ಶ್ರೀನಗರ (ಜಮ್ಮು ಕಾಶ್ಮೀರ)ದ ಶಾಲೆಯಲ್ಲಿ ಹಿಜಾಬ್ ನಿಷೇಧಿಸಿದಕ್ಕೆ ವಿದ್ಯಾರ್ಥಿನಿಗಳಿಂದ ಪ್ರತಿಭಟನೆ

ಶಿಕ್ಷಣ ಸಚಿವರಿಂದ ಶಾಲೆಯ ಪ್ರಾಚಾರ್ಯರಿಗೆ ಈ ಕುರಿತು ಲಿಖಿತ ಉತ್ತರ ನೀಡಲು ಆದೇಶ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ)

ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದಲ್ಲಿ ಅಬಾಯಾ (ಬುರ್ಖಾದಂತೆ ಹೋಲುವ ಉಡುಪು) ಮತ್ತು ಹಿಜಾಬ್ ಅನ್ನು ನಿಷೇಧಿಸಿದ್ದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಶಾಲೆಯ ಪ್ರಾಚಾರ್ಯರ ಬಳಿ ಈ ಬಗ್ಗೆ ವಿಚಾರಣೆ ನಡೆಸುತ್ತಾ ಉತ್ತರ ನೀಡಲು ಹೇಳಿದ್ದಾರೆ.

೧. ಶಾಲೆಯ ಪ್ರಾಚಾರ್ಯ ಮೀಮಾ ರೋಜ್ ಇವರು ಹುಡುಗಿಯರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಹೇಳಿದರು. ಅವರು, ನಾನು ಅಬಾಯಾ ಅಥವಾ ಹಿಜಾಬ್ ವಿರೋಧಿ ಅಲ್ಲ. ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಹಿಜಾಬ್ ಮತ್ತು ಅಬಾಯಾ ಹಾಕಿ ಶಾಲೆಗೆ ಬರುವುದು ಉಚಿತವಲ್ಲ; ಆದಕ್ಕಾಗಿ ನಮಗೆ ಒಂದು ಯೋಗ್ಯವಾದ ಸಮವಸ್ತ್ರ ಬೇಕಾಗಿದೆ.

೨. ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದ ಸ್ಥಾಪನೆಯು ೧೯೫೧ ರಲ್ಲಿ ಆಗಿದ್ದು ಕಾಶ್ಮೀರ ಕಣಿವೆಯಲ್ಲಿ ಇದು ಎಲ್ಲಕ್ಕಿಂತ ಹಳೆಯ ಶಾಲೆಯಾಗಿದೆ. ೧೯೯೦ ರಲ್ಲಿ ಜಿಹಾದಿ ಭಯೋತ್ಪಾದಕರು ಈ ಶಾಲೆಗೆ ಬೆಂಕಿ ಹಚ್ಚಿದ್ದರು. ಈಗ ಅದು ಟ್ರಸ್ಟ್ ಮೂಲಕ ನಡೆಯುತ್ತಿದೆ. ಮುಖ್ಯ ವ್ಯವಸ್ಥಾಪಕರು ಕಾಶ್ಮೀರಿ ಹಿಂದೂ ಆಗಿದ್ದಾರೆ; ಆದರೆ ಶಾಲೆಯಲ್ಲಿ ಕಲಿಯುವ ಬಹಳಷ್ಟು ಮಕ್ಕಳು ಹಾಗೂ ಪ್ರಾಚಾರ್ಯರು ಮುಸಲ್ಮಾನರಾಗಿದ್ದಾರೆ ಎಂದು ಹೇಳಿದರು.