ಶೀಘ್ರದಲ್ಲೇ ಜಮ್ಮು-ಕಾಶ್ಮೀರವನ್ನು ವಿಶ್ವದ ಪ್ರಮುಖ ೫೦ ಪ್ರವಾಸಿ ತಾಣಗಳಲ್ಲಿ ಸೇರ್ಪಡೆ !

  • ಜಿ-೨೦ ಪರಿಷತ್ತಿನಲ್ಲಿ ಉಪರಾಜ್ಯಪಾಲ ಮನೋಜ್ ಸಿನ್ಹಾ ಇವರ ವಿಶ್ವಾಸ !

  • ಚೀನಾ, ಸೌದಿ ಅರೇಬಿಯಾ, ತುರ್ಕಿ, ಇಂಡೋನೇಷ್ಯಾ ಮತ್ತು ಈಜಿಪ್ಟ್ ದೇಶಗಳ ಅನುಪಸ್ಥಿತಿ !

ಶ್ರೀನಗರ (ಜಮ್ಮು-ಕಾಶ್ಮೀರ) – ಶೀಘ್ರದಲ್ಲೇ ಜಮ್ಮು-ಕಾಶ್ಮೀರವು ವಿಶ್ವದ ಮೊದಲ ೫೦ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಲಿದೆ, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಜಿ-೨೦ ಯ ಅಂತರ್ಗತ ಪ್ರವಾಸೋದ್ಯಮ ಕಾರ್ಯಕಾರಿಣಿ ಸಭೆಯು ಇತ್ತೀಚೆಗೆ ಶ್ರೀನಗರದಲ್ಲಿ ನೆರವೇರಿತು. ಅದರಲ್ಲಿ ಸಿನ್ಹಾ ಅವರು ಮಾತನಾಡುತ್ತಿದ್ದರು. ಚೀನಾ, ಸೌದಿ ಅರೇಬಿಯಾ, ಟರ್ಕಿ, ಇಂಡೋನೇಷ್ಯಾ ಮತ್ತು ಈಜಿಪ್ಟ್ ಈ ದೇಶಗಳು ಸಭೆಯಲ್ಲಿ ಅನುಪಸ್ಥಿತವಾಗಿದ್ದವು.

ಸಂಪಾದಕರ ನಿಲುವು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ ೩೭೦ನ್ನು ರದ್ದುಪಡಿಸಿದ್ದರಿಂದ ಕಾಶ್ಮೀರವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಕನಸು ಭಂಗವಾದುದರಿಂದಲೇ ಇಸ್ಲಾಮಿ ದೇಶಗಳು ಈ ಪರಿಷತ್ತಿನಲ್ಲಿ ಭಾಗವಹಿಸಲಿಲ್ಲ, ಎಂಬುದನ್ನು ಗಮನಿಸಿ ! ಇದರಿಂದ ಇಸ್ಲಾಮಿಕ್ ದೇಶಗಳಿಗೆ ವಿಶ್ವ ಮಟ್ಟದ ಸಂಘಟನೆಗಿಂತ ತಮ್ಮ ಧರ್ಮ ಹೆಚ್ಚು ಮಹತ್ವದು ಎಂದು ಅನಿಸುತ್ತದೆ ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ. ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಏಕೆ ಬಾಯಿಮುಚ್ಚಿಕೊಂಡಿದ್ದಾರೆ ?