ಪಾಕಿಸ್ತಾನ ಸರಕಾರವು ಹಿಂದೂಗಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ೩೫೦ ಜನರ ಮೇಲಿನ ಅಪರಾಧವನ್ನು ಹಿಂಪಡೆಯಲಿದೆ !

ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !

ಕೊಲ್ಲುರೂ ಮುಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ತನಿಕೆಯ ಕಾಗದ ಪತ್ರ ಕಳೆದುಕೊಂಡು, ತಡಕಾಡಿದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು

ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ೨೧.೫೦ ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಯ ಮಹಾಸಂಘವು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಬಯಲು ಮಾಡಿತ್ತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳ ತನಿಖೆ ಮಾಡಲು ಸವಿಸ್ತಾರವಾದ ವರದಿಯೊಳಗೊಂಡ ಮನವಿ ಪತ್ರವನ್ನು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದಿಂದ ೧೮.೩.೨೦೨೧ ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸಲ್ಲಿಸಿತ್ತು.

ಪುಡುಕೊಟ್ಟೈ(ತಮಿಳುನಾಡು) ಇಲ್ಲಿ ಅಪರಿಚಿತರಿಂದ ಪ್ರಾಚೀನ ಶಿವಲಿಂಗ ಮತ್ತು ಭಗವಾನ್ ಶಿವನ ಮೂರ್ತಿ ಧ್ವಂಸ

ಕಿಝನಾಂಚೂರ ಗ್ರಾಮದಲ್ಲಿ ಪ್ರಾಚೀನ ಕೈಲಾಸನಾಥ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ಭಗವಾನ ಶಿವನ ಮೂರ್ತಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ಶಿವಲಿಂಗವನ್ನು ಎರಡು ತುಂಡುಗಳನ್ನಾಗಿ ಮಾಡಿ ಶಿವನ ವಿಗ್ರಹದ ತಲೆಯನ್ನು ಮುರಿಯಲಾಗಿದೆ. ಈ ದೇವಸ್ಥಾನವನ್ನು ಚೋಳ ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು.

ಉತ್ತರಪ್ರದೇಶದ ‘ಕೊರೊನಾಮಾತಾ ದೇವಸ್ಥಾನ’ ಅಪರಿಚಿತ ಜನರಿಂದ ಧ್ವಂಸ !

ಇಲ್ಲಿನ ಶುಕ್ಲಪುರ ಗ್ರಾಮದಲ್ಲಿ ೫ ದಿನಗಳ ಹಿಂದೆ ನಿರ್ಮಿಸಲಾದ ‘ಕೊರೊನಾಮಾತಾ ದೇವಸ್ಥಾನ’ವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ದೇವಾಲಯವು ವಿವಾದಿತ ಭೂಮಿಯಲ್ಲಿರುವುದರಿಂದ ಅವರ ನಡುವೆ ವಿವಾದ ಇದ್ದು, ಅವರಲ್ಲಿ ಒಬ್ಬರು ಅದನ್ನು ಕೆಡವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.