2021 ರಲ್ಲಿ ಬಂಗಾಳದಲ್ಲಿ ನಡೆದ ಹಿಂಸಾಚಾರವು 1946 ರಲ್ಲಿ ಮುಸ್ಲಿಮರ `ಡೈರೆಕ್ಟ ಆಕ್ಷನ್ ಡೆ’ದಂತೆ ಅಮಾನವೀಯತೆ ! – ನೂಪುರ ಶರ್ಮಾ, ಪ್ರಧಾನ ಸಂಪಾದಕಿ, ‘ಆಪ್ ಇಂಡಿಯಾ’
‘ಆಪ್ ಇಂಡಿಯಾ’ ಈ ಹಿಂದುತ್ವನಿಷ್ಠ ವಾರ್ತಾ ಜಾಲತಾಣದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾ ಅವರು ‘ವರ್ಲ್ಡ ಹಿಂದೂ ಕಾಂಗ್ರೆಸ್’ ಅನ್ನು ಉದ್ದೇಶಿಸಿ ಮಾತನಾಡಿದರು. ಅವರು 2021 ರಲ್ಲಿ ನಡೆದ ಬಂಗಾಳ ವಿಧಾನಸಭೆಯ ಚುನಾವಣೆಯ ನಂತರ ನಡೆದ ಭೀಕರ ಹಿಂಸಾಚಾರದ ಮೇಲೆ ಅವರು ಬೆಳಕು ಚೆಲ್ಲಿದರು. ಅವರು ಮಾತನಾಡುತ್ತಾ, “2021 ರಲ್ಲಿ ನಡೆದ ಹಿಂಸಾಚಾರವು 1946 ರ `ಡೈರೆಕ್ಟ ಆಕ್ಷನ್ ಡೇ’ ದಂತೆ ಅಮಾನವೀಯವಾಗಿತ್ತು. ಆ ಸಮಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಬೀದಿಗೆ ಎಸೆಯಲ್ಪಟ್ಟ ಸಂತ್ರಸ್ತರೊಂದಿಗೆ ನಾನು ಸಂವಾದ ನಡೆಸಿದ್ದೆನು. ಅವರಿಗೆ ಹಲವು ದಿನಗಳ ಕಾಲ ದೇವಸ್ಥಾನದಲ್ಲಿ ಆಶ್ರಯ ಪಡೆಯಬೇಕಾಗಿತ್ತು. ತೃಣಮೂಲ ಕಾಂಗ್ರೆಸ್ ನ ಮುಸ್ಲಿಂ ಕಾರ್ಯಕರ್ತರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಅಪ್ರಾಪ್ತ ಹಿಂದೂ ಯುವತಿಯರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದರು. ನಮಗೆ ಯಾರಿಗೂ ಈ ಘಟನೆಯ ವಿಷಯದ ಬಗ್ಗೆ ಬಾಯಿತೆರೆಯಲು ಸಾಧ್ಯವಾಗಲಿಲ್ಲ; ಏಕೆಂದರೆ ಯಾವುದೇ ಸಂತ್ರಸ್ತರು ತಮ್ಮ ನೋವು ತೋಡಿಕೊಳ್ಳಲು ಮುಂದೆ ಬರಲೇ ಇಲ್ಲ. ಪೊಲೀಸರು ಕೂಡ ಈ ಘಟನೆಗಳ ಬಗ್ಗೆ ಯಾವುದೇ ಅಪರಾಧವನ್ನು ದಾಖಲಿಸಲಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಈ ಸಂತ್ರಸ್ತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಈ ಸಂತ್ರಸ್ತರ ನೆರವಿಗೆ ಯಾರೂ ಧಾವಿಸಿ ಹೋಗಲಿಲ್ಲ !” ಎಂದು ಹೇಳಿದರು.
(ಸೌಜನ್ಯ – WHC)
‘ಡಿಡಿ ನ್ಯೂಸ್’ ಮೂಲಕ ದೇಶವಿರೋಧಿ ವಿಚಾರ ಸರಣಿಗೆ ಸವಾಲೆಸೆಯುವ ವಿಚಾರ ಸಂಕಿರಣಗಳು ಪ್ರಾರಂಭವಾದವು’ ! – ಅಶೋಕ್ ಶ್ರೀವಾಸ್ತವ, ಸಂಪಾದಕ, ‘ಡಿಡಿ ನ್ಯೂಸ್’
‘ಡಿಡಿ ನ್ಯೂಸ್’ನ ಹಿರಿಯ ಸಂಪಾದಕ ಅಶೋಕ್ ಶ್ರೀವಾಸ್ತವ ಅವರು ‘ಪ್ರಸಾರ ಮಾಧ್ಯಮಗಳು ತಮ್ಮ ಧರ್ಮವನ್ನು ಪಾಲಿಸುತ್ತಿವೆಯೇ ಅಥವಾ ಇಲ್ಲವೇ ?’ ಎನ್ನುವ ವಿಷಯದ ಮೇಲೆ ಅವರು ಮಾತನಾಡುತ್ತಾ, ”ಮೊದಲು `ಡಿಡಿ ನ್ಯೂಸ’ನಲ್ಲಿ ವಿಚಾರ ಸಂಕಿರಣಗಳಿಗೆ ಸ್ಥಾನವಿರಲಿಲ್ಲ. ಹಾಗಾಗಿ ನಮಗೆ ಯಾವುದೇ ವಿಚಾರಸರಣಿಗೆ ಸವಾಲು ಎಸೆಯುವ ಪ್ರಶ್ನೆಯನ್ನು ಕೇಳಲು ಸಾಧ್ಯವಿರಲಿಲ್ಲ. ಕೇವಲ ಸಾಮಾನ್ಯ ಸ್ವರೂಪದ ಸುದ್ದಿಗಳನ್ನು ಬಿತ್ತರಿಸುವುದು ಮಾತ್ರ ನಮ್ಮ ಕೆಲಸವಾಗಿತ್ತು. 2016 ರಲ್ಲಿ ಅಂದಿನ ಮಾಹಿತಿ ಮತ್ತು ಪ್ರಸಾರ ಸಚಿವ ಅರುಣ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ. ಅವರಿಗೆ ನಾನು, ಭಾರತದ ವಿರುದ್ಧದ ಯುದ್ಧದಲ್ಲಿ ರಾಷ್ಟ್ರ ಮಟ್ಟದ ಪ್ರಸಾರಕ ಸುದ್ದಿವಾಹಿನಿಯಾಗಿರುವ (ಸರಕಾರಿ ಸುದ್ದಿ ವಾಹಿನಿ) `ದೂರದರ್ಶನ’ ಕೂಡ ಭಾಗವಹಿಸಿ ತನ್ನ ಸಹಭಾಗಿತ್ವವನ್ನು ನೊಂದಾಯಿಸಬೇಕು ಮತ್ತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಡಿಡಿ ನ್ಯೂಸ್ ಮೂಲಕ ದೇಶ ವಿರೋಧಿ ವಿಚಾರಸರಣಿಗಳಿಗೆ ಸವಾಲು ಎಸೆಯಬೇಕು ಎಂದು ಹೇಳಿದ್ದೆ. ನನಗೆ ಇದಕ್ಕಾಗಿ ಅನುಮತಿ ಸಿಕ್ಕಿತು ಮತ್ತು ಅಂದಿನಿಂದ ‘ಡಿಡಿ ನ್ಯೂಸ್’ ಮೇಲೆ ವಿಚಾರ ಸಂಕಿರಣ ಆರಂಭವಾಯಿತು. ಇದು ‘ಡಿಡಿ ನ್ಯೂಸ್’ನ ಹೊಸ ಆರಂಭವಾಗಿತ್ತು. ಈ ಕಾರ್ಯಕ್ರಮದಿಂದಾಗಿ ದೂರದರ್ಶನದಲ್ಲಿ ಅನೇಕ ಬದಲಾವಣೆಗಳಾದವು. (ಈ ರೀತಿ ರಾಷ್ಟ್ರಕ್ಕಾಗಿ ಶ್ರಮಿಸುವ ಅಶೋಕ ಶ್ರೀವಾಸ್ತವ ಅವರಂತಹ ದೇಶಭಕ್ತ ಸಂಪಾದಕರು ದೇಶದ ನಿಜವಾದ ಶಕ್ತಿಯಾಗುತ್ತಾರೆ ! – ಸಂಪಾದಕರು)
ಭಾರತವು ಜಗತ್ತಿನ ಅತ್ಯಂತ ಹಳೆಯ ಸಂಸ್ಕೃತಿ ! – ವಿವೇಕ್ ಅಗ್ನಿಹೋತ್ರಿ, ಚಲನಚಿತ್ರ ನಿರ್ಮಾಪಕ
ಭಾರತವು ವಿಶ್ವದ ಅತ್ಯಂತ ಹಳೆಯ ಸಂಸ್ಕೃತಿಯಾಗಿದೆ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 2023 ರಲ್ಲಿ, ಹಿಂದೂ ವಿರೋಧಿ ಸಮುದಾಯವು ಭಾರತೀಯರನ್ನು ‘ಕಾಫಿರ್’ ಎಂದು ಕರೆಯುವುದು, ‘ಸರ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸುವುದು) ಇತ್ಯಾದಿ ಘೋಷಣೆಗಳನ್ನು ಸರಾಗವಾಗಿ ಬಳಸಲಾಗುತ್ತಿದೆ ಮತ್ತು ಅದಕ್ಕೆ ಸಾಮಾಜಿಕ ಮಾಧ್ಯಮಗಳ ಅನುಮತಿ ಸಿಗುತ್ತಿರುವುದು ಈ ಘಟನೆಯು ಭಯ ಹುಟ್ಟಿಸುವಂತಹದ್ದಾಗಿದೆ. ಒಬ್ಬ ಕಥೆಗಾರನಾಗಿ, ಈ ಹೇಳಿಕೆಗಳ ಬಗ್ಗೆ ನನಗೆ ನಾಚಿಕೆಯೆನಿಸುತ್ತಿದೆ. ಚುನಾವಣಾ ಸಮಯದಲ್ಲಿ ಹೊರತುಪಡಿಸಿದರೆ, ರಾಜಕಾರಣಿಗಳು ಈ ಪ್ರಶ್ನೆಗಳನ್ನು ಎತ್ತುವುದಿಲ್ಲ. ಧರ್ಮಕ್ಕಾಗಿ ಶತಮಾನಗಳ ಕಾಲ ಕಾರ್ಯ ಮಾಡಿದ ಜನರು ಭೂಗತರಾದರು. ಈ ಕಾರಣಕ್ಕಾಗಿಯೇ ಹಿಂದೂಗಳ ಸಂಕಷ್ಟದ ಮೇಲೆ ಬೆಳಕು ಚೆಲ್ಲುವ ಚಿತ್ರಗಳನ್ನು ನಿರ್ಮಿಸಲು ನಿರ್ಧರಿಸಿದೆನು, ಎಂದು ಚಲನಚಿತ್ರ ನಿರ್ಮಾಪಕ ವಿವೇಕ ಅಗ್ನಿಹೋತ್ರಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
Full house as Shri Vivek Ranjan Agnihotri @vivekagnihotri speaks on “Disruptive Cinema: The Road Ahead” at the Hindu Media Conference, #WHC2023 pic.twitter.com/mtdfogp0QN
— World Hindu Congress (@WHCongress) November 25, 2023
26/11ರ ದಾಳಿಯಿಂದ ‘ಹಿಂದೂ ಭಯೋತ್ಪಾದನೆ’ಯ ಕಥಾನಕವನ್ನು ರಚಿಸುವ ಸಂಚು ನಡೆದಿದೆ ! – ಸ್ವಾತಿ ಗೋಯಲ್ ಶರ್ಮಾ, ಹಿರಿಯ ಸಂಪಾದಕಿ, ‘ಸ್ವರಾಜ್ಯ ಮಾಗ’
ಹಿಂದುತ್ವ ವಾರ್ತಾ ಜಾಲತಾಣವಾದ ‘ಸ್ವರಾಜ್ಯ ಮಾಗ’ನ ಹಿರಿಯ ಸಂಪಾದಕಿ ಸ್ವಾತಿ ಗೋಯಲ್ ಶರ್ಮಾ ಅವರು ಮಾತನಾಡಿ, `ನಕಲಿ ನಿರೂಪಣೆಗಳನ್ನು ವಿರೋಧಿಸುವುದು, ಹಾಗೆಯೇ ಹಿಂದೂದ್ವೇಷಿ ಘಟನೆಗಳನ್ನು ಮುಚ್ಚಿಹಾಕಲು ಉಪಯೋಗಿಸುವ ಕೃತ್ಯಗಳು’ ಈ ವಿಷಯದ ಕುರಿತು ವಿಚಾರವನ್ನು ಮಂಡಿಸಿದರು. ‘ಹಿಂದೂ ಭಯೋತ್ಪಾದನೆ’ ಹೆಸರಿನಲ್ಲಿ ರಚಿಸಲಾದ ಷಡ್ಯಂತ್ರ್ಯದ ಸಂದರ್ಭದಲ್ಲಿ ಅವರು, “2008 ರಲ್ಲಿ ಮುಂಬಯಿನಲ್ಲಿ ನಡೆದ 26/11 ದಾಳಿಯ ಸಂದರ್ಭದಲ್ಲಿ ‘ಜಿಹಾದಿ ಭಯೋತ್ಪಾದಕ ಅಜ್ಮಲ್ ಕಸಾಬನು ಸಮೀರ ಚೌಧರಿ ಎನ್ನುವ ಹಿಂದೂ ಹೆಸರಿನಲ್ಲಿ ಸಾಯುವನು’, ಎನ್ನುವ ರೀತಿಯಲ್ಲಿ ಕಥೆಯನ್ನು(ಸಂಚು) ಹೆಣೆಯಲಾಗಿತ್ತು. ಆ ಸಮಯದಲ್ಲಿ ವೀರಗತಿಯಾಗ ಪೊಲೀಸ ಅಧಿಕಾರಿ ತುಕಾರಾಂ ಆಂಬೋಳೆಯವರಿಂದಲೇ ಈ ಕಥೆ(ಸಂಚು) ವಿಫಲವಾಯಿತು. ಇಲ್ಲವಾದಲ್ಲಿ ಕಸಾಬನ ಹತ್ಯೆಯೊಂದಿಗೆ ಅವನ ನಿಜವಾದ ಸತ್ಯ ಮುಚ್ಚಿಹೋಗುತ್ತಿತ್ತು ಮತ್ತು `ಹಿಂದೂ ಭಯೋತ್ಪಾದನೆ’ ಈ ಪರಿಕಲ್ಪನೆಗೆ ಪೂರಕವಾಗುತ್ತಿತ್ತು.” ಎಂದು ಹೇಳಿದರು.
(ಸೌಜನ್ಯ – WHC)
ಇನ್ನೊಂದು ಉದಾಹರಣೆಯನ್ನು ನೀಡಿದ ಶರ್ಮಾ ಅವರು, 7 ವರ್ಷಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ರಮೇಶ ಶುಕ್ಲಾ ಎಂಬ ಹಿಂದೂ ಶಿಕ್ಷಕನನ್ನು ಕೊಲೆ ಮಾಡಲಾಗಿತ್ತು. ಆತನ ಹಂತಕರು ಪತ್ತೆಯಾಗದ ಕಾರಣ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಿದ್ದರು. ವಾಸ್ತವವಾಗಿ 3 ಜನರಿಗೆ ಇಸ್ಲಾಮಿಕ್ ಸ್ಟೇಟ್ ನಲ್ಲಿ ಭರ್ತಿಯಾಗುವುದಿತ್ತು. ಅವರಲ್ಲಿ ಕಾಫಿರನನ್ನು(ನಾಸ್ತಿಕನನ್ನು) ಕೊಲ್ಲುವ ಕ್ಷಮತೆಯಿದೆಯೆಂದು ಸಿದ್ಧಪಡಿಸಲು ಅವರು ತಿಲಕ ಹಚ್ಚಿದ್ದ ಮತ್ತು ಹಿಂದೂ ಉಡುಗೆಯನ್ನು ಧರಿಸಿದ್ದ ಶುಕ್ಲಾನನ್ನು ಹತ್ಯೆ ಮಾಡಿದರು. ಅವರು ಹತ್ಯೆ ಮಾಡುತ್ತಿರುವಾಗಿನ ವಿಡಿಯೋವನ್ನು ತಯಾರಿಸಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಗೆ ಅವರು ಕಳುಹಿಸಿದ್ದರು. ಇತ್ತೀಚಿನ ಪ್ರಕರಣವೊಂದರಲ್ಲಿ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ಮೂವರಿಗೆ ಮರಣದಂಡನೆ ವಿಧಿಸಿತು. ಆಗ ಈ ಸತ್ಯ ಹೊರಬಂದಿದೆ’ ಎಂದು ಹೇಳಿದರು.
ಸಿಖ್ ಪಂಥದ ಸ್ಥಾಪನೆಯು ಹಿಂದೂ ಧರ್ಮವನ್ನು ರಕ್ಷಿಸಲು ಆಗಿತ್ತು ! – ಅನಿಲೇಶ್ ಮಹಾಜನ, ಉಪ ಸಂಪಾದಕ, ಇಂಡಿಯಾ ಟುಡೇ
ಭಗತಸಿಂಹ ಅವರನ್ನು ಇತ್ತೀಚೆಗೆ ಕಮ್ಯುನಿಸ್ಟ್ ಎಂದು ಬಿಂಬಿಸಲಾಗುತ್ತಿದೆ ಎಂಬ ವಿಷಯದ ಮೇಲೆ ಆಂಗ್ಲ ಸುದ್ದಿ ವಾಹಿನಿಯ ‘ಇಂಡಿಯಾ ಟುಡೆ’ ಉಪ ಸಂಪಾದಕ ಶ್ರೀ. ಅನಿಲೇಶ ಮಹಾಜನ ಇವರು ಮಾತನಾಡಿ, ಭಗತ್ ಸಿಂಹ ಕಮ್ಯುನಿಸ್ಟ್ ಆಗಿರಲಿಲ್ಲ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಕಳೆದ 80-90 ವರ್ಷಗಳಲ್ಲಿ ಇಂತಹ ಒಂದು ಕಥೆಯನ್ನು ರಚಿಸಲಾಗಿದೆ. ಅವರು ಸೆರೆಮನೆಯಲ್ಲಿದ್ದಾಗ ಕಮ್ಯುನಿಸ್ಟ್ ಆಗಿದ್ದರು; ಕಾರಣ ಅವರು ಲೆನಿನ್ ನಿಂದ ಪ್ರಭಾವಿತರಾಗಿದ್ದರು ಎಂದು ಹೇಳಲಾಗುತ್ತಿದೆ. ಇದು ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವಾಗಿದೆ; ಏಕೆಂದರೆ ಭಗತ್ ಸಿಂಹ ಓದುತ್ತಿದ್ದದ್ದು ಒಂದೇ ಪುಸ್ತಕವಲ್ಲ, ಐದು ಪುಸ್ತಕಗಳನ್ನು ಓದುತ್ತಿದ್ದರು. ಅವರು ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಕಾರ್ಯ, ಮಹಾರಾಣಾ ಪ್ರತಾಪ್ ಅವರ ಜೀವನ, ಹೀರ-ರಾಂಜಾ ಅವರ ಕಥೆ ಮತ್ತು ಲೆನಿನ್ ಅವರು ರಶಿಯನ ಕ್ರಾಂತಿಯ ನಾಯಕತ್ವದಂತಹ ಪುಸ್ತಕಗಳನ್ನು ಅವರು ಓದಿದ್ದರು. ನಾವು ಇದನ್ನು ಕೂಡ ಅರ್ಥ ಮಾಡಿಕೊಳ್ಳಬೇಕು, ಆ ಸಮಯದಲ್ಲಿ ದೇಶವನ್ನು ಸಾಮ್ರಾಜ್ಯಶಾಹಿಗಳಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದ ಸಾಮ್ರಾಜ್ಯ ವಿರೋಧಿ ಶಕ್ತಿಗಳ ನಾಯಕ ಲೆನಿನ್ ಆಗಿದ್ದನು ಎಂದು ಹೇಳಿದರು.
(ಸೌಜನ್ಯ – WHC)
ಪಂಜಾಬ್ ನಲ್ಲಿನ ಮತಾಂತರದ ಬಗ್ಗೆ ಶ್ರೀ. ಅನಿಲೇಶ ಮಹಾಜನ ಇವರು ಮಾತನಾಡಿ, ಪಂಜಾಬ್‌ನಲ್ಲಿ ಮತಾಂತರ ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲು ನಾನು ನನ್ನ ವೇದಿಕೆಯನ್ನು ಬಳಸಿಕೊಂಡಿದ್ದೇನೆ ಎಂದು ಹೇಳಿದರು. ಒಂದು ಕಾಲದಲ್ಲಿ ಯೋಧರ ಸಮುದಾಯವೆಂದು ಹೆಸರಾಗಿದ್ದ ಸಿಖ್ ಸಮುದಾಯವು ಕ್ರೈಸ್ತ ಧರ್ಮದ ಕಚ್ಚಾ ರೂಪವನ್ನು ಧರಿಸಿಕೊಂಡಿದೆ. ಪಂಜಾಬ್‌ನಲ್ಲಿ, ಉದ್ದೇಶಪೂರ್ವಕ ಒಂದು ದೊಡ್ಡ ಸಿಖ್ ಸಮುದಾಯವನ್ನು ಹಿಂದೂ ಧರ್ಮದಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಧರ್ಮವನ್ನು ರಕ್ಷಿಸಲು ಸಿಖ್ ಪಂಥವನ್ನು ಸ್ಥಾಪಿಸಲಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈಗ ಆ ರಾಜ್ಯದಲ್ಲಿ ಸಿಖ್ಖರನ್ನು ಹಿಂದೂ ಧರ್ಮದಿಂದ ದೂರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದುದರಿಂದ ನಾನು ಸಿಖ್ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಿದೆನು ಎಂದು ಹೇಳಿದರು.
‘ನಾನು ಹಿಂದೂ’, ಎಂದು ಎದೆ ತಟ್ಟಿಕೊಂಡು ಹೇಳಿರಿ ! – ಶ್ರೀ. ಅಕ್ಷತ ಗುಪ್ತಾ, ಲೇಖಕರು
‘ಪ್ರಕಾಶನ ಮತ್ತು ಪ್ರಸಾರಮಾಧ್ಯಮ ಅಧ್ಯಯನ ಇದರಲ್ಲಿ ಹಿಂದೂ ದೃಷ್ಟಿಕೋನ’ ವಿಷಯದ ಕುರಿತು ಮಾತನಾಡಿದ ಲೇಖಕ ಮತ್ತು ಚಿತ್ರಕಥೆಗಾರ ಶ್ರೀ. ಅಕ್ಷತ ಗುಪ್ತಾ ಇವರು, ಹಿಂದೂಗಳು ‘ನಾವು ಎಲ್ಲದರಲ್ಲೂ ಬಹಳ ಹಿಂದೆ ಬೀಳುತ್ತೇವೆ’ ಎಂದು ಕೀಳರಿಮೆಯನ್ನು ಹೊಂದಬಾರದು. ಬದಲಾಗಿ ಇತರರ ಗಮನವನ್ನು ಸೆಳೆದುಕೊಳ್ಳಬೇಕು, ಧೈರ್ಯದಿಂದ ತಮ್ಮ ಅಭಿಪ್ರಾಯವನ್ನು ಮಂಡಿಸಬೇಕು ಮತ್ತು ‘ನಾನು ಹಿಂದೂ ಆಗಿದ್ದೇನೆ’ ಎಂದು ಹೆಮ್ಮೆಯಿಂದ ಮತ್ತು ಎದೆತಟ್ಟಿಕೊಂಡು ಹೇಳಬೇಕು. ಈ ಸಂದರ್ಭದಲ್ಲಿ ಗುಪ್ತಾ ಅವರು `ಪ್ರಣಾಮ, ಮಿ ಹಿಂದೂ ಆಹೆ’ (‘ನಮಸ್ಕಾರ, ನಾನು ಹಿಂದೂ ಆಗಿದ್ದೇನೆ’) ಹೆಸರಿನ ರೋಚಕ ಸ್ವರಚಿತ ಕವಿತೆಯೆಂದು ತೋರಿಸಿದರು. ಈ ಕವಿತೆ ಉಪಸ್ಥಿತರಿದ್ದ ಎಲ್ಲ ಹಿಂದುತ್ವನಿಷ್ಠರ ಹೃದಯವನ್ನು ಮುಟ್ಟಿತು.
Akshat Gupta @AuthorAkshat speaking at #WHC2023 pic.twitter.com/CT1VGGayrz
— World Hindu Congress (@WHCongress) November 25, 2023
ಭಾರತವು ಅಂತರರಾಷ್ಟ್ರೀಯ ಬಂಡವಾಳಕ್ಕೆ ಆಕರ್ಷಕ ಹೂಡಿಕೆ ತಾಣವಾಗಿದೆ ! – ಸುಭಾಷ್ ಠಕರಾರ, ಮಾಜಿ ಅಧ್ಯಕ್ಷ, ಲಂಡನ್ ಚೇಂಬರ್ ಆಫ್ ಕಾಮರ್ಸ್
ಭಾರತದಲ್ಲಿ ಹೂಡಿಕೆಯ ಸ್ವರೂಪ ಬದಲಾಗಿದೆ. ಜಾಗತಿಕ ಹೂಡಿಕೆಯಲ್ಲಿ ಭಾರತದ ಪಾಲು ಶೇ.2-3 ರಿಂದ ಶೇ.13-15ಕ್ಕೆ ಏರಿಕೆಯಾಗಿದೆ. ಇಂದಿನ ಭಾರತವು ಅಂತರಾಷ್ಟ್ರೀಯ ಬಂಡವಾಳಕ್ಕೆ ಆಕರ್ಷಕ ಹೂಡಿಕೆಯ ಪ್ರಮುಖ ತಾಣವಾಗಿದೆ. ಒಬ್ಬ ಒಳ್ಳೆಯ ವಾಣಿಜ್ಯೋದ್ಯಮಿಯು ಬಂಡವಾಳವನ್ನು ವಿವಿಧ ಸ್ರೋತಗಳಿಂತ ಸುಲಭವಾಗಿ ಹೂಡಿಕೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
(ಸೌಜನ್ಯ – WHC)