ಪಾಲನಪುರ (ಗುಜರಾತ) ಇಲ್ಲಿಯ ಶಾಲೆಯಲ್ಲಿ ಮಂತ್ರ್ಯೋಚಾರದಿಂದ ನಡೆಯುವ ಪ್ರಾರ್ಥನೆ ನಿಲ್ಲಿಸಲು ಮುಸಲ್ಮಾನರಿಂದ ಪ್ರಯತ್ನ !

ಪಾಲನಪುರ (ಗುಜರಾತ) – ಇಲ್ಲಿಯ ಢೋಂಡಿಯಾವಾಡಿಯಲ್ಲಿ ಎನ್. ಕೋಠಾರಿ ಪ್ರಾಥಮಿಕ ಶಾಲೆಯಲ್ಲಿ ಮಂತ್ರೋಚಾರದಲ್ಲಿ ನಡೆಯುತ್ತಿರುವ ಪ್ರಾರ್ಥನೆಯನ್ನು ಮುಸಲ್ಮಾನರು ನಿಲ್ಲಿಸುವ ಪ್ರಯತ್ನ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ಘಟನೆಯ ಮಾಹಿತಿ ಶಿಕ್ಷಣಾಧಿಕಾರಿಗಳಿಗೆ ನೀಡಿದೆ. ಈ ಶಾಲೆಯಲ್ಲಿ ಪ್ರತಿದಿನ ೨೦ ನಿಮಿಷ ಪ್ರಾರ್ಥನೆ ಮಾಡಿಸಲಾಗುತ್ತದೆ. ಮುಸಲ್ಮಾನರು ಅದನ್ನ ನಿಲ್ಲಿಸಲು ಶಿಕ್ಷಕರ ಬಳಿ ಒತ್ತಾಯಿಸುತ್ತಿದ್ದರು. ಈ ಶಾಲೆಯಲ್ಲಿ ೫೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಅದರಲ್ಲಿ ೧೭೫ ವಿದ್ಯಾರ್ಥಿಗಳು ಮುಸಲ್ಮಾನರಾಗಿದ್ದಾರೆ. ಶಾಲೆಯಿಂದ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ ದೂರಿನಲ್ಲಿ, ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ಪ್ರಾರ್ಥನೆ, ಶಾಲೆಯ ಹತ್ತಿರ ಇರುವವರಿಗೆ ಹಿಡಿಸುತಿಲ್ಲ ಮತ್ತು ಅವರು ಯಾವಾಗಲೂ ಇಲ್ಲಿ ಅಡಚಣೆ ಮಾಡುತ್ತಾರೆ ಮತ್ತು ಪ್ರಾರ್ಥನೆ ನಿಲ್ಲಿಸಲು ಹೇಳುತ್ತಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪ್ರತಿದಿನ ೫ ಸಲ ಮಸೀದಿಯ ಬೋಂಗಾದಿಂದ ನೀಡಲಾಗುವ ಅಜಾನ್ ಕಳೆದ ಅನೇಕ ವರ್ಷದಿಂದ ಹಿಂದೂಗಳು ಸಹಿಸುತ್ತಾ ಇದ್ದಾರೆ, ಇದರ ಯೋಚನೆ ಯಾರು ಮಾಡುವರು ?