6 ರಾಜ್ಯಗಳ 122 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ)ದಿಂದ ದಾಳಿ

ನವ ದೆಹಲಿ – ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಮೇ 17ರಂದು 6 ರಾಜ್ಯಗಳ 122 ಸ್ಥಳಗಳಲ್ಲಿ ದಾಳಿ ನಡೆಸಿತು. ಜಿಹಾದಿ ಭಯೋತ್ಪಾದಕರು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ವಿರುದ್ಧದ ಕಾರ್ಯಾಚರಣೆಯ ಅಡಿಯಲ್ಲಿ ಈ ದಾಳಿಯನ್ನು ನಡೆಸಲಾಯಿತು. ಉತ್ತರಾಖಂಡ, ಪಂಜಾಬ, ಹರಿಯಾಣಾ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ದಾಳಿ ನಡೆಸಲಾಯಿತು.

ಕಳೆದ 3 ದಿನಗಳಲ್ಲಿ ಎನ್.ಐ.ಎ. ನಡೆಸಿದ ಇದು ಎರಡನೇಯ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಹಿಂದೆ ಎನ್.ಐ.ಎ. ಜಮ್ಮೂ-ಕಾಶ್ಮೀರದಲ್ಲಿ ಇಂತಹ ದಾಳಿಯನ್ನು ನಡೆಸಲಾಗಿತ್ತು.