ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸಲು ಪ್ರಸ್ತಾವನೆ !

ಭಾರತದೊಂದಿಗೆ ವ್ಯಾಪಾರವನ್ನ ಹೆಚ್ಚಿಸಲು ಹಿಂದಿ ಭಾಷೆ ಕಡ್ಡಾಯವಾಗಿದೆ. ಹಾಗಾಗಿ ‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್’ ಮತ್ತು ‘ಏಷ್ಯಾ ಸೊಸೈಟಿ’ ಸಂಘಟನೆಗಳ ೧೦೦ ಮಂದಿ ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಲಿಸುವ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬಾಯಡೆನ್ ಅವರ ಮುಂದಿಟ್ಟಿದ್ದಾರೆ.

ಸ್ವಾತಂತ್ರ್ಯವೀರ ಸಾವರ್ಕರ ಸಹಿತ ೫೦ ಮಹಾಪುರುಷರ ಜೀವನ ಚರಿತ್ರೆ ಕಲಿಸುವರು !

ಉತ್ತರಪ್ರದೇಶದಲ್ಲಿನ ಶಾಲೆಯಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿನ ಪಠ್ಯಕ್ರಮದಲ್ಲಿ ಬದಲಾವಣೆ

ಭಾರತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಆವಶ್ಯಕ ! – ಅನಿಲ ಧೀರ, ಸಂಯೋಜಕರು, ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೆಜ್, ಭುವನೇಶ್ವರ, ಓಡಿಶಾ

ಭಾರತದಲ್ಲಿ ಗುರು-ಶಿಷ್ಯ ಪರಂಪರೆ ಇರುವಾಗಲೇ ವಿಶ್ವಗುರು ಆಗಿತ್ತು. ಆ ಕಾಲದಲ್ಲಿ ಅಸಂಖ್ಯಾತ ಗ್ರಂಥಗಳನ್ನು ಬರೆಯಲಾಯಿತು. ವಿದೇಶಗಳಿಂದ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು ಆದರೆ ಈಗ ಅದರ ವಿರುದ್ಧ ಘಟಿಸುತ್ತಿದೆ. ೮ ಲಕ್ಷದ ೮೦ ಸಾವಿರ ಭಾರತೀಯರು ವಿದೇಶದಲ್ಲಿ ಕಲಿಯುತ್ತಿದ್ದಾರೆ ಮತ್ತು ಕಾಲಾಂತರದಲ್ಲಿ ಅವರು ಅಲ್ಲಿಯೇ ನೆಲೆಯೂರಲಿದ್ದಾರೆ.

ಪಾಕಿಸ್ತಾನದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ !

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ ಹೇರಿದೆ. ಆಯೋಗವು ಆದೇಶದಲ್ಲಿ, ಹೋಳಿಯಂತಹ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಬೇರೆಯಾಗಿದೆ. ಇಂತಹ ಹಬ್ಬಗಳು ಆಚರಿಸುವುದು, ಇದು ಇಸ್ಲಾಂನ ಪರಿಚಯದಿಂದ ಬೇರೆಯಾದಂತೆ ಇದೆ ಎಮದು ಹೇಳಿದೆ.

ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ‘ಸಾವರ್ಕರ್ ಇವರ ಕೊಡುಗೆ ಮತ್ತು ದರ್ಶನ’ ಈ ವಿಷಯ ಸೇರ್ಪಡೆ

ವಿಶ್ವವಿದ್ಯಾಲಯದ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

‘ಕರ್ನಾಟಕ ಸರಕಾರ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕಂತೆ ! – ಕನ್ನಡ ಸಾಹಿತಿ ವೀರಭದ್ರಪ್ಪ

ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !

ರಾಜ್ಯ ಸರಕಾರದಿಂದ ಸರಕಾರಿ ಶಾಲೆಯ ಪಠ್ಯ ಪುಸ್ತಕದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಹೇಡಗೆವಾರ ಇವರ ಪಠ್ಯ ಕೈಬಿಡಲಿದೆ !

ಶಿಕ್ಷಣ ಸಚಿವರು ಹೇಡಗೆವಾರರನ್ನು ಹೇಡಿ ಎಂದು ಹೇಳಿದರು !

ಕೆನಡಾದ ೭೦೦ ಭಾರತೀಯ ವಿದ್ಯಾರ್ಥಿಗಳ ಬಳಿ ನಕಲಿ ದಾಖಲೆ, ದೇಶ ಬಿಡಲು ನೋಟಿಸ್ !

ಕೆನಡಾದಲ್ಲಿ ೭೦೦ ಭಾರತೀಯ ವಿದ್ಯಾರ್ಥಿಗಳಿಗೆ ದೇಶ ಬಿಡಲು ನೋಟಿಸ್ ಜಾರಿ ಮಾಡಿದೆ. ಕೆನಡಾದ ಸಿ.ಬಿ.ಎಸ್.ಎ. ಸಂಸ್ಥೆಯು ನೋಟಿಸ್ ಜಾರಿ ಮಾಡಿದೆ. ಅದರ ಪ್ರಕಾರ, ಈ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ತಯಾರಿಸಿ ಅವರು ವಿವಿಧ ವಿದ್ಯಾಪೀಠಗಳಲ್ಲಿ ಪ್ರವೇಶ ಪಡೆದಿದ್ದಾರೆ. ನೋಟಿಸ್ ಜಾರಿ ಮಾಡಿದ ನಂತರ ವಿದ್ಯಾರ್ಥಿಗಳು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಮಗಧ, ಚೋಳ, ಚೆರಾ, ಪಾಂಡ್ಯ ಮತ್ತು ಹಿಂದವೀ ಸ್ವರಾಜ್ಯ ಈ ಸಾಮ್ರಾಜ್ಯಗಳ ವಿಷಯವನ್ನು ಕಲಿಸಿರಿ !

ಪುಸ್ತಕಗಳಲ್ಲಿನ ತಪ್ಪು ಬರಹವನ್ನು ತೆಗೆದು ಅದರ ಬದಲು ಹಿಂದೂಸ್ಥಾನದ ಸತ್ಯ ಇತಿಹಾಸವನ್ನು ಸಂದರ್ಭಸಹಿತ ಕಲಿಸಬೇಕು. ಇದರಲ್ಲಿ ವಿದ್ಯಾರ್ಥಿಗಳಲ್ಲಿ ಶೌರ್ಯಜಾಗೃತಿ, ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಇತಿಹಾಸವನ್ನು ಕಲಿಸಬೇಕು.

ಆಸ್ಸಾಂ ನಲ್ಲಿ ನಾವು ೬೦೦ ಮದರಸಾಗಳನ್ನು ಮುಚ್ಚಿದ್ದೇವೆ, ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನಾವು ಅಸ್ಸಾಂನಲ್ಲಿ ಇದುವರೆಗೆ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ. ಈ ವರ್ಷ ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ.