ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಇವರ ದಾವೆ !
ಲಾಹೋರ (ಪಾಕಿಸ್ತಾನ) – ಅಮೇರಿಕಾದ ಆಗಿನ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್ ಇವರು ಪರಮಾಣು ಪರೀಕ್ಷೆ ನಡೆಸದಿರಲು ಅವರಿಗೆ ೫೦೦ ಕೋಟಿ ಅಮೆರಿಕ ಡಾಲರ್ ಲಂಚ ನೀಡುವ ಪ್ರಸ್ತಾವ ನೀಡಿದ್ದರು, ಹೀಗಿದ್ದರೂ ಕೂಡ ೧೯೯೮ ರಲ್ಲಿ ಪರಮಾಣು ಪರೀಕ್ಷೆ ನಡೆಸಿ ಭಾರತದ ಪರಮಾಣು ಪರೀಕ್ಷೆಗೆ ನೇರ ಪ್ರತ್ಯುತ್ತರ ನೀಡಲಾಗಿತ್ತೆಂದು, ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಇವರು ದಾವೆ ಮಾಡಿದ್ದಾರೆ. ನಾಲ್ಕು ವರ್ಷದ ನಂತರ ಬ್ರಿಟನ್ ನಿಂದ ಪಾಕಿಸ್ತಾನಕ್ಕೆ ಹಿಂತಿರುಗಿದ ನಂತರ ಅವರು ಒಂದು ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಪರೀಕ್ಷೆಯ ಬಗ್ಗೆ ನವಾಜ್ ಶರೀಫ್ ಇವರು, ಒಂದುವೇಳೆ ಭಾರತವು ಪರಮಾಣು ಪರೀಕ್ಷೆ ನಡೆಸದೇ ಇದ್ದಿದ್ದರೆ ನಾವು ಕೂಡ ಮಾಡುತ್ತಿರಲಿಲ್ಲ. ಭಾರತದ ಪರಮಾಣು ಪರೀಕ್ಷೆಯಿಂದ ನಮಗೆ ಸಾರ್ವಜನಿಕರ ಒತ್ತಡ ಎದುರಿಸಬೇಕಾಯಿತು. ಆದ್ದರಿಂದ ನಾವು ನಮ್ಮ ಮೊದಲ ಪರಮಾಣು ಬಾಂಬ್ ಪರೀಕ್ಷೆ ಮಾಡಿದೆವು ಎಂದು ಹೇಳಿದರು.
೧. ನವಾಜ್ ಶರೀಫ್ ಮಾತು ಮುಂದುವರಿಸುತ್ತಾ, ನಾನು ಕ್ಲಿಂಟನ್ ಇವರಿಗೆ, ನನ್ನ ಜನನ ಪಾಕಿಸ್ತಾನದ ಭೂಮಿಯಲ್ಲಿ ಆಗಿದೆ ಮತ್ತು ನಾನು ಪಾಕಿಸ್ತಾನದ ಪರವಾಗಿ ಇಲ್ಲದಿರುವ ಯಾವುದೇ ವಿಷಯ ಸ್ವೀಕರಿಸುವುದಿಲ್ಲ’ ಎಂದು ಹೇಳಿದ್ದೆ. ಇದರ ನಂತರ ಷರೀಫ್ ಇವರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮರಾನ್ ಖಾನ್ ಇವರ ಹೆಸರು ಉಲ್ಲೇಖಿಸದೆ ಜನರನ್ನು ಉದ್ದೇಶಿಸಿ, ”ನನಗೆ ಹೇಳಿ, ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಅವರು ಅಮೆರಿಕಾದ ರಾಷ್ಟ್ರಾಧ್ಯಕ್ಷರಿಗೆ ಹೀಗೆ ಹೇಳುತ್ತಿದ್ದರೆ ?” ಎಂದು ಹೇಳಿದರು.
೨. ನವಾಜ್ ಶರೀಫ್ ಇವರು ಕಾಶ್ಮೀರ ಪ್ರಶ್ನೆ ಪರಿಹರಿಸುವ ಬಗ್ಗೆ, ನಾವು ನಮ್ಮ ಕಳೆದುಕೊಂಡಿರುವ ಸ್ಥಾಳ ಹೇಗೆ ಪಡೆಯುವುದು ? ಇದು ನಾವು ನಿಶ್ಚಯಿಸಬೇಕು. ಸ್ವತಂತ್ರ ವಿದೇಶ ನೀತಿ ಹೇಗೆ ರೂಪಿಸುವುದು? ನಮಗೆ ನಮ್ಮ ನೆರೆಯ ದೇಶಗಳ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಬ್ರಿಟನ್ ನಿಂದ ಪಾಕಿಸ್ತಾನಕ್ಕೆ ೪ ವರ್ಷದ ನಂತರ ಹಿಂತಿರುಗಿಬಂದ ನಂತರ ಜನತೆಯ ಎದುರು ತನ್ನ ಪ್ರತಿಮೆ ಬೆಳಗಿಸುವುದಕ್ಕಾಗಿ ನವಾಜ್ ಶರೀಫ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ. ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧನದ ತೂಗು ಕತ್ತಿಯ ಭಯದಲ್ಲಿ ಭ್ರಷ್ಟಾಚಾರಿ ನವಾದ ಶರೀಫ್ ಇವರ ಯೋಗ್ಯತೆ ಇನ್ನೇನಿರಲು ಸಾಧ್ಯ ? |