ಭಾರತದಲ್ಲಿ ಮತಾಂಧರಿಂದಾಗುವ ಹಿಂದೂಗಳ ಹತ್ಯೆಗಳು ಯಾವಾಗ ನಿಲ್ಲುವುವು ?

೧. ಭಾರತದಲ್ಲಿ ಮತಾಂಧರಿಂದಾಗುವ ಹಿಂದೂಗಳ ಹತ್ಯೆಗಳು ಯಾವಾಗ ನಿಲ್ಲುವುವು ?

ಕರೀಮಗಂಜ್‌ (ಅಸ್ಸಾಂ) ನಲ್ಲಿ ಭಜರಂಗದಳದ ೧೬ ವರ್ಷದ ಕಾರ್ಯಕರ್ತ ಶಂಭು ಕೊಯಿರಿ ಇವರ ಹತ್ಯೆ ಮಾಡಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಅಮಿನುಲ್‌ ಹಕ್‌ ಎಂಬಾತನನ್ನು ಬಂಧಿಸಿದ್ದಾರೆ.

೨. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

ಮಕರ ಸಂಕ್ರಾಂತಿಯಂದು ಅಂದರೆ ಭಾನುವಾರದಂದು ರಜೆಯಿದ್ದರೂ ಚಾಮರಾಜನಗರ ಜಿಲ್ಲೆಯ ‘ಕ್ರೈಸ್ಟ್ ಸಿ.ಎಂ.ಐ. ಪಬ್ಲಿಕ್‌ ಸ್ಕೂಲ್’ ಇದು ತರಗತಿಗಳನ್ನು ನಡೆಸಿತ್ತು. ಶಾಲೆಯ ಈ ಕ್ರಮವನ್ನು ಹಿಂದೂ ಜಾಗರಣ ವೇದಿಕೆಯು ವಿರೋಧಿಸಿತು.

೩. ‘ಚಾಟ್‌ ಜಿಪಿಟಿ’ಯನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸಿ!

‘ಚಾಟ್‌ ಜಿಪಿಟಿ’ ತಂತ್ರಜ್ಞಾನ ವ್ಯವಸ್ಥೆಯಿಂದ ಹಿಂದೂ ಧರ್ಮಗ್ರಂಥಗಳನ್ನು ಅವಮಾನಿಸುತ್ತಿರುವುದು ಬೆಳಕಿಗೆ ಬಂದಿದೆ.  ಈ ತಂತ್ರಜ್ಞಾನದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಮುಂತಾದ ದೇವತೆಗಳ, ಹಾಗೆಯೇ ರಾಮಾಯಣದಂತಹ ಧರ್ಮಗ್ರಂಥಗಳ ಬಗ್ಗೆಯೂ ಅವಹೇಳನಕಾರಿ ಹಾಸ್ಯ ಮಾಡಲಾಗುತ್ತಿದೆ.

೪. ‘ಬಿಬಿಸಿ ನ್ಯೂಸ್‌’ನ ಹಿಂದೂದ್ವೇಷವನ್ನು ತಿಳಿಯಿರಿ !

‘ಬಿಬಿಸಿ ನ್ಯೂಸ್’ ಇದು ‘ಇಂಡಿಯಾ: ದ ಮೋದಿ ಕ್ವೆಶ್ಚನ್’ ಶೀರ್ಷಿಕೆಯಡಿಯಲ್ಲಿ  ಎರಡು ಭಾಗಗಳ ಸರಣಿಯನ್ನು ಮಾಡಿದೆ. ಅದರಲ್ಲಿ ೨೦೦೨ ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಮತ್ತು ಗಲಭೆಯಲ್ಲಿ ನೂರಾರು ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಪಾತ್ರವಿದೆ ಎಂದು ಅದು ಆರೋಪಿಸಿದೆ.

೫. ಭಾರತದಲ್ಲಿ ಹಿಂದೂ ಧರ್ಮಗ್ರಂಥಗಳ ಕಲಿಕೆಯನ್ನು ಕಡ್ಡಾಯಗೊಳಿಸಿ !

ಪಾಕಿಸ್ತಾನವು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕುರಾನ್‌ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಕುರಾನ್‌ ಓದಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.  ಈ ಕಾರಣದಿಂದಾಗಿ, ಹಿಂದೂ ಮತ್ತು ಇತರ ಸಮುದಾಯಗಳ ವಿದ್ಯಾರ್ಥಿಗಳು ಕೂಡ ಕುರಾನ್‌ ಓದಬೇಕಾಗುತ್ತದೆ.

೬. ಅಂತಹ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಶಾಶ್ವತ ನಿಷೇಧಿಸಿ !

ಹರಿದ್ವಾರದ (ಉತ್ತರಾಖಂಡ) ೭ ಮಸೀದಿಗಳಿಗೆ ಬೋಂಗಾಗಳ ಮೂಲಕ ಶಬ್ದ ಮಾಲಿನ್ಯ ಮಾಡಿದ್ದಕ್ಕಾಗಿ ತಲಾ ೫ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.  ಉಪಜಿಲ್ಲಾಧಿಕಾರಿ ಪುರಣಸಿಂಗ್‌ ರಾಣಾ ಇವರು ಈ ಕ್ರಮ ಕೈಗೊಂಡಿದ್ದಾರೆ.

೭. ಹಿಂದೂಗಳು ‘ಹಲಾಲ್’ ಮಾಂಸವನ್ನು ಯಾವಾಗ ವಿರೋಧಿಸುತ್ತಾರೆ ?

ಬಂಗಾಳದ ಪೂರ್ವ ಮೇದಿನಿಪುರದ ಸರಕಾರಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವೇಳೆ ಝಟಕಾ  ಪದ್ಧತಿಯ ಮಾಂಸವನ್ನು ಬಡಿಸಿದ್ದರಿಂದ ಅವರ ಪೋಷಕರು ಪ್ರತಿಭಟನೆ ನಡೆಸಿದರು.