ಉತ್ತರಪ್ರದೇಶದ ‘ಕೊರೊನಾಮಾತಾ ದೇವಸ್ಥಾನ’ ಅಪರಿಚಿತ ಜನರಿಂದ ಧ್ವಂಸ !

ಈ ದೇವಾಲಯವನ್ನು ೫ ದಿನಗಳ ಹಿಂದೆ ನಿರ್ಮಿಸಲಾಗಿತ್ತು !

  • ಇಂತಹ ದೇವಾಲಯ ನಿರ್ಮಾಣದ ಘಟನೆಯಿಂದ ಹಿಂದೂಗಳಲ್ಲಿ ಧರ್ಮಶಿಕ್ಷಣದ ಕೊರತೆ ಎಷ್ಟಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ !

  • ಇಂತಹ ದೇವಾಲಯಗಳನ್ನು ನಿರ್ಮಿಸುತ್ತಿರುವಾಗ, ಹಿಂದೂ ಸಂತರು, ಮಹಂತರು, ಧರ್ಮಚಾರ್ಯರು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ನಾಯಕರು ಇದನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸುವುದಿಲ್ಲ ಅಥವಾ ಹಿಂದೂಗಳಿಗೆ ಪ್ರಬೋಧನೆಯನ್ನೂ ಮಾಡುವುದಿಲ್ಲ. ಇದು ಅಪೇಕ್ಷಿತವಿಲ್ಲ !

ಪ್ರತಾಪಗಡ (ಉತ್ತರಪ್ರದೇಶ) – ಇಲ್ಲಿನ ಶುಕ್ಲಪುರ ಗ್ರಾಮದಲ್ಲಿ ೫ ದಿನಗಳ ಹಿಂದೆ ನಿರ್ಮಿಸಲಾದ ‘ಕೊರೊನಾಮಾತಾ ದೇವಸ್ಥಾನ’ವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ದೇವಾಲಯವು ವಿವಾದಿತ ಭೂಮಿಯಲ್ಲಿರುವುದರಿಂದ ಅವರ ನಡುವೆ ವಿವಾದ ಇದ್ದು, ಅವರಲ್ಲಿ ಒಬ್ಬರು ಅದನ್ನು ಕೆಡವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

೧. ಈ ಭೂಮಿಯನ್ನು ನೋಯ್ಡಾದಲ್ಲಿ ವಾಸಿಸುವ ಲೋಕೇಶ, ನಾಗೇಶ ಕುಮಾರ ಶ್ರೀವಾಸ್ತವ ಮತ್ತು ಜಯಪ್ರಕಾಶ ಶ್ರೀವಾಸ್ತವ ಒಡೆತನದಲ್ಲಿದೆ. ನಾಗೇಶ ನೀಡಿದ ದೂರಿನ ಪ್ರಕಾರ, ಈ ದೇವಾಲಯವನ್ನು ಭೂ ಕಬಳಿಕೆಗಾಗಿ ಮಾತ್ರ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

೨. ಐದು ದಿನಗಳ ಹಿಂದೆ ಲೋಕೇಶ ಕುಮಾರ ಶ್ರೀವಾಸ್ತವ ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ ಮತ್ತು ದೇವಾಲಯದಲ್ಲಿ ‘ಕೊರೊನಾ ಮಾತಾ’ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ರಾಧೇಶ್ಯಾಮ್ ವರ್ಮಾ ಅವರನ್ನು ಪೂಜೆಗೆ ಅರ್ಚಕರಾಗಿ ನೇಮಿಸಲಾಗಿತ್ತು. ಪ್ರತಿಮೆಯ ಹಿಂಭಾಗದ ಗೋಡೆಯ ಮೇಲೆ ‘ಮಾಸ್ಕ ಹಾಕಿ, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿ’ ಎಂದು ಬರೆಯಲಾಗಿದೆ. ‘ಕೊರೋನಾ ಮಾತಾ’ಗೆ ಕೇವಲ ಹಳದಿ ಹೂವುಗಳು, ಹಳದಿ ಹಣ್ಣುಗಳು, ಹಳದಿ ಬಣ್ಣದ ಸಿಹಿ ನೈವೇದ್ಯಗಳು ಅಥವಾ ಇನ್ನಾವುದೇ ವಸ್ತು ಹಳದಿ ಬಣ್ಣದ್ದೇ ಅರ್ಪಿಸಬಹುದು ಎಂದು ತಿಳಿಸಲಾಗಿತ್ತು.

೩. ಕಳೆದ ತಿಂಗಳಷ್ಟೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ‘ಕೊರೊನಾದೇವಿ’ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ‘ಕೊರೊನಾದೇವಿ’ ವಿಗ್ರಹವನ್ನು ಸ್ಥಾಪಿಸಲಾಗಿದೆ.