ತಾಲಿಬಾನ್, ಬೊಕೊ ಹರಾಮ್ ಮುಂತಾದ ಭಯೋತ್ಪಾದಕ ಸಂಘಟನೆಗಳಿಗು ಕೂಡ ಇಸ್ರೆಲ್ ವಿರುದ್ಧ ಹೋರಾಡುವಂತೆ ಕರೆ !
ತೆಲ್ ಅವಿವ (ಇಸ್ರೆಲ್) – ಇಸ್ರೆಲ್ಅನ್ನು ಬೆಂಬಲಿಸುವ ದೇಶದ ಹೆಚ್ಚುತ್ತಿರುವ ಸಂಖ್ಯೆಯ ಹಿನ್ನೆಲೆಯಲ್ಲಿ ಚೇಚನ್ಯ ಈಗ ಹಮಾಸದ ಪರವಾಗಿ ಹೋರಾಡುವ ನಿರ್ಣಯ ತೆಗೆದುಕೊಂಡಿದೆ. ಚೇಚನ್ಯದ ನಾಯಕ ರಮಜಾನ ಅಕಮಾಡೋವಿಚ್ ಕಾದಿರಾವ್ಯ ಅಲಿಯಾಸ್ ಲ್ಯುಲ್ಯಾ ಇವನು ಪಶ್ಚಿಮಾತ್ಯ ದೇಶಗಳಿಗೆ ಪಾಠ ಕಲಿಸುವುದಕ್ಕಾಗಿ ಅಪಾಯಕಾರಿ ಯೋಜನೆ ರೂಪಿಸಿದೆ. ಆದ್ದರಿಂದ ಪರಿಸ್ಥಿತಿ ಇನ್ನೂ ಹದಗೆಡುವ ಲಕ್ಷಣಗಳು ತೋರುತ್ತವೆ. ಲ್ಯುಲ್ಯ ಸಿರಿಯಾದ ಯುದ್ಧದಲ್ಲಿ ತೊಡಗಿರುವ ಮುಸಲ್ಮಾನರಿಗೆ ಪ್ರಚೋದನೆ ನೀಡಿ ಮಧ್ಯ ಮತ್ತು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಯುದ್ಧದ ಶಂಖನಾದ ಮಾಡಿದೆ. ಇದರಲ್ಲಿ ಬೊಕೋ ಹರಾಮ್ ಹಿಜ್ಬುಲ್ಲ ,ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಈ ರೀತಿಯ ಅನೇಕ ಭಯೋತ್ಪಾದಕ ಸಂಘಟನೆಗಳಿಗೆ ಗಾಜಾದಲ್ಲಿನ ಯುದ್ಧದಲ್ಲಿ ಸಹಭಾಗಿ ಆಗಲು ಕರೆ ನೀಡಿದೆ.