ಆಮ್ಲಪಿತ್ತ (Acidity) ದ ನಿವಾರಣೆಗೆ ಹೋಮಿಯೋಪತಿ ಔಷಧಿಗಳ ಮಾಹಿತಿ

ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೦) ! 

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. ೨೫/೧೦ ನೇ ಸಂಚಿಕೆಯಲ್ಲಿ ನಾವು ಇದರಡಿಯಲ್ಲಿ ‘ಕೆಮ್ಮು’ ಈ ಕಾಯಿಲೆಗೆ ತೆಗೆದುಕೊಳ್ಳುವ ಕಾಳಜಿ ಮತ್ತು ಅದರ  ಔಷಧಗಳು’ ಈ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡೆವು. ನೇರವಾಗಿ ಕಾಯಿಲೆಗಳಿಗೆ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೬ ಮತ್ತು ೨೫/೬ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂ ಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.

ಹೊಟ್ಟೆಯಲ್ಲಿ ಆಮ್ಲದ (Acid ನ) ಪ್ರಮಾಣ ಹೆಚ್ಚಾದರೆ ಆಮ್ಲಪಿತ್ತದ ತೊಂದರೆಯಾಗುತ್ತದೆ. ಬಾಯಿಯಲ್ಲಿ ಹುಳಿರುಚಿ ಬರುವುದು, ಎದೆ ಉರಿಯುವುದು (ವಿಶೇಷವಾಗಿ : ರಾತ್ರಿ ಊಟದ ನಂತರ), ಊಟ ಮಾಡಿದ ಆಹಾರ ಅಥವಾ ಹುಳಿ ನೀರು ಹೊಟ್ಟೆಯಿಂದ ಬಾಯಿಗೆ ಬರುವುದು, ಆಹಾರ ನುಂಗಲು ತೊಂದರೆಯಾಗುವುದು, ಅಜೀರ್ಣವಾಗುವುದು, ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಇವೆಲ್ಲ ಆಮ್ಲಪಿತ್ತದ ಕೆಲವು ಲಕ್ಷಣಗಳಾಗಿವೆ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/102661.html

೧. ಆಮ್ಲಪಿತ್ತದ ತೊಂದರೆಯನ್ನು ತಡೆಯಲು ಮನೆಯಲ್ಲಿ ಮಾಡಬೇಕಾದ ಉಪಾಯಗಳು

೧ ಅ. ಏನು ಬಿಡಬೇಕು : ಕಾಫಿ, ಖಾರ ಮತ್ತು ಮಸಾಲೆ ಪದಾರ್ಥಗಳನ್ನು ತಿನ್ನಬಾರದು

೧ ಆ. ಏನು ಮಾಡಬೇಕು ?

೧ ಆ ೧. ನಿಯಮಿತ ವ್ಯಾಯಾಮ ಮಾಡಬೇಕು

೧ ಆ ೨. ಬಾಳೆಹಣ್ಣು, ಸೇಬು, ಕಲ್ಲಂಗಡಿ, ಮೊಸರು ಇವುಗಳನ್ನು ತಿನ್ನಬೇಕು, ಎಳನೀರು, ಮಜ್ಜಿಗೆಯನ್ನು ಕುಡಿಯಬೇಕು.

೨. ಹೋಮಿಯೋಪತಿ ಔಷಧಿಗಳು 

೨ ಅ. ರೋಬಿನಿಯಾ ಸುಡೊಕೇಸಿಯಾ (Robinia Pseudocacia)

೨ ಅ ೧. ವಾಕರಿಕೆ ಬರುವುದು (ವಾಂತಿ ಬಂದಂತಾಗುವುದು)

೨ ಅ ೨. ಸತತವಾಗಿ ಬಹಳ ಹುಳಿ ತೇಗುಗಳು ಬರುವುದು ಮತ್ತು ವಾಂತಿಯಾಗುವುದು

೨ ಅ ೩. ಗಂಟಲಿನಲ್ಲಿ ಹುಳಿ / ಆಮ್ಲಯುಕ್ತ ನೀರು ಬರುವುದು

೨ ಅ ೪. ಹೊಟ್ಟೆಯಲ್ಲಿ ತುಂಬಾ ವೇದನೆ ಆಗುವುದು, ಅದರೊಂದಿಗೆ ತಲೆಯ ಮುಂಭಾಗದಲ್ಲಿ ನೋವಾಗುವುದು

೨ ಅ ೫. ಬೆವರಿಗೆ, ಹಾಗೆಯೇ ಶೌಚಕ್ಕೆ ಹುಳಿವಾಸನೆ ಬರುವುದು

೨ ಅ ೬. ಹೆಚ್ಚಾಗಿ ರಾತ್ರಿ ಸಮಯದಲ್ಲಿ ಆಮ್ಲಪಿತ್ತದ ತೊಂದರೆಯು ಆಗುವುದು

೨ ಆ. ಸಲ್ಫರ್‌ (Sulphur)

೨ ಆ ೧. ಅತೀ ಮದ್ಯಪಾನ, ಹಾಗೆಯೇ ‘ಬೊಕ್ಕೆಗಳ ಮೇಲಿನ ಚಿಕಿತ್ಸೆಯಿಂದ ಸಂಪೂರ್ಣ ವಾಸಿಯಾಗುವ ಬದಲು ಬೊಕ್ಕೆಗಳು ಶರೀರದಲ್ಲಿ ಸೇರಿಕೊಳ್ಳುವುದು’ (Suppressed
eruptions) ಅನಂತರ ಆದ ಆಮ್ಲಪಿತ್ತ

೨ ಆ ೨. ಹುಳಿ ತೇಗುಗಳು ಬರುವುದು, ಗಂಟಲಿನಲ್ಲಿ ಹುಳಿ/ಆಮ್ಲ ನೀರು ಬರುವುದು

೨ ಆ ೩. ಸಂಪೂರ್ಣ ಶರೀರ ಉರಿಯುವುದು

೨ ಆ ೪. ಬೆಳಗ್ಗೆ ೧೧ ಗಂಟೆಗೆ ಬಹಳ ನಿತ್ರಾಣ ಬಂದು ಸೋತು ಹೋದಂತಾಗಿ ‘ಏನಾದರೂ ತಿನ್ನಬೇಕು’, ಎಂದೆನಿಸುವುದು (ಇಂತಹ ರೋಗಿಗಳ ಪಿತ್ತಕ್ಕಾಗಿ ಸಲ್ಫರ್‌ ತುಂಬಾ ಉಪಯೋಗವಾಗಿದೆ – ಸಂಕಲನಕಾರರು)

೨ ಆ . ಹಾಲು ಕುಡಿದ ನಂತರ ಆಮ್ಲಪಿತ್ತದ ತೊಂದರೆ ಆಗುವುದು ಅಥವಾ ಪಿತ್ತದ ತೊಂದರೆ ಹೆಚ್ಚಾಗುವುದು

೨ ಇ. ನಕ್ಸ್ ವೋಮಿಕಾ (Nux Vomica)

೨ ಇ ೧. ಮುಂದಿನ ಪ್ರಕಾರದ ವ್ಯಕ್ತಿಗಳಿಗೆ ಆಮ್ಲಪಿತ್ತದ ತೊಂದರೆಯಾಗುವುದು

. ಚಿಂತಾಕ್ರಾಂತ, ಏಕಾಂಗಿತನ, ಉದಾಸೀನತೆ, ಸಣ್ಣ ಶಬ್ದಕ್ಕೆ ಭಯ ಪಡುವುದು ಅಥವಾ ವಾಸನೆಯಿಂದ ಅಸ್ವಸ್ಥನಾಗುವುದು

. ಬಹಳ ಮಾನಸಿಕ ಒತ್ತಡ ಮತ್ತು ಆದಷ್ಟು ಕುಳಿತುಕೊಂಡು ಕೆಲಸವನ್ನು ಮಾಡುವುದು

ಇ. ಕಾಫಿ, ತಂಬಾಕು, ಮದ್ಯಪಾನ ಇವುಗಳ ಚಟ ಇರುವುದು

ಇ ೨. ಮುಂದಿನ ಪರಿಸ್ಥಿತಿಗಳಲ್ಲಿ ಆಮ್ಲಪಿತ್ತದ ತೊಂದರೆಯಾಗುವುದು

. ನಿದ್ರೆ ಬಾರದಿರುವುದು (ನಿದ್ರಾಹೀನತೆ)

. ಅಲೋಪಥಿಯ ಔಷಧಗಳನ್ನು ಅತಿಯಾಗಿ ಸೇವಿಸುವುದು

೨ ಈ. ಕ್ಯಾಪ್ಸಿಕಮ್‌ (Capsicum)

೨ ಇ ೧. ಹೊಟ್ಟೆಯ ಮೇಲ್ಭಾಗದಲ್ಲಿ (ಎದೆ) ಉರಿ ಮತ್ತು ಅದು ಗಂಟಲಿ ನ ವರೆಗೆ ಬರುವುದು

೨ ಇ ೨. ಹೊಟ್ಟೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಗ್ಯಾಸ್‌ ಆಗುವುದು ಮತ್ತು ಕೆಲವೊಮ್ಮೆ ವಾಂತಿಯಾಗುವುದು

೨ ಉ. ಸಲ್ಫುರಿಕಮ್‌ ಎಸಿಡಮ್‌ (Sulphuricum Acidum)

೨ ಉ ೧. ಎದೆಯಲ್ಲಿ ಉರಿ, ಹುಳಿ ತೇಗು ಬರುವುದು

೨ ಉ ೨. ವಾಕರಿಕೆ ಬರುವುದು ಮತ್ತು ಚಳಿಯಾಗುವುದು

೨ ಉ ೩. ತುಂಬಾ ವರ್ಷಗಳಿಂದ ಪಿತ್ತದ ತೊಂದರೆಯಿರುವುದು

೨ ಊ. ಆರ್ಸೇನಿಕಮ್‌ ಆಲ್ಬಮ್‌ (Arsenicum Album)

೨ ಊ ೧. ಹುಳಿ ಪದಾರ್ಥಗಳು, ‘ಐಸ್‌ಕ್ರೀಮ್’ ತಿಂದ ನಂತರ ಸಮಸ್ಯೆಗಳು ಪ್ರಾರಂಭವಾಗುವುದು

೨ ಊ ೨. ಹೊಟ್ಟೆಯಲ್ಲಿ ತುಂಬಾ ಉರಿಯಾಗುವುದು ಮತ್ತು ಬಿಸಿ ಪೇಯಗಳನ್ನು ಕುಡಿದಾಗ ಒಳ್ಳೆಯದೆನಿಸುವುದು

೨ ಊ ೩. ಪ್ರತಿಯೊಂದು ಸಲ ಸ್ವಲ್ಪ ಸ್ವಲ್ಪ ಸಾಮಾನ್ಯ ತಾಪಮಾನವಿರುವ (ನಾರ್ಮಲ್) ನೀರನ್ನು ಕುಡಿಯುವುದು

೨ ಊ ೪. ಅತಿ ಚಿಂತೆ, ನಿಶ್ಯಕ್ತಿ (ಆಯಾಸ)

೨ ಎ. ಕಲ್ಕೇರಿಯಾ ಕಾರ್ಬೋನಿಕಾ (Calcarea Carbonica)

೨ ಎ ೧. ಬಹಳ ಪರಿಶ್ರಮದ ನಂತರ ಆಮ್ಲಪಿತ್ತವಾಗುವುದು

೨ ಎ ೨. ತೇಗು, ವಾಂತಿ, ಭೇದಿ ಇವುಗಳಿಗೆ ಹುಳಿ ಮೊಸರಿನಂತಹ ವಾಸನೆ ಬರುವುದು

೨ ಎ ೩. ಕೊಬ್ಬಿನ ಪದಾರ್ಥಗಳು ಇಷ್ಟವಾಗದಿರುವುದು

೨ ಎ ೪. ಸೀಮೆಸುಣ್ಣ, ಇದ್ದಲು, ‘ಪೆನ್ಸಿಲ್‌’, ಈ ರೀತಿಯ ಜೀರ್ಣವಾಗದಂತಹ ವಸ್ತುಗಳನ್ನು ತಿನ್ನಬೇಕೆನಿಸುವುದು

೨ ಎ ೫. ಸೊಂಟದ ಸುತ್ತಲೂ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿದರೆ, ಅದು ಸಹನೆಯಾಗದಿರುವುದು. ಇಂತಹ ವ್ಯಕ್ತಿಗೆ ಆಮ್ಲಪಿತ್ತದ ತೊಂದರೆ ಆಗುತ್ತಿದ್ದರೆ ಕಲ್ಕೇರಿಯಾ ಕಾರ್ಬೋನಿಕಾ ಔಷಧಿ ಉತ್ತಮ ಉಪಾಯ.

೨ ಎ ೬. ಮಲಗಿರುವಾಗ ತಲೆ ಮತ್ತು ಎದೆಯ ಮೇಲೆ ಬೆವರು ಬರುವ ವ್ಯಕ್ತಿಗೆ ಆಮ್ಲಪಿತ್ತದ ತೊಂದರೆ ಆಗುತ್ತಿದ್ದರೆ ಕಲ್ಕೇರಿಯಾ ಕಾರ್ಬೋನಿಕಾ ಔಷಧಿ ಉತ್ತಮ ಉಪಾಯ

೩. ಹನ್ನೆರಡುಕ್ಷಾರ ಔಷಧಗಳು 

ನೆಟ್ರಮ್‌ ಫಾಸ್ಫೋರಿಕಮ್‌ ೬  (Natrum Phosphoricum 6 x) ) – ದಿನದಲ್ಲಿ ೪ ಮಾತ್ರೆಗಳನ್ನು ೩ ಬಾರಿ ತೆಗೆದುಕೊಳ್ಳಬೇಕು.