ಇಸ್ರೇಲ್‌ನಲ್ಲಿ ‘ಏಕತೆ ಸರಕಾರ’ ಸ್ಥಾಪನೆ ! 

ತೆಲ್ ಅವಿವ (ಇಸ್ರೇಲ್) – ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ಉರಿತು ನಿಗಾವಹಿಸಲು ಇಸ್ರೇಲ್ ಸರಕಾರವು ‘ಏಕತೆ ಸರಕಾರ’ (ಯುನಿಟಿ ಗೌರ್ನಮೆಂಟ್) ಮತ್ತು ‘ಯುದ್ಧ ಮಂತ್ರಿಮಂಡಳ’ ಅನ್ನು ಸ್ಥಾಪಿಸಿದೆ. ಈ ಹೊಸ ಸರಕಾರದಲ್ಲಿ ವಿರೋಧ ಪಕ್ಷಗಳೂ ಸೇರಿಕೊಂಡಿವೆ. 1973ರ ನಂತರ ಇದೇ ಮೊದಲಬಾರಿ ಆಗುತ್ತಿದೆ. ‘ಏಕತೆ ಸರಕಾರ’ ಎಂದರೆ ಎಲ್ಲಾ ಪಕ್ಷಗಳನ್ನು ಒಳಗೊಂಡ ಸರಕಾರ. ಇದನ್ನು ಯುದ್ಧದ ಸಮಯದಲ್ಲಿ ಸ್ಥಾಪಿಸಲಾಗುತ್ತದೆ. ಇದರಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ರಕ್ಷಣಾ ಸಚಿವರು ಇರುತ್ತಾರೆ.

ಇಸ್ರೇಲ್‌ನಲ್ಲಿರುವ ಎಲ್ಲಾ 18 ಸಾವಿರ ಭಾರತೀಯರನ್ನು ಭಾರತ ಮನೆಗೆ ಕರೆತರಲಿದೆ !

ಇಸ್ರೇಲ್‌ನಲ್ಲಿ ಸಿಲುಕಿರುವ 18 ಸಾವಿರ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತ ಸರಕಾರವು ‘ಆಪರೇಷನ್ ಅಜಯ’ ಎಂಬ ಅಭಿಯಾನವನ್ನು ನಿರ್ಮಿಸಿದೆ. ಇದಕ್ಕಾಗಿ ಅಕ್ಟೋಬರ್ 12 ರಂದು ಮೊದಲ ವಿಮಾನ ಹೊರಟಿದೆ. ಭಾರತೀಯ ನೌಕಾಪಡೆ ಕೂಡ ಸಹಾಯಕ್ಕೆ ಸಿದ್ಧವಾಗಲಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಮಾತನಾಡುತ್ತಾ, ಭಾರತ ಸರಕಾರವು ‘ಆಪರೇಷನ್ ಅಜಯ’ ಅಡಿಯಲ್ಲಿ ಭಾರತೀಯರನ್ನು ಮರಳಿ ಕರೆತರಲಿದೆ ಎಂದು ಹೇಳಿದ್ದಾರೆ. ಯಾರು ಮರಳಿ ಬರಲು ಬಯಸುವರೊ ಅವರು ಬರಬಹುದು ಎಂದಿದ್ದಾರೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ, ಮೊದಲ ವಿಮಾನದಲ್ಲಿ ಭಾರತಕ್ಕೆ ಬರಲು ನೋಂದಾಯಿಸಿದ ಪ್ರಯಾಣಿಕರ ವಿವರಗಳನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇತರ ನೋಂದಾಯಿತ ಪ್ರಯಾಣಿಕರ ಮಾಹಿತಿಯನ್ನು ಮುಂದಿನ ವಿಮಾನದ ಸಮಯದಲ್ಲಿ ಕಳುಹಿಸಲಾಗುತ್ತದೆ ಎಂದು ಹೇಳಿದರು.