ಕ್ರಿಕೆಟ್‌ ಜಿಹಾದ್‌ ?

ಎಡ ಬದಿಗೆ ಅಬ್ದುಲ್‌ ರಜಾಕ , ಬಲ ಬದಿಗೆ ಐಶ್ವರ್ಯ ರೈ ಬಚ್ಚನ್

ಐಶ್ವರ್ಯಾ ಬಚ್ಚನ್‌ ಬಗ್ಗೆ ಅಬ್ದುಲ್‌ ರಜಾಕ ಅಸಭ್ಯವಾಗಿ ಕಮೆಂಟ್‌ ಮಾಡಿದಾಗ, ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಾಜಿ ಕ್ರಿಕೆಟಿಗರು ನಗುತ್ತ ಚಪ್ಪಾಳೆ ತಟ್ಟುತ್ತಿದ್ದರು. ಕರಾಚಿಯ ಮ್ಯಾರಿಯಟ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ, ಮಾತನಾಡುವಾಗ ‘ಪಾಕಿಸ್ತಾನ ಕ್ರಿಕೆಟ್‌ ಮಂಡಳಿ’ಯನ್ನು ಭಾರತೀಯ ನಟಿ ಐಶ್ವರ್ಯಾ ಬಚ್ಚನ ಜೊತೆ ಹೋಲಿಸಿ ಅತ್ಯಂತ ಕೀಳು ದರ್ಜೆಯ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ರಜಾಕ ಮಾತನಾಡುತ್ತಾ, ‘ನಾನು ಐಶ್ವರ್ಯಾಳೊಂದಿಗೆ ಮದುವೆಯಾದರೆ ನನಗೆ ಹುಟ್ಟುವ ಮಕ್ಕಳು ಪ್ರಾಮಾಣಿಕ ಮತ್ತು ಒಳ್ಳೆಯವರಿರುತ್ತಾರೆ ಎಂದು ನೀವು ಭಾವಿಸುತ್ತಿದ್ದಲ್ಲಿ ಹಾಗೆಲ್ಲ ಆಗುವುದಿಲ್ಲ; ಏಕೆಂದರೆ ಅದಕ್ಕೂ ಮುನ್ನ ನಿಮ್ಮ ಉದ್ದೇಶವನ್ನು ಸರಿಯಾಗಿಟ್ಟುಕೊಳ್ಳಬೇಕು’ ಎಂದರು. ಇಂತಹ ಹೇಳಿಕೆಯನ್ನು ನೀಡಿ ಪಾಕಿಸ್ತಾನಿ ಆಟಗಾರರ ಮನಸ್ಥಿತಿ ಎಷ್ಟು ವಿಕೃತವಾಗಿದೆ ಎಂದು ಸಾಬೀತು ಪಡಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌-ಉಲ್‌-ಹಕ್‌ ಅವರು ಭಾರತದ ಬೌಲರ್‌ ಹರಭಜನ್‌ ಸಿಂಗ್‌ರ ಬಗ್ಗೆ ಮಾತನಾಡಿ, ‘ಹರಭಜನ್‌ ಒಮ್ಮೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಬಗ್ಗೆ ಯೋಚಿಸುತ್ತಿದ್ದರು. ಮೌಲಾನಾ ತಾರಿಕ್‌ ಜಮೀಲ್‌ ಅವರನ್ನು ಭೇಟಿಯಾದ ಬಳಿಕ ಅವರು ಮುಸಲ್ಮಾನನಾಗುವ ವಿಚಾರ ಮಾಡಿದ್ದರು’ ಎಂದಿದ್ದನು. ಆದರೆ ಹರಭಜನ್‌ ಸಿಂಗ್‌ ಇವರು ಈ ಹೇಳಿಕೆಯನ್ನು ತಿರಸ್ಕರಿಸಿ, ‘ನನಗೆ ಭಾರತೀಯ ಮತ್ತು ಸಿಕ್ಖ್ ಆಗಿರುವ ಬಗ್ಗೆ ಹೆಮ್ಮೆ ಇದೆ. ಈ ಜನರು ಯಾವುದರ ನಶೆಯಲ್ಲಿದ್ದು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ?’, ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ‘ಕ್ರೀಡೆಯು ಕ್ರೀಡೆಯೆ ಆಗಿರುತ್ತದೆ, ಅದನ್ನು ಯಾವುದೇ ಧರ್ಮದೊಂದಿಗೆ ಜೋಡಿಸಬೇಡಿ’ ಎಂದು ಜಾತ್ಯತೀತರು ಮತ್ತು ಪ್ರಗತಿಪರರು ಯಾವಾಗಲೂ ಹೇಳುತ್ತಿರುತ್ತಾರೆ; ಆದರೆ ಪಾಕಿಸ್ತಾನಕ್ಕೆ ರಾಜಕಾರಣವಿರಲಿ, ಸಾಹಿತ್ಯ ಅಥವಾ ಕ್ರೀಡೆಯಾಗಿರಲಿ, ಅವರು ಯಾವಾಗಲೂ ‘ಧರ್ಮವೇ ಮೊದಲು’ ಇದೇ ದೃಷ್ಟಿಕೋನವನ್ನು ಇಟ್ಟುಕೊಳ್ಳುತ್ತದೆ ಎನ್ನುವುದು ಈ ನಿಮಿತ್ತವಾಗಿ ಹೊರಬಂದಿದೆ.

ಪಾಕಿಸ್ತಾನದ ಹಳೆಯ ಕುತಂತ್ರ !

೧೯೭೮ ರಲ್ಲಿ ಏಶಿಯನ್ ಗೇಮ್ಸ್ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಪಾಕಿಸ್ತಾನವು ಭಾರತವನ್ನು ೧-೦ ಅಂತರದಿಂದ ಸೋಲಿಸಿತು. ಈ ಗೆಲುವಿನ ನಂತರ ಪಾಕಿಸ್ತಾನದ ಕೆಲವು ಆಟಗಾರರು ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದು ಆ ಸಮಯದಲ್ಲಿ ಇಡೀ ಜಗತ್ತಿಗೆ ಹೊಸ ವಿಷಯವಾಗಿತ್ತು; ಏಕೆಂದರೆ ಅಲ್ಲಿಯವರೆಗೆ ಯಾವ ಆಟಗಾರನೂ ಮೈದಾನದಲ್ಲಿ ಈ ರೀತಿ ಪ್ರಾರ್ಥನೆ ಮಾಡಿರಲಿಲ್ಲ. ವಿಶೇಷವೆಂದರೆ ಆ ಸಮಯದಲ್ಲಿ ಆ ಘಟನೆಯ ಕುರಿತು ಚರ್ಚೆ ನಡೆದಿತ್ತು; ಆದರೆ ಒಂದೇ ಒಂದು ದೇಶವೂ ಇದನ್ನು ವಿರೋಧಿಸಲಿಲ್ಲ. ೧೯೮೨ ರಲ್ಲಿ, ಪಾಕಿಸ್ತಾನದ ಆಗಿನ ನಾಯಕ ಇಮ್ರಾನ್‌ ಖಾನ್‌ ಅವರನ್ನು ‘ನೀವು ಭಾರತ-ಪಾಕಿಸ್ತಾನ ಪಂದ್ಯಗಳನ್ನು ಹೇಗೆ ನೋಡುತ್ತೀರಿ ?’ ಎಂದು ಕೇಳಿದಾಗ, ‘ನಾನು ಭಾರತದ ವಿರುದ್ಧ ಆಡುವಾಗ, ಅದನ್ನು ಆಟವೆಂದು ಪರಿಗಣಿಸುವುದಿಲ್ಲ. ನಾನು ಕಾಶ್ಮೀರದ ಬಗ್ಗೆ ಯೋಚಿಸುತ್ತೇನೆ ಮತ್ತು ಅದನ್ನು ಜಿಹಾದ್‌ ಎಂದು ಭಾವಿಸುತ್ತೇನೆ’’ ಎಂದು ಉತ್ತರಿಸಿದ್ದರು. ಇದರಿಂದ ಗಮನಕ್ಕೆ ಬರುವುದೇನೆಂದರೆ, ೪೦ ವರ್ಷಗಳಿಂದ ಪಾಕಿಸ್ತಾನದ ಆಟಗಾರರು ಭಾರತದ ವಿರುದ್ಧದ ಪಂದ್ಯವನ್ನು ಆಟವಾಗಿ ನೋಡದೆ ಧರ್ಮಯುದ್ಧವಾಗಿ ನೋಡುತ್ತಾರೆ. ‘ಭಾರತದ ವಿರುದ್ಧ ಪಂದ್ಯ ಗೆದ್ದರೆ, ಹಿಂದೂಗಳ ವಿರುದ್ಧ ಗೆದ್ದಂತೆ’ ಎಂಬುದು ಪಾಕಿಸ್ತಾನಿ ಆಟಗಾರರ ದೃಷ್ಟಿಯಾಗಿರುತ್ತದೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಹಿಂದೂ ಬೌಲರ್‌ ದಾನಿಶ್‌ ಕನೇರಿಯಾ ತಾನು ಹಿಂದೂ ಆಗಿದ್ದರಿಂದ ಯಾವ ರೀತಿಯ ತೊಂದರೆಯನ್ನು ಎದುರಿಸಬೇಕಾಯಿತು, ಎಂದು ಇತ್ತೀಚೆಗೆ ಹೇಳಿದ್ದಾರೆ. ಪಾಕಿಸ್ತಾನದ ಆಗಿನ ನಾಯಕ ಶಾಹಿದ್‌ ಆಫ್ರಿದಿಯು ಪದೇ ಪದೇ ಮತಾಂತರಗೊಳ್ಳುವಂತೆ ದಾನಿಶ್‌ಗೆ ಒತ್ತಡ ಹೇರಿದ್ದರು, ಹಾಗೆಯೇ ಬೇರೆ ಬೇರೆ ಪಾಕಿಸ್ತಾನಿ ಆಟಗಾರರು ನಮಾಜು ಪಠಣ ಮಾಡಲು ದಾನಿಶ್‌ಗೆ ಒತ್ತಡ ಹೇರುತ್ತಿದ್ದರು. ಇದನ್ನು ನಿರಾಕರಿಸಿದ ಪರಿಣಾಮವಾಗಿ ಉತ್ತಮವಾಗಿ ಆಡುತ್ತಿದ್ದರೂ ದಾನಿಶರ ವಿರುದ್ಧ ವಿವಿಧ ಆರೋಪಗಳನ್ನು ಹೇರಿ, ಅವರನ್ನು ಕ್ರಿಕೆಟ್‌ ಆಡುವುದರಿಂದ ವಂಚಿತಗೊಳಿಸಲಾಯಿತು. ೨೦೧೪ ರಲ್ಲಿ ಪಾಕಿಸ್ತಾನದ ಆಟಗಾರ ವಾಸಿಂ ಜಾಫರ್‌ ಅವರು ಶ್ರೀಲಂಕಾ ಬ್ಯಾಟ್ಸ್‌ಮನ್‌ ತಿಲಕರತ್ನೆಗೆ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಡ ಹೇರಿದ್ದರು. ಇದರಿಂದ ‘ಜಗತ್ತಿನಲ್ಲಿ ಎಲ್ಲೇ ಹೋದರೂ ಪಾಕಿಸ್ತಾನಿ ಆಟಗಾರರು ಕ್ರಿಕೆಟ್‌ ಹೆಸರಿನಲ್ಲಿ ಇಸ್ಲಾಂನ ಪ್ರಚಾರ ಮಾಡುವುದು ಕಂಡು ಬರುತ್ತದೆ ಮತ್ತು ಇದು ‘ಕ್ರಿಕೆಟ್‌ ಜಿಹಾದ್’ ಆಗಿದೆ, ಎಂಬುದು ಗಮನಕ್ಕೆ ಬರುತ್ತದೆ !

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮುಸ್ಲಿಂ ಆಟಗಾರರೂ ಇದ್ದಾರೆ; ಆದರೆ ಅವರು ಎಂದಿಗೂ ಕ್ರಿಕೆಟ್‌ ಮೈದಾನದಲ್ಲಿ ನಮಾಜ್‌ ಮಾಡುವುದಿಲ್ಲ. ಇದರ ವಿರುದ್ಧ ಪಾಕಿಸ್ತಾನಿ ಆಟಗಾರರು ಹಾಗೆ ಮಾಡಿ, ಇಸ್ಲಾಂ ಧರ್ಮದಲ್ಲಿ ತಮಗಿರುವ ನಿಷ್ಠೆಯನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲು ಪ್ರಯತ್ನಿಸುತ್ತಾರೆ. ೧೯೯೨ ರಲ್ಲಿ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಭಾರತವು ಸೋಲಿಸಿತ್ತು. ಇದಾದ ನಂತರ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ನಂತರ ಪಾಕಿಸ್ತಾನದ ಅಮೀರ್‌ ಸೊಹೈಲ್, ಮೊಯಿನ್‌ ಖಾನ್‌ ಮತ್ತು ರಮೀಜ್‌ ರಾಜಾ ಈ ಆಟಗಾರರು ಮೈದಾನದಲ್ಲಿ ನಮಾಜ ಪಠಿಸಿದ್ದರು. ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ವಕಾರ್‌ ಯೂನಿಸ್‌ ಒಂದು ಕಾರ್ಯಕ್ರಮದಲ್ಲಿ ಪಾಕಿಸ್ತಾನದ ವಿಕೆಟ್‌ಕೀಪರ್‌ ಮೊಹಮ್ಮದ ರಿಜ್ವಾನನಿಗೆ ಭಾರತದ ವಿರುದ್ಧದ ಪಂದ್ಯದ ನಂತರ ಹಿಂದೂಗಳ ಮುಂದೆ ನಮಾಜ್‌ ಮಾಡಿದ್ದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದನು. ಉತ್ತರಾಖಂಡ ಕ್ರಿಕೆಟ್‌ ಅಸೋಸಿಯೇಶನ್‌ ವಾಸಿಂ ಜಾಫರ್‌ ಅವರನ್ನು ಒಂದು ಅವಧಿಗಾಗಿ ಮುಖ್ಯ ತರಬೇತುದಾರನಾಗಿ ನೇಮಿಸಿತ್ತು. ಜಾಫರ್‌ ಅಲ್ಲಿ ‘ಕ್ರಿಕೆಟ್‌ ಜಿಹಾದ್’ ನಡೆಸುವ ಮೂಲಕ ಉತ್ತರಾಖಂಡದ ಮುಸ್ಲಿಂ ಆಟಗಾರರನ್ನು ಪ್ರೋತ್ಸಾಹಿಸಿದ ಆರೋಪದಿಂದ ಜಾಫರ್‌ ರಾಜೀನಾಮೆ ನೀಡಬೇಕಾಯಿತು. ವಕಾರ್‌ ಯೂನಸ್, ಶೋಯೆಬ್‌ ಅಖ್ತರ್, ಇಂಜಮಾಮ್‌ ಉಲ್‌ ಹಕ್‌ ಇವರೆಲ್ಲ ಮೂಲಭೂತವಾದದ ಪ್ರಮುಖ ಉದಾಹರಣೆಗಳಾಗಿದ್ದಾರೆ. ಇಂಜಮಾಮ್‌ ಉಲ್‌ ಹಕ್‌ ಈಗ ಮೌಲಾನಾ ಆಗಿದ್ದು, ಸಂಘದ ತರಬೇತುದಾರರಾಗುವ ಬದಲು ಧರ್ಮದ ಪ್ರಚಾರಕನಾಗಲು ಆದ್ಯತೆ ನೀಡಿದನು.

ಈಗ ‘ರಝಾಕ್‌ ಭಾರತೀಯ ನಟಿ ಐಶ್ವರ್ಯಾ ಬಚ್ಚನ್‌ ಬಗ್ಗೆ ಅತ್ಯಂತ ಗಂಭೀರವಾದ ಹೇಳಿಕೆ ನೀಡಿದ್ದರೂ, ಭಾರತೀಯ ಮಹಿಳಾ ಆಯೋಗ ಏಕೆ ಮೌನವಾಗಿದೆ ?’ ಎನ್ನುವ ಪ್ರಶ್ನೆ ಯಾರ ಮನಸ್ಸಿನಲ್ಲಿಯೂ ಉದ್ಭವಿಸಬಹುದು. ಅಲ್ಲದೆ, ಈ ಹೇಳಿಕೆಗೆ ಭಾರತದ ಒಬ್ಬ ಆಟಗಾರನೂ ವಿರೋಧ ವ್ಯಕ್ತಪಡಿಸಿಲ್ಲ. ತಥಾಕಥಿತ ‘ಸೆಕ್ಯುಲರ್’ (ಜಾತ್ಯತೀತ) ವಿಚಾರವಂತರು ಎಂದು ಕರೆಸಿಕೊಳ್ಳುವರು ಕೂಡ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.

ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಆಡುವುದನ್ನು ಬಹಿಷ್ಕರಿಸಬೇಕು !

೨೦೦೮ ರಲ್ಲಿ ಮುಂಬೈಯಲ್ಲಿ ಉಗ್ರರಿಂದಾದ ದಾಳಿಯ ನಂತರ ಭಾರತವು ಪಾಕಿಸ್ತಾನದ ಜೊತೆ ಕ್ರಿಕೆಟ್‌ ಆಡುವುದನ್ನು ನಿಲ್ಲಿಸಿತ್ತು. ಈಗಲೂ ಭಾರತದೊಂದಿಗೆ ನೇರವಾಗಿ ಯುದ್ಧ ಮಾಡಲು ಸಾಧ್ಯವಾಗದ ಕಾರಣ, ಪಾಕಿಸ್ತಾನಿ ಕ್ರಿಕೆಟಿಗರು ಸಹ ವಿವಿಧ ಪ್ರಸಂಗಗಳಲ್ಲಿ ಭಾರತವನ್ನು ಅಪಮಾನಿಸುವ ಒಂದೇ ಒಂದು ಅವಕಾಶವನ್ನು ಬಿಡುವುದಿಲ್ಲ. ಹಾಗೆಯೇ ಭಾರತೀಯ ಆಟಗಾರರನ್ನು ಇಸ್ಲಾಂನ ಜಾಲಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಇನ್ನು ಮುಂದಿನ ಕಾಲದಲ್ಲಿ ಪಾಕಿಸ್ತಾನದ ‘ಕ್ರಿಕೆಟ್‌ ಜಿಹಾದ್‌’ಗೆ ಪಾಕ್‌ನೊಂದಿಗಿನ ಕ್ರಿಕೆಟ್‌ ಪಂದ್ಯಕ್ಕೆ ಶಾಶ್ವತ ಬಹಿμಕ್Áರವೇ ತಕ್ಕ ಉತ್ತರವಾಗಿರುತ್ತದೆ.