ಮುರಾದಾಬಾದ (ಉತ್ತರಪ್ರದೇಶ)ನ ಹಿಂದೂ ಮಹಾವಿದ್ಯಾಲಯದಲ್ಲಿ ಸಮವಸ್ತ್ರದ ಬದಲು ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ !

ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಹಿಂದೂ ಮಹಾವಿದ್ಯಾಲಯದಲ್ಲಿನ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದ ಬದಲು ಬುರ್ಖಾ ಧರಿಸಿ ಬಂದಿದ್ದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಅವರಿಗೆ ಗೇಟ್ ಹೊರಗೆ ಬುರ್ಖಾ ತೆಗೆಸಿದ ನಂತರ ಒಳಗೆ ಬಿಡಲಾಯಿತು. ಈ ಸಮಯದಲ್ಲಿ ಕೆಲವು ವಿದ್ಯಾರ್ಥಿನಿಗಳು ಬುರ್ಖಾದಲ್ಲೇ ತರಗತಿಯ ತನಕ ಹೋಗಲು ಆಗ್ರಹಿಸಿದರು; ಆದರೆ ಅದನ್ನು ನಿರಾಕರಿಸಲಾಯಿತು. ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಗೆ ಈ ಮಾಹಿತಿ ದೊರೆಯುತ್ತಲೇ ಅದರ ಕಾರ್ಯಕರ್ತರು ಅಲ್ಲಿಗೆ ತಲುಪಿದರು. ಆಗ ಅವರ ಮತ್ತು ಮಹಾವಿದ್ಯಾಲಯದ ಪ್ರಾಧ್ಯಾಪಕರಲ್ಲಿ ಹೊಡೆದಾಟ ನಡೆದಿರುವ ವಾರ್ತೆ ಇದೆ. ಜನವರಿ ೧ ರಿಂದ ಈ ಮಹಾವಿದ್ಯಾಲಯದಿಂದ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಈ ಬಗ್ಗೆ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಯಿಂದ ಬುರ್ಖಾ ಕೂಡ ಇದರಲ್ಲಿ ಸೇರಿಸಬೇಕೆಂದು ಆಗ್ರಹಿಸಿತ್ತು.

ಇದರ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ ಪಿ ಸಿಂಹ ಇವರು, ಮಹಾವಿದ್ಯಾಲಯದಲ್ಲಿ ಸಮವಸ್ತ್ರ ನಿರ್ಧರಿಸಲಾಗಿದೆ. ಯಾರು ಇದರ ಪಾಲನೆ ಮಾಡುವುದಿಲ್ಲ, ಅವರಿಗೆ ಮಹಾವಿದ್ಯಾಲಯ ಪರಿಸರದಲ್ಲಿನ ಪ್ರವೇಶ ನಿರಾಕರಿಸಲಾಗುವುದು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಮವಸ್ತ್ರ ಕಡ್ಡಾಯದ ನಿಯಮ ಇರುವಾಗ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅವರು ಸರಿದಾರಿಗೆ ಬರುವರು !