ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು.

ಶ್ರೀನಗರ (ಜಮ್ಮು ಕಾಶ್ಮೀರ)ದ ಶಾಲೆಯಲ್ಲಿ ಹಿಜಾಬ್ ನಿಷೇಧಿಸಿದಕ್ಕೆ ವಿದ್ಯಾರ್ಥಿನಿಗಳಿಂದ ಪ್ರತಿಭಟನೆ

ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದಲ್ಲಿ ಅಬಾಯಾ (ಬುರ್ಖಾದಂತೆ ಹೋಲುವ ಉಡುಪು) ಮತ್ತು ಹಿಜಾಬ್ ಅನ್ನು ನಿಷೇಧಿಸಿದ್ದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಶಾಲೆಯ ಪ್ರಾಚಾರ್ಯರ ಬಳಿ ಈ ಬಗ್ಗೆ ವಿಚಾರಣೆ ನಡೆಸುತ್ತಾ ಉತ್ತರ ನೀಡಲು ಹೇಳಿದ್ದಾರೆ.

ಶೀಘ್ರದಲ್ಲೇ ಜಮ್ಮು-ಕಾಶ್ಮೀರವನ್ನು ವಿಶ್ವದ ಪ್ರಮುಖ ೫೦ ಪ್ರವಾಸಿ ತಾಣಗಳಲ್ಲಿ ಸೇರ್ಪಡೆ !

ಶೀಘ್ರದಲ್ಲೇ ಜಮ್ಮು-ಕಾಶ್ಮೀರವು ವಿಶ್ವದ ಮೊದಲ ೫೦ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಲಿದೆ, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

6 ರಾಜ್ಯಗಳ 122 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ)ದಿಂದ ದಾಳಿ

ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಮೇ 17ರಂದು 6 ರಾಜ್ಯಗಳ 122 ಸ್ಥಳಗಳಲ್ಲಿ ದಾಳಿ ನಡೆಸಿತು. ಜಿಹಾದಿ ಭಯೋತ್ಪಾದಕರು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ವಿರುದ್ಧದ ಕಾರ್ಯಾಚರಣೆಯ ಅಡಿಯಲ್ಲಿ ಈ ದಾಳಿಯನ್ನು ನಡೆಸಲಾಯಿತು.