ಗೋವಾದಲ್ಲಿ ‘ಪಿ.ಎಫ್.ಐ.’ಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಪ್ರಚೋದನೆ !

ಗೋವಾದ ಮಡಗಾವ್‌ನಲ್ಲಿ ವಿದ್ಯಾರ್ಥಿಗಳಿಂದ ಗಂಭೀರ ಆರೋಪ

‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳಿಂದ ಗಂಭೀರ ಆರೋಪ

ಮಡಗಾವ್, ಫೆಬ್ರವರಿ ೧೧ (ವಾರ್ತೆ) – ‘ಪಿ.ಎಫ್.ಐ.’ ಈ ನಿಷೇಧಿಸಲ್ಪಟ್ಟ ಭಯೋತ್ಪಾದಕ ಸಂಘಟನೆಯು ಕೆಲವು ರಾಜಕಾರಣಿಗಳ ಬೆಂಬಲದಿಂದ ಇಲ್ಲಿ ಮುಸಲ್ಮಾನ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮಡಗಾವ್ ಪರಿಸರದ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿನ ಸೌಹಾರ್ದತೆಯ ವಾತಾವರಣವನ್ನು ಕೆಡಿಸುತ್ತಿದೆ ಎಂದು ಮಡಗಾವ್‌ನ ಹೌಸಿಂಗ್ ಬೋರ್ಡ್‌ನಲ್ಲಿನ ‘ಮಲ್ಟಿಪರ್ಪಸ್ ವಿದ್ಯಾಲಯ’ದ ವಿದ್ಯಾರ್ಥಿಗಳು ಪತ್ರಕರ್ತರೊಂದಿಗೆ ಮಾತನಾಡುವಾಗ ಆರೋಪಿಸಿದ್ದಾರೆ.

೧. ವಿದ್ಯಾರ್ಥಿಗಳು, ಈ ಮುಸಲ್ಮಾನ ವಿದ್ಯಾರ್ಥಿಗಳು ಇತರ ಧರ್ಮದ ವಿದ್ಯಾರ್ಥಿಗಳಿಗೆ ಚೇಷ್ಟೆ ಮಾಡುತ್ತಾರೆ. ಅವರಿಗೆ ಬೈಯ್ಯುತ್ತಾರೆ, ಬೆದರಿಸುತ್ತಾರೆ ಹಾಗೂ ಈ ವಿಷಯದಲ್ಲಿ ಕೇಳಿದರೆ ಹೊಡೆಯುತ್ತೇವೆಯೆಂದು ಬೆದರಿಸುತ್ತಾರೆ ಎಂದು ಆರೋಪಿಸಿದ್ದಾರೆ. ಈ ಮುಸಲ್ಮಾನ ವಿದ್ಯಾರ್ಥಿಗಳು ಮಡಗಾವ್‌ನ ಹೌಸಿಂಗ್‌ಬೋರ್ಡ್‌ನವರಾಗಿದ್ದಾರೆ. ‘ಪೊಲೀಸರಲ್ಲಿ ದೂರು ನೀಡಿದರೆ ನನ್ನ ಜೊತೆಗೆ ಹೌಸಿಂಗ್ ಬೋರ್ಡ್ ಮತ್ತು ಮೋತೀ ಡೋಂಗರ್‌ನ ಜನರಿದ್ದಾರೆ’, ಎಂದು ಹೇಳುತ್ತಾರೆ. ಇವೆರಡೂ ಸ್ಥಳಗಳಲ್ಲಿ ಮುಸಲ್ಮಾನರ ದೊಡ್ಡ ವಸತಿ ಇದೆ.

೨. ಓರ್ವ ಶಿಕ್ಷಕರು ಇಂತಹ ಓರ್ವ ವಿದ್ಯಾರ್ಥಿಯ ವಿರುದ್ಧ ಕ್ರಮ ತೆಗೆದುಕೊಂಡಾಗ ಸಂಬಂಧಪಟ್ಟ ಶಿಕ್ಷಕರ ವಾಹನವನ್ನು ಮುಸಲ್ಮಾನ ವಿದ್ಯಾರ್ಥಿಗಳು ಒಡೆದು ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

೩. ಓರ್ವ ವಿದ್ಯಾರ್ಥಿಯನ್ನು ವಿದ್ಯಾಲಯದ ಪರಿಸರದಲ್ಲಿ ಥಳಿಸಿದರೂ ಸಂಬಂಧಪಟ್ಟ ವಿದ್ಯಾಲಯದ ಆಡಳಿತದವರು ಯಾವುದೇ ಕ್ರಮತೆಗೆದುಕೊಳ್ಳದಿದ್ದಾಗ ಕೊನೆಗೆ ಇನ್ನೊಬ್ಬ ವಿದ್ಯಾರ್ಥಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನು. ದೂರು ನೀಡಿದ್ದಕ್ಕಾಗಿ ಅವನನ್ನು ಮುಸಲ್ಮಾನ ವಿದ್ಯಾರ್ಥಿಗಳು ಥಳಿಸಿದರು. ಪೊಲೀಸರು ದೂರು ನೀಡಿದ ವಿದ್ಯಾರ್ಥಿಯ ಪಾಲಕರಿಗೆ ‘ಈ ಪ್ರಕರಣದಲ್ಲಿ ವಿದ್ಯಾಲಯದ ಆಡಳಿತದವರು ಕ್ರಮ ತೆಗೆದುಕೊಳ್ಳುವುದಿಲ್ಲವೇಕೇ ?’, ಎಂದು ಪ್ರಶ್ನಿಸಿದರು.

೪. ಇಂತಹ ಘಟನೆಗಳು ಮಡಗಾವ್ ಪರಿಸರದಲ್ಲಿನ ಅನೇಕ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ನಡೆಯುತ್ತಿವೆಯೆಂದು ವಿದ್ಯಾರ್ಥಿಗಳ ಆರೋಪವಿದೆ.

ಮಡಗಾವ್‌ನಲ್ಲಿ ಮುಸಲ್ಮಾನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ

ಮಡಗಾವ್ ಪರಿಸರದಲ್ಲಿನ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ಶೇ. ೦.೫ ರಿಂದ ಶೇ. ೩೦ ರಷ್ಟಾಗಿದೆ. ಕೆಲವರ ಅನುಮಾನಕ್ಕನುಸಾರ ಮುಂದಿನ ದಶಕದ ಕೊನೆಗೆ ಮಡಗಾವ್ ಪರಿಸರದಲ್ಲಿ ಮುಸಲ್ಮಾನರ ಸಂಖ್ಯೆ ಶೇ. ೬೦ ರಷ್ಟಾಗುವ ಸಾಧ್ಯತೆ ಇದೆ.

ಮತಾಂಧರ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಬೆಂಬಲವಿಲ್ಲ : ಪಾಲಕರ ಚಿಂತೆ !

ಮತಾಂಧ ವಿದ್ಯಾರ್ಥಿಗಳ ವಿರುದ್ಧ ದೂರು ನೀಡುವ ವಿದ್ಯಾರ್ಥಿ ಅಥವಾ ಕ್ರಮ ತೆಗೆದುಕೊಳ್ಳುವ ಶಿಕ್ಷಕರಿಗೆ ತರಗತಿಯ ಇತರ ವಿದ್ಯಾರ್ಥಿಗಳು ಅಥವಾ ಶಿಕ್ಷಕರಿಂದ ಬೆಂಬಲ ಸಿಗುವುದಿಲ್ಲ, ಎಂದು ಕೂಡ ವಿದ್ಯಾರ್ಥಿಗಳು ಹೇಳಿದ್ದಾರೆ. ದೂರು ನೀಡುವ ವಿದ್ಯಾರ್ಥಿಗಳ ಪಾಲಕರೂ ಚಿಂತೆಯಲ್ಲಿದ್ದಾರೆ. ಪಾಲಕರ ಅಭಿಪ್ರಾಯದಲ್ಲಿ ಅವರಿಗೆ ಈ ಪ್ರಕರಣದಲ್ಲಿ ವಿದ್ಯಾಲಯದ ಆಡಳಿತ, ಪೊಲೀಸ್ ಹಾಗೂ ಸರಕಾರದ ಬೆಂಬಲ ನೀಡಬೇಕು ಹಾಗೂ ವಿದ್ಯಾರ್ಥಿಗಳ ರಕ್ಷಣೆಯ ಕಡೆಗೆ ಗಮನಹರಿಸಬೇಕು, ಎಂದು ಅನಿಸುತ್ತದೆ.
(ಮತಾಂಧರ ಉದ್ದಟತನದ ವಿರುದ್ಧ ಸಂಘಟಿತರಾಗಿ ಕಾನೂನು ಮಾರ್ಗದಲ್ಲಿ ಕೃತಿ ಮಾಡಿದರೆ ಅವರಿಗೆ ಕಡಿವಾಣ ಬೀಳಬಹುದು ಎಂಬುದನ್ನು ಗಮನದಲ್ಲಿಡಬೇಕು ! -ಸಂಪಾದಕರು)

ಸಂಪಾದಕೀಯ ನಿಲುವು

  • ‘ಪಿ.ಎಫ್.ಐ.’ಯ ಮೇಲೆ ನಿಷೇಧವಿದ್ದರೂ ಅದರ ಕಾರ್ಯಕರ್ತರು ರಹಸ್ಯವಾಗಿ ಸಕ್ರಿಯರಾಗಿದ್ದಾರೆ ಎಂಬುದು ಈ ಘಟನೆಯಿಂದ ಕಂಡುಬರುತ್ತದೆ.
    ಗೋವಾ ಸರಕಾರ ಈ ವಿಷಯದಲ್ಲಿ ತಕ್ಷಣ ಗಮನ ಹರಿಸಿ ‘ಪಿ.ಎಫ್.ಐ.’ಯ ಮೇಲೆ ಕಠಿಣ ಕ್ರಮತೆಗೆದುಕೊಳ್ಳಬೇಕು !
  • ಈ ಪ್ರಕರಣಯ ತನಿಖೆ ನಡೆಸಿ ಗೋವಾ ಸರಕಾರ ಸಂಬಂಧಪಟ್ಟವರು ನಿಜವಾಗಿಯೂ ವಿದ್ಯಾರ್ಥಿಗಳಾಗಿದ್ದಾರೆಯೆ ? ಎಂಬುದನ್ನು ಪರಿಶೀಲಿಸಿ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಬೇಕು !
  • ಮಡಗಾವ್‌ನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವಾಗ ಪೊಲೀಸರು ಏನು ಮಾಡುತ್ತಿದ್ದಾರೆ ?