ಉತ್ತರ ಗಾಜಾದ ಜನರಿಗೆ 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶ !

ಇಸ್ರೇಲ್ ಗಾಜಾ ಪಟ್ಟಿಯಲ್ಲಿ ನುಗ್ಗುವ ಸಿದ್ಧತೆಯಲ್ಲಿ !

ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿರುವ 11 ಲಕ್ಷ ಮುಸಲ್ಮಾನರನ್ನು 24 ಗಂಟೆಗಳ ಒಳಗೆ ಅಲ್ಲಿಂದ ದಕ್ಷಿಣ ಭಾಗಕ್ಕೆ ತೆರಳುವಂತೆ ಆದೇಶಿಸಿದೆ. ಇದರಿಂದ ಗಾಜಾ ಪಟ್ಟಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯು, ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ದಕ್ಷಿಣ ಗಾಜಾಕ್ಕೆ ಹೋದರೆ ಅಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕಳವಳ ವ್ಯಕ್ತ ಪಡಿಸಿದೆ.

1. ಇಸ್ರೇಲ್ ವಾಯು ಮಾರ್ಗದಿಂದ ಗಾಜಾ ಪಟ್ಟಿಯಲ್ಲಿ ಈ ಕುರಿತು ಕರಪತ್ರಗಳನ್ನು ಎಸೆದಿದೆ. ಇದರಲ್ಲಿ ಅದು `ನಿಮ್ಮನ್ನು ಮತ್ತೆ ಈ ಪ್ರದೇಶಕ್ಕೆ ಯಾವಾಗ ಕರೆಯಬೇಕು?’ ಎಂದು ನಾವು ನಿಮಗೆ ಸೂಕ್ತ ಸಮಯದಲ್ಲಿ ತಿಳಿಸುತ್ತೇವೆ. ನಿಮ್ಮನ್ನು ಹಮಾಸ ಭಯೋತ್ಪಾದಕರು, ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ, ಅವರಿಂದ ದೂರವಿರಿ.

2. ಇಸ್ರೇಲ್ ಗಾಜಾ ಗಡಿಯಲ್ಲಿ ಸದ್ಯಕ್ಕೆ ಮೂರೂವರೆ ಲಕ್ಷ ಸೈನಿಕರು, ಫಿರಂಗಿ, ಬಂದೂಕುಗಳು, ಯುದ್ಧ ಟ್ಯಾಂಕರಗಳು ಮುಂತಾದವನ್ನು ಸಂಗ್ರಹಿಸಿದೆ. ಇದನ್ನು ನೋಡಿದರೆ, ಇಸ್ರೇಲ್ ನೇರವಾಗಿ ಗಾಜಾ ಪಟ್ಟಿಯಲ್ಲಿ ನುಗ್ಗುವ ಮೂಲಕ ಕ್ರಮ ಕೈಗೊಳ್ಳಲು ಹೊರಟಿರುವುದು ಸ್ಪಷ್ಟವಾಗುತ್ತಿದೆ.