‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಚಿಕಿತ್ಸೆ !’ (ಲೇಖನಮಾಲೆ ೭) !
ಈಗಿನ ಒತ್ತಡಮಯ ಜೀವನಶೈಲಿಯಲ್ಲಿ ಯಾರು ಕೂಡ ಸಾಂಕ್ರಾಮಿಕ ಕಾಯಿಲೆ ಅಥವಾ ಇತರ ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಿರುವಾಗ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಊಹಿಸಲು ಸಾಧ್ಯವಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ. ಈ ಚಿಕಿತ್ಸಾಪದ್ಧತಿಯನ್ನು ಮನೆಯಲ್ಲಿಯೇ ಹೇಗೆ ಅವಲಂಬಿಸಬೇಕು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಶೇಖರಣೆ ಮಾಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ಕಳೆದ ವಾರದ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ‘ಮನೆಯಲ್ಲಿ ಉಪಯೋಗಿಸುವ ಯಾವ ಔಷಧಗಳನ್ನು ಎಷ್ಟು ಪ್ರಮಾಣದಲ್ಲಿಟ್ಟುಕೊಳ್ಳಬೇಕು ? ಮತ್ತು ಔಷಧಗಳನ್ನು ಹೇಗೆ ಶೇಖರಣೆ ಮಾಡಬೇಕು ?’, ಮುಂತಾದ ವಿಷಯಗಳ ಮಾಹಿತಿಯನ್ನು ಓದಿದೆವು. ಇಂದು ಅದರ ಮುಂದಿನ ಭಾಗವನ್ನು ಮುಂದಿಡುತ್ತಿದ್ದೇವೆ.
೭ ಈ. ಮನೆಯಲ್ಲಿ ಸಂಗ್ರಹಿಸಿದ (collected) ಔಷಧಗಳ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು ? : ನಮ್ಮ ಉಪಯೋಗಕ್ಕಾಗಿ ಹೋಮಿಯೋಪಥಿ ಔಷಧಗಳನ್ನು ಖರೀದಿಸುವಾಗ ಬಾಟ್ಲಿ ಇದ್ದರೆ, ಬಾಟ್ಲಿಗೆ ‘ಡ್ರಾಪರ್’ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಔಷಧಗಳನ್ನು ತೆಗೆದುಕೊಳ್ಳುವಾಗ ಒಂದು ೧೫ ಮಿ.ಲೀ.ನ ಗಾಳಿಯಾಡದ (Airtight) ಬಾಟ್ಲಿಯನ್ನು ತೆಗೆದುಕೊಳ್ಳಬೇಕು. ಬಾಟ್ಲಿಯನ್ನು ತೆರೆದ ನಂತರ ಅದರ ಮುಚ್ಚಳವನ್ನು ಪುನಃ ಗಟ್ಟಿಯಾಗಿ ಹಾಕಿಡುವುದು ಆವಶ್ಯಕವಾಗಿರುತ್ತದೆ. ಏಕೆಂದರೆ ಹೋಮಿಯೋಪಥಿ ಔಷಧಗಳ ಅಂಶ ಕಳೆದುಕೊಳ್ಳುವ ಸಾಧ್ಯತೆ ಯಿರುತ್ತದೆ. ಆದ್ದರಿಂದ ನಾವು ಔಷಧಗಳನ್ನು ಸಂಗ್ರಹಿಸಿದ ನಂತರ ಪ್ರತಿ ೫-೬ ತಿಂಗಳಿಗೊಮ್ಮೆ ಆ ಬಾಟ್ಲಿಯಿಂದ ಔಷಧದ ಅಂಶ ಕಳೆದುಕೊಂಡಿಲ್ಲ ತಾನೇ, ಎಂಬುದನ್ನು ಬಾಟ್ಲಿಯನ್ನು ತೆರೆಯದೆ ನೋಡಬೇಕು. ಒಂದು ವೇಳೆ ಹಾಗೆ ಆಗುತ್ತಿದ್ದಲ್ಲಿ ಮತ್ತು ಅಕ್ಕಪಕ್ಕದಲ್ಲಿ ಆ ಔಷಧ ಸಿಗದಿದ್ದರೆ, ಒಂದು ಬಾಟ್ಲಿಗೆ ಆ ಔಷಧದ ‘ಲೇಬಲ್’ ಹಚ್ಚಿ ಆ ಬಾಟ್ಲಿಯಲ್ಲಿ ಸಕ್ಕರೆಯ ಮಾತ್ರೆಗಳನ್ನು ತುಂಬಿಸಿ ಅದರ ಮೇಲೆ ಆ ಔಷಧದ ಹನಿಗಳನ್ನು ಹಾಕಿ ‘ಲೇಬಲ್’ ಹಚ್ಚಿದ ಪ್ಲಾಸ್ಟಿಕ್‌ನ ಚೀಲದಲ್ಲಿ ಅದನ್ನು ಇಡಬೇಕು. ಏಕೆಂದರೆ ಎಲ್ಲ ಹೋಮಿಯೋಪಥಿ ಔಷಧಗಳು ಒಂದೇ ರೀತಿ ಕಾಣಿಸುತ್ತವೆ. ಅವುಗಳ ವಾಸನೆಯೂ ಒಂದೇ ರೀತಿ ಇರುತ್ತದೆ. ಸಕ್ಕರೆಯ ಮಾತ್ರೆಗಳು ಸಹ ಒಂದೇ ರೀತಿ ಇರುತ್ತವೆ. ಆದ್ದರಿಂದ ವಿಶಿಷ್ಟ ಔಷಧವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
೮. ಹೋಮಿಯೋಪತಿ ಚಿಕಿತ್ಸಾಪದ್ಧತಿಯ ಮಿತಿ : ಹೋಮಿಯೋಪತಿ ಚಿಕಿತ್ಸೆಯ ಅನೇಕ ಲಾಭಗಳನ್ನು ನಾವು ‘ಅಂಶ ಕ್ರ. ೪’ ರಲ್ಲಿ (ಸಂಚಿಕೆ ೨೫/೧ ರ ಕನ್ನಡ ‘ಸನಾತನ ಪ್ರಭಾತ’ದಲ್ಲಿ) ಸವಿಸ್ತಾರವಾಗಿ ತಿಳಿದುಕೊಂಡಿದ್ದೇವೆ; ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ಮಾತ್ರ ಹೊಮಿಯೋಪಥಿ ಚಿಕಿತ್ಸೆ ಮಾಡಲು ಸಾಧ್ಯವಾಗುವುದಿಲ್ಲ. ಉದಾಹರಣೆಗಾಗಿ ಕೆಲವು ಪರಿಸ್ಥಿತಿಗಳನ್ನು ಮುಂದೆ ಕೊಟ್ಟಿದ್ದೇವೆ.
ಅ. ತುರ್ತುಪರಿಸ್ಥಿತಿಯಲ್ಲಿನ (Emergency) ಶಾರೀರಿಕ ಸ್ಥಿತಿ, ಉದಾ. ಅಪಘಾತ, ಉಸಿರುಗಟ್ಟುವುದು (suffocation), ಶ್ವಾಸವಿರೋಧ (asphyxia), ನೀರಿನಲ್ಲಿ ಮುಳುಗುವುದು, (drowning), ಮಿಂಚು ಮೈಮೇಲೆ ಬೀಳುವುದು, ರಕ್ತ ಹೆಪ್ಪುಗಟ್ಟುವುದು (frostbite)
ಆ. ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿರುವುದು, ಉದಾ. ರಕ್ತವಾಹಿನಿಗಳಲ್ಲಿ ಬಿರುಕು (rupture of blood vessels), ಅವಯವಗಳು ಮುರಿಯುವುದು (rupture of organs), ಉದಾ. ಅಪೆಂಡಿಕ್ಸ್ ಒಡೆಯುವುದು (rupture of appendix), ಮೂತ್ರ ಕಲ್ಲು, ಮೂತ್ರಪಿಂಡದ ನಳಿಕೆಯಲ್ಲಿ (Ureter ದಲ್ಲಿ) ಅಥವಾ ಪಿತ್ತದ ಕಲ್ಲು ಪಿತ್ತಾಶಯದ ನಳಿಕೆಯಲ್ಲಿ ಸಿಲುಕುವುದು, ಅಸ್ಥಿಭಂಗ (Fracture of Bone) ಆಗುವುದು.
ಇ. ವಿಷಬಾಧೆ ಆಗುವುದು
ಈ. ಕೃತಕ ದೀರ್ಘಕಾಲದ (artificial chronic disease) ಕಾಯಿಲೆ ಉದಾ. ಅಲೋಪಥಿ ಉಪಚಾರದಿಂದ ನಿರ್ಮಾಣವಾದ ಕೆಲವು ಸ್ಥಿತಿಗಳು, ಉದಾ. ‘ಸ್ಟಿರಾಯಿಡ್’ ದೀರ್ಘಕಾಲ ತೆಗೆದುಕೊಳ್ಳುವುದರಿಂದ ನಿರ್ಮಾಣವಾಗುವ ‘ಕಶಿಂಗ್ಸ್ ಸಿಂಡ್ರೋಮ್’
ಉ. ಶರೀರವಿಜ್ಞಾನಶಾಸ್ತ್ರಕ್ಕೆ ಸಂಬಂಧಿಸಿದ (physiological) ಪ್ರಕ್ರಿಯೆಯ ವಿರುದ್ಧ ಹೋಗುವುದು, ಉದಾ. ಗರ್ಭಪಾತ, ಋತುಸ್ರಾವವನ್ನು ಹಿಂದೆ ಅಥವಾ ಮುಂದೆ ತರುವುದು.
೯. ಹನ್ನೆರಡುಕ್ಷಾರ ಔಷಧಗಳು
‘ಹನ್ನೆರಡುಕ್ಷಾರ ಚಿಕಿತ್ಸೆ’ಯು ಒಂದು ಸುಲಭವಾದ ಚಿಕಿತ್ಸಾ ಪದ್ಧತಿಯಾಗಿದ್ದು ಜರ್ಮನಿಯ ಡಾ. ಶುಝ್ಲರ್ (Dr.Schuessler) ಇವರು ಅದನ್ನು ವಿಕಸಿತಗೊಳಿಸಿದ್ದಾರೆ. ‘ಬಯೋಕೆಮಿಕ್’ ಈ ಶಬ್ದ ಜರ್ಮನ್ ಶಬ್ದ ‘ಬಯೋಸ್’ (Bios) ಮತ್ತು ‘ಕೆಮಿಸ್ಟ್ರಿ’ (Chemistry) ಇವುಗಳಿಂದ ತಯಾರಾಗಿದೆ. ‘ಬಯೋಸ್’ ಅಂದರೆ ಜೀವನ ಮತ್ತು ‘ಕೆಮಿಸ್ಟ್ರಿ’ ಅಂದರೆ ಪದಾರ್ಥಗಳ ಗುಣಧರ್ಮ ಮತ್ತು ಅವುಗಳ ಕ್ರಿಯೆ, ಪ್ರತಿಕ್ರಿಯೆ ಇವುಗಳಿಗೆ ಸಂಬಂಧಿಸಿದ ಶಾಸ್ತ್ರವೆಂದರೆ ‘ಬಯೋಕೆಮಿಸ್ಟ್ರಿ’ ಇದು ಜೀವನಕ್ಕೆ ಸಂಬಂಧಿಸಿದ ರಸಾಯನಶಾಸ್ತ್ರ, ಅಂದರೆ ಜೀವನರಸಾಯನಶಾಸ್ತ್ರ.
೯ ಅ. ಡಾ. ಶುಝ್ಲರ್ ಇವರ ಹನ್ನೆರಡುಕ್ಷಾರ ಚಿಕಿತ್ಸಾಪದ್ಧತಿಯ ಸಿದ್ಧಾಂತ (Theory of Biochemic System)
೯ ಅ ೧. ಇಂದ್ರಿಯಗಳ ರಚನೆ ಮತ್ತು ಚೇತನಾಶಕ್ತಿ ಇವು ಶರೀರಕ್ಕೆ ಆವಶ್ಯಕವಿರುವ ಕೆಲವು ಘಟಕಗಳ ಯೋಗ್ಯ ಪ್ರಮಾಣವನ್ನು ಅವಲಂಬಿಸಿರುತ್ತವೆ. ಈ ಘಟಕಗಳೆಂದರೆ ಜೀವಕೋಶಗಳಲ್ಲಿರುವ ಅಜೈವಿಕ (inorganic) ಪದಾರ್ಥ. ಈ ಅಜೈವಿಕ ಪದಾರ್ಥಗಳಿಂದ ಇಂದ್ರಿಯಗಳ ಕಾರ್ಯ
ಮತ್ತು ಅಖಂಡತ್ವವನ್ನು ಯೋಗ್ಯ ರೀತಿಯಲ್ಲಿ ಸಮತೋಲನಗೊಳಿಸಲಾಗುತ್ತದೆ.
೯ ಅ ೨. ಮರಣದ ನಂತರ ಮಾನವನ ದೇಹವನ್ನು ದಹನ ಮಾಡಿದ ನಂತರ ೧೨ ಖನಿಜಗಳು ಮಾತ್ರ ಬಾಕಿ ಉಳಿಯುತ್ತವೆ. ಇವುಗಳಿಗೆ ಡಾ. ಶುಲ್ಝರ್ ಇವರು ‘ಟಿಶ್ಯು ಸಾಲ್ಟ್ಸ್’ (Tissue salts) ಎಂದು ಹೇಳಿದ್ದಾರೆ. ಇವುಗಳಿಂದಲೇ ಶರೀರದ ಜೀವಂತಿಕೆ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಲಾಗುತ್ತದೆ. ಶರೀರದಲ್ಲಿ ವಿವಿಧ ಅಜೈವಿಕ (inorganic) ಪದಾರ್ಥಗಳು ಬೇರೆಬೇರೆ ಪ್ರಮಾಣದಲ್ಲಿದ್ದು ಪ್ರತಿಯೊಂದರ ಒಂದು ವಿಶಿಷ್ಟ ಕಾರ್ಯವಿರುತ್ತದೆ. ಇವುಗಳಲ್ಲಿ ಯಾವುದೇ ಕ್ಷಾರದ ಪ್ರಮಾಣ ಕಡಿಮೆಯಾದರೆ ರೋಗ ಉತ್ಪನ್ನವಾಗುತ್ತದೆ ಮತ್ತು ಆ ಕ್ಷಾರವನ್ನು ಯೋಗ್ಯ ಪ್ರಮಾಣದಲ್ಲಿ ನೀಡಿದಾಗ ವ್ಯಕ್ತಿಯ ಆರೋಗ್ಯ ಯಥಾಸ್ಥಿತಿಗೆ ಬರುತ್ತದೆ. ಈ ಕ್ಷಾರಗಳ ಕೊರತೆಯಿಂದ ಅಂಗಾಂಶಗಳಲ್ಲಿನ (ವಿಶಿಷ್ಟ ಪ್ರಕಾರದ ಜೀವಕೋಶಗಳ ಸಮೂಹ) ದಲ್ಲಿನ ಕ್ಷಾರಗಳ ರೇಣುಗಳ ಚಲನವಲನದಲ್ಲಿ (Molecular motion) ಬಾಧೆ ಉಂಟಾಗುತ್ತದೆ ಮತ್ತು ಅದರ ಪರಿಣಾಮದಿಂದ ರೋಗ ಉತ್ಪನ್ನವಾಗುತ್ತದೆ.
ಈ ಕ್ಷಾರವನ್ನು ಯೋಗ್ಯ ಪ್ರಮಾಣದಲ್ಲಿ ನೀಡಿದಾಗ ಕ್ಷಾರಗಳ ರೇಣುಗಳಲ್ಲಿನ ಚಲನವಲನ ಯೋಗ್ಯ ರೀತಿಯಲ್ಲಿ ಆಗಿ ಅಂಗಾಂಶಗಳ ಮತ್ತು ಆ ಮೂಲಕ ಇಂದ್ರಿಯಗಳ ಕಾರ್ಯ ಸುಧಾರಿಸುತ್ತದೆ. – ಡಾ. ಶುಝ್ಲರ್ ಇವರು ಈ ಕ್ಷಾರಗಳ ಸಾಮರ್ಥ್ಯವನ್ನು ಹೆಚ್ಚಿಸಿ (Potentise ಮಾಡಿ) ಹನ್ನೆರಡು ಕ್ಷಾರಗಳನ್ನು ನಿರ್ಮಿಸಿದ್ದಾರೆ.
ಇದನ್ನು ಒಂದು ಮರದ ಉದಾಹರಣೆಯಿಂದ ತಿಳಿದು ಕೊಳ್ಳೋಣ. ಶರೀರಕ್ಕೆ ಹೇಗೆ ರಕ್ತದ ಆವಶ್ಯಕತೆ ಇರುತ್ತದೆಯೋ, ಹಾಗೆಯೇ ಮರಗಳಿಗೆ ಮಣ್ಣಿನಿಂದ ಸಿಗುವ ಪೋಷಕಾಂಶ ಆವಶ್ಯಕತೆಯಿರುತ್ತದೆ. ಮರದ ಬೆಳವಣಿಗೆ ಚೆನ್ನಾಗಿ ಆಗ ಬೇಕಾದರೆ ಅದರ ಬೇರುಗಳ ಸಮೀಪದ ಮಣ್ಣಿನಲ್ಲಿ ಒಳ್ಳೆಯ ಪೋಷಣೆಯ ಘಟಕಗಳು ಯೋಗ್ಯ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಮಣ್ಣಿನಲ್ಲಿ ಯಾವುದಾದರೊಂದು ಘಟಕ ಕಡಿಮೆಯಿದ್ದರೆ, ಮರದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಆ ಘಟಕವನ್ನು ಗೊಬ್ಬರದ ಮೂಲಕ ಪೂರೈಸಿದಾಗ ಮರದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಅದೇ ರೀತಿ ಮಾನವನ ರಕ್ತದಲ್ಲಿ ಕೆಲವು ಘಟಕಗಳು ಕಡಿಮೆಯಾದರೆ, ಅದರಿಂದ ರೋಗಗಳು ಉತ್ಪನ್ನವಾಗುತ್ತವೆ ಮತ್ತು ಆ ವ್ಯಕ್ತಿಗೆ ಯೋಗ್ಯ ಕ್ಷಾರವನ್ನು ಯೋಗ್ಯ ಪ್ರಮಾಣದಲ್ಲಿ ನೀಡಿದಾಗ ರಕ್ತದಲ್ಲಿನ ಆ ಕೊರತೆ ನೀಗುತ್ತದೆ ಮತ್ತು ರೋಗಿ ನಿರೋಗಿಯಾಗುತ್ತಾನೆ.
‘ಮನೆಯಲ್ಲಿಯೆ ಮಾಡಬಹುದಾದ ‘ಹೊಮಿಯೋಪಥಿ’ ಉಪಚಾರ !’ ಈ ಮುಂಬರುವ ಗ್ರಂಥದಿಂದ ಆಯ್ದು ಕೊಂಡಿರುವ ಕೆಲವೊಂದು ಭಾಗವನ್ನು ಪ್ರತಿ ವಾರ ಲೇಖನಮಾಲೆಯ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಸ್ವಉಪಚಾರ ಮಾಡುವ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ ಮತ್ತು ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.