ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದಿಂದ ಕಳೆದ ವರ್ಷದಲ್ಲಿ ವಿವಿಧ ಭಾಷೆಗಳಲ್ಲಿ ಸನಾತನದ ೩೦ ಹೊಸ ಗ್ರಂಥ-ಕಿರುಗ್ರಂಥಗಳ ಮುದ್ರಣ ಮತ್ತು ೩೫೭ ಗ್ರಂಥಗಳು-ಕಿರುಗ್ರಂಥಗಳ ಪುನರ್‍ಮುದ್ರಣ !

ಮುಂಬರಲಿರುವ ಕಾಲ ‘ಕೊರೊನಾ’ ಮಹಾಮಾರಿಗಿಂತಲೂ ಮಹಾಭಯಾನಕ ಸಂಕಟದ ಕಾಲವಿರಲಿದೆ. ಈ ಕಾಲದಲ್ಲಿ ಕೇವಲ ‘ಧರ್ಮಾಚರಣೆ ಮತ್ತು ಸಾಧನೆ’ ಇದೇ ಮಾನವನನ್ನು ರಕ್ಷಿಸುವುದು. ಕಾಲಾನುಸಾರ ಯೋಗ್ಯ ಧರ್ಮಾಚರಣೆ ಮತ್ತು ಕೃತಿಯ ಸ್ತರದ ಸಾಧನೆಯನ್ನು ಕೇವಲ ಸನಾತನದ ಗ್ರಂಥಗಳು ಮಾತ್ರ ಕಲಿಸುತ್ತವೆ.

ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು

ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮಥ್ರ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ.

ಯುಗಾದಿಯ ವಿಷಯದಲ್ಲಿ ಮಹಾಭಾರತದಲ್ಲಿರುವ ಕಥೆ

ಇದನ್ನೇ ಇಂದಿನ ಬ್ರಹ್ಮಧ್ವಜದ ಮೂಲಸ್ವರೂಪವೆಂದು ಹೇಳಲಾಗುತ್ತದೆ. ಪಾಡ್ಯದ ಈ ಉತ್ಸವವು ಹೊಸ ವರ್ಷದ ಪ್ರಾರಂಭವಾಗಿರುವುದರಿಂದ ಈ ದಿನವನ್ನು ಸಂತೋಷದಿಂದ ಆಚರಿಸಿದರೆ ಮುಂದಿನ ವರ್ಷವೆಲ್ಲ ಆನಂದಮಯವಾಗಿರುತ್ತದೆಯೆಂದು ನಂಬಲಾಗುತ್ತದೆ.

ವರ್ಷಾರಂಭದಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿ ಸ್ವಭಾಷಾಭಿಮಾನವನ್ನು ಕಾಪಾಡಿರಿ !

ಭಾಷಾಶುದ್ಧಿಯ ವ್ರತವನ್ನು ಅಂಗೀಕರಿಸುವುದು ಎಂದರೆ ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ.

ಹಿಂದೂಗಳ ಮತ್ತು ಇತರ ಪಂಥದವರ ಕಾಲಗಣನೆ

‘ಹೋರಾ’ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ. ಪ್ರತಿಯೊಂದು ಘಟಕವು ೨೪ ನಿಮಿಷಗಳದ್ದಾಗಿರುತ್ತದೆ. ಆದ್ದರಿಂದ ಎರಡೂವರೆ ಘಟಕಗಳ ಒಂದು ಗಂಟೆಯಾಗುತ್ತದೆ. ಈ ಗಂಟೆಗೆ ಆಂಗ್ಲ ಭಾಷೆಯಲ್ಲಿ ‘ಅವರ್’ (Hour) ಎನ್ನುತ್ತಾರೆ. ಆ ಶಬ್ದವು ‘ಹೋರಾ’ದಿಂದಲೇ ಬಂದಿದೆ.

ಯುಗಾದಿಯ ಪ್ರಾಚೀನತೆಯನ್ನು ಹೇಳುವ ಕೆಲವು ಕಥೆಗಳು

ಮಹಾಭಾರತದ ಖಿಲಪರ್ವದಲ್ಲಿ ಕೃಷ್ಣನು ಇಂದ್ರನ ಕ್ರೋಧವನ್ನು ಪರಿಗಣಿಸದೇ ವಾರ್ಷಿಕ ಶಕ್ರೋತ್ಸವ (ಇಂದ್ರೋತ್ಸವ)ವನ್ನು ಸ್ಥಗಿತಗೊಳಿಸುವಂತೆ ಉಪದೇಶಿಸುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಈ ಉತ್ಸವವನ್ನು ವರ್ಷದ ಪಾಡ್ಯದಂದು ಆಚರಿಸುವಂತೆ ತಿಳಿಸಲಾಗಿದೆ.