ವಿಶ್ವವಿದ್ಯಾಲಯದಲ್ಲಿ ವಿಶ್ವದ ಜ್ಞಾನವನ್ನು ಕೊಡುತ್ತಿಲ್ಲ !

‘ಟೈಮ್ಸ್’ ಸಮೂಹದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಮೀರ ಜೈನರ ಸ್ಪಷ್ಟೋಕ್ತಿ !

ಭಾರತ ಆಧ್ಯಾತ್ಮಿಕ ದೇಶವಾಗಿದೆಯೆಂದು ಸ್ಪಷ್ಟ ಪಡಿಸಿದರು !

ಸಮೀರ ಜೈನ

ನವ ದೆಹಲಿ – ಧರ್ಮ, ಅಧ್ಯಾತ್ಮ ಮತ್ತು ದೇಶಗಳನ್ನು ಒಂದುಗೂಡಿಸಬಹುದು. ಇದು ಧಾರ್ಮಿಕ ದೇಶವಾಗಿರುವುದರಿಂದ ಇದು ನಮ್ಮ ಆಧ್ಯಾತ್ಮಿಕ ದೇಶವಾಗಿದೆ ಎಂದು ನಾವು ಹೇಳಬಾರದು. ನೀವು ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಏನು ಕಲಿಯುತ್ತಿದ್ದೀರೋ ಅದು ವಿಜ್ಞಾನ ಅಂದರೆ ಭೌತಿಕ, ರಸಾಯನ ಮತ್ತು ಜೀವಶಾಸ್ತ್ರವಾಗಿದೆ, ಇವು ಬಹಳ ಸಣ್ಣ ವಿಷಯವಾಗಿದೆ. `ಯೂನಿರ್ವಸಿಟಿಯ ವಿದ್ಯಾರ್ಥಿಗಳು ‘ಯೂನಿವರ್ಸ’  ಎನ್ನುವ ದೊಡ್ಡ ಶಬ್ದವನ್ನು ಸ್ವೀಕರಿಸಿದ್ದಾರೆ; ಆದರೆ ವಿಶ್ವದ ಜ್ಞಾನ ವಿಶ್ವವಿದ್ಯಾಲಯದಲ್ಲಿ ನೀಡುತ್ತಿಲ್ಲ. ಆಧ್ಯಾತ್ಮಿಕ ಶಿಕ್ಷಣ, ಅಂದರೆ ಕಣ್ಣಿಗೆ ಕಾಣದಿರುವ ವಿಷಯಗಳನ್ನು ಕಲಿಯುವುದು, ಆದರೂ ಈ ವಿಷಯ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಕಲಿಸಲಾಗುವುದಿಲ್ಲ. ಅಲ್ಲಿ ಕೇವಲ ನೌಕರಿಯನ್ನು ವ್ಯವಹಾರಕ್ಕಾಗಿ ಕಲಿಸಲಾಗುತ್ತಿದೆ ಎಂದು `ಟೈಮ್ಸ’ ಸಮೂಹದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ಸಂಚಾಲಕ ಸಮೀರ ಜೈನ ಇವರು ಹೇಳಿಕೆ ನೀಡಿದ್ದಾರೆ. ಟೈಮ್ಸ ಸಮೂಹವು ಆಯೋಜಿಸಿರುವ 7 ನೇ `ಟೈಮ್ಸ ಲಿಟರೇಚರ ಫೆಸ್ಟಿವಲ್’ ನಲ್ಲಿ ಅವರು ವಿದ್ಯಾರ್ಥಿಗಳ ಎದುರು ಮಾತನಾಡುತ್ತಿದ್ದರು.

ನಮಗೆ ಕಾಣಿಸದಿರುವ ವಿಜ್ಞಾನ ಕಲಿಯಬೇಕಾಗಬಹುದು !

ಸಮೀರ ಜೈನ ಇವರು, ನಮ್ಮ ಕಣ್ಣಿಗೆ ಕಾಣಿಸದಿರುವ ವಿಜ್ಞಾನ ಕಲಿಯಬೇಕಾಗುವುದು, ಅಂದರೆ ಅದೃಶ್ಯವಾಗಿರುವ ಪ್ರೇಮ, ಯಾವುದೂ ಬದಲಾಗದಿರುವ ಶಿವ ಮತ್ತು ಶಕ್ತಿಯಿಂದ ತುಂಬಿರುವ ಆಕಾಶದ ಅಧ್ಯಯನ ಮಾಡಬೇಕು. ಪೌರಾಣಿಕ ಕಥೆ ಓದಿದರೂ ಅದರಲ್ಲಿ ಇತಿಹಾಸ ತುಂಬಿದೆ. ರಾಮಾಯಣ ಮತ್ತು ಮಹಾಭಾರತ  ಓದಿ ನಿಮಗೆ ಕೇಂದ್ರಬಿಂದು ಸಿಗುತ್ತದೆ ಎಂದು ಹೇಳಿದರು.

ಅಧ್ಯಾತ್ಮ ಸ್ವೀಕರಿಸಿ ಭಾರತ ಜಗತ್ತಿನ ಸ್ವಾಮಿಯಾಗಲಿದೆ !

ಗುರು ನಾನಕರ ನಿರ್ಗುಣ-ಸಗುಣ ಭಕ್ತಿಯ ಸಂದರ್ಭವನ್ನು ನೀಡಿ ಸಮೀರ ಜೈನ ಮಾತನಾಡುತ್ತಾ, ‘ನಿರ್ಗುಣ ಆಪ ಸಗುಣ ಭೀ ಸೋಹಿ.’ ಅಂದರೆ ನಿರ್ಗುಣ ಮತ್ತು ಸಗುಣ ಇಬ್ಬರೂ ನೀವೇ ಆಗಿದ್ದೀರಿ. ನೀವೇ ಸಾಕಾರ ಮತ್ತು ನಿರಾಕಾರ ಆಗಿದ್ದೀರಿ. ಅಧ್ಯಾತ್ಮ ಸ್ವೀಕರಿಸಿ ಭಾರತ ಜಗತ್ತಿನ ಸ್ವಾಮಿಯಾಗಲಿದೆ. ವಿದ್ಯಾರ್ಥಿ ಅದರ ಬಹುದೊಡ್ಡ ಮಹತ್ವದ ಭಾಗವಾಗಲಿದ್ದಾರೆ ಎಂದು ಹೇಳಿದರು.