ಗುರುಪತವಂತ ಸಿಂಹ ಪನ್ನುವಿನ ದುರಹಂಕಾರ !
ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾವು ಸಿಖ್ ಫಾರ ಜಸ್ಟೀಸ ಈ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನುವಿನ ಹತ್ಯೆಗೆ ತಥಾಕಥಿತ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಬಂಧಿಸಿದೆ. ಇದಕ್ಕೆ ಪನ್ನೂ ಮಾತನಾಡಿ, ಈ ಕ್ರಮವನ್ನು ನಿಖಿಲ್ ಗುಪ್ತಾ ವಿರುದ್ಧ ಅಲ್ಲ, ಬದಲಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕೈಕೊಳ್ಳಲಾಗುತ್ತಿದೆ. ಮೋದಿಯವರು ನನ್ನನ್ನು ಭಯೋತ್ಪಾದಕರಿ ಎಂದು ಕರೆದರೆ ಇಡೀ ಜಗತ್ತೇ ನನ್ನ ಮೇಲೆ ಗುಂಡು ಹಾರಿಸುತ್ತದೆ ಎಂದು ಭಾರತ ಅನಿಸುತ್ತಿತ್ತು. ನನ್ನನ್ನು ಕೊಂದರೂ ಖಲಿಸ್ತಾನದ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.
ನ್ಯೂಯಾರ್ಕ್ ಟೈಮ್ಸ್ ಸುದ್ದಿಯನುಸಾರ, ಭಯೋತ್ಪಾದಕ ಪನ್ನು, ಆ ನಿಖಿಲ್ ಗುಪ್ತಾ ಅಥವಾ ಭಾರತೀಯ ಅಧಿಕಾರಿಗಳ ಪರಿಚಯವಿಲ್ಲ. ನಾನು ಸಾವಿಗೆ ಹೆದರುವುದಿಲ್ಲ. ನಾವು ಅಮೇರಿಕೆಯಲ್ಲಿ ವಾಸಿಸುತ್ತಿದ್ದೇವೆ. ಇದು ಶೂರರ ಮತ್ತು ಸ್ವತಂತ್ರ ಜನರ ಭೂಮಿಯಾಗಿದೆ ಎಂದು ಹೇಳಿದ್ದಾನೆ.
ತಪ್ಪಿತಸ್ಥರ ಜವಾಬ್ದಾರಿಯನ್ನು ನಿರ್ಧರಿಸಬೇಕು ! – ಅಮೇರಿಕಾ
ಅಮೇರಿಕಾದ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿಯವರು ನಿಖಿಲ ಗುಪ್ತಾ ಪ್ರಕರಣದ ನಂತರ ಅಮೇರಿಕಾ-ಭಾರತ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಾನ್ ಕಿರ್ಬಿ ಮಾತನಾಡಿ, ಭಾರತ ಅಮೇರಿಕೆಯ ಕಾರ್ಯತಂತ್ರದ ಪಾಲುದಾರ ಆಗಿದೆಯೆಂದು ಹೇಳಿದ್ದಾರೆ. ನಾವು ಇನ್ನು ಮುಂದೆಯೂ ಭಾರತದೊಂದಿಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಸುಧಾರಿಸಲು ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡುತ್ತಿರುತ್ತೇವೆ. ಅದೇ ಸಮಯದಲ್ಲಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಭಾರತವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಪ್ರಾರಂಭಿಸಿರುವುದು ನಮಗೆ ತೃಪ್ತಿ ತಂದಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಾಗಿದ್ದಾರೆಯೋ, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು.