ಮಧ್ಯಪ್ರದೇಶದ ಸರಕಾರಿ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತಾ, ರಾಮಾಯಣ, ಮಹಾಭಾರತ, ವೇದ ಮತ್ತು ಉಪನಿಷತ್ ಕಲಿಸಲಾಗುವುದು !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ !

ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಸರಕಾರಿ ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದ ಮತ್ತು ಉಪನಿಷತ್ತುಗಳನ್ನು ಕಲಿಸಲಾಗುವುದು. ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್ ಇವರು ಒಂದು ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಿದರು. ಮುಖ್ಯಮಂತ್ರಿ ಚೌಹಾಣ್ ಇವರು, ಈ ಗ್ರಂಥಗಳಲ್ಲಿ ಮನುಷ್ಯನನ್ನು ಪರಿಪೂರ್ಣ ಮಾಡುವ ಕ್ಷಮತೆ ಇದೆ. ಆದ್ದರಿಂದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಈ ಪುಸ್ತಕಗಳ ಶಿಕ್ಷಣ ಕೂಡ ನೀಡಲಾಗುವುದು ಎಂದು ಹೇಳಿದರು.

ಸಂಪಾದಕರ ನಿಲುವು

ಈ ರೀತಿಯ ನಿರ್ಣಯವನ್ನು ಕೇಂದ್ರ ಸರಕಾರವು ದೇಶಾದ್ಯಂತದ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಾಗಿ ಕೈಗೊಳ್ಳಬೇಕು. ಅದಕ್ಕಾಗಿ ಬೇಕಿದ್ದರೆ ಕಾನೂನು ಕೂಡ ರೂಪಿಸಬೇಕು !