Israel Palestine Conflict : ಇಸ್ರೇಲಿನ ಸೈನ್ಯದಿಂದ ೨೦೦ ಸ್ಥಳಗಳಲ್ಲಿ ದಾಳಿ ನಡೆಸಿ ಗಾಝಾ ಗಡಿಯಲ್ಲಿ ನಿಯಂತ್ರಣ ಸಾಧಿಸಿತು !

ಇಲ್ಲಿಯವರೆಗೆ ಒಟ್ಟು ಒಂದು ಸಾವಿರದ ೫೮೭ ಜನರ ಸಾವು !

ತೆಲ್ ಆವಿವ – ಇಸ್ರೆಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧ ಸ್ಪೋಟಗೊಂಡ ನಂತರ ಕೇವಲ ನಾಲ್ಕು ದಿನದಲ್ಲಿ ಇಸ್ರೆಲ್ ನ ಸೈನ್ಯವು ಗಾಝಾ ಗಡಿಯ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ‘ಟೈಮ್ಸ್ ಆಫ ಇಸ್ರೆಲ್’ ಈ ವಾರ್ತಾ ಪತ್ರಿಕೆಯಲ್ಲಿ ನೀಡಲಾಗಿದೆ. ಗಾಝಾ ಪಟ್ಟಿಯ ಮೇಲಿನ ೨೦೦ ಸ್ಥಳಗಳನ್ನು ಅಕ್ಟೋಬರ್ ೯ ರಂದು ರಾತ್ರಿ ಗುರಿ ಮಾಡಲಾಗಿದೆ ಎಂದು ಸೈನ್ಯ ಹೇಳಿದೆ.

೧. ಅಕ್ಟೋಬರ್ ೯ ರಂದು ಇಸ್ರಾಯಿಲ್ ಸರಕಾರ ತನ್ನ ಸೈನ್ಯಕ್ಕೆ ಸಂಪೂರ್ಣ ಗಾಝಾ ಪಟ್ಟಿ ವಶಪಡಿಸಿಕೊಳ್ಳುವ ಆದೇಶ ನೀಡಿತ್ತು. ಇಸ್ರೇಲ್ ಇಂದ ಗಾಝಾ ಗಡಿಯಲ್ಲಿ ೧ ಲಕ್ಷ ಸೈನಿಕರು ನೇಮಕಗೊಳಿಸಿದೆ ಹಾಗೂ ೩ ಲಕ್ಷ ಸೈನಿಕರಿಗೆ ಸಿದ್ಧತೆಯಲ್ಲಿರಲು ಹೇಳಿದೆ.

೨. ಇಸ್ರಯಿಲಿನ ರಕ್ಷಣಾ ಸಚಿವ ಯೋವ ಗ್ಯಾಲೆಂಟ್ ಇವರು ಕೂಡ ಗಾಜಾ ಪಟ್ಟಿಯಲ್ಲಿ ಆಹಾರ, ನೀರು, ವಿದ್ಯುತ್ ಮತ್ತು ಇಂಧನ ಪೂರೈಕೆ ನಿಲ್ಲಿಸುವ ಆದೇಶ ನೀಡಿದ್ದಾರೆ.

೩. ಹಮಾಸ್ ದಿಂದ ೧೩೦ ಇಸ್ರೇಲಿ ಜನರ ಅಪಹರಣ ಮಾಡಿರುವ ದಾವೇ ಮಾಡಿದೆ. ಅವರಿಗೆ ಗಾಝಾ ಪಟ್ಟಿಯಲ್ಲಿನ ಗೂಹೆಗಳಲ್ಲಿ ಇರಿಸಲಾಗಿದೆ. ಈ ಒತ್ತೆ ಆಳುಗಳನ್ನು ಗುರಾಣಿಯಂತೆ ಉಪಯೋಗಿಸುವರು, ಅದರಿಂದ ಇಸ್ರೇಲ್ ದಾಳಿ ನಡೆಸಿದರೆ ಅವರ ಜನರೇ ಹತರಾಗುವರು. ಇಸ್ರೇಲಿನ ರಕ್ಷಣಾ ದಳ, ಒತ್ತೆಯಾಳು ಇರಿಸಿಕೊಂಡವರಲ್ಲಿ ಮಹಿಳೆಯರು ಮಕ್ಕಳು ಮತ್ತು ಕುಟುಂಬಗಳ ಸಮಾವೇಶವಿದೆ ಎಂದು ಹೇಳಿದೆ.

೪. ಇದರ ಜೊತೆಗೆ ಲೆಬೇನ್ಯಾನಿನ ಭಯೋತ್ಪಾದಕ ಸಂಘಟನೆ ‘ಹಿಜಬುಲ್ಲ’ದಿಂದ ಅಮೆರಿಕಾಕ್ಕೆ ಬೆದರಿಕೆ ನೀಡುತ್ತಾ, ಅಮೇರಿಕ ಯುದ್ಧದಲ್ಲಿ ನೇರ ಹಸ್ತಕ್ಷೇಪ ಮಾಡಿದರೆ ಆಗ ಮಧ್ಯ ಪೂರ್ವದ ಅಮೆರಿಕ ಕೇಂದ್ರಗಳ ಮೇಲೆ ದಾಳಿ ನಡೆಸುವರು. ಪ್ಯಾಲೆಸ್ಟೈನ್ ಇದು ಉಕ್ರೇನ ಅಲ್ಲ ಎಂದು ಬೆದರಿಕೆ ಹಾಕಿದೆ.

೫. ‘ಟೈಮ್ಸ್ ಆಫ್ ಇಸ್ರೇಲ್’ನ ವಾರ್ತೆಯ ಪ್ರಕಾರ, ಇಸ್ರೇಲ್ ನಲ್ಲಿ ೭ – ೮ ಸ್ಥಳಗಳಲ್ಲಿ ಯುದ್ಧ ನಡೆಯುತ್ತಿದೆ. ಎಲ್ಲೆಲ್ಲಿ ಹಮಾಸ್ ನ ಭಯೋತ್ಪಾದಕರನ್ನು, ಓಡಿಸಲಾಗುತ್ತಿದೆ ಅಲ್ಲಲ್ಲಿ ಇಸ್ರೇಲಿನ ಶವಗಳು ದೊರೆಯುತ್ತಿವೆ.

೬. ಯುದ್ಧದಲ್ಲಿ ಇಲ್ಲಿಯವರೆಗೆ ಸುಮಾರು ೧೨೩ ಇಸ್ರೇಲಿ ಸೈನಿಕರ, ಹಾಗೂ ಒಟ್ಟು ೧ ಸಾವಿರದ ೫೮೭ ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ನಲ್ಲಿ ೯೦೦ ಜನರು ಸಾವನ್ನಪ್ಪಿದ್ದು ೨ ಸಾವಿರದ ೩೦೦ ಜನರು ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ ಗಾಜಾ ಪಟ್ಟಿಯಲ್ಲಿ ೬೮೭ ಪ್ಯಾಲಿಸ್ತಾನಿಗಳು ಹತರಾಗಿದ್ದಾರೆ ಹಾಗೂ ೩ ಸಾವಿರದ ೭೨೬ ಜನರು ಗಾಯಗೊಂಡಿದ್ದಾರೆ.

೭. ಯುದ್ಧದಲ್ಲಿ ೧೧ ಅಮೇರಿಕ ನಾಗರೀಕರು ಹಾಗೂ ೧೦ ಬ್ರಿಟಿಷ ನಾಗರೀಕರು ಹತರಾಗಿದ್ದಾರೆ. ಈ ಮೊದಲೇ ಫ್ರಾನ್ಸ್, ಜರ್ಮನಿ, ಅರ್ಜೆಂಟಿನ ಮತ್ತು ಉಕ್ರೇನ್ ಇವರು ಕೂಡ ಹಮಾಸ್ ದಾಳಿಯಲ್ಲಿ ಅವರ ನಾಗರಿಕರು ಸಾವನ್ನಪ್ಪಿರುವುದಾಗಿ ಹೇಳಿದೆ.

೮. ಅಮೇರಿಕಾದಲ್ಲಿ ಅಕ್ಟೋಬರ್ ೯ ರ ರಾತ್ರಿ ಇಸ್ರೇಲ್ ಗೆ ಬೆಂಬಲಿಸಿ ವೈಟ್ ಹೌಸ್ ಇಸ್ರೇಲ್ ಧ್ವಜದಲ್ಲಿ ಬಿಳಿ ಬಣ್ಣದ ದೀಪಗಳಿಂದ ಕಂಗೊಳಿಸಿತು. ಪ್ಯಾರಿಸ್ ನಲ್ಲಿ ಐಫೆಲ್ ಟವರ್ ನಲ್ಲಿ ಕೂಡ ಇಸ್ರೇಲ್ ರಂಗದಲ್ಲಿ ರಂಗಾಗಿರುವುದು ಕಂಡಿತು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದನೆ ಯಾವ ರೀತಿ ಮುಗಿಸಬೇಕು ? ಇದರ ಆದರ್ಶ ಇಸ್ರೆಲ್ ನಿರ್ಮಾಣ ಮಾಡುತ್ತಿದೆ ! ಭಾರತ ಕೂಡ ಇದರಿಂದ ಕಲಿಯುವುದು ಆವಶ್ಯಕವಾಗಿದೆ !