ್ವ ಇರಬೇಕಾಗುತ್ತದೆ.É ಹೀಗಿಲ್ಲದವರು ‘ಈಗಲೇ ದೇವರನ್ನು ತೋರಿಸಿ’ ಎಂದರೆ ಹೇಗೆ ?

ನಾನು ಮುಂದೆ ಮಾತನಾಡುತ್ತಾ, ”ಸರ್‌ ನಾನು ನಿಮ್ಮ ಮೇಲೆ ಎಷ್ಟು ಶ್ರದ್ಧೆಯನ್ನು ಇಟ್ಟಿರುವೆನೋ ಅಷ್ಟೇ ಶ್ರದ್ಧೆಯನ್ನು ನನ್ನ ಆಧ್ಯಾತ್ಮಿಕ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಮೇಲೆ ಇಟ್ಟಿದ್ದೇನೆ. ಭೂಪಟದಲ್ಲಿ ಅಮೇರಿಕಾದ ಪ್ರಾತಿ ನಿಧಿಕ ಸತ್ಯವನ್ನು ಸ್ವೀಕರಿಸಿ ನಾನು ಹೇಗೆ ಸಾಧನೆ ಮಾಡಿ ದೆನೋ ಅದೇ ರೀತಿ ಗುರುದೇವರು ತೋರಿಸಿದ ದೇವಾನು ದೇವತೆಗಳ ಚಿತ್ರಗಳಲ್ಲಿ ಶ್ರದ್ಧೆಯನ್ನು ಇರಿಸಿ ಅವರು ಹೇಳಿದ ಸಾಧನೆ ಮಾಡಿದೆನು. ಇದರೊಂದಿಗೆ ಅವರ ಆಜ್ಞಾಪಾಲನೆಯನ್ನು ಮಾಡಿದೆನು. ಯಾವ ರೀತಿಯಲ್ಲಿ ಅಮೇರಿಕಾವನ್ನು ನೋಡಲು ಸಾಧ್ಯವಿದೆ ಮತ್ತು ಅದಕ್ಕಾಗಿ ಏನು ಮಾಡಬೇಕು ? ಎಂಬುದನ್ನು ತಿಳಿದುಕೊಂಡೆನೋ ಅದೇ ರೀತಿಯಲ್ಲಿ ದೇವರುಗಳು ಮತ್ತು ಧರ್ಮಶಾಸ್ತ್ರಗಳು ಸತ್ಯ, ಅದರ ಅನುಭೂತಿ ಪಡೆಯಲು ಏನು ಮಾಡಬೇಕು ? ಅದನ್ನೂ ತಿಳಿದು ಕೊಳ್ಳಲು ಪ್ರಯತ್ನಿಸಿದೆನು. ಯಾವ ರೀತಿ ಆಧುನಿಕ ವಿಜ್ಞಾನವು ನಿರಂತರವಾಗಿ ಬದಲಾಗುತ್ತಿರುವಾಗ ಆ ಪರಿಸ್ಥಿತಿಯನ್ನು ಅನುಭವಿಸುತ್ತಿರುವೆವೋ, ಅದೇ ರೀತಿ ಅಧ್ಯಾತ್ಮ ವಿಜ್ಞಾನವು ಅಪರಿವರ್ತನೀಯವಾದದ್ದು ಹಾಗೂ ಶಾಶ್ವತವಾದದ್ದು ಎಂಬುದನ್ನು ಗುರುಗಳ ಮಾರ್ಗದರ್ಶನದಲ್ಲಿ ಅನುಭವಿಸಬಹುದು’’, ಎಂದು ತಿಳಿಸಿದೆ. – (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೪.೮.೨೦೨೩)