’ಮನೆಯಲ್ಲಿಯೇ ಮಾಡಬಹುದಾದ ’ಹೋಮಿಯೋಪಥಿ’ ಚಿಕಿತ್ಸೆ !’ (ಲೇಖನಮಾಲೆ ೯) !
ಈಗಿನ ಧಾವಂತದ ಜೀವನಶೈಲಿಯಲ್ಲಿ ಯಾರು ಕೂಡ ಸಾಂಕ್ರಾಮಿಕ ಕಾಯಿಲೆ ಅಥವಾ ಇತರ ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಿರುವಾಗ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಊಹಿಸಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿಯಾಗಿದೆ. ಈ ಚಿಕಿತ್ಸಾಪದ್ಧತಿಯನ್ನು ಮನೆಯಲ್ಲಿಯೇ ಹೇಗೆ ಅವಲಂಬಿಸಬೇಕು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಶೇಖರಣೆ ಮಾಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ೨೫/೮ ರ ಸಂಚಿಕೆಯಿಂದ ನಾವು ಕಾಯಿಲೆಗಳಿಗೆ ಪ್ರತ್ಯಕ್ಷ ಸ್ವಉಪಚಾರವನ್ನು ಮಾಡುವ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಅದರ ಮೂಲಕ ನಾವು ’ನೆಗಡಿ’ ರೋಗದ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ ಹಾಗೂ ನೆಗಡಿಯ ವಿವಿಧ ಪ್ರಕಾರಗಳಲ್ಲಿ ಸೇವಿಸಬೇಕಾದ ಔಷಧಗಳ ವಿಷಯದ ಮಾಹಿತಿಯನ್ನು ಓದಿದೆವು. ಇಂದು ನಾವು ಕೆಮ್ಮು ಹಾಗೂ ಅದರ ಔಷಧಗಳ ಬಗ್ಗೆ ತಿಳಿದುಕೊಳ್ಳಲಿಕ್ಕಿದ್ದೇವೆ. ’ರೋಗಕ್ಕೆ ಪ್ರತ್ಯಕ್ಷ ಸ್ವಉಪಚಾರ ಆರಂಭಿಸುವ ಮೊದಲು ೨೫/೬ ಮತ್ತು ೨೫/೬ ’ಸನಾತನ ಪ್ರಭಾತ’ದಲ್ಲಿ ಪ್ರಸಿದ್ಧವಾಗಿರುವ ಲೇಖನದಲ್ಲಿನ ’ಹೋಮಿಯೋಪಥಿ ಸ್ವಉಪಚಾರದ ವಿಷಯದಲ್ಲಿ ಮಾರ್ಗದರ್ಶಕ ಅಂಶಗಳು ಹಾಗೂ ಪ್ರತ್ಯಕ್ಷ ಔಷಧಗಳನ್ನು ಹೇಗೆ ಆರಿಸುವುದು ?’, ಎಂಬ ವಿಷಯದ ಮಾಹಿತಿಯನ್ನು ವಾಚಕರು ಮೊದಲು ಓದಿಕೊಳ್ಳಬೇಕೆಂದು ವಿನಂತಿ !
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.
ಕೆಮ್ಮು (Cough)
’ಕೆಮ್ಮು’, ಇದು ಗಂಟಲು ಅಥವಾ ಶ್ವಾಸ ನಳಿಕೆಯಲ್ಲಿ ಸಿಲುಕಿರುವ ಘಟಕಗಳನ್ನು ರಭಸದಿಂದ ಹೊರಗೆ ಎಸೆದು ಗಂಟಲು ಅಥವಾ ಶ್ವಾಸನಳಿಕೆಯನ್ನು ಸ್ವಚ್ಛಗೊಳಿಸಲು ಇರುವ ಒಂದು ನೈಸರ್ಗಿಕ ಕ್ರಿಯೆ (refl exaction) ಆಗಿದೆ, ಹಾಗೆಯೇ ಎದೆಯಲ್ಲಿನ (ಶ್ವಾಸಕೋಶಗಳಲ್ಲಿನ) ಕಫವನ್ನು ಹೊರತರಲೂ ಕೆಮ್ಮು ಬರುತ್ತದೆ. ಅದು ಒಣ ಕೆಮ್ಮು ಇರಬಹುದು ಅಥವಾ ಕಫ ಇರುವಂತಹದ್ದು ಸಹ ಇರಬಹುದು.
೧. ಕೆಮ್ಮಿನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸಾಮಾನ್ಯ ಕಾಳಜಿ
೧ ಅ. ಕೆಮ್ಮು ಬರುವಾಗ ಬಹಳಷ್ಟು ನೀರು ಕುಡಿಯಬೇಕು. ಬಿಸಿಬಿಸಿ ನೀರಿನಿಂದ ಸ್ನಾನ ಮಾಡಬೇಕು, ಮೂಗಿನ ಮೂಲಕ ಹಬೆಯನ್ನು ಒಳಗೆ ತೆಗೆದುಕೊಳ್ಳಬೇಕು.
೧ ಆ. ಕೆಮ್ಮಿಗೆ ಕಾರಣವಾದಂತಹವುಗಳಿಂದ ಉದಾ. ಧೂಳು, ಹೊಗೆ, ಇತ್ಯಾದಿಗಳಿಂದ ದೂರವಿರಬೇಕು.
೧ ಇ. ಕೆಮ್ಮು ಇರುವ ವ್ಯಕ್ತಿಗಳಿಂದ ದೂರವಿರಬೇಕು ಅಥವಾ ಅವರ ಕೆಮ್ಮಿನಿಂದ ಹರಡುವ ಜೀವಾಣುಗಳಿಂದ ನಮಗೆ ಸೋಂಕು ತಗಲದಂತೆ ಜಾಗರೂಕತೆ ವಹಿಸಬೇಕು. ಧೂಮ್ರಪಾನಿಗಳಿಂದ, ತೀವ್ರ ಗಂಧ (ವಾಸನೆ), ಧೂಳು, ಸಾಕುಪ್ರಾಣಿಗಳಿಂದ ದೂರವಿರಬೇಕು.
೧ ಈ. ಕೆಮ್ಮುವಾಗ ಉಸಿರಾಡಲು ಅಡಚಣೆ ಆಗುತ್ತಿದ್ದರೆ ಅಥವಾ ಕೆಮ್ಮಿನ ನಂತರ ಬೀಳುವ ಕಫದಲ್ಲಿ ರಕ್ತ ಬೀಳುತ್ತಿದ್ದರೆ, ತಕ್ಷಣ ತಜ್ಞರ ಸಲಹೆ ಪಡೆಯಬೇಕು. ಕೆಮ್ಮಿನ ಲಕ್ಷಣದ ಹೊರತು ಬೇರೆನಾದರೂ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ, ಆಯಾ ಔಷಧವನ್ನು ತೆಗೆದುಕೊಳ್ಳಬೇಕು, ಆ ಔಷಧಿಗಳ ಹೆಸರುಗಳನ್ನು ಮುಂದೆ ಕೊಡಲಾಗಿದೆ.
೨ ಹೋಮಿಯೋಪಥಿ ಔಷಧಗಳು
೨ ಅ. ಎಕೋನಾಯ್ಟ ನ್ಯಾಪೆಲಸ್ (Aconite Napellus)
೨ ಅ ೧. ಶುಷ್ಕ ತಂಪು ಹವೆಯಲ್ಲಿ ಹೋಗುವುದು ಅಥವಾ ತಂಪುಗಾಳಿ ತಗಲಿ ಒಣ ಕೆಮ್ಮು ಬರುವುದು
೨ ಅ ೨. ಒಣ ಮತ್ತು ದೊಡ್ಡ ಶಬ್ದದೊಂದಿಗೆ ಬರುವ ಕೆಮ್ಮು
೨ ಅ ೩. ಶ್ವಾಸವನ್ನು ಹೊರಗೆ ಬಿಡುವಾಗ ಕೆಮ್ಮು ಬರುವುದು
೨ ಆ. ಬೆಲಾಡೋನಾ (Belladona)
೨ ಆ ೧. ಕ್ಷೌರದ ನಂತರ ಅಥವಾ ಕೂದಲು ಒದ್ದೆಯಾದ ನಂತರ ಕೆಮ್ಮು ಬರುವುದು
೨ ಆ ೨. ತೊಂದರೆದಾಯಕ, ದೊಡ್ಡ ಶಬ್ದ ಮಾಡುತ್ತಾ ಬರುವ ಕೆಮ್ಮು; ಸಾಯಂಕಾಲ ಹಾಗೂ ರಾತ್ರಿಯ ಆರಂಭ ದಲ್ಲಿ ಕೆಮ್ಮು ಹೆಚ್ಚಾಗುವುದು
೨ ಆ ೩. ಮುಖ ಬಿಸಿ ಹಾಗೂ ಕೆಂಪಾಗುವುದು
೨ ಇ. ಬ್ರಾಯೋನಿಯಾ ಅಲ್ಬಾ (Bryonia Alba)
೨ ಇ ೧. ಬೆಳಗ್ಗೆ ಚಲನವಲನ ಮಾಡಿದರೆ ಅಥವಾ ನಡೆದಾಡಿದರೆ ಕೆಮ್ಮು ಬರುವುದು ಹಾಗೂ ಬೆಚ್ಚಗಿನ ಕೋಣೆಗೆ ಹೋದರೆ ಅದು ಹೆಚ್ಚಾಗುವುದು
೨ ಇ ೨. ಆರಂಭದಲ್ಲಿ ಕೆಮ್ಮಿನೊಂದಿಗೆ ಅತ್ಯಲ್ಪ ಕಫ ಬೀಳುವುದು ಹಾಗೂ ನಂತರ ಒಣ ಕೆಮ್ಮು ಬರುವುದು
೨ ಇ ೩. ಕೆಮ್ಮು ಬರುವಾಗ ಎದೆಯನ್ನು ಕೈಯಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು
೨ ಇ ೪. ತುಂಬಾ ಬಾಯಾರಿಕೆ ಆಗುವುದು, ಆದರೆ ತುಂಬಾ ಸಮಯದ ನಂತರ ತುಂಬಾ ನೀರು ಕುಡಿಯುವುದು
೨ ಈ. ಡ್ರಾಸೆರಾ ರೋಟಂಡಿಫೋಲಿಯಾ (Drosera Rotundifolia)
೨ ಈ ೧. ರಾತ್ರಿ ದಿಂಬಿನ ಮೇಲೆ ತಲೆ ಇಟ್ಟ ತಕ್ಷಣ, ನಾಯಿ ಬೊಗಳುವಿಕೆಯಂತಹ ದೊಡ್ಡ ಧ್ವನಿಯಲ್ಲಿ ಕೆಮ್ಮು ಬರುವುದು
೨ ಈ ೨. ಗಂಟಲಿನಲ್ಲಿ ಪಕ್ಷಿಗಳ ಗರಿಯಿಂದ ಕಚಗುಳಿ ಮಾಡಿದಂತಹ ಸಂವೇದನೆಯಾಗಿ ಕೆಮ್ಮು ಬರುವುದು
೨ ಈ ೩. ಮೇಲಿಂದ ಮೇಲೆ ಕೆಮ್ಮು ಬರುವುದು, ಅದರಿಂದ ಉಸಿರಾಟದ ತೊಂದರೆಯಾಗುವುದು.
೨ ಈ ೪. ಮಂಗನ ಕೆಮ್ಮು (ವೂಪಿಂಗ್‌ಕಫ) ಬರುವುದು (ಮಂಗನ ಕೆಮ್ಮು ಶ್ವಸನಸಂಸ್ಥೆಯ ಒಂದು ತೀವ್ರ ಸೋಂಕು ರೋಗವಾಗಿದೆ. ಈ ರೋಗವು ಮೂಗಿನಲ್ಲಿ ನೀರು ಬರುವುದು, ಸೀನುಗಳು ಬರುವುದು ಇಂತಹ ಲಕ್ಷಣಗಳಿಂದ ಪ್ರಾರಂಭವಾಗುತ್ತದೆ. ನಂತರ ನಿಲ್ಲಿಸಲು ಸಾಧ್ಯವಾಗದಷ್ಟು ತೀವ್ರ ಕೆಮ್ಮು ಬರುತ್ತದೆ ಮತ್ತು ರೋಗಿಗೆ ಉಸಿರಾಡಲು ಅಡಚಣೆ ನಿರ್ಮಾಣವಾಗುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ರೋಗಿ ಶ್ವಾಸವನ್ನು ಒಳಗೆ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಗಂಟಲಲ್ಲಿ ’ವೂಪ್’ ಎಂದು ವಿಶಿಷ್ಟ ಧ್ವನಿ ಬರುತ್ತದೆ. ಯಾವುದೇ ವಯಸ್ಸಿನ ವ್ಯಕ್ತಿಗೆ ಈ ರೋಗ ಬರಬಹುದು; ಆದರೆ ಈ ರೋಗ ಹೆಚ್ಚಾಗಿ ಚಿಕ್ಕ ಮಕ್ಕಳಿಗೆ ಬರುತ್ತದೆ. ಒಮ್ಮೆ ಕೆಮ್ಮು ಆಂಭವಾದರೆ ಅದು ೧೦ ರಿಂದ ೧೫ ನಿಮಿಷಗಳ ವರೆಗೆ ನಿಲ್ಲುವುದಿಲ್ಲ. ಕೆಮ್ಮಿನ ನಂತರ ವಾಂತಿಯಾಗುವುದು ಸಹ ಇದರ ಒಂದು ಮಹತ್ವದ ಲಕ್ಷಣವಾಗಿದೆ.)
೨ ಉ. ಕಾಕ್ಕಸ ಕ್ಯಾಕ್ಟಾಯ (Coccus Cacti)
೨ ಉ ೧. ನಿರ್ದಿಷ್ಟ ಸಮಯದಲ್ಲಿ ಗಂಟಲಿನಲ್ಲಿ ತುರಿಕೆ ಬಂದು ಕೆಮ್ಮು ಬರುವುದು ಹಾಗೂ ಕೊನೆಗೆ ವಾಂತಿಯಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಅಂಟಂಟು, ಸಿಂಬಳದ ಹಾಗೆ ಪಾರದರ್ಶಕ ಕಫ ಹೊರಗೆ ಬೀಳುವುದು
೨ ಉ ೨. ಬೆಳಗ್ಗೆ ೬ ಗಂಟೆಗೆ ಕೆಮ್ಮು ಆರಂಭವಾಗುವುದು
೨ ಊ. ಆರ್ಸೆನಿಕಮ್ ಅಲ್ಬಮ್ (Arsenicum Album)
೨ ಊ ೧. ಒಣ ಕೆಮ್ಮು, ಅಸ್ವಸ್ಥತೆ ಹಾಗೂ ಸಂಪೂರ್ಣ ಶರೀರ ಉರಿಯುವುದು
೨ ಊ ೨. ಮಧ್ಯರಾತ್ರಿಯ ನಂತರ, ಹಾಗೆಯೇ ಅಂಗಾತ ಮಲಗಿದಾಗ ಕೆಮ್ಮು ಹೆಚ್ಚಾಗುವುದು
೨ ಊ ೩. ಅತಿಚಿಂತೆ ಮತ್ತು ಆಯಾಸ ಇರುವುದು
೨ ಊ ೪. ಪ್ರತಿಸಲ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು
೨ ಎ. ಫ್ವಾಸ್ಪೊರಸ್ (Phosphorus)
೨ ಎ ೧. ಗಂಟಲಿನ ಕೆಳಗಿನ ಬದಿಗೆ ಕಚಗುಳಿ ಇಟ್ಟ ಹಾಗೆ ಸಂವೇದನೆಗಳ ಅರಿವಾಗಿ ಕೆಮ್ಮು ಆರಂಭವಾಗುವುದು
೨ ಎ ೨. ಕೆಮ್ಮು ಹಗಲು-ರಾತ್ರಿ ಇರುವುದು, ಒಣ ಕೆಮ್ಮು ಇರುವುದು. ಕೆಮ್ಮಿನಿಂದ ಅತ್ಯಲ್ಪ ಪ್ರಮಾಣದಲ್ಲಿ ಕಫ ಬೀಳುವುದು
೨ ಎ ೩. ತಣ್ಣೀರು ಕುಡಿಯಬೇಕೆಂದು ಅನಿಸುವುದು, ನೀರು ಕುಡಿದ ನಂತರ ತಾತ್ಕಾಲಿಕ ಆರಾಮವೆನಿಸುವುದು; ಆದರೆ ಕೆಲವೊಮ್ಮೆ ಅದು ವಾಂತಿ ಆಗುವುದು
೨ ಐ. ಕ್ವಾಸ್ಟಿಕಮ್ (Causticum)
೨ ಐ ೧. ಅತಿ ಮಾತನಾಡುವುದರಿಂದ ಸಾಯಂಕಾಲ ಒಣ ಕೆಮ್ಮು ಬರುವುದು
೨ ಐ ೨. ಕೆಮ್ಮಿ ಕೆಮ್ಮಿ ಸಂಪೂರ್ಣ ಧ್ವನಿ ಕೂಡುವುದು
೨ ಐ ೩. ಕೆಮ್ಮುವಾಗ ಬಟ್ಟೆಯಲ್ಲಿಯೇ ಮೂತ್ರ ಆಗುವುದು
೨ ಒ. ರುಮೆಕ್ಸ್ ಕ್ರಿಸ್ಪಸ್ (Rumex Crispus)
೨ ಒ ೧. ಸ್ವಚ್ಛಂದ ಹವಾಮಾನ ಸಹನೆಯಾಗದಿರುವುದು
೨ ಒ ೨. ಸತತ ಒಣ ಕೆಮ್ಮು ಬಂದು ಆಯಾಸವಾಗುವುದು
೨ ಒ ೩. ಕೋಣೆ ಅಥವಾ ಹವಾಮಾನದಲ್ಲಿ ಬದಲಾವಣೆ ಯಾಗುವುದರಿಂದ ಅಥವಾ ಸ್ವಲ್ಪ ತಂಪು ಗಾಳಿ ಮೂಗಿನಲ್ಲಿ ಹೋದರೂ ಕೆಮ್ಮು ಹೆಚ್ಚಾಗುವುದು
೨ ಒ ೪. ಕೆಮ್ಮು ಬರುವಾಗ ತಲೆಗೆ ಹಾಗೂ ಮುಖಕ್ಕೆ ತಂಪು ಗಾಳಿ ತಗಲದಂತೆ ತಲೆಗೆ ಬಟ್ಟೆ ಸುತ್ತಿ ಕುಳಿತುಕೊಳ್ಳುವುದು.
೨ ಒ ೫. ಈ ಕೆಮ್ಮು ಕೇವಲ ಹಗಲಿನಲ್ಲಿ ಮಾತ್ರ ಬರುತ್ತದೆ, ರಾತ್ರಿ ಸಮಯದಲ್ಲಿ ಈ ಕೆಮ್ಮು ಬರುವುದಿಲ್ಲ.
೨ ಅಂ. ಸ್ಪಾನ್ಜಿಯಾ ಟೋಸ್ಟಾ (Spongia Tosta)
೨ ಅಂ ೧. ಮಲಗಿ ಎದ್ದ ನಂತರ, ಮಾನಸಿಕ ಶ್ರಮವಾದ ನಂತರ ಕೆಮ್ಮು ಬರುವುದು
೨ ಅಂ ೨. ಉಸಿರುಗಟ್ಟಿದಂತೆ ಆಗುವುದು, ಗರಗಸದಿಂದ ಹಲಗೆ ಕತ್ತರಿಸುವಾಗ ಬರುವ ಶಬ್ದದಂತೆ ಕೆಮ್ಮು ಬರುವುದು
೨ ಅಂ ೩. ಬಿಸಿ ಪೇಯವನ್ನು ಕುಡಿದಾಗ ತಾತ್ಕಾಲಿಕವಾಗಿ ಆರಾಮವೆನಿಸುವುದು
೨ ಕ. ಎಂಟಿಮೊನಿಯಮ್ ಟಾರ್ಟಾರಿಕಮ್ (Antimonium Tartaricum)
೨ ಕ ೧. ಎದೆಯಲ್ಲಿ ಕಫ ತುಂಬಿದ್ದರೂ ಕಫ ಹೊರಗೆ ಬರದಿರುವುದು ಮತ್ತು ಕಫ ಗಟ್ಟಿಯಾಗಿ ಹೊರಗೆ ಬರಲು ಕಠಿಣವಾಗಿರುವುದು
೨ ಕ ೨. ಕೆಮ್ಮುವಾಗ ಎದೆಯಲ್ಲಿ ಉರಿಯುವುದು
೨ ಕ ೩. ತಂಪು, ಆರ್ದ್ರ (ಹಸಿ) ವಾತಾವರಣದಲ್ಲಿ ಹಾಗೂ ರಾತ್ರಿ ಕೆಮ್ಮು ಹೆಚ್ಚಾಗುವುದು; ಕುಳಿತುಕೊಂಡರೆ ಆರಾಮವೆನಿಸುವುದು
೨ ಖ. ಸಂಮ್ಬುಕಸ್ ನಿಗ್ರಾ (Sambucus Nigra)
೨ ಖ ೧. ಮೂಗು ಕಟ್ಟಿ ಉಸಿರಾಡಲು ಕಠಿಣವಾಗುವುದು
೨ ಖ ೨. ನಡುರಾತ್ರಿ ಕೆಮ್ಮಿನಿಂದ ಉಸಿರುಗಟ್ಟಿದಂತಾಗಿ ಮಗು ನಿದ್ರೆಯಿಂದ ಏಳುವುದು
೨ ಘ. ಕಲಿಯಮ್ ಕಾರ್ಬೋನಿಕಮ್ï (Kalium Carbonicum): ಯಾವಾಗಲೂ ಮುಂಜಾನೆ ೩ ಗಂಟೆಗೆ ಕೆಮ್ಮು ಬರುವುದು
೩. ಹನ್ನೆರಡುಕ್ಷಾರ ಔಷಧಗಳು
೩ ಅ. ಫೆರಮ್ ಫಾಸ್ಫೋರಿಕಮ್ ((Ferrum Phosphoricum) 🙂 : ಇತ್ತೀಚೆಗೆ ಆರಂಭವಾದ (acute) ಒಣ ಕೆಮ್ಮು, ಅದರ ಜೊತೆಗೆ ಜ್ವರ ಬರುವುದು
೩ ಆ. ನೆಟ್ರಮ್ ಸಲ್ಫುರಿಕಮ್ (Natrum Sulphuricum) : ಹಳದಿಮಿಶ್ರಿತ-ಹಸಿರು ಕಫ ಬೀಳುವುದು, ಹಾಗೆಯೇ ಆರ್ದ್ರ (ನೀರಿನ) ವಾತಾವರಣದಲ್ಲಿ ಎದೆ ತುಂಬುವುದು ’ಮನೆಯಲ್ಲಿಯೇ ಮಾಡಬಹುದಾದ ’ಹೋಮಿಯೋಪಥಿ ಉಪಚಾರ’ ! ಈ ಮುಂಬರುವ ಗ್ರಂಥದಿಂದ ಆಯ್ದ ಕೆಲವೊಂದು ಅಂಶಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನದ ರೂಪದಲ್ಲಿ ಪ್ರಸಿದ್ಧ ಮಾಡಲಾಗುತ್ತಿದೆ. ಸಾಧಕರು, ವಾಚಕರು, ರಾಷ್ಟ್ರ ಹಾಗೂ ಧರ್ಮಪ್ರೇಮಿಗಳು, ಹಿತಚಿಂತಕರು, ದಾನಿಗಳು ಈ ಲೇಖನಗಳನ್ನು ಸ್ವಉಪಚಾರಕ್ಕಾಗಿ ಸಂಗ್ರಹ ಮಾಡಿಟ್ಟುಕೊಳ್ಳಬೇಕು.’