ದೆಹಲಿಯಲ್ಲಿ ಸಿಕ್ಖ್ ಧಾರ್ಮಿಕ ಸಂಸ್ಥೆಯಿಂದ ನಡೆಯುವ ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆ ಮಾಡಿದ್ದರಿಂದ ಶಿಕ್ಷಕಿ ಅಮಾನತು !

ನವದೆಹಲಿ – ಇಲ್ಲಿನ ವಸಂತ ವಿಹಾರ ಪರಿಸರದಲ್ಲಿನ ಗುರು ಹರಕಿಶನ್ ಸಿಂಹ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಗೀತ ಶಿಕ್ಷಕಿ ಶ್ರೀ ಸರಸ್ವತಿ ದೇವಿಯ ಪೂಜೆ ಮಾಡಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ. ‘ದೆಹಲಿ ಸಿಕ್ಖ್ ಗುರುದ್ವಾರಾ ಪ್ರಬಂಧಕ ಕಮಿಟಿ’ಯಿಂದ ಈ ಶಾಲೆಯನ್ನು ನಡೆಸಲಾಗುತ್ತದೆ. ಈ ಕಮಿಟಿಯು ಪೂಜೆಯನ್ನು ವಿರೋಧಿಸಿತ್ತು. ಸಿಕ್ಖ್ ನೇತಾರರು ಪೂಜೆಗೆ ಆಕ್ಷೇಪವೆತ್ತಿದ ನಂತರ ಕಮಿಟಿಯು ಈ ಪ್ರಕರಣವನ್ನು ವಿಚಾರಣೆ ಮಾಡಲು ಒಂದು ಸಮಿತಿಯನ್ನು ಸ್ಥಾಪಿಸಿದೆ. ‘ದೆಹಲಿ ಸಿಕ್ಖ್ ಗುರುದ್ವಾರಾ ಪ್ರಬಂಧಕ ಕಮಿಟಿ’ಯ ಅಧ್ಯಕ್ಷ ಹರಮೀತಸಿಂಹ ಕಾಲಕಾ ಇವರು, ಈ ಶಿಕ್ಷಕಿಯು ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಿದ್ದರು. ಈ ವಿಷಯ ತಿಳಿದಾಗ ನಾವು ಆಕ್ಷೇಪವೆತ್ತಿದ್ದೆವು. ಅನಂತರ ಶಾಲೆಯ ಮುಖ್ಯಾಧ್ಯಾಪಕಿಯು ಶಿಕ್ಷಕಿಗೆ ನೋಟೀಸ್ ನೀಡಿದ್ದರು. ಇದಕ್ಕೆ ಶಿಕ್ಷಕಿ ‘ಪ್ರತಿ ವರ್ಷ ನಾವು ಇದೇ ರೀತಿ ಪೂಜೆ ಮಾಡುತ್ತಾ ಬಂದಿದ್ದೇವೆ’, ಎಂದು ಉತ್ತರ ನೀಡಿದ್ದರು. ಅನಂತರ ಶಿಕ್ಷಕಿಯನ್ನು ಅಮಾನತು ಮಾಡಲಾಯಿತು. ನಮ್ಮ ಕಮಿಟಿಯಿಂದ ಶಿಕ್ಷಣದ ವಿಷಯದಲ್ಲಿ ಸಿಕ್ಖರ ಸ್ಥಾನಮಾನದ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಈ ಪ್ರಕರಣದ ವಿಚಾರಣೆಗಾಗಿ ಸ್ಥಾಪಿಸಲಾದ ಸಮಿತಿ ಈ ಪೂಜೆಯಲ್ಲಿ ರಾಜಕೀಯ ಷಡ್ಯಂತ್ರ ಏನಾದರೂ ಇದೆಯೆ ಎಂಬುದನ್ನು ಕಂಡು ಹಿಡಿಯುವುದು. ಒಂದು ವೇಳೆ ಈ ರೀತಿ ಮೂರ್ತಿ ಇಟ್ಟು ಪೂಜೆ ನಡೆಯುತ್ತಾ ಇದ್ದರೆ ವಿರೋಧಿ ಪಕ್ಷ ನಮ್ಮನ್ನು ಗುರಿ ಮಾಡಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳು ಎಂದಿಗೂ ಸಿಕ್ಖರನ್ನು ಬೇರೆಯೆಂದು ತಿಳಿಯಲಿಲ್ಲ ಹಾಗೂ ಸಿಕ್ಖರು ಇದುವರೆಗೆ ಹಿಂದೂಗಳನ್ನು ಬೇರೆಯೆಂದು ತಿಳಿಯಲಿಲ್ಲ; ಆದರೆ ಖಲಿಸ್ತಾನಿ ವಿಚಾರದ ಪ್ರಭಾವ ಸಿಕ್ಖರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಇಂತಹ ಘಟನೆಗಳು ನಡೆಯಲು ಆರಂಭವಾಗಿವೆ. ಇದನ್ನು ಗಮನಿಸಿ ಸಿಕ್ಖರಲ್ಲಿನ ರಾಷ್ಟ್ರಭಕ್ತರು ಹಾಗೂ ತಿಳುವಳಿಕೆಯುಳ್ಳವರು ಮುಂದೆ ಬಂದು ಹಿಂದೂ ವಿರೋಧಿ ಘಟನೆಗಳನ್ನು ವಿರೋಧಿಸುವ ಅವಶ್ಯಕತೆಯಿದೆ !

ಸಿಕ್ಖರ ಹಣ ಅವರಿಗಾಗಿಯೆ ಖರ್ಚಾಗಬೇಕು ! – ಕಮಿಟಿಯ ಮಾಜಿ ಅಧ್ಯಕ್ಷ ಹರವಿಂದರಸಿಂಹ ಸರನಾ

‘ದೆಹಲಿ ಸಿಕ್ಖ್ ಗುರುದ್ವಾರ ಪ್ರಬಂಧಕ ಕಮಿಟಿ’ಯ ಅಧ್ಯಕ್ಷ ಹರವಿಂದರಸಿಂಹ ಸರನಾ ಇವರು, ಕಮಿಟಿಯಿಂದ ನಡೆಸಲ್ಪಡುವ ಶಾಲೆಗಳಲ್ಲಿ ಮೂರ್ತಿಪೂಜೆಯ ಪರಂಪರೆಯಿಲ್ಲ, ಸಿಕ್ಖರ ಸ್ಥಾನಮಾನಕ್ಕೆ ಸವಾಲೊಡ್ಡುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಈ ಶಾಲೆಯನ್ನು ಕಮಿಟಿಯ ಹಣದಿಂದ ನಡೆಸಲಾಗುತ್ತದೆ ಹಾಗೂ ಇಲ್ಲಿ ಎಲ್ಲ ಧರ್ಮದ ಮಕ್ಕಳು ಕಲಿಯುತ್ತಾರೆ. ಸಿಕ್ಖ್ ಕಮಿಟಿಯ ಹಣ ಸಿಕ್ಖರಿಗೆ ಮತ್ತು ಅವರ ಗುರುಗಳ ಉಪದೇಶಕ್ಕಾಗಿ ಖರ್ಚಾಗಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಹಿಂದೂಗಳ ಹಾಗೂ ಹಿಂದೂಗಳ ಸರಕಾರೀಕರಣ ಆಗಿರುವ ದೇವಸ್ಥಾನಗಳ ಹಣ ಹಿಂದೂಗಳಿಗೆ ಮತ್ತು ಅವರ ಧರ್ಮಕ್ಕಾಗಿ ಖರ್ಚಾಗಬೇಕು’, ಎಂದು ಹಿಂದೂಗಳು ಈಗ ಬೇಡಿಕೆ ಮಾಡಿದರೆ, ಆಶ್ಚರ್ಯವೆನೂ ಇಲ್ಲ !