ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ! – ವಿಶ್ವ ಸಂಸ್ಥೆಯ ಕರೆ

11 ಲಕ್ಷ ಗಾಝಾನಿವಾಸಿಗಳ ಸ್ಥಳಾಂತರ ಅಸಾಧ್ಯ ಎಂದು ಹೇಳಿಕೆ !

ನ್ಯೂಯಾರ್ಕ್ (ಅಮೇರಿಕಾ) – ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯನ್ನು ನುಗ್ಗಿಸಲು ಪ್ರಾರಂಭಿಸಿದೆ. ಅದು ಇಲ್ಲಿ ಒತ್ತೆಯಾಳಾಗಿ ಬಂಧಿಸಿರುವ ತನ್ನ ನಾಗರಿಕರನ್ನು ಬಿಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಅದು ಗಾಝಾ ಪಟ್ಟಿಯ ಉತ್ತರ ಭಾಗದ ನಾಗರಿಕರಿಗೆ 24 ಗಂಟೆಯೊಳಗೆ ದಕ್ಷಿಣ ಗಾಝಾಕ್ಕೆ ತೆರಳುವಂತೆ ಸೂಚನೆ ನೀಡಿತ್ತು. ಇಲ್ಲಿ ಸುಮಾರು 11 ಲಕ್ಷ ಜನರು ವಾಸಿಸುತ್ತಿದ್ದಾರ. ಈ ವಿಷಯದ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಾ, ’24 ಗಂಟೆಗಳಲ್ಲಿ ಸ್ಥಳಾಂತರ ಅಸಾಧ್ಯ. ಯುದ್ಧದಲ್ಲಿಯೂ ಕೆಲವು ನಿಯಮಗಳಿರುತ್ತವೆ. ಆ ನಾಗರಿಕರಿಗೆ ವಸತಿ, ಆಹಾರ, ನೀರು ಮುಂತಾದವುಗಳ ಸಿದ್ಧತೆಯಿಲ್ಲ. ಇದು ಅಪಾಯಕಾರಿ ಮತ್ತು ಅಸಾಧ್ಯ’ ಎಂದು ಹೇಳಿದರು. ಗುಟೆರಸ್ ಇವರು ಹಮಾಸ್‌ಗೆ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಕರೆ ನೀಡಿದರು.