ದೇವರ ಪೂಜೆಗೆ ಬೇಕಾಗುವ ಹತ್ತಿಯ ಬತ್ತಿಗಳ ಸಂದರ್ಭದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ಸಂಶೋಧನೆ !

ನಮಗೆ ದೇವರ ಪೂಜೆಗಾಗಿ ಪ್ರತಿದಿನ ಹತ್ತಿಯ ಬತ್ತಿಗಳು ಬೇಕಾಗುತ್ತವೆ. ಮೊದಲು ಸ್ತ್ರೀಯರು ಮನೆಯಲ್ಲಿಯೇ ತಮ್ಮ ಕೈಯಿಂದಲೇ ಹತ್ತಿಯ ಬತ್ತಿಗಳನ್ನು ತಯಾರಿಸುತ್ತಿದ್ದರು. ಇಂದಿನ ಧಾವಂತದ ಜೀವನದಲ್ಲಿ ಸ್ತ್ರೀಯರಿಗೆ ಮನೆ ಕೆಲಸಗಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಮಾರುಕಟ್ಟೆಯಿಂದ ಸಿದ್ಧವಿರುವ ಬತ್ತಿಗಳನ್ನು ತಂದು ಉಪಯೋಗಿಸುತ್ತಾರೆ. ದೀಪದಲ್ಲಿ ಎಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ದೇವರ ಮುಂದೆ ದೀಪವನ್ನು ಹಚ್ಚುತ್ತಾರೆ. ದೀಪದ ಜ್ಯೋತಿಯಿಂದ, ತೇಜತತ್ತ್ವ (ಚೈತನ್ಯ) ಆಕರ್ಷಿತವಾಗಿ ಅದು ವಾಸ್ತುವಿನಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ವಾತಾವರಣದ ಶುದ್ಧಿಯಾಗಿ ವಾತಾವರಣವು ಸಾತ್ತ್ವಿಕವಾಗುತ್ತದೆ. ಸ್ತ್ರೀಯರು ಮನೆಯಲ್ಲಿ ಕೈಯಿಂದ ತಯಾರಿಸಿದ ಬತ್ತಿ, ಮಾರುಕಟ್ಟೆಯಲ್ಲಿ ಸಿಗುವ ಸಿದ್ಧವಿರುವ ಬತ್ತಿ, ಹಾಗೆಯೇ ಸನಾತನ-ನಿರ್ಮಿತ ಸಾತ್ತ್ವಿಕ ಹತ್ತಿಯ ಬತ್ತಿಗಳನ್ನು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಉಪಕರಣವನ್ನು ಉಪಯೋಗಿಸಿ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

 

ಯು.ಎ.ಎಸ್. ಉಪಕರಣ ದಿಂದ ಪರೀಕ್ಷಿಸುತ್ತಿರುವ ಶ್ರೀ. ಆಶೀಷ ಸಾವಂತ

 

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮಾರುಕಟ್ಟೆಯಿಂದ ಖರೀದಿಸಿ ತಂದಿರುವ ಬತ್ತಿಗಳಲ್ಲಿ ಬಹಳ ಹೆಚ್ಚು ನಕಾರಾತ್ಮಕ ಊರ್ಜೆ ಮತ್ತು ಅತ್ಯಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಸೌ. ಸುಜಾತಾ ರೇಣಕೆ ಮತ್ತು ಅವರ ಸಂಬಂಧಿಕರು ಮನೆಯಲ್ಲಿ ತಯಾರಿಸಿದ ಬತ್ತಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಹಾಗೆಯೇ ಸನಾತನ ನಿರ್ಮಿತ ಬತ್ತಿಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ ಮತ್ತು ಅತೀ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಎಲ್ಲ ಬತ್ತಿಗಳ ನಿರೀಕ್ಷಣೆಯನ್ನು ಮುಂದೆ ನೀಡಲಾಗಿದೆ.

ಟಿಪ್ಪಣಿ ೧ – ಶ್ರೀಮತಿ ಲಲಿತಾ ಹನುಮಂತ ಸದರೆ, ಶಿವಮೊಗ್ಗ, ಕರ್ನಾಟಕ (ಸೌ. ಸುಜಾತಾ ರೇಣಕೆಯವರ ಚಿಕ್ಕಮ್ಮ) ಇವರು ತಯಾರಿಸಿದ ಬತ್ತಿಗಳನ್ನು ಕಳೆದ ೧೧ ವರ್ಷಗಳಿಂದ ಸೌ. ಸುಜಾತಾ ರೇಣಕೆಯವರು ಜೋಪಾನ ಮಾಡಿಟ್ಟಿದ್ದಾರೆ.

ಟಿಪ್ಪಣಿ ೨ – ಸೌ. ಸುಜಾತಾ ರೇಣಕೆಯವರು ೨ ವರ್ಷಗಳ ಹಿಂದೆ ಕೈಯಿಂದ ಹತ್ತಿಯ ನೂಲು ತೆಗೆದು ಕೈಮೇಲೆ ತಿಕ್ಕಿ ಈ ಬತ್ತಿಗಳನ್ನು ತಯಾರಿಸಿದ್ದಾರೆ.

ಟಿಪ್ಪಣಿ ೩ – ಶ್ರೀಮತಿ ಸುಲೋಚನಾ ಶಂಕರರಾವ್‌ ಖಟಾವಕರ ಶಿವಮೊಗ್ಗ, (ಸೌ. ಸುಜಾತಾ ರೇಣಕೆಯವರ ತಾಯಿ) ಇವರು ತಯಾರಿಸಿದ ಬತ್ತಿಗಳನ್ನು ಕಳೆದ ೨೬ ವರ್ಷಗಳಿಂದ, ಸೌ. ಸುಜಾತಾ ರೇಣಕೆಯವರು ಜೋಪಾನಮಾಡಿ ಇಟ್ಟುಕೊಂಡಿದ್ದಾರೆ.

ನಿಷ್ಕರ್ಷ:

ಮೇಲಿನ ನಿರೀಕ್ಷಣೆಯಿಂದ ಮಾರುಕಟ್ಟೆಯಲ್ಲಿನ ಬತ್ತಿ ಗಳಿಗಿಂತ ಮನೆಯಲ್ಲಿ ತಯಾರಿಸಿದ ಮತ್ತು ಮನೆಯಲ್ಲಿ ತಯಾರಿಸಿದ ಬತ್ತಿಗಳಿಗಿಂತ ಸನಾತನ-ನಿರ್ಮಿತ ಬತ್ತಿಗಳಲ್ಲಿ ಹೆಚ್ಚು ಸಾತ್ವಿಕತೆ (ಸಕಾರಾತ್ಮಕ ಊರ್ಜೆ) ಇರುವುದು ಕಂಡು ಬಂದಿತು.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಮಾರುಕಟ್ಟೆಯಿಂದ ಖರೀದಿಸಿ ತಂದಿರುವ ಬತ್ತಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಕಾರಣ : ಮಾರುಕಟ್ಟೆಯಲ್ಲಿನ ಹತ್ತಿಯ ಬತ್ತಿಗಳನ್ನು ವ್ಯಾಪಾರದ (ಬಿಸನೆಸ್) ದೃಷ್ಟಿಯಿಂದ ತಯಾರಿಸಿರುತ್ತಾರೆ, ಹಾಗೆಯೇ ಬತ್ತಿಗಳನ್ನು ತಯಾರಿಸುವ ಸ್ಥಳ, ಅವುಗಳನ್ನು ತಯಾರಿಸುವ ವ್ಯಕ್ತಿಗಳು, ಅಲ್ಲಿನ ಪರಿಸರ, ಬತ್ತಿಗಳನ್ನು ತುಂಬಿಡುವ ಪದ್ಧತಿ ಇತ್ಯಾದಿಗಳು ಸಾತ್ತ್ವಿಕ ಇಲ್ಲದ ಕಾರಣ ಅವುಗಳ ಮೇಲೆ ತೊಂದರೆದಾಯಕ ಆವರಣ ಬರುತ್ತದೆ, ಹಾಗೆಯೇ ಇಂದಿನ ವಾತಾವರಣ ಬಹಳ ಹೆಚ್ಚು ರಜತಮ ಪ್ರಧಾನವಾಗಿದ್ದರಿಂದ ವಸ್ತುಗಳ ಮೇಲೆ ತೊಂದರೆದಾಯಕ ಆವರಣ ಬರುತ್ತದೆ ಆದುದರಿಂದ ಹೊರಗಿನಿಂದ ಯಾವುದೇ ವಸ್ತುಗಳನ್ನು ಮನೆಗೆ ತಂದಾಗ ಅವುಗಳನ್ನು ಶುದ್ಧಿಗೊಳಿಸಿಯೇ ಬಳಸಬೇಕು.

೨ ಆ. ಸೌ. ಸುಜಾತಾ ರೇಣಕೆ ಮತ್ತು ಅವರ ಸಂಬಂಧಿಕರು ಮನೆಯಲ್ಲಿ ತಯಾರಿಸಿದ ಬತ್ತಿಗಳಲ್ಲಿ ಇಂದಿಗೂ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಉಳಿದುಕೊಂಡಿದೆ : ಇದು ವೈಶಿಷ್ಟ್ಯಪೂರ್ಣವಾಗಿದೆ. ಸೌ. ಸುಜಾತಾ ರೇಣಕೆ ಮತ್ತು ಅವರ ಸಂಬಂಧಿಕರು ಹತ್ತಿಯ ಬತ್ತಿಗಳನ್ನು ತಯಾರಿಸುವಾಗ ದೇವರ ನಾಮಸ್ಮರಣೆಯನ್ನು ಮಾಡುತ್ತಾ ಭಾವಪೂರ್ಣವಾಗಿ ತಯಾರಿಸುತ್ತಾರೆ. ಈ ಮೂವರು ದೇವರಿಗೆ ಗಂಧವನ್ನು ತೇಯುವ ಸಾಣೆಕಲ್ಲಿನ ಮೇಲೆ ಅಥವಾ ಕೈಮೇಲೆ ಬತ್ತಿಗಳನ್ನು ತಯಾರಿಸುತ್ತಾರೆ. ಬತ್ತಿಗಳನ್ನು ತಯಾರಿಸುವಾಗ ಅವರು ದೇವರ ನಾಮಸ್ಮರಣೆಯನ್ನು ಮಾಡುತ್ತಾ ತಯಾರಿಸುವುದರಿಂದ ಬತ್ತಿಗಳು ಆ ದೇವತೆಯ ಚೈತನ್ಯದಿಂದ ತುಂಬಿಕೊಳ್ಳುತ್ತವೆ. ಈ ಬತ್ತಿಗಳ ಮೇಲೆ ಕೆಲವೊಂದು ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುವುದರಿಂದ ಅವುಗಳಲ್ಲಿ ಸ್ವಲ್ಪ ನಕಾರಾತ್ಮಕ ಊರ್ಜೆ ಕಂಡುಬಂದಿತು.

೨ ಇ. ಸನಾತನ-ನಿರ್ಮಿತ ಬತ್ತಿಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಊರ್ಜೆ ಇತ್ತು : ಸನಾತನ-ನಿರ್ಮಿತ ಬತ್ತಿಗಳನ್ನು ಸನಾತನದ ಸಾಧಕಿಯರು ದೇವರ ನಾಮಸ್ಮರಣೆಯನ್ನು ಮಾಡುತ್ತಾ ಸಾತ್ತ್ವಿಕ ಸ್ಥಳದಲ್ಲಿ ತಯಾರಿಸುತ್ತಾರೆ. ಹಾಗೆಯೇ ಬತ್ತಿಗಳನ್ನು ತುಂಬಿಡುವ ಪದ್ಧತಿಯೂ ಅಚ್ಚುಕಟ್ಟಾಗಿದೆ. ಈ ಬತ್ತಿಗಳನ್ನು ತಯಾರಿಸುವ ಉದ್ದೇಶವು ವ್ಯವಸಾಯಿಕವಾಗಿರದೇ, ಸಮಾಜಕ್ಕೆ ಸಾತ್ತ್ವಿಕತೆ ಸಿಗಬೇಕು’ ಎನ್ನುವುದಾಗಿದೆ. ಈ ಕಾರಣಗಳಿಂದಾಗಿ, ಸನಾತನ-ನಿರ್ಮಿತ ಹತ್ತಿಯ ಬತ್ತಿಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಬದಲಿಗೆ ಅತ್ಯಧಿಕ ಸಕಾರಾತ್ಮಕ ಊರ್ಜೆಯಿತ್ತು.

೩. ಹತ್ತಿಯ ಬತ್ತಿಗಳನ್ನು ಶುದ್ಧ ಮಾಡಿಯೇ ದೇವರ ಪೂಜೆಗೆ ಉಪಯೋಗಿಸಬೇಕು !

ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಹತ್ತಿಯ ಬತ್ತಿಗಳನ್ನು ತಯಾರಿಸುವಾಗ ಅವುಗಳನ್ನು ಕೈಮೇಲೆ ಅಥವಾ ಗಂಧ ತೇಯುವ ಸಾಣೆಕಲ್ಲಿನ ಮೇಲೆ, ದೇವರ ನಾಮಸ್ಮರಣೆಯನ್ನು ಮಾಡುತ್ತಾ ಭಾವಪೂರ್ಣವಾಗಿ ತಯಾರಿಸಿದರೆ ಮತ್ತು ಅವುಗಳನ್ನು ಅಚ್ಚುಕಟ್ಟಾಗಿ ತುಂಬಿಟ್ಟರೆ ಅವು ಸಾತ್ತ್ವಿಕವಾಗಿಯೇ ಉಳಿಯುತ್ತವೆ. ಅವುಗಳ ಸಾತ್ತ್ವಿಕತೆಯನ್ನು ಕಾಪಾಡಲು ಅವುಗಳ ಶುದ್ಧೀಕರಣವನ್ನು ಮಾಡಬೇಕು. ಇದಕ್ಕಾಗಿ ಅವುಗಳಿಗೆ ಬಿಸಿಲು ತೋರಿಸುವುದು ಅಥವಾ ಸಾತ್ತ್ವಿಕ ಊದುಬತ್ತಿಯ ಹೊಗೆಯಿಂದ ಶುದ್ಧೀಕರಣವನ್ನು ಮಾಡ ಬಹುದು. ಇದರಿಂದ ಬತ್ತಿಗಳ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗುತ್ತದೆ.’

– ಶ್ರೀ. ಗಿರೀಶ ಪಂಡಿತ ಪಾಟೀಲ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೮.೨೦೨೩)