ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದಿಂದ ಕಳೆದ ವರ್ಷದಲ್ಲಿ ವಿವಿಧ ಭಾಷೆಗಳಲ್ಲಿ ಸನಾತನದ ೩೦ ಹೊಸ ಗ್ರಂಥ-ಕಿರುಗ್ರಂಥಗಳ ಮುದ್ರಣ ಮತ್ತು ೩೫೭ ಗ್ರಂಥಗಳು-ಕಿರುಗ್ರಂಥಗಳ ಪುನರ್‍ಮುದ್ರಣ !

ಪರಾತ್ಪರ ಗುರು ಡಾ. ಆಠವಲೆ

‘ಅಖಿಲ ಮನುಕುಲದ ಉದ್ಧಾರಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬ್ರಹ್ಮಧ್ವಜವನ್ನು ಎತ್ತಿ ಹಿಡಿಯಲು ಅಹರ್ನಿಷಿ ಕಾರ್ಯನಿರತರಾಗಿರುವ ಮಹಾನ ವಿಭೂತಿಯೆಂದರೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ! ‘ಹಿಂದೂ ರಾಷ್ಟ್ರ’ ಇದು ಧರ್ಮದ ಅಧಿಷ್ಠಾನದ ಮೇಲೆಯೇ ನಿಲ್ಲಲಿರುವುದರಿಂದ, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲೆಡೆ ಧರ್ಮ ಪ್ರಸಾರದ ಕಾರ್ಯಗಳಾಗುವುದು ಅತ್ಯಂತ ಅವಶ್ಯಕತೆಯಾಗಿದೆ.  ಧರ್ಮ ಪ್ರಸಾರದ ಕಾರ್ಯವಾಗುವಲ್ಲಿ ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇವುಗಳ ಪೈಕಿ ಜ್ಞಾನಶಕ್ತಿಯ ಯೋಗದಾನ ಅತ್ಯಧಿಕವಾಗಿದೆ. ಜ್ಞಾನಶಕ್ತಿಯ ಮಾಧ್ಯಮದಿಂದ ಕಾರ್ಯವಾಗುವ ಎಲ್ಲಕ್ಕಿಂತ ಹೆಚ್ಚು ಪ್ರಭಾವಿ ಮಾಧ್ಯಮಗಳೆಂದರೆ ‘ಗ್ರಂಥಗಳು’.

೧. ಆಪತ್ಕಾಲದ ಹಿನ್ನೆಲೆಯಲ್ಲಿ ಅತ್ಯಧಿಕ ಗ್ರಂಥಗಳನ್ನು ಪ್ರಸಾರ ಮಾಡುವ ವಿಷಯದಲ್ಲಿ ಪರಾತ್ಪರ ಗುರು ಡಾ. ಜಯಂತ  ಆಠವಲೆಯವರಿಂದ ಆಗಿರುವ ಅವ್ಯಕ್ತ ಸಂಕಲ್ಪ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸುಮಾರು ೧ ವರ್ಷಗಳ ಹಿಂದೆ, ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಘೋರ ಆಪತ್ಕಾಲ ಪ್ರಾರಂಭವಾಗುವ ಮೊದಲೇ ‘ಗ್ರಂಥಗಳ ಮಾಧ್ಯಮದಿಂದ ಹೆಚ್ಚೆಚ್ಚು ಧರ್ಮಪ್ರಸಾರ ಮಾಡುವುದು’ ಇಂದಿನ ಕಾಲದ ಶ್ರೇಷ್ಠ ಸಾಧನೆಯಾಗಿದೆ !’, ಎಂದು ಹೇಳಿದ್ದರು. ಈ ರೀತಿಯಲ್ಲಿ ಪರಾತ್ಪರ ಗುರು ಡಾಕ್ಟರರ ಗ್ರಂಥನಿರ್ಮಿತಿಯ ಕಾರ್ಯವು ಅಧಿಕ ವೇಗವಾಗಿ ಆಗುವ ದೃಷ್ಟಿಯಿಂದ ಒಂದು ರೀತಿಯಲ್ಲಿ ಅವ್ಯಕ್ತ ಸಂಕಲ್ಪವೇ ಆಗಿದೆ. ಈ ಸಂಕಲ್ಪದ ಫಲಶ್ರುತಿಯೆಂದು ಕಳೆದ ವರ್ಷವಿಡೀ ಸನಾತನದ ಗ್ರಂಥಕಾರ್ಯವು ಅನೇಕ ಪಟ್ಟುಗಳಷ್ಟು ವೃದ್ಧಿಸಿತು. ಮುಂದೆ ನೀಡಿರುವ ಕೆಲವು ಅಂಶಗಳಿಂದ ಇದು ನಮ್ಮ ಗಮನಕ್ಕೆ ಬರುತ್ತದೆ.

೨. ಏಪ್ರಿಲ್ ೨೦೨೧ ರಿಂದ ಫೆಬ್ರವರಿ ೨೦೨೨ ರ ವರೆಗೆ ವಿವಿಧ ಭಾಷೆಗಳು ಸೇರಿ ಒಟ್ಟು ೩೦ ಹೊಸ ಗ್ರಂಥ-ಕಿರುಗ್ರಂಥಗಳ ಮುದ್ರಣ

೩. ಏಪ್ರಿಲ್ ೨೦೨೧ ರಿಂದ ಫೆಬ್ರುವರಿ ೨೦೨೨ ರ ವರೆಗೆ ವಿವಿಧ ಭಾಷೆಗಳು ಸೇರಿ ೩೫೭ ಗ್ರಂಥ-ಕಿರುಗ್ರಂಥಗಳ ಪುನರ್‍ಮುದ್ರಣ !

೪. ‘ಕೊರೊನಾ’ ಮಹಾಮಾರಿಯಿಂದ ಗ್ರಂಥ ಮಾರಾಟಕ್ಕೆ ಮಿತಿ ಇದ್ದರೂ ಪ್ರಚಂಡವಾಗಿ ಆಗಿರುವ ಗ್ರಂಥಗಳ ಮಾರಾಟ

‘ಕೊರೊನಾ’ ಮಹಾಮಾರಿಯಿಂದ ೨೩ ಮಾರ್ಚ್ ೨೦೨೦ ರಿಂದ ಜನವರಿ ೨೦೨೨ ರ ವರೆಗಿನ ಕಾಲಾವಧಿಯಲ್ಲಿ ಬಹುತೇಕ ಪ್ರದೇಶಗಳಲ್ಲಿ ಸಂಚಾರಸಾರಿಗೆ ನಿರ್ಬಂಧಗಳಿದ್ದವು. ಇದರಿಂದ ಮನೆಮನೆಗೆ ಹೋಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಧ್ಯಾತ್ಮಪ್ರಸಾರ ಮಾಡಲು ಬಹಳ ಮಿತಿ ಇತ್ತು. ಇದರಿಂದ ಈ ಕಾಲಾವಧಿಯಲ್ಲಿ ಸನಾತನದ ಗ್ರಂಥಗಳನ್ನು ಎಂದಿನಂತೆ ಮಾರಾಟಕೇಂದ್ರಗಳಿಂದ ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಿದ್ದರೂ,sanatanshop.com, ನಿಯತಕಾಲಿಕೆ ‘ಸನಾತನ ಪ್ರಭಾತ’ದಲ್ಲಿ ಪ್ರಸಾರವಾಗುವ ಜಾಹೀರಾತು, ಸಾಮಾಜಿಕ ಜಾಲತಾಣದ ‘ಪೋಸ್ಟ್’ ಇತ್ಯಾದಿಗಳಿಂದ ಕಳೆದ ವರ್ಷವಿಡೀ ಸನಾತನದ ೫ ಲಕ್ಷದ ೪೪ ಸಾವಿರದ ೯೪೩  ಗ್ರಂಥಗಳು ಮಾರಾಟವಾಯಿತು. ಇದರಿಂದ ಸನಾತನದ ಮೇಲಿರುವ ಈಶ್ವರನ ಕೃಪೆ ಮತ್ತು ಸಮಾಜಕ್ಕೆ ಅರಿವಾದ ಸನಾತನದ ಗ್ರಂಥಗಳ ಮಹತ್ವ ತಿಳಿಯುತ್ತದೆ.

೫. ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ದೊರೆತ ಓದುಗರ ಅತ್ಯಧಿಕ ಪ್ರತಿಸ್ಪಂದನೆ

(ಪೂ.) ಸಂದೀಪ ಆಳಶಿ

ಪರಾತ್ಪರ ಗುರು ಡಾಕ್ಟರರ ಅವ್ಯಕ್ತ ಸಂಕಲ್ಪದಿಂದ ಸಪ್ಟೆಂಬರ್ ೨೦೨೧ ರಿಂದ ಸನಾತನ ಸಂಸ್ಥೆಯ ರಾಷ್ಟ್ರವ್ಯಾಪಿ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಈ ಉಪಕ್ರಮ ಪ್ರಾರಂಭವಾಯಿತು. ಈ ಅಭಿಯಾನದ ಮಾಧ್ಯಮದಿಂದ ಸಮಾಜದ ಪ್ರತಿಯೊಂದು ವರ್ಗದ ವರೆಗೆ ಗ್ರಂಥದ ಪ್ರಸಾರವಾಗುತ್ತಿದ್ದು ಸಮಾಜದಿಂದ ಈ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಸ್ಪಂದನೆಯೂ ಲಭಿಸುತ್ತಿದೆ. ಈ ಅಭಿಯಾನದಿಂದ ೬ ತಿಂಗಳಲ್ಲೇ ಮರಾಠಿ, ಹಿಂದಿ, ಕನ್ನಡ, ಗುಜರಾತಿ ಮತ್ತು ಆಂಗ್ಲ ಈ ೫ ಭಾಷೆಗಳ ೩ ಲಕ್ಷದ ೨೭ ಸಾವಿರದ ೩೬೩ ಗ್ರಂಥಗಳು ಮಾರಾಟವಾದವು.

೬. ಪರಾತ್ಪರ ಗುರು ಡಾ. ಆಠವಲೆಯವರ ಗ್ರಂಥ ಕಾರ್ಯದಲ್ಲಿ ಪಾಲ್ಗೊಂಡರೆ ಆಗುವ ಶೀಘ್ರ ಆಧ್ಯಾತ್ಮಿಕ ಉನ್ನತಿ

ಮುಂಬರಲಿರುವ ಕಾಲ ‘ಕೊರೊನಾ’ ಮಹಾಮಾರಿಗಿಂತಲೂ ಮಹಾಭಯಾನಕ ಸಂಕಟದ ಕಾಲವಿರಲಿದೆ. ಈ ಕಾಲದಲ್ಲಿ ಕೇವಲ ‘ಧರ್ಮಾಚರಣೆ ಮತ್ತು ಸಾಧನೆ’ ಇದೇ ಮಾನವನನ್ನು ರಕ್ಷಿಸುವುದು. ಕಾಲಾನುಸಾರ ಯೋಗ್ಯ ಧರ್ಮಾಚರಣೆ ಮತ್ತು ಕೃತಿಯ ಸ್ತರದ ಸಾಧನೆಯನ್ನು ಕೇವಲ ಸನಾತನದ ಗ್ರಂಥಗಳು ಮಾತ್ರ ಕಲಿಸುತ್ತವೆ. ಇದಕ್ಕಾಗಿಯೇ ಇಂದಿಗೂ ಪರಾತ್ಪರ ಗುರು ಡಾಕ್ಟರರು ೭೯ ನೇ ವಯಸ್ಸಿನಲ್ಲಿಯೂ ಪ್ರಾಣಶಕ್ತಿ ಅತ್ಯಂತ ಕಡಿಮೆಯಿದ್ದರೂ ಗ್ರಂಥಕಾರ್ಯವನ್ನು ಹೆಚ್ಚಿಸಲು ತಳಮಳದಿಂದ ಕಾರ್ಯನಿರತರಾಗಿದ್ದಾರೆ. ಇದರೊಂದಿಗೆ ಅವ್ಯಕ್ತ ಸಂಕಲ್ಪದಿಂದ ಗ್ರಂಥಕಾರ್ಯ ಇಷ್ಟು ವೇಗವಾಗಿ ಅಧಿಕ ಪ್ರಮಾಣದಲ್ಲಿ ವೃದ್ಧಿಸುತ್ತಿರುವಾಗ, ಆ ಗ್ರಂಥಕಾರ್ಯದಲ್ಲಿ ನಾವು ತನು, ಮನ ಮತ್ತು ಧನದಿಂದ ಸಹಭಾಗಿಗಳಾದರೆ, ನಮ್ಮ ಶೀಘ್ರ ಆಧ್ಯಾತ್ಮಿಕ ಉನ್ನತಿಯೂ ಏಕೆ ಆಗಲಾರದು ?

೭. ಎಲ್ಲರಿಗೂ ಗ್ರಂಥಕಾರ್ಯದಲ್ಲಿ ಸಹಭಾಗಿಗಳಾಗುವಂತೆ ಸವಿನಯ ವಿನಂತಿ !

ಪರಾತ್ಪರ ಗುರು ಡಾಕ್ಟರರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಫೆಬ್ರುವರಿ ೨೦೨೨ ರ ವರೆಗೆ ೩೫೧ ಗ್ರಂಥ-ಕಿರುಗ್ರಂಥಗಳ ನಿರ್ಮಾಣವಾಯಿತು. ಇತರ ಸುಮಾರು ೫ ಸಾವಿರಕ್ಕಿಂತ ಅಧಿಕ ಗ್ರಂಥಗಳ ನಿರ್ಮಾಣದ ಪ್ರಕ್ರಿಯೆ ಅಧಿಕ ವೇಗವಾಗಿ ಆಗಲು ಅನೇಕರ ಸಹಾಯದ ಆವಶ್ಯಕತೆಯಿದೆ. ನಿಮ್ಮ ಆಸಕ್ತಿ ಮತ್ತು ಕ್ಷಮತೆಗನುಸಾರ ಗ್ರಂಥ ನಿರ್ಮಿತಿಯ ಸೇವೆಯಲ್ಲಿ ನೀವು ಪಾಲ್ಗೊಳ್ಳಬಹುದು. ಇದರೊಂದಿಗೆ ಗ್ರಂಥಗಳ ಪ್ರಸಾರ ಮಾಡುವುದು, ಗ್ರಂಥಗಳಿಗಾಗಿ ಅರ್ಪಣೆ ಅಥವಾ ಜಾಹೀರಾತು ಪಡೆಯುವುದು ಅಥವಾ ಕೊಡುವುದು, ಗ್ರಂಥಗಳ ವಿತರಣೆ ಮಾಡುವುದು ಇತ್ಯಾದಿ ಸೇವೆಗಳಲ್ಲಿಯೂ ನೀವು ಪಾಲ್ಗೊಳ್ಳಬಹುದು. ‘ಎಲ್ಲರೂ ಈ ಸುವರ್ಣಾವಕಾಶದ ಹೆಚ್ಚೆಚ್ಚು ಲಾಭ ಪಡೆಯಬೇಕು’, ಎಂದು ಸವಿನಯ ವಿನಂತಿ !’

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೬.೩.೨೦೨೨)

ಆಂಗ್ಲದ  ಗೊಂದಲಮಯ ವರ್ಣಮಾಲೆ ಹಾಗೂ ಸಂಸ್ಕೃತದ ಶುದ್ಧ ಹಾಗೂ ಶಾಸ್ತ್ರೀಯ ವರ್ಣಮಾಲೆ

ಗುರುದೇವ ಡಾ.ಕಾಟೇಸ್ವಾಮೀಜೀ

‘ನಮ್ಮ ಪ್ರಾಚೀನ ಸನಾತನ ಹಿಂದೂ ಸಂಸ್ಕೃತಿಯು ಅತ್ಯಂತ ಶುದ್ಧ ಹಾಗೂ ಶಾಸ್ತ್ರೀಯವಾಗಿದೆ. ಅದರಲ್ಲಿ ಪ್ರವೇಶ ಮಾಡಲು ಶುದ್ಧ ವರ್ಣಮಾಲೆಯು ಬೇಕು. ಆಂಗ್ಲ ವರ್ಣಮಾಲೆಯು ಅತ್ಯಂತ ಅಶುದ್ಧವಾಗಿದೆ. ಆಂಗ್ಲದ ಡಬ್ಲ್ಯು (W) ಈ ವರ್ಣವು ಡ್ ಅ ಬ್ ಲ್ ಉ ಹಾಗೂ ಅರ್ಧವರ್ಣ ‘ವ್’ ಇದು ಎಷ್ಟು ಭಯಾನಕ ಕ್ಲಿಷ್ಟವಾಗಿದೆ ಆಂಗ್ಲದ ಅಶುದ್ಧ ವರ್ಣಮಾಲೆಯ ಮಿತಿಯು ಗಣಕಯಂತ್ರದಲ್ಲಿ ಕಾಣಿಸುತ್ತದೆ. ಈ ಪ್ರತಿಬಂಧವನ್ನು ನಿವಾರಿಸುವುದಕ್ಕಾಗಿ ದೇವನಾಗರಿ ಸಂಸ್ಕೃತ ಲಿಪಿಯು ಅತ್ಯಂತ ಸುಲಭವಾಗಿದೆ.

ನಮ್ಮ ಶುದ್ಧ ವರ್ಣಮಾಲೆಯಲ್ಲಿ ಒಳಗೊಂಡಿರುವ ಸಾಮಥ್ರ್ಯವನ್ನು ಜಗತ್ತು ಸ್ವೀಕರಿಸಲೇಬೇಕಾಗುವುದು ವರ್ಣಗಳೊಂದಿಗೆ ಇರುವ ಶಾಸ್ತ್ರೀಯ ಅರ್ಥವು ಶುದ್ಧವಾಗಿಯೇ ಇರುತ್ತದೆ. ವರ್ಣಮಾಲೆಯ ಹಾಗೂ ಶಾಸ್ತ್ರೀಯ ಅರ್ಥದ ಇವುಗಳ ಪರಸ್ಪರ ಜೀವಾಭಾವದ ಸಂಬಂಧವಿದೆ’.

– ಗುರುದೇವ ಡಾ.ಕಾಟೇಸ್ವಾಮೀಜೀ