32 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಖಾಸಗಿ ಶಾಲೆಯಲ್ಲಿ ಹಿಂದಿಯನ್ನು ಕಲಿಸಲಾಗುವುದು !

ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ–ಕಾಶ್ಮೀರದಲ್ಲಿ 32 ವರ್ಷಗಳ ಬಳಿಕ ಪ್ರಥಮಬಾರಿಗೆ 10 ನೇ ತರಗತಿಯ ವರೆಗೆ ಹಿಂದಿ ಭಾಷೆಯನ್ನು ಕಲಿಸಲಾಗುವುದು. ‘ಜಮ್ಮೂ-ಕಾಶ್ಮೀರ ಸ್ಟೇಟ ಕೌನ್ಸಿಲ್ ಆಫ್ ಎಜ್ಯುಕೇಶನ ರಿಸರ್ಚ ಅಂಡ ಟ್ರೇನಿಂಗ’ ಇದಕ್ಕಾಗಿ 8 ಸದಸ್ಯರ ಒಂದು ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿ ಬರುವ ಫೆಬ್ರವರಿ 20 ರ ವರೆಗೆ ಕಾಶ್ಮೀರದಲ್ಲಿರುವ 3 ಸಾವಿರಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಹಿಂದಿ ಕಲಿಸುವಂತೆ ಶಿಫಾರಸ್ಸು ಮಾಡಲಿದೆ. ಜಮ್ಮೂವಿನಲ್ಲಿ ಹಿಂದಿ ಕಲಿಸಲಾಗುತ್ತದೆ. ಆದರೆ ಕಾಶ್ಮೀರದಲ್ಲಿ 1990 ರಿಂದ ಹಿಂದಿ ಕಲಿಸುವುದನ್ನು ನಿರ್ಬಂಧಿಸಲಾಗಿದೆ. ಅದಕ್ಕಿಂತ ಮೊದಲು ಶೇ. 70 ರಷ್ಟು ಖಾಸಗಿ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸಲಾಗುತ್ತಿತ್ತು. ಈಗ ಇಲ್ಲಿ ಹಿಂದಿ ಶಿಕ್ಷಕರೂ ಸಿಗುತ್ತಿಲ್ಲ.

1. ಕಾಶ್ಮೀರದಲ್ಲಿ ಭಾಜಪ ವಕ್ತಾರ ಅಲ್ತಾಫ ಠಾಕೂರ ಇವರು, ಭಾಷೆ ಯಾವುದೇ ಧರ್ಮಕ್ಕೆ ಸಂಬಂಧಿಸಿರುವುದಿಲ್ಲ. ದೇಶದ ಇತರೆ ರಾಜ್ಯಗಳಲ್ಲಿಯೂ ಮುಸಲ್ಮಾನ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕಲಿಯುತ್ತಾರೆ ಎಂದು ಹೇಳಿದರು.

2. ಗುಪಕಾರ ಸಂಘದ ವಕ್ತಾರ ಮಹ್ಮದ ಯುಸೂಫ ತಾರಿಗಾಮಿಯವರು ಇದನ್ನು ವಿರೋಧಿಸುತ್ತಾ, ಭಾಜಪ ಆದೇಶದಿಂದ ಕಾಶ್ಮೀರದಲ್ಲಿರುವ ಖಾಸಗಿ ಶಾಲೆಗಳಲ್ಲಿ ಹಿಂದಿ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ವಿರೋಧಿಸಲಾಗುವುದು. ಹಿಂದಿ ಭಾಷೆಗೆ ಇತರೆ ಭಾಷೆಗಳಂತೆ ಮಹತ್ವ ನೀಡುವುದೆಂದರೆ, ರಾಷ್ಟ್ರೀಯ ಏಕತೆಗೆ ಆಘಾತ ಮಾಡುವಂತಹದ್ದಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಮತ್ತು ಸರಕಾರಿ ಆಡಳಿತದಲ್ಲಿ ಉರ್ದು ಭಾಷೆಯನ್ನು ಸ್ವೀಕರಿಸಲಾಗಿದೆ. 1920 ರಲ್ಲಿ ಮಹಾರಾಜಾ ಹರಿಸಿಂಹ ಇವರು ಉರ್ದು ಅಧಿಕೃತ ಭಾಷೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.