ನಟಿ ಸ್ವರಾ ಭಾಸ್ಕರ್ ಮತ್ತು ಫಹದ್ ಅವರ ಮದುವೆ ಅನಧಿಕೃತ – ಮೌಲಾನಾ ಶಹಾಬುದ್ದೀನ್

ಮದುವೆಗೂ ಮುನ್ನ ಹುಡುಗಿಯನ್ನು ಇಸ್ಲಾಂಗೆ ಮತಾಂತರಿಸಬೇಕೆಂದು ಪ್ರತಿಪಾದನೆ

ಲಕ್ಷ್ಮಣಪುರಿ – ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹದ್ ಅವರ ವಿವಾಹವು ಅನಧಿಕೃತವಾಗಿದೆ ಎಂದು ಬರೇಲಿಯ ಮೌಲಾನಾ ಶಹಾಬುದ್ದೀನ್ ಪ್ರತಿಪಾದಿಸಿದ್ದಾರೆ. ಅವರು, ‘ಶರಿಯತ್-ಎ-ಎಲಾಮಿಯಾ’ ಪ್ರಕಾರ, ಮುಸ್ಲಿಂ ಹುಡುಗನೊಂದಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸದ ಮುಸ್ಲಿಮೇತರ ಹುಡುಗಿಯ ವಿವಾಹವನ್ನು ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿ ಹುಡುಗಿ ಇಸ್ಲಾಂ ಸ್ವೀಕರಿಸಬೇಕು ಎಂದು ಹೇಳಿದರು.

ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನವವಿವಾಹಿತರ ಸ್ವಾಗತಕ್ಕೆ ಅದ್ದೂರಿಯಾಗಿ ಸಿದ್ಧತೆ

ಶೈಕ್ಷಣಿಕ ಸಂಕೀರ್ಣದಲ್ಲಿ ಅಂತಹ ವೈಯಕ್ತಿಕ ಕಾರ್ಯಕ್ರಮಗಳಿಗೆ ಹೇಗೆ ಅವಕಾಶ ಸಿಗುತ್ತದೆ ?

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಸ್ವರಾ ಭಾಸ್ಕರ್ ಮತ್ತು ಫಹದ್ ಮದುವೆಯ ರಿಸೆಪ್ಶನ್‌ ಅದ್ದೂರಿಯಾಗಿ ನಡೆಯುತ್ತಿದೆ. ಇದಕ್ಕೆ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ ಫೈಜುಲ್ ಹಸನ್ ನೇತೃತ್ವ ವಹಿಸಿದ್ದಾರೆ. ಫಹದ್ ಕೂಡ ಇದೇ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾನೆ.

ಆದರೆ, ಈ ವಿಶ್ವವಿದ್ಯಾಲಯ ಇನ್ನೋರ್ವ ಮಾಜಿ ಉಪಾಧ್ಯಕ್ಷ ನದೀಮ್ ಅನ್ಸಾರಿ ಈ ಸ್ವಾಗತ ಕಾರ್ಯಕ್ರಮವನ್ನು ವಿರೋಧಿಸುತ್ತಾ, ‘ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯವು ಶೈಕ್ಷಣಿಕ ಸಂಕೀರ್ಣವಾಗಿದ್ದು, ಅಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಶೋಭಿಸುವುದಿಲ್ಲ. ನಾನು ಇದನ್ನು ವಿರೋಧಿಸುತ್ತೇನೆ’, ಎಂದು ಹೇಳಿದ್ದಾರೆ.