ಶ್ರೀಗಣೇಶಯಾಗದಲ್ಲಿನ ಅಭಿಮಂತ್ರಿತ ಜಲದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಯು.ಟಿ.ಎಸ್. (Universal Thermo Scanner) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಜ್ಞಾನಿಕ ಪರೀಕ್ಷೆ !

img_4015_clr
ಎಡದಿಂದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀ ಗಣೇಶ ಯಾಗದಲ್ಲಿ ಪೂರ್ಣಾಹುತಿ ನೀಡುತ್ತಿರುವ ಸಾಧಕ-ಪುರೋಹಿತರು

ಯಜ್ಞವೆಂಬುದು ಸನಾತನ ವೈದಿಕ ಧರ್ಮದ ಒಂದು ಮಹತ್ವದ ಅಂಗವಾಗಿದೆ. ಧರ್ಮಗ್ರಂಥಗಳಲ್ಲಿ ರಾಜಸೂಯ, ಅಶ್ವಮೇಧ, ಪುತ್ರಕಾಮೇಷ್ಟಿ ಇತ್ಯಾದಿ ಯಜ್ಞಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿ ಯಿದೆ. ಧರ್ಮಗ್ರಂಥಗಳಲ್ಲಿ ವರ್ಣಿಸಿದ ಯಜ್ಞಗ ಳಿಂದ ಸಮಾಜಕ್ಕೆ ಲಾಭವಾಗಬೇಕೆಂದು ಕೆಲವು ಸಂತರು ಪ್ರಯತ್ನಿಸುತ್ತಿದ್ದಾರೆ. ಸಂತರ ನಿರಂತರ ಪ್ರಯತ್ನ ದಿಂದಲೇ ಯಜ್ಞಸಂಸ್ಕೃತಿ ಉಳಿದಿದೆ. ತಮಿಳುನಾಡಿನ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನ ಮಾಡುವ ಪೂ. ಡಾ. ॐ ಉಲಗನಾಥನ್ ಇವರು ಸನಾತನ ಆಶ್ರಮದಲ್ಲಿ ಶ್ರೀ ಗಣೇಶಯಾಗ ಮಾಡಿ ಅದರ ಅಭಿಮಂತ್ರಿತ ನೀರನ್ನು ಆಶ್ರಮದಲ್ಲಿ ಎಲ್ಲ ಕಡೆ ಸಿಂಪಡಿಸಬೇಕೆಂದು ನಾಡಿಪಟ್ಟಿಯಲ್ಲಿ ಋಷಿಗಳ ಆಜ್ಞೆಯಿದೆಯೆಂದು ಹೇಳಿ ದರು. ಅದಕ್ಕನುಸಾರ ಧರ್ಮಪ್ರಸಾರದ ಕಾರ್ಯದಲ್ಲಿನ ಅಡಚಣೆಗಳು ದೂರವಾಗಿ ಸಾಧಕರ ರಕ್ಷಣೆಯಾಗಬೇಕೆಂದು ೧೨ ರಿಂದ ೧೪.೯.೨೦೧೬ ಈ ಅವಧಿಯಲ್ಲಿ ಗೋವಾದ ಸನಾತನ ಆಶ್ರಮದಲ್ಲಿ ಶ್ರೀ ಗಣೇಶಯಾಗ (ಯಜ್ಞ) ಮಾಡಲಾಯಿತು. ಅದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಯಾಗದ ಸಮಯದಲ್ಲಿ ಉಪಯೋಗಿಸಿದ ಕಲಶದಲ್ಲಿನ ನೀರನ್ನು ಯು.ಟಿ.ಎಸ್.  (Universal Thermo Scanner) ಈ ಉಪಕರಣದ ಸಹಾಯದಿಂದ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಯ ನಿರೀಕ್ಷಣೆ ಮತ್ತು ಅದರ ವಿವರಣೆಯನ್ನು ಮುಂದೆ ನೀಡಲಾಗಿದೆ. 

Read moreಶ್ರೀಗಣೇಶಯಾಗದಲ್ಲಿನ ಅಭಿಮಂತ್ರಿತ ಜಲದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಯು.ಟಿ.ಎಸ್. (Universal Thermo Scanner) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಜ್ಞಾನಿಕ ಪರೀಕ್ಷೆ !

ತಮಿಳುನಾಡಿನಲ್ಲಿ ಶಿವನ ಪ್ರತ್ಯಕ್ಷ ಹೃದಯಸ್ಥಾನವಾಗಿರುವ ಚಿದಂಬರಮ್ ಕ್ಷೇತ್ರದ ಪ್ರಸಿದ್ಧ ನಟರಾಜ ದೇವಸ್ಥಾನದ ಸ್ಥಾನಮಹಾತ್ಮೆ !

೧. ಚಿದಂಬರಮ್ ಎಂದರೆ ಆಕಾಶತತ್ತ್ವಕ್ಕೆ ಸಂಬಂಧಿಸಿದ ಶಿವಕ್ಷೇತ್ರ ! ಮಹರ್ಷಿಗಳು ನಾಡಿವಾಚನದಲ್ಲಿ ಹೇಳಿದಂತೆ ನಾವು ೧೦.೮.೨೦೧೬ ರಂದು ಚಿದಂಬರಮ್ ಕ್ಷೇತ್ರದ ನಟರಾಜ ದೇವಸ್ಥಾನಕ್ಕೆ  ದರ್ಶನಕ್ಕಾಗಿ ಹೋಗಿದ್ದೆವು. ಇದು ಆಕಾಶತತ್ತ್ವಕ್ಕೆ ಸಂಬಂಧಿ ಸಿದ ಶಿವಕ್ಷೇತ್ರವಾಗಿದೆ. ಈ ದೇವಸ್ಥಾನವು ಶಿವನ ಒಂದು ರಹಸ್ಯಮಯ ಸ್ಥಾನವಾಗಿದೆ. ಇದನ್ನೇ ‘ಚಿದಂಬರಮ್ ರಹಸ್ಯ’ ಎಂದು ಕರೆಯುತ್ತಾರೆ. ಇದು ಶಿವನ ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿದ ಕ್ಷೇತ್ರವಾಗಿದೆ. ೨. ದೇವಸ್ಥಾನದ ಸ್ಥಾನ ಮಹಾತ್ಮೆ  ೨ ಅ. ವ್ಯಾಘ್ರಪಾದ ಮಹರ್ಷಿ ಮತ್ತು ಪತಂಜಲಿ ಮಹರ್ಷಿಯವರ  ತಪೋಸ್ಥಾನ : ಇಲ್ಲಿ ಹಿಂದೆ ಅರಣ್ಯವಿತ್ತು. ಈ ಅರಣ್ಯದಲ್ಲಿ ವ್ಯಾಘ್ರಪಾದ ಮಹರ್ಷಿ ಮತ್ತು ಪತಂಜಲಿ  ಮಹರ್ಷಿಗಳು  ತಪಶ್ಚರ್ಯ  ಮಾಡುತ್ತಿದ್ದರು. ಒಮ್ಮೆ ಇವರಿಬ್ಬರೂ ಶಿವನಿಗೆ ‘ಹೇ ದೇವರೇ, ನಾವು ನಿನ್ನ ತಾಂಡವ ನೃತ್ಯವನ್ನು ನೋಡಲು ಬಯಸುತ್ತೇವೆ’, ಎಂದು ಪ್ರಾರ್ಥನೆ ಮಾಡಿದರು. ೨ ಆ. ಶಿವ-ಪಾರ್ವತಿಯರು  ಇಬ್ಬರು  ಮಹರ್ಷಿಗಳಿಗಾಗಿ  ಪ್ರತ್ಯಕ್ಷ  ಕೈಲಾಸದಿಂದ  ಪೃಥ್ವಿಯ  ಮೇಲೆ  ಬಂದು  ತಾಂಡವನೃತ್ಯದ  ದರ್ಶನ  ನೀಡುವುದು : ಆಗ  ಕೈಲಾಸದಿಂದ  ಶಿವ-ಪಾರ್ವತಿಯರು  ಪ್ರತ್ಯಕ್ಷ ಪೃಥ್ವಿಯ ಮೇಲೆ ಇಳಿದುಬಂದರು. ಅವರಿಬ್ಬರೂ ಮಹರ್ಷಿಗಳಿಗೆ ಇದೇಸ್ಥಳದಲ್ಲಿ ಒಟ್ಟಿಗೆಸೇರಿ ಆನಂದ ತಾಂಡವವನ್ನು ಮಾಡಿತೋರಿಸಿದರು.  ಇದೇ  ಸ್ಥಳದಲ್ಲಿ  ಅವರು  ಇಬ್ಬರಿಗೂ  ರುದ್ರತಾಂಡವ  ನೃತ್ಯದ ದರ್ಶನವನ್ನೂ ಮಾಡಿಸಿದರು. ೨ ಇ. ಶಿವನು ತನ್ನ ಸಗುಣ ಗುರುತು ಎಂದು ಪ್ರತ್ಯಕ್ಷ ನಟರಾಜ ಮೂರ್ತಿಯ ರೂಪದಲ್ಲಿ ಪ್ರಕಟವಾಗುವುದು ಮತ್ತು ಈ ನಟರಾಜ ಮೂರ್ತಿಯು ಚಿದಂಬರಮ್ ಕ್ಷೇತ್ರದಲ್ಲಿರುವುದು :  ತಾಂಡವ ನೃತ್ಯವನ್ನು ಕಂಡು ಮೈಮರೆತ ಮಹರ್ಷಿಗಳು ಶಿವನಿಗೆ ಪ್ರಾರ್ಥನೆ ಮಾಡಿದರು, ಹೇ ದೇವಾ, ನಿಮ್ಮ ಈ ನೃತ್ಯದ ಅಸ್ತಿತ್ವದ ಗುರುತು  ಎಂದು  ನಮಗೆ  ಸಗುಣರೂಪದಲ್ಲಿ  ನೋಡಲು  ಏನಾದರೂ  … Read more

ಮಹರ್ಷಿಗಳು ನೀಡುತ್ತಿರುವ ಆಪತ್ಕಾಲದ ಸೂಚನೆ ಪ್ರಯಾಣಿಸುವ ಮೊದಲು ಲಿಂಬೆಹಣ್ಣಿನ ಉಪಾಯವನ್ನು ಮಾಡಿಯೇ ಹೊರಡಿ !

ಈಗ ಆಪತ್ಕಾಲ ಪ್ರಾರಂಭವಾಗಿರುವುದರಿಂದ ಮಹರ್ಷಿಗಳು ನಮಗೆ ಯಾವಾಗಲೂ ಪ್ರಯಾಣ ಪ್ರಾರಂಭಿಸುವ ಮೊದಲು ನಾಲ್ಕು ಲಿಂಬೆ ಹಣ್ಣುಗಳನ್ನು ವಾಹನದ ನಾಲ್ಕು ಚಕ್ರಗಳ ಕೆಳಗೆ ಇಡಲು ಹೇಳಿ ಬಳಿಕ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆಯಲು ಹೇಳುತ್ತಾರೆ. ನಂತರ ನನಗೆ ಒಂದು ಲಿಂಬೆ ಹಣ್ಣನ್ನು ಎಡಗಾಲಿನಿಂದ ತುಳಿಯಲು ಹೇಳಿ ನಂತರವೇ ಪ್ರಯಾಣ ಪ್ರಾರಂಭಿಸಿರಿ, ಎಂದು ಹೇಳುತ್ತಾರೆ. ಪ್ರತೀಬಾರಿಯೂ ನಾವು ಮಹರ್ಷಿಗಳು ಹೇಳಿರುವಂತೆ ಉಪಾಯವನ್ನು ಮಾಡಿಯೇ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಎಡಗಾಲಿನಿಂದ ಲಿಂಬೆಹಣ್ಣನ್ನು ತುಳಿಯುವಾಗ ಒಂದು ವೇಳೆ ಅದು ಕಾಲಿನಡಿಯಿಂದ ಜಾರಿದರೆ, ಮಹರ್ಷಿಗಳು ಆ ದಿನ ಪ್ರಯಾಣವನ್ನು ಮುಂದುವ ರಿಸದೇ ನಮಗೆ ಆ ಸ್ಥಳದಲ್ಲಿಯೇ ವಾಸ್ತವ್ಯವಿರುವಂತೆ ತಿಳಿಸಿದ್ದಾರೆ. ಈ ದಿನವೂ ಅದೇ ರೀತಿ ನಡೆಯಿತು. ನವರಾತ್ರಿಯ ಎರಡನೇ ದಿನ ಅಂದರೆ ೨.೧೦.೨೦೧೬ ರಂದು ನಾವು ಹೊಸೂರಿನಿಂದ ಕಾಂಚಿಪುರಂಗೆ ಪ್ರಯಾಣಿಸಲು ಹೊರಟಿದ್ದೆವು. ಆ ಸಮಯದಲ್ಲಿ ವಾಹನದ ಎದುರಿಗೆ  ಕಾಲನಡಿಯಿಂದ ಲಿಂಬೆಹಣ್ಣನ್ನು ತುಳಿಯುವಾಗ ನನ್ನ ಕಾಲಿನಡಿಯಿಂದ ಲಿಂಬೆಹಣ್ಣು ಜಾರಿತು. ಈ ಕುರಿತು ನಾವು ಮಹರ್ಷಿಗಳಿಗೆ ಪ್ರಾರ್ಥಿಸಿ ‘ಮತ್ತೊಮ್ಮೆ ಪ್ರಾರ್ಥನೆ ಮಾಡಿ ಲಿಂಬೆಹಣ್ಣಿನ ಉಪಾಯವನ್ನು ಮಾಡಬಹುದೇ ? ಎಂದು ಕೇಳಿದಾಗ ಅವರು ಅನುಮತಿ ನೀಡಿದರು. ಮತ್ತೊಮ್ಮೆ ಅದೇ ಲಿಂಬೆಹಣ್ಣನ್ನು ಪ್ರಾರ್ಥನೆ ಮಾಡಿ ತುಳಿದಾಗ ಅದು ಸರಿಯಾಗಿ ಹೋಳಾಯಿತು. ಬಳಿಕ ಮಹರ್ಷಿಗಳು ‘ಈಗ ನೀವು ಪ್ರಯಾಣ ಮುಂದುವರಿಸಿ;ಆದರೆ ಇಂದು ನಿಮ್ಮ ವಾಹನ ಚಾಲಕನು ಯಾವುದೇ ಕಾರಣಕ್ಕೂ ಮುಂದೆ ಇರುವ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನಿಸಬಾರದು. (ಓವರ್‌ ಟೇಕ್ ಮಾಡಬಾರದು) ಎಂದು ಹೇಳಿದರು. ಮಹರ್ಷಿಗಳ ಆಜ್ಞೆಯನ್ನು ಮನ್ನಿಸಿ ನಾವು ನಮ್ಮ ಪ್ರಯಾಣ ಮುಂದುವರಿಸಿದೆವು. ಇದನ್ನು ಗಮನಿಸಿದಾಗ, ಕಾಲವು ಎಷ್ಟೇ ಕಠಿಣವಾಗಿದ್ದರೂ, ಅಡೆತಡೆಗಳು ಎದುರಾದರೂ ಮಹರ್ಷಿಗಳು ನಮ್ಮ ಕಾರ್ಯವನ್ನು ನಿಲ್ಲಲು ಬಿಡುವುದಿಲ್ಲ. ಅದಕ್ಕೂ ಉಪಾಯವನ್ನು ತಿಳಿಸಿ, ಸರಿಯಾಗಿ ಕಾಳಜಿ ವಹಿಸುವಂತೆ ತಿಳಿಸುತ್ತಾರೆ. ಆಪತ್ಕಾಲದಲ್ಲಿ ಆಯಾ ಸಮಯದಲ್ಲಿ ಮಹರ್ಷಿಗಳು ನೀಡುತ್ತಿರುವ ಇಂತಹ ಸೂಚನೆಗಳಿಂದಲೇ ನಮ್ಮ ಮುಂದಿನ ಪ್ರಯಾಣ ನಿರ್ವಿಘ್ನವಾಗಿ ಸಾಗುತ್ತಿದೆ. ಮಹರ್ಷಿಗಳ ಕೃಪೆ ಅಗಾಧವಾಗಿದೆ ! – (ಸದ್ಗುರು) ಸೌ. ಅಂಜಲಿ ಗಾಡಗೀಳ, ಕಾಂಚೀಪುರಂ, ತಮಿಳು ನಾಡು (೨.೧೦.೨೦೧೬, ರಾತ್ರಿ ೮.೦೪)

ಸಾಧನೆಗಾಗಿ ಆಸನ ಹೇಗಿರಬೇಕು ?

1392307954_deepak-joshi
       ಡಾ. ದೀಪಕ ಜೋಶಿ

ಸಾಧನೆಗೆ ಮರದ ಹಲಗೆ ನಿಷೇಧಿಸಲು ಕಾರಣಗಳು

ಸಾಧನೆಗಾಗಿ ಹುಣಸೆ, ನೇರಳೆ ಮುಂತಾದ ಕೆಲವು ಮರಗಳ ಹಲಗೆಗಳ ಆಸನವನ್ನು ನಿಷೇಧಿಸಲಾಗಿದೆ. ಇಂತಹ ಹೆಸರಿನ ಪಟ್ಟಿಯನ್ನು ಕೊಡುವುದಕ್ಕಿಂತ ಕೆಲವು ಗ್ರಂಥಗಳಲ್ಲಿ ಒಟ್ಟು ಹಲಗೆಗಳ ಆಸನಗಳನ್ನು ನಿಷೇಧಿಸಲಾಗಿದೆಯೆಂದು ಹೇಳಲಾಗುತ್ತಿದೆ. ಅದು ಆಯಾ ಗ್ರಂಥಲೇಖನದ ಒಂದು ಪದ್ಧತಿಯಾಗಿದೆ. ಏಕೆಂದರೆ ಹಲಸು, ಬಕುಳ ಇತ್ಯಾದಿ ಮರಗಳ ಹಲಗೆಯ ಆಸನಗಳು ಒಳ್ಳೆಯದು ಎನ್ನುವ ಉಲ್ಲೆೀಖವೂ ಕೆಲವು ಗ್ರಂಥಗಳಲ್ಲಿ ಕಂಡುಬರುತ್ತದೆ. ಹಲಗೆಯ ಆಸನವನ್ನು ಸಾಧನೆಗೆ ಬಳಸಬಾರದೆಂದು ಹೇಳುವುದರ ಹಿಂದೆ ಮರಗಳನ್ನು ನಾಶಗೊಳಿಸಬಾರದು ಎನ್ನುವ ಉದ್ದೇಶವೂ ಅಡಗಿದೆ.
– ಪೂ. ಗಣೇಶನಾಥಜಿ ಉರ್ಫ್ ಡಾ. ದೀಪಕ ಜೋಶಿ, ಪುಣೆ ಇವರು ತಿಳಿಸಿದ ಮಾಹಿತಿ (೧೩.೮.೨೦೧೬)

Read moreಸಾಧನೆಗಾಗಿ ಆಸನ ಹೇಗಿರಬೇಕು ?

ಸಮಷ್ಟಿ ಸಾಧನೆಯ ಬೀಜವನ್ನು ಬಿತ್ತಿ ಅದನ್ನು ಸಹಜವಾಗಿ ಮಾಡಿಸಿಕೊಂಡು ಆನಂದವನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆ ! ಪರಾತ್ಪರ ಗುರು ಡಾ. ಆಠವಲೆ !

ppdr2012fordainik-nirgun_jan2013-col
ಪರಾತ್ಪರ ಗುರು ಡಾ. ಜಯಂತ             ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತಮಹೋತ್ಸವ ವರ್ಷದ ನಿಮಿತ್ತ…

rashmi_nalladaru_col2016-23
          ಡಾ. ರಶ್ಮಿ ನಲ್ಲದಾರೂ

೧. ಪ.ಪೂ. ಡಾಕ್ಟರರ ಅಮೂಲ್ಯವಾದ ಮಾರ್ಗದರ್ಶನವಿರುವ ಮಾಸಿಕ ಅಭ್ಯಾಸವರ್ಗ

೧ ಅ. ಅಭ್ಯಾಸವರ್ಗದಲ್ಲಿ ಔಪಚಾರಿಕವೆಂದು ಸ್ವಲ್ಪ ಸಮಯವಿದ್ದು ಬರೋಣವೆಂದು ನಿರ್ಧರಿಸಿಯೂ ದಿನವಿಡೀ ನಿಲ್ಲುವುದು ಹಾಗೂ ಆನಂದಪ್ರಾಪ್ತಿಯೇ ಜೀವನದ ಧ್ಯೇಯ ವಾಗಿದ್ದು ನಾನು ಇಷ್ಟು ವರ್ಷಗಳಿಂದ ಹುಡುಕುತ್ತಿದ್ದ ವಿಷಯ ಇದೇ ಎಂದು ಅರಿವಾಗುವುದು : ಫೆಬ್ರವರಿ ೧೯೯೩ ರಲ್ಲಿ ಮುಂಬಯಿಯಲ್ಲಿ ಮಾಸಿಕ ಅಭ್ಯಾಸವರ್ಗ ಆರಂಭವಾಯಿತು. ಅಭ್ಯಾಸವರ್ಗವನ್ನು ದಿನವಿಡೀ ಪ.ಪೂ.ಡಾಕ್ಟರರೇ ತೆಗೆದುಕೊಳ್ಳುತ್ತಿದ್ದರು. ಮೊದಲ ಅಭ್ಯಾಸವರ್ಗಕ್ಕೆ ನಾನು ನನ್ನ ತಾಯಿಯ ಇಚ್ಛೆಯಿಂದ ಮತ್ತು ಕೇವಲ ಔಪಚಾರಿಕವೆಂದು ಹೋಗಿದ್ದೆನು. ನಾನು ಸ್ವಲ್ಪ ಸಮಯವಿದ್ದು ನಂತರ ನನ್ನ ಯಜಮಾನರೊಂದಿಗೆ ಚಲನಚಿತ್ರವನ್ನು ನೋಡಲು ಹೋಗುವುದೆಂದು ನಿರ್ಧರಿಸಿ ಹೋಗಿದ್ದೆನು. ಪ.ಪೂ. ಡಾಕ್ಟರರು ಸುಖ,ದುಃಖ ಮತ್ತು ಆನಂದವೆಂಬ ವಿಷಯವನ್ನು ಕಲಿಸಲು ಆರಂಭಿಸಿದರು. ಅವರು ಹೇಳುತ್ತಿರುವ ವಿಷಯವು ನನ್ನ ಅಂತರ್ಮನಸ್ಸಿಗೆ ತಲುಪುತ್ತಿತ್ತು. ನಾನು ಸಂಪೂರ್ಣ ಮಂತ್ರಮುಗ್ಧಳಾದ ಹಾಗೆ ನನ್ನ ಕುರ್ಚಿಗೆ ಅಂಟಿಕೊಂಡಿದ್ದೆನು.ಆಗ ಪ.ಪೂ. ಡಾಕ್ಟರರು, ನನಗೇ ಹೇಳುತ್ತಿದ್ದಾರೆ ಹಾಗೂ ಪ್ರತಿಯೊಂದು ವಿಷಯ ನನಗೆ ಅರ್ಥವಾಗಿದೆಯೇ, ಎಂದು ನೋಡುತ್ತಿದ್ದಾರೆ, ಎಂದು ನನಗೆ ಅನಿಸುತ್ತಿತ್ತು. ಪ್ರತಿಯೊಂದು ವಿಷಯವು ನನಗೆ ಅರ್ಥವಾಗುವವರೆಗೆ ಮತ್ತು ನಾನು ಅದನ್ನು ಬರೆದುಕೊಳ್ಳುವವರೆಗೆ ಅವರು ನಿಲ್ಲುತ್ತಿದ್ದರು. ಮೊದಲ ದಿನವೇ ಆನಂದಪ್ರಾಪ್ತಿಯೇ ನನ್ನ ಜೀವನದ ಧ್ಯೇಯವಾಗಿದ್ದು ನಾನು ಇಷ್ಟು ದಿನಗಳಿಂದ ಹುಡುಕುತ್ತಿದ್ದ ವಿಷಯ ಇದೇ ಆಗಿದೆ, ಎಂದು ನನಗೆ ಅರಿವಾಯಿತು. – ಡಾ. ರಶ್ಮಿ ನಲ್ಲದಾರೂ

Read moreಸಮಷ್ಟಿ ಸಾಧನೆಯ ಬೀಜವನ್ನು ಬಿತ್ತಿ ಅದನ್ನು ಸಹಜವಾಗಿ ಮಾಡಿಸಿಕೊಂಡು ಆನಂದವನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆ ! ಪರಾತ್ಪರ ಗುರು ಡಾ. ಆಠವಲೆ !

ಸುಸಂಸ್ಕಾರವನ್ನು ನೀಡುವ ಬೋಧಕಥೆ !

hudugaಅತಿಥಿಗಳಿಗೆ ಇಚ್ಛಾಭೋಜನವನ್ನು ನೀಡುವ ರಾಜಾ ಶ್ರೀಯಾಳ ಮತ್ತು
ಅವನ ಪತ್ನಿ ಚಾಂಗುಣಾಳಿಗೆ ಭಗವಾನ ಶಿವನು ಮುಕ್ತಿಯನ್ನು ದಯಪಾಲಿಸುವುದು

ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ‘ಅತಿಥಿ ಸತ್ಕಾರವನ್ನು ಯಾವ ಭಾವದಿಂದ ಮಾಡಬೇಕು’ ಎಂಬುದು ಈ ಉದಾಹರಣೆಯಿಂದ ತಿಳಿಯುತ್ತದೆ.

Read moreಸುಸಂಸ್ಕಾರವನ್ನು ನೀಡುವ ಬೋಧಕಥೆ !

ನಮ್ಮ ದಿನಚರಿ ಹೇಗಿರಬೇಕು ?

dincharyeshisambhaditಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.

Read moreನಮ್ಮ ದಿನಚರಿ ಹೇಗಿರಬೇಕು ?

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕಾರ್ತಿಕ ಕೃಷ್ಣ ತದಿಗೆ (೧೫.೧೧.೨೦೧೬) ಈ ತಿಥಿಯ ವರೆಗೆ ಮಾಡಬಹುದು !

ಕೆಲವು ಸಾಧಕರಿಗೆ, ನಾವು ಸಮಷ್ಟಿ ಸೇವೆ ಮಾಡುತ್ತಿದ್ದೇವೆ, ಹಾಗಾಗಿ ಶ್ರಾದ್ಧಪಕ್ಷ ವಿಧಿಗಳನ್ನು ಮಾಡುವುದರ ಅಗತ್ಯವಿಲ್ಲ ಎಂದು ಅನಿಸುತ್ತದೆ; ಆದರೆ ಸಾಪ್ತಾಹಿಕದಲ್ಲಿ ಬಂದಿರುವ ಸೂಚನೆಯಂತೆ ಪ್ರತಿಯೊಬ್ಬರು ಸಹ ಮೃತ ವ್ಯಕ್ತಿಗಳಿಗಾಗಿ ಶ್ರಾದ್ಧವನ್ನು ಮಾಡುವುದು ಆವಶ್ಯಕವಾಗಿರುತ್ತದೆ.

೧. ಶ್ರಾದ್ಧವನ್ನು ಮಾಡದಿದ್ದರೆ ಅದರಿಂದಾಗುವತೊಂದರೆಯನ್ನು ಪ್ರತಿಯೊಬ್ಬ ಸಹೋದರನೂ ಸಹಿಸಿಕೊಳ್ಳ
ಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂಶ್ರಾದ್ಧ ಮಾಡಿದರೆ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ

ಸಹೋದರರೆಲ್ಲರೂ ಒಂದೇ ಕುಟುಂಬದಲ್ಲಿದ್ದರೆ ಹಿರಿಯ ಸಹೋದರನು ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ (ಉದಾ. ಶಾರೀರಿಕ ತೊಂದರೆ) ಹಿರಿಯ ಸಹೋದರನಿಗೆ ಮಾಡಲು ಸಾಧ್ಯವಾಗದಿದ್ದರೆ ಇತರ ಸಹೋದರರಲ್ಲಿ ಯಾರಾದರೂ ಮಾಡಬಹುದು; ಏಕೆಂದರೆ ಶ್ರಾದ್ಧವನ್ನು ಮಾಡದಿರುವುದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನು ಸಹ ಅನುಭವಿಸಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಅದು ಪೂರ್ವಜರನ್ನು ತೃಪ್ತಿಗೊಳಿಸಲು ಉಪಯೋಗವಾಗುವುದರಿಂದ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ. ಸಹೋದರರೆಲ್ಲರೂ ವಿಭಕ್ತ ಕುಟುಂಬದಲ್ಲಿದ್ದರೆ ಪ್ರತಿಯೊಬ್ಬರೂ ಶ್ರಾದ್ಧ ವಿಧಿಯನ್ನು ಮಾಡಬಹುದು.

Read moreಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕಾರ್ತಿಕ ಕೃಷ್ಣ ತದಿಗೆ (೧೫.೧೧.೨೦೧೬) ಈ ತಿಥಿಯ ವರೆಗೆ ಮಾಡಬಹುದು !

ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ಆ ಸ್ಥಳವನ್ನು ಅಥವಾ ಸತ್ಸಂಗದ ಸ್ಥಳವನ್ನು ಶುದ್ಧಿಗೊಳಿಸಿರಿ !

ಕೆಲವು ಸಾಧಕರಿಗೆ ಕುಳಿತುಕೊಂಡು ಏಕಾಗ್ರತೆಯಿಂದ ನಾಮಜಪ ಮಾಡಲು ಸಾಧ್ಯವಾಗುವುದಿಲ್ಲ, ಮತ್ತು ಕೆಲವು ಸಲ ಸಾಧಕರಿಗೆ ಹೊಸ ಸ್ಥಳದಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುವಾಗ ಒತ್ತಡದ ಅರಿವಾಗುತ್ತದೆ. ಸಾಧನೆಗೆ ಅಥವಾ ಸತ್ಸಂಗಕ್ಕೆ ಕುಳಿತುಕೊಳ್ಳುವ ಮೊದಲು ಆ ವಾಸ್ತುವನ್ನು ಶುದ್ಧಿ ಗೊಳಿಸಬೇಕು. ೧. ವಾಸ್ತುವಿನ ಶುದ್ಧಿಯನ್ನು ಏಕೆ ಮಾಡಬೇಕು ? ಅ. ವಾಸ್ತುವಿನ ರಚನೆ ವಾಸ್ತುಶಾಸ್ತ್ರಕ್ಕನುಸಾರ ಇಲ್ಲದಿದ್ದರೆ ಆ ವಾಸ್ತುವಿನಲ್ಲಿ ದೋಷವಿರುತ್ತದೆ. ಸ್ಥಳದ ಅಭಾವದಿಂದ ಅಥವಾ ಇತರ ಕಾರಣಗಳಿಂದಾಗಿ ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ನಿರ್ಮಿಸಲು ಮಿತಿಯುಂಟಾಗುತ್ತದೆ. ಆ ಕಾರಣಗಳಿಂದಲೂ ವಾಸ್ತುದೋಷ ನಿರ್ಮಾಣವಾಗುತ್ತದೆ. ಆ. ವಾಸ್ತುವಿನಲ್ಲಿ … Read more

ಚೈತನ್ಯರೂಪಿ ಪ್ರಾಣವಾಯು ನೀಡುವ ದೇವಸ್ಥಾನಗಳು !

ಮಾನವನಿಗೆ ದೇವಸ್ಥಾನಗಳಿಂದ ಚೈತನ್ಯರೂಪಿ ಪ್ರಾಣವಾಯು (ಆಕ್ಸಿಜನ್) ಸಿಗುತ್ತದೆ; ಆದ್ದರಿಂದ ಮನುಷ್ಯ ಜೀವಂತವಾಗಿರುತ್ತಾನೆ, ಇಲ್ಲದಿದ್ದರೆ, ಅವನು ಹೆಚ್ಚುತ್ತಿರುವ ರಜ-ತಮದ ಆಕ್ರಮಣದಿಂದ ಎಂದೋ ಉಸಿರುಗಟ್ಟಿ ಸಾಯುತ್ತಿದ್ದನು. – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೧.೨೦೧೬)