‘ನಿಜವಾದ ಜ್ಞಾನ ಯಾವುದು ಮತ್ತು ಮೋಸದ ಜ್ಞಾನ ಯಾವುದು ?’, ಇದನ್ನು ಹೇಳಬಲ್ಲ ಏಕಮೇವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

‘ಈಶ್ವರೀ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯಲ್ಲಿ ಬಹಳಷ್ಟು ವಿಷಯಗಳ ಹಸ್ತಕ್ಷೇಪವಾಗುತ್ತದೆ. ಕೆಟ್ಟ ಶಕ್ತಿಗಳು ಮೂಲ ಜ್ಞಾನದಲ್ಲಿ ತಪ್ಪು ಮಾಹಿತಿಯನ್ನು ಹಾಕ ಬಹುದು. ಆದುದರಿಂದ ಜ್ಞಾನದ ಮಾಧ್ಯಮದಿಂದ ದೊರಕಿದ ಎಲ್ಲ ಮಾಹಿತಿ ಶೇ. ೧೦೦ ರಷ್ಟು ಯೋಗ್ಯವಿರುತ್ತದೆ ಎಂದೇನಿಲ್ಲ. ‘ಯಾವ ಸಾಧಕನ ಮಾಧ್ಯಮದಿಂದ ಜ್ಞಾನ ಸಿಗುತ್ತದೆಯೋ, ಅವನ ಸಾಧನೆ, ಅವನ ದೇವರ ಮೇಲಿನ ದೃಢ ಶ್ರದ್ಧೆ ಮತ್ತು ಭಾವ’, ಇವೆಲ್ಲವುಗಳಿಂದ ಸೂಕ್ಷ್ಮದಿಂದ ದೊರಕುವ ಈಶ್ವರೀ ಜ್ಞಾನದ ಮೇಲಾಗುವ ದೊಡ್ಡ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ. ಕೆಟ್ಟ ಶಕ್ತಿಗಳು ಜ್ಞಾನದ ಮಾಧ್ಯಮದಿಂದ ಮೋಸಗೊಳಿಸಬಹುದು. ‘ನಿಜವಾದ ಜ್ಞಾನ ಯಾವುದು ಮತ್ತು ಮೋಸದ ಜ್ಞಾನ ಯಾವುದು ?’, ಎಂದು ಪರಾತ್ಪರ ಗುರು ಡಾ. ಆಠವಲೆಯವರಂತಹ ಸರ್ವಜ್ಞ ಸಂತರೇ ಹೇಳಬಲ್ಲರು.

ಒಂದು ಸಲ ಸೂಕ್ಷ್ಮದಿಂದ ಭವಿಷ್ಯಕಾಲದ ಜ್ಞಾನವನ್ನು ಪಡೆಯಬಲ್ಲ ಸಮಾಜದ ಓರ್ವ ವ್ಯಕ್ತಿಯು, ”ನೀವು ಇಂತಿಷ್ಟು ದಕ್ಷಿಣೆಯನ್ನು ನೀಡಿದರೆ ನಿಮ್ಮ ಪೈಕಿ ಓರ್ವ ಸಾಧಕನ ಮೃತ್ಯುಯೋಗವು ತಪ್ಪುತ್ತದೆ”, ಎಂದು ಹೇಳಿದರು. ಹಣದ ಬೇಡಿಕೆಯನ್ನು ಮಾಡಿ ಸಮಾಜವನ್ನು ಮೋಸಗೊಳಿಸುವ ಇಂತಹ ಭವಿಷ್ಯಕಾರರು ನಮಗೆ ಬೇಡ. ಬಹಳಷ್ಟು ಸಲ ಇಂತಹ ವ್ಯಕ್ತಿಗಳು ಸಮಾಜದ ಜನಸಾಮಾನ್ಯರಿಗೆ ಮೃತ್ಯುವಿನ ಭಯವನ್ನು ತೋರಿಸಿ ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಾರೆ. ಪರಾತ್ಪರ ಗುರು ಡಾಕ್ಟರರು ನಮಗೆ ಸಮಾಜದ ಇಂತಹ ಜನರ ಅಧ್ಯಯನ ಮಾಡಲು ಕಲಿಸಿದುದರಿಂದ ಹಾಗೆಯೇ ನಮ್ಮ ಮೇಲೆ ಪರಾತ್ಪರ ಗುರು ಡಾಕ್ಟರರ ಕೃಪೆ ಇದ್ದುದರಿಂದ ನಾವು ಇಂತಹ ಮೋಸಗೊಳಿಸುವ ವ್ಯಕ್ತಿಗಳಿಂದ ಎಚ್ಚರದಿಂದಿರಬಹುದು; ಆದರೆ ಸಾಮಾನ್ಯ ವ್ಯಕ್ತಿಗಳದ್ದೇನು ?

ಯಾವ ಸಾಧಕನು ದೇವರಿಗಾಗಿ ತನು-ಮನ-ಧನ ಇವುಗಳ ಸಂಪೂರ್ಣ ತ್ಯಾಗ ಮಾಡಿದ್ದಾನೆಯೋ ಮತ್ತು ಯಾವನು ಗುರುಗಳ ಆಶ್ರಮದಲ್ಲಿ ಸಾಧನೆಯನ್ನು ಮಾಡು ತ್ತಿರುವನೋ, ಅವನು ಇನ್ನು ಬೇರೆ ಯಾವ ದಕ್ಷಿಣೆಯನ್ನು ಕೊಡಬಲ್ಲನು ? ಸರ್ವಜ್ಞನಾಗಿರುವ ಭಗವಂತನಿಗೆ ಇದೆಲ್ಲವೂ ತಿಳಿಯುತ್ತದೆ. ಜ್ಞಾನವು ಜ್ಞಾನವೇ ಆಗಿರುತ್ತದೆ. ಅದರಲ್ಲಿ ಹಣದ ಬೇಡಿಕೆ ಇರುವುದು ಕಂಡು ಬರುವುದಿಲ್ಲ; ಏಕೆಂದರೆ ಸರ್ವಶಕ್ತಿಶಾಲಿಯಾದ ಈಶ್ವರನಿಗೆ ಹಣದ ಆವಶ್ಯಕತೆ ಏನಿದೆ ? ಅವನು ಮನುಷ್ಯನಾಗಿದ್ದಾನೆ ಏನು ? ಸಮಾಜದಲ್ಲಿನ ಬಹಳಷ್ಟು ಜನರು ಭವಿಷ್ಯದ ಹೆಸರಿನಲ್ಲಿ ವ್ಯಾಪಾರವನ್ನು ಆರಂಭಿಸಿರುವುದು ಕಂಡುಬರುತ್ತದೆ. ಇಂತಹ ಕೆಲವು ಜನರ ಮಾಧ್ಯಮದಿಂದ ಕೆಟ್ಟ ಶಕ್ತಿಗಳು ಮನುಷ್ಯನನ್ನು ಭಾವನಿಕ ಸ್ತರದಲ್ಲಿ ಸಿಲುಕಿಸಿ ಮೋಸಗೊಳಿಸಬಹುದು.

ಅಧ್ಯಾತ್ಮದಲ್ಲಿನ ಓರ್ವ ಅಧಿಕಾರಿ ಸಂತರು ತಮಗೆ ದೇವತೆಗಳಿಂದ ದೊರಕಿದ ಸಂದೇಶದ ಮಾಧ್ಯಮದಿಂದ ‘ಇಂತಹ ಒಬ್ಬ ಸಾಧಕಿ ಕೆಟ್ಟ ಶಕ್ತಿಗಳ ದಾಳಿಯಿಂದ ಪ್ರಜ್ಞೆ ತಪ್ಪಿ ಬೀಳಬಹುದು. ಒಂದು ವೇಳೆ ಆ ಸಾಧಕಿಯನ್ನು ಇದರಿಂದ ರಕ್ಷಿಸಿದರೆ, ಮುಂದೆ ಅವಳು ಜ್ಞಾನವನ್ನು ಗ್ರಹಣ ಮಾಡುವ ದೊಡ್ಡ ಕಾರ್ಯವನ್ನು ಮಾಡುವವಳಿದ್ದಾಳೆ ಎಂದು ಹೇಳಿದ್ದರು. ಈ ಕುಯೋಗವನ್ನು ತಪ್ಪಿಸಲು ದೇವತೆಗಳಿಗೆ ಸುವರ್ಣದಾನವನ್ನು ಮಾಡಬೇಕು. ಈ ಸುವರ್ಣದಾನವನ್ನು ಸಮುದ್ರಕ್ಕೆ ಅರ್ಪಿಸಬೇಕು’, ಎಂದು ಹೇಳಿದರು. ಭಗವಂತನಿಂದ ಬಂದ ಈ ಜ್ಞಾನದಲ್ಲಿ ಸತ್ಯವಿತ್ತು’, ಇದನ್ನು ಪರಾತ್ಪರ ಗುರು ಡಾಕ್ಟರರು ಗುರುತಿಸಿದರು.

ಮೊದಲ ಉದಾಹರಣೆಯಲ್ಲಿ ಹಣವು ಭವಿಷ್ಯವನ್ನು ಹೇಳುವ ವ್ಯಕ್ತಿಗೇ ಸಿಗಲಿಕ್ಕಿತ್ತು ಮತ್ತು ಎರಡನೇ ಪ್ರಸಂಗದಲ್ಲಿ ಸಂತರ ಹೇಳಿಕೆಗನುಸಾರ ಚಿನ್ನವನ್ನು ನೀಡಬೇಕಿತ್ತು; ಆದರೆ ಅದನ್ನು ಸಮುದ್ರಕ್ಕೆ ಅರ್ಪಿಸಬೇಕಿತ್ತು. ಆ ಸಂತರಿಗೆ ಅದರಿಂದ ವೈಯಕ್ತಿಕವಾಗಿ ಏನೂ ಲಾಭ ಇರಲಿಲ್ಲ. ‘ಚಿನ್ನದ ದಾನದ ಮಾಧ್ಯಮದಿಂದ ದೇವತೆಗಳ ಕೃಪೆಯಿಂದ ದೊರಕುವ ತೇಜತತ್ತ್ವದ ಬಲದ ಮೇಲೆ ಆ ಸಾಧಕಿಗೆ ಜೀವದಾನ ದೊರಕಿತು’, ಇದು ದೈವೀ ಪ್ರಕ್ರಿಯೆಯಾಗಿತ್ತು. ಈ ಪ್ರಕ್ರಿಯೆಯನ್ನು ಗುರುತಿಸಲು ತೀವ್ರ ಸಾಧನೆ ಮತ್ತು ಸಾಧನೆಯಲ್ಲಿನ ಯೋಗ್ಯ ‘ಸಮಷ್ಟಿ ದೃಷ್ಟಿಕೋನ’ ಇರಬೇಕು ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಅದನ್ನು ಗುರುತಿಸಲು ಆವಶ್ಯಕವಾಗಿರುವ ಆಧ್ಯಾತ್ಮಿಕ ಅಧಿಕಾರವೂ ಬೇಕು. ಹೀಗೆ ಗುರುತಿಸುವ ಪರಾತ್ಪರ ಗುರು ಡಾ. ಆಠವಲೆಯವರು ಏಕಮೇವ ಅದ್ವೀತೀಯರಾಗಿದ್ದಾರೆ. ಅವರಿಂದಾಗಿ ಇಂದು ನಮಗೆ ಅಧ್ಯಾತ್ಮದ ಈ ಅಮೂಲ್ಯ ಜ್ಞಾನವು ಲಭಿಸುತ್ತಿದೆ.’

– ಸದ್ಗುರು (ಸೌ.) ಅಂಜಲಿ ಗಾಡಗೀಳ (೧.೫.೨೦೨೦)