ಬುದ್ಧಿಪ್ರಾಮಾಣ್ಯವಾದಿಗಳಿಗೆ `ಮಾನವನು ವಿವಿಧ ಯಂತ್ರಗಳ ಸಂಶೋಧನೆ ಮಾಡಿದನು’, ಎಂಬುದರ ಬಗ್ಗೆ ಅಹಂಕಾರವಿರುತ್ತದೆ. ಅವರ ಗಮನಕ್ಕೆ ಬಾರದ ವಿಷಯವೆಂದರೆ; ಈಶ್ವರನು ಜೀವಾಣು, ಪಶು-ಪಕ್ಷಿ, 70-80 ವರ್ಷಗಳ ತನಕ ನಡೆಯುವ ಒಂದು ಯಂತ್ರ ಅಂದರೆ ಮಾನವನ ಶರೀರದಂತಹ ಅಬ್ಜಗಟ್ಟಲೆ ವಸ್ತುಗಳನ್ನು ಸೃಷ್ಟಿಸಿದ್ದಾನೆ. ವಿಜ್ಞಾನಿಗಳಿಗೆ ಇದರಲ್ಲಿ ಒಂದನ್ನಾದರೂ ಸೃಷ್ಟಿಸಲು ಸಾಧ್ಯವಿದೆಯೇ ?’