ಬೆಂಗಳೂರು ಸಹಿತ ಜಗತ್ತಿನ ಅನೇಕ ಶಾಲೆಗಳಲ್ಲಿ ‘ಚಾಟ್ ಜಿಪಿಟಿ’ ಮೇಲೆ ನಿಷೇಧ !

ಬೆಂಗಳೂರು – ನಗರದ ಆರ್.ವಿ. ವಿಶ್ವವಿದ್ಯಾಲಯವು ಕೃತಕ ಬುದ್ಧಿವಂತಿಕೆಯ ಮೂಲಕ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಮೂಲಕ) ನಡೆಸಲಾಗುವ ಸಂಭಾಷಣೆಯ ಗಣಕಯಂತ್ರದ ಪ್ರಣಾಲಿಕೆ `ಚಾಟ್ ಜಿಪಿಟಿ’ ಯನ್ನು ನಿಷೇಧಿಸಿದೆ. ಅದೇ ರೀತಿ ನಗರದ ಅನೇಕ ವಿಶ್ವವಿದ್ಯಾಲಯಗಳಲ್ಲಿಯೂ ನಿಷೇಧಿಸುವಂತೆ ಮನವಿ ಮಾಡಲಾಗುತ್ತಿದೆ. ಜಗತ್ತಿನ ಅನೇಕ ಶಾಲೆಗಳಲ್ಲಿ ಈ ಮೊದಲೇ ಚಾಟ್ ಜಿಪಿಟಿಯನ್ನು ನಿಷೇಧಿಸಿದೆ. ಇದರಲ್ಲಿ ನ್ಯೂಯಾರ್ಕ ಸಿಟಿ ಡಿಪಾರ್ಟಮೆಂಟ ಆಫ್ ಎಜ್ಯುಕೇಶನ್, ಸಿಯಾಟಲ ಪಬ್ಲಿಕ್ ಸ್ಕೂಲ, ಫ್ರಾನ್ಸನ `ಸಾಯನ್ಸ ಪೊ’ ವಿಶ್ವವಿದ್ಯಾಲಯವೂ ಇದನ್ನು ನಿಷೇಧಿಸಿದೆ. ಅವರ ಪ್ರಕಾರ ಚಾಟ್ ಜಿಪಿಟಿಯಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಮದು ಹೇಳಿದೆ.

ಬೆಂಗಳೂರಿನ ವಿಶ್ವವಿದ್ಯಾಲಯವು ಜನೇವರಿ 1 ರಂದು ಯಾವುದೇ ವಿದ್ಯಾರ್ಥಿ ಅಂತಿಮ ಪರೀಕ್ಷೆಗಾಗಿ ಚಾಟ್ ಜಿಪಿಟಿ ಮತ್ತು ಇದರಂತಹ ಯಾವುದೇ ಕೃತಕ ಬುದ್ಧಿವಂತಿಕೆಯ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವುದಿಲ್ಲ ಎಂದು ಆದೇಶ ನೀಡಿದೆ.

ಚಾಟ್ ಜಿಪಿಟಿ ಎಂದರೆ ಏನು?

ಚಾಟ್ ಜಿಪಿಟಿ ಕೃತಕ ಬುದ್ಧಿವಂತಿಕೆಯನ್ನು ಆಧರಿಸಿದ ಸಾಫ್ಟವೇರ (ಗಣಿಕಯಂತ್ರದ ಪ್ರಣಾಲಿಕೆ) ಆಗಿದೆ. ಪೂರ್ಣ ಹೆಸರು `ಚಾಟ್ ಜೆನರೆಟಿವ್ಹ ಪ್ರಿಟೆಂಡ ಟ್ರಾನ್ಸಫಾರ್ಮರ್’, ಎಂದಾಗಿದೆ. ಈ ಗಣಿಕಯಂತ್ರದ ಪ್ರಣಾಲಿಗೆ ಪ್ರಶ್ನೆ ಕೇಳಿದಾಗ ಅದು ಉತ್ತರಿಸುತ್ತದೆ.