ಸನಾತನದ ‘೩೫೦ ನೇ ಗ್ರಂಥ ಪ್ರಕಾಶನದ ನಿಮಿತ್ತ…
೧೯೯೫ ರಲ್ಲಿ ಪರಾತ್ಪರ ಗುರು ಡಾಕ್ಟರರು ಹಚ್ಚಿದ ಗ್ರಂಥದ ಒಂದು ಚಿಕ್ಕ ಸಸಿಯು ಕೇವಲ ೨೬ ವರ್ಷಗಳಲ್ಲಿ ೩೫೦ ಗ್ರಂಥಗಳ ಒಂದು ದೊಡ್ಡ ವೃಕ್ಷದಲ್ಲಿ ರೂಪಾಂತರವಾಗಿದೆ. ಇನ್ನೂ ೫ ಸಾವಿರಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸುವಷ್ಟು ಬರವಣಿಗೆಯು ಗಣಕಯಂತ್ರದಲ್ಲಿದೆ. ಸಪ್ಟೆಂಬರ್ ೨೦೨೧ ರಿಂದ ಸನಾತನ ಸಂಸ್ಥೆಯು ನಡೆಸುತ್ತಿರುವ ‘ಸನಾತನ ಧರ್ಮ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಅಂರ್ತಗತ ಸನಾತನದ ಗ್ರಂಥಗಳನ್ನು ಭಾರತದಾದ್ಯಂತ ವ್ಯಾಪಕ ಸ್ತರದಲ್ಲಿ ಪ್ರಸಾರವನ್ನು ಮಾಡಲಾಗುತ್ತಿದೆ. ಈ ಅಭಿಯಾನಕ್ಕೆ ಎಲ್ಲಡೆಯಲ್ಲೂ ಸ್ವಯಂಪ್ರೇರಿತ ಮತ್ತು ಅಭೂತಪೂರ್ವ ಬೆಂಬಲ ಲಭಿಸುತ್ತಿದೆ. ಈ ಅಭಿಯಾನದ ಅಂರ್ತಗತ ಕೇವಲ ೩ ತಿಂಗಳುಗಳಲ್ಲಿಯೇ ಮರಾಠಿ, ಹಿಂದಿ, ಕನ್ನಡ, ಗುಜರಾತಿ ಮತ್ತು ಆಂಗ್ಲ ಈ ೫ ಭಾಷೆಗಳಲ್ಲಿನ ೩,೫೮,೯೮೦ ಗ್ರಂಥಗಳು ಮಾರಾಟವಾಗಿವೆ ! ಈ ಅಭಿಯಾನ ನಡೆಯತ್ತಿರುವಾಗಲೇ ಸನಾತನದ ೩೫೦ ನೇ ಗ್ರಂಥವನ್ನು ಪ್ರಕಟಿಸುತ್ತಿರುವುದು ದುಗ್ಧಶರ್ಕರಾಯೋಗವಾಗಿದೆ (ಹಾಲಿನಲ್ಲಿ ಸಕ್ಕರೆ ಹಾಕಿದಂತೆ ಆಗಿದೆ).
‘ಈಶ್ವರೀ ನಿಯೋಜನೆಗನುಸಾರ ೨೦೨೫ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಮತ್ತು ನಂತರ ಅನಂತಕಾಲ ಸನಾತನದ ಗ್ರಂಥಗಳು ವೇದಗಳಂತೆ ‘ಧರ್ಮಗ್ರಂಥ’ಗಳೆಂದು ಮಾನ್ಯತೆಯನ್ನು ಪಡೆಯುವವು, ಎಂದು ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿ ಪಟ್ಟಿಯ ಮೂಲಕ ಆಶೀರ್ವಾದವನ್ನು ನೀಡಿದ್ದಾರೆ. ಪರಾತ್ಪರ ಗುರು ಡಾಕ್ಟರರ ಈ ದೈದಿಪ್ಯಮಾನ ಗ್ರಂಥಕಾರ್ಯ ಇಡೀ ಭಾರತಕ್ಕೇ ಅಭಿಮಾನವೆನಿಸುವಂತಹದ್ದಾಗಿದೆ. ‘ಅಖಿಲ ಮನುಕುಲವೇ ಈ ಜ್ಞಾನಗಂಗೆಯಲ್ಲಿ ಮಿಂದೆದ್ದು ಮನುಷ್ಯಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು’, ಇದೇ ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೧೫.೧೨.೨೦೨೧)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56509.html |
೫. ಪರಾತ್ಪರ ಗುರು ಡಾಕ್ಟರರು ಬರೆದ ಗ್ರಂಥಗಳಲ್ಲಿನ ಜ್ಞಾನದ ಪ್ರಮುಖ ವೈಶಿಷ್ಟ್ಯಗಳು
೫ ಅ. ಗ್ರಂಥಗಳಲ್ಲಿನ ಶೇ. ೫೦ ರಷ್ಟು ಲೇಖನಗಳು ಪರಾತ್ಪರ ಗುರು ಡಾಕ್ಟರರಿಗೆ ಒಳಗಿನಿಂದ ಸ್ಫುರಿಸುವುದು : ‘ಸನಾತನದ ಗ್ರಂಥಗಳ ವೈಶಿಷ್ಟ್ಯಗಳೆಂದರೆ ಅವುಗಳಲ್ಲಿನ ಶೇ. ೫೦ ರಷ್ಟು ಲೇಖನವು ಇತರರ ಲೇಖನಗಳು, ಸಾಧಕರಿಗೆ ದೊರೆತ ಈಶ್ವರೀ ಜ್ಞಾನ ಇತ್ಯಾದಿಗಳ ಮಾಧ್ಯಮದಿಂದ ಒಟ್ಟಾಗಿರುತ್ತದೆ. ಇನ್ನುಳಿದ ಶೇ. ೫೦ ರಷ್ಟು ಲೇಖನವು ನನಗೆ ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಆಶೀರ್ವಾದದಿಂದ ಒಳಗಿನಿಂದ ಸ್ಪುರಿಸಿದೆ ! – (ಪರಾತ್ಪರ ಗುರು) ಡಾ. ಆಠವಲೆ (೪.೯.೨೦೨೧)
೫ ಆ. ಆಧುನಿಕ ವೈಜ್ಞಾನಿಕಯುಗದ ಮಾನವನನ್ನೂ ಸಾಧನೆಯ ಕಡೆಗೆ ಹೊರಳಿಸುವ ನಾವೀನ್ಯಪೂರ್ಣ ಈಶ್ವರಿ ಜ್ಞಾನದ ಗ್ರಂಥಗಳು ! :
‘ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಸನಾತನದ ಕೆಲವು ಸಾಧಕರಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸೂಕ್ಷ್ಮದಿಂದ ಶಾಸ್ತ್ರೀಯ ಪರಿಭಾಷೆಯಲ್ಲಿ ಆಳವಾದ ಮತ್ತು ನಾವೀನ್ಯಪೂರ್ಣ ಈಶ್ವರಿ ಜ್ಞಾನ ಸಿಗುತ್ತದೆ. ‘ಈ ಜ್ಞಾನದ ಮಹತ್ವ ಇಷ್ಟೊಂದು ಏಕೆ ಇದೆ ?’, ಎನ್ನುವುದು ಮುಂದೆ ನೀಡಿರುವ ಕೇವಲ ಒಂದು ದಾಖಲೆಯಿಂದಲೇ ಗಮನಕ್ಕೆ ಬರುತ್ತದೆ.
ಸದ್ಯದ ಆಧುನಿಕ ವೈಜ್ಞಾನಿಕ ಯುಗದ ಪೀಳಿಗೆಗೆ ‘ಏಕೆ ? ಮತ್ತು ಹೇಗೆ ?’, ಎಂಬ ಪ್ರಶ್ನೆಗಳನ್ನು ಕೇಳುವ ರೂಢಿಯಿರುತ್ತದೆ. ಆ ಪ್ರಶ್ನೆಗಳಿಗೆ ವೈಜ್ಞಾನಿಕ ಪರಿಭಾಷೆಯಲ್ಲಿ ಉತ್ತರಗಳು ದೊರೆತರೆ ಅದರಿಂದ ಅವರು ಸಮಾಧಾನಗೊಂಡು ಅಧ್ಯಾತ್ಮದ ಕಡೆಗೆ ಬೇಗನೆ ಹೊರಳುತ್ತಾರೆ. ಸ್ತ್ರೀಯರು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು, ಸ್ತ್ರೀಯರು ತಲೆಕೂದಲುಗಳನ್ನು ಬಾಚಿ ಜಡೆ ಹಾಕಿಕೊಳ್ಳುವುದು ಅಥವಾ ತುರುಬು ಕಟ್ಟಿಕೊಳ್ಳುವುದು ಇತ್ಯಾದಿ ಅನೇಕ ಸಾತ್ತ್ವಿಕ ಕೃತಿಗಳನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಕಾಲಾಂತರದಲ್ಲಿ ಧರ್ಮಶಿಕ್ಷಣದ ಅಭಾವದಿಂದ ಇಂತಹ ಕೃತಿಗಳ ಮಹತ್ವವು ಹಿಂದೂ ಸಮಾಜದಲ್ಲಿ ಉಳಿಯಲಿಲ್ಲ, ಆದುದರಿಂದ ಈಗ ಇಂತಹ ಕೃತಿಗಳನ್ನು ಹಿಂದೂಗಳು ಮಾಡುವುದಿಲ್ಲ. ಇದರ ಬದಲು ‘ಶರ್ಟ್-ಪ್ಯಾಂಟ ಹಾಕುವುದು’, ‘ಪಿಜ್ಜಾ-ಬರ್ಗರ ಮುಂತಾದ ಆಹಾರ ಪದಾರ್ಥಗಳನ್ನು ತಿನ್ನುವುದು’ ಇಂತಹ ಹಿಂದೂ ಧರ್ಮದಲ್ಲಿ ಹೇಳದೇ ಇರುವ ತಾಮಸಿಕ ಕೃತಿಗಳನ್ನು ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಹಿಂದೂಗಳು ಸಹಜವಾಗಿ ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರು ಬರೆದ ಗ್ರಂಥಗಳಲ್ಲಿ ‘ಸಾತ್ತ್ವಿಕ ಕೃತಿಗಳನ್ನು ಏಕೆ ಮಾಡಬೇಕು ? ಮತ್ತು ತಾಮಸಿಕ ಕೃತಿಗಳನ್ನು ಏಕೆ ಮಾಡಬಾರದು ?’, ಇದರ ಹಿಂದಿರುವ ಅಧ್ಯಾತ್ಮ ಶಾಸ್ತ್ರ ಹೇಳಿರುವುದರಿಂದ ಅದು ಕಲಿಯುಗದಲ್ಲಿನ ಮಾನವನಿಗೆ ಒಪ್ಪಿಗೆಯಾಗುತ್ತದೆ ಮತ್ತು ಅವನು ಬೇಗ ಅಧ್ಯಾತ್ಮದೆಡೆಗೆ ಹೊರಳುತ್ತಾನೆ.
೫ ಇ. ಅಧ್ಯಾತ್ಮದಲ್ಲಿನ ಪ್ರತಿಯೊಂದು ವಿಷಯದ ಹಿಂದಿರುವ ಮೂಲಭೂತ ಸಿದ್ಧಾಂತ ಅಥವಾ ತತ್ತ್ವವನ್ನು ಹುಡುಕಿ ಅದರ ಆಧಾರದಲ್ಲಿ ವಿಷಯವನ್ನು ಪ್ರತಿಪಾದಿಸುವುದು : ಅಧ್ಯಾತ್ಮದ ಪ್ರತಿಯೊಂದು ವಿಷಯದ ಹಿಂದೆ ಏನಾದರೂಂದು ಮೂಲಭೂತ ಸಿದ್ಧಾಂತ ಅಥವಾ ತತ್ತ್ವ ಇದ್ದೇ ಇರುತ್ತದೆ. ಪರಾತ್ಪರ ಗುರು ಡಾಕ್ಟರರು ಪ್ರತಿಯೊಂದು ವಿಷಯದ ಹಿಂದಿರುವ ಮೂಲಭೂತ ಸಿದ್ಧಾಂತ ಅಥವಾ ತತ್ತ್ವವನ್ನು ಕಂಡುಹಿಡಿದು ಅದರ ಆಧಾರದಲ್ಲಿ ವಿಷಯವನ್ನು ವಿವರವಾಗಿ ತಿಳಿಸಿ ಹೇಳುತ್ತಾರೆ. ಇದರಿಂದ ಓದುಗರಿಗೆ ಅಧ್ಯಾತ್ಮಶಾಸ್ತ್ರದ ಪರಿಪೂರ್ಣತೆ ತಿಳಿಯುತ್ತದೆ ಮತ್ತು ಇದರಿಂದ ಅವರ ಅಧ್ಯಾತ್ಮಶಾಸ್ತ್ರದ ಮೇಲಿನ ಶ್ರದ್ಧೆ ಮತ್ತಷ್ಟು ದೃಢವಾಗಲು ಸಹಾಯವಾಗುತ್ತದೆ. ಇದರ ಒಂದು ಉದಾಹರಣೆಯನ್ನು ಮುಂದೆ ನೀಡಲಾಗಿದೆ.
ಶಾರೀರಿಕ ಮತ್ತು ಮಾನಸಿಕ ರೋಗಗಳ ನಿರ್ಮೂಲನೆಗಾಗಿ ಹೇಗೆ ದೇವತೆಗಳ ನಾಮಜಪಗಳು ಉಪಯೋಗವಾಗುತ್ತವೆಯೋ, ಹಾಗೆಯೇ ಕೆಲವು ಅಂಕಜಪಗಳೂ ಉಪಯೋಗವಾಗುತ್ತವೆ. ವಿಶಿಷ್ಟ ಅಂಕಜಪವು ವಿಶಿಷ್ಟ ದೇವತೆಯ ತತ್ತ್ವಕ್ಕೆ ಸಂಬಂಧಿಸಿರುತ್ತದೆ. ಅಂಕಜಪವನ್ನು ಮಾಡಿದರೆ ಅದಕ್ಕೆ ಸಂಬಂಧಿಸಿದ ದೇವತೆಯ ತತ್ತ್ವ ಆಕರ್ಷಿತವಾಗುತ್ತದೆ. ‘ರೋಗ-ನಿರ್ಮೂಲನೆಗಾಗಿ ನಾಮಜಪ ಈ ಗ್ರಂಥದಲ್ಲಿ ಪರಾತ್ಪರ ಗುರು ಡಾಕ್ಟರರು ೦ ದಿಂದ ೯ ಇದರಲ್ಲಿನ ಪ್ರತಿಯೊಂದು ಅಂಕದ ವಿವಿಧ ರೋಗಗಳ ಮೇಲಿನ ಉಪಯೋಗವನ್ನು ಬರೆದಿದ್ದಾರೆ. ಪ್ರತಿಯೊಂದು ಅಂಕವನ್ನು ನಾವು ಎಂದಿನಂತೆ ಉಚ್ಚರಿಸಿದರೆ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯವಾಗುತ್ತದೆ.
೫ ಇ. ಪ್ರಗತ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಸಂಶೋಧನಾತ್ಮಕ ಪ್ರಯೋಗ : ಇಂದಿನ ಕಾಲದಲ್ಲಿ ವ್ಯಕ್ತಿಯ ಅಥವಾ ಋಷಿಮುನಿಗಳ ಅನುಭವಸಿದ್ಧ ಶಬ್ದಗಳಿಗಿಂತ ಪ್ರಗತ ವೈಜ್ಞಾನಿಕ ಒರೆಗಲ್ಲಿನಲ್ಲಿ ಸಿದ್ಧವಾಗಿರುವ ಜ್ಞಾನವೇ ಅನೇಕ ಜನರಿಗೆ ವಿಶ್ವಾಸಾರ್ಹವೆನಿಸುತ್ತದೆ. ಆದುದರಿಂದ ಸನಾತನದ ಗ್ರಂಥಗಳಲ್ಲಿ ಪ್ರಗತ ವೈಜ್ಞಾನಿಕ ಉಪಕರಣಗಳ ಸಂಶೋಧನಾತ್ಮಕ ಪ್ರಯೋಗಗಳನ್ನು ಸೇರಿಸಲಾಗುತ್ತದೆ.
ಹಣ್ಣಿನ ರಸ ಮತ್ತು ಮದ್ಯ, ಇದರಲ್ಲಿನ ಹಣ್ಣಿನ ರಸ ಸೇವಿಸಿದರೆ ಪಾಶ್ಚಿಮಾತ್ಯ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ಇವುಗಳಲ್ಲಿನ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕೇಳುವುದರಿಂದ ವ್ಯಕ್ತಿಯ ಮೇಲೆ ಆಗುವ ಆಧ್ಯಾತ್ಮಿಕ ಸ್ತರದಲ್ಲಿನ ಸಕಾರಾತ್ಮಕ ಪರಿಣಾಮವನ್ನು ಅಧ್ಯಯನ ಮಾಡುವುದು; ನಾಮಜಪ, ಮುದ್ರೆ ಮತ್ತು ನ್ಯಾಸವನ್ನು ಮಾಡುವುದರಿಂದ ಗರ್ಭವತಿ ಸ್ತ್ರೀ ಮತ್ತು ಗರ್ಭದ ಮೇಲಾಗುವ ಆಧ್ಯಾತ್ಮಿಕ ಸ್ತರದಲ್ಲಿನ ಸಕಾರಾತ್ಮಕ ಪರಿಣಾಮವನ್ನು ಅಧ್ಯಯನ ಮಾಡುವುದು; ದೇಶಿ ಹಸುವಿನಿಂದ ಪ್ರಕ್ಷೇಪಿಸುವ ಸಕಾರಾತ್ಮಕ ಊರ್ಜೆಯ ಪ್ರಮಾಣದ ಅಧ್ಯಯನ ಮಾಡುವುದು ಮುಂತಾದ ೫ ಸಾವಿರಕ್ಕೂ ಅಧಿಕ ಸಂಶೋಧನಾತ್ಮಕ ಪ್ರಯೋಗಗಳನ್ನು ನವೆಂಬರ ೨೦೨೧ ರ ವರೆಗೆ ಮಾಡಲಾಗಿದೆ.
೫ ಉ. ಸೂಕ್ಷ್ಮ- ಜ್ಞಾನದ ಬಗೆಗಿನ ಪರೀಕ್ಷಣೆ ಮತ್ತು ಚಿತ್ರಗಳು
೫ ಉ ೧. ಸೂಕ್ಷ್ಮ ಎಂದರೆ ಏನು ? : ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿರುವ ವಿಷಯಗಳಿಗೆ ‘ಸೂಕ್ಷ್ಮ ವಿಷಯಗಳು’ ಎನ್ನುತ್ತಾರೆ
೫ ಉ ೨. ಸೂಕ್ಷ್ಮ- ಜ್ಞಾನದ ಪರೀಕ್ಷಣೆ : ಯಾವುದಾದರೊಂದು ವಸ್ತು ಅಥವಾ ಘಟನೆಯ ಬಗ್ಗೆ ಸೂಕ್ಷ್ಮದಲ್ಲಿ ಜ್ಞಾನದ ಅರಿವಾಗುವುದು, ಇದಕ್ಕೆ ‘ಸೂಕ್ಷ್ಮ-ಜ್ಞಾನದ ಪರೀಕ್ಷಣೆ’ ಎಂದು ಹೇಳುತ್ತಾರೆ. ಸನಾತನದ ಸಾಧಕರು ಗುರುಕೃಪೆ ಮತ್ತು ಅವರಲ್ಲಿರುವ ಸೂಕ್ಷ್ಮವನ್ನು ಅರಿಯುವ ಕ್ಷಮತೆಯಿಂದಾಗಿ ‘ಸೂಕ್ಷ್ಮ-ಜ್ಞಾನದ ಪರೀಕ್ಷಣೆ’ಗಳನ್ನು ಮಾಡುತ್ತಾರೆ. ವಿವಿಧ ಧಾರ್ಮಿಕ ಕೃತಿ, ಯಜ್ಞಯಾಗ ಮುಂತಾದವುಗಳ ಸಮಯದಲ್ಲಿ ಆಗುವ ಸೂಕ್ಷ್ಮದಲ್ಲಿನ ಪ್ರಕ್ರಿಯೆಗಳನ್ನು ತೋರಿಸುವ ಅನೇಕ ಪರೀಕ್ಷಣೆಗಳನ್ನು ಸನಾತನದ ಗ್ರಂಥಗಳಲ್ಲಿ ಸೇರಿಸಲಾಗಿದೆ.
೫ ಉ ೩. ಸೂಕ್ಷ್ಮ-ಜ್ಞಾನದ ಚಿತ್ರಗಳು : ಚಿತ್ರಗಳ ಸ್ವರೂಪದಲ್ಲಿ ಮಂಡಿಸಲಾಗುವ ‘ಸೂಕ್ಷ್ಮ- ಜ್ಞಾನದ ಪರೀಕ್ಷಣೆ’ಗಳು ಎಂದರೆ ‘ಸೂಕ್ಷ್ಮ- ಜ್ಞಾನದ ಚಿತ್ರ’ಗಳು. ಸಾತ್ತ್ವಿಕ ವೇಶಭೂಷಣಗಳು, ಸಾತ್ತ್ವಿಕ ಆಹಾರ, ಸಾತ್ತ್ವಿಕ ಅಲಂಕಾರ, ಧಾರ್ಮಿಕ ಕೃತಿ ಮುಂತಾದವುಗಳ ಸಂದರ್ಭದಲ್ಲಿ ಸೂಕ್ಷ್ಮ ಸ್ತರದಲ್ಲಿನ ಪ್ರಕ್ರಿಯೆಯನ್ನು ಈ ಚಿತ್ರಗಳಿಂದ ತೋರಿಸಲಾಗುತ್ತದೆ.
೫ ಉ ೪. ಗ್ರಂಥದಲ್ಲಿ ‘ಸೂಕ್ಷ್ಮ ಜ್ಞಾನದ ಪರೀಕ್ಷಣೆ’ಗಳು ಮತ್ತು ‘ಸೂಕ್ಷ್ಮ ಜ್ಞಾನದ ಚಿತ್ರ’ಗಳನ್ನು ಪ್ರಕಟಿಸುವ ಹಿಂದಿನ ಉದ್ದೇಶ : ನಾವು ಸ್ಥೂಲದಲ್ಲಿ ಯಾವುದಾದರೂಂದು ಕೃತಿಯನ್ನು ಮಾಡಿದಾಗ ಆ ಕೃತಿಯ ಸೂಕ್ಷ್ಮದಲ್ಲಿನ ಪರಿಣಾಮ ಏನಾಗುತ್ತದೆ ಎಂದು ತಿಳಿದುಕೊಳ್ಳುವ ಕ್ಷಮತೆ ಬಹುತೇಕ ವ್ಯಕ್ತಿಗಳಲ್ಲಿ ಇರುವುದಿಲ್ಲ. ಸೂಕ್ಷ್ಮದಲ್ಲಿನ ಪರಿಣಾಮ ತಿಳಿದರೆ ಸ್ಥೂಲದಲ್ಲಿನ ಕೃತಿಯ ಬಗ್ಗೆ ಶ್ರದ್ಧೆ ನಿರ್ಮಾಣವಾಗುತ್ತದೆ. ಹಾಗೆಯೇ ತಾತ್ವಿಕ ಜ್ಞಾನದಲ್ಲಿನ ಕಠಿಣ ಭಾಗವನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ. ಇದಕ್ಕಾಗಿ ಸನಾತನದ ಗ್ರಂಥಗಳಲ್ಲಿ ‘ಸೂಕ್ಷ್ಮ ಜ್ಞಾನದ ಪರೀಕ್ಷಣೆ’ ಮತ್ತು ‘ಸೂಕ್ಷ್ಮ ಜ್ಞಾನದ ಚಿತ್ರ’ಗಳನ್ನು ಪ್ರಕಟಿಸಲಾಗುತ್ತದೆ.
೫ ಊ. ಸೂಕ್ಷ್ಮ ಜ್ಞಾನದ ಪ್ರಯೋಗ : ಯಾವುದಾದರೂಂದು ವಸ್ತು ಅಥವಾ ವ್ಯಕ್ತಿಯ ಕಡೆಗೆ ನೋಡಿದಾಗ ಒಳ್ಳೆಯದೆನಿಸುತ್ತದೆಯೇ ? ಅಥವಾ ತೊಂದರೆದಾಯಕ ಅನಿಸುತ್ತದೆಯೇ ? ಎನ್ನುವುದನ್ನು ಸೂಕ್ಷ್ಮದಿಂದ ನೋಡುವುದು ಅಥವಾ ಆ ವಸ್ತು ಅಥವಾ ವ್ಯಕ್ತಿಯ ಸಂದರ್ಭದಲ್ಲಿ ಯಾವುದಾದರೂ ಅನುಭೂತಿ ಬರುತ್ತದೆಯೇ ? ಎನ್ನುವುದನ್ನು ನೋಡುವುದು ಅಂದರೆ ‘ಸೂಕ್ಷ್ಮ-ಜ್ಞಾನದ ಪ್ರಯೋಗ’ ಮಾಡುವುದು ಎನ್ನುತ್ತಾರೆ. ವ್ಯಕ್ತಿಗೆ ಯಾವುದಾದರೊಂದು ವಿಷಯದ ಮಹತ್ವವನ್ನು ತಿಳಿಸಿ ಹೇಳಿದರೆ ಅವನು ಅದನ್ನು ನಂಬುತ್ತಾನೆ; ಆದರೆ ಆ ವಿಷಯದ ಬಗ್ಗೆ ಆ ವ್ಯಕ್ತಿಯು ಸ್ವತಃ ಅನುಭವ ಪಡೆದ ಬಳಿಕ ಅಥವಾ ಆ ವಿಷಯದ ಸಂದರ್ಭದಲ್ಲಿ ಅವನಿಗೆ ಅನುಭೂತಿ ಬಂದ ಬಳಿಕ ಆ ವಿಷಯದ ಮಹತ್ವದ ಬಗ್ಗೆ ಅವನ ನಂಬಿಕೆ ದೃಢವಾಗುತ್ತದೆ. ಓದುಗರಿಂದ ‘ಸೂಕ್ಷ್ಮ-ಜ್ಞಾನದ ಪ್ರಯೋಗ’ವನ್ನು ಮಾಡಿಸಿಕೊಳ್ಳುವುದರಿಂದ ಇದೇ ಉದ್ದೇಶ ಸಾಧ್ಯವಾಗುತ್ತದೆ. ಓದುಗರು ಇಂತಹ ಪ್ರಯೋಗಗಳನ್ನು ಮೇಲಿಂದ ಮೇಲೆ ಮಾಡಿದರೆ ಅವರಲ್ಲಿಯೂ ಸೂಕ್ಷ್ಮ ಸ್ಪಂದನಗಳ ಅಭ್ಯಾಸ ಮಾಡುವ ಕ್ಷಮತೆ ಹೆಚ್ಚಾಗಲು ಸಹಾಯ ವಾಗುತ್ತದೆ. ಇದಕ್ಕಾಗಿಯೇ ಗ್ರಂಥಗಳಲ್ಲಿ ವಿವಿಧ ಸೂಕ್ಷ್ಮಜ್ಞಾನದ ಪ್ರಯೋಗಗಳನ್ನು ನೀಡಲಾಗುತ್ತದೆ.
೬. ಗ್ರಂಥಗಳನ್ನು ಚೈತನ್ಯಮಯಗೊಳಿಸಲು ಪರಾತ್ಪರ ಗುರು ಡಾಕ್ಟರರ ನಾವೀನ್ಯಪೂರ್ಣ ದೃಷ್ಟಿಕೋನ !
೬ ಅ. ಪರಾತ್ಪರ ಗುರು ಡಾಕ್ಟರರು ಗ್ರಂಥಗಳ ಆದಷ್ಟು ಹೆಚ್ಚು ಸೇವೆಯನ್ನು ಸಾಧಕರಿಂದಲೇ ಮಾಡಿಸಿಕೊಳ್ಳುವುದು : ೧೯೯೫ ರಲ್ಲಿ ‘ಸಂತ ಭಕ್ತರಾಜ ಮಹಾರಾಜರ ಚರಿತ್ರೆ’ ಮತ್ತು ‘ಸಂತ ಭಕ್ತರಾಜ ಮಹಾರಾಜರ ಬೋಧನೆ’ ಈ ಎರಡು ಗ್ರಂಥಗಳನ್ನು ಪ್ರಕಟಿಸಿದ ಬಳಿಕ ಪ.ಪೂ. ಬಾಬಾರವರು (ಡಾ. ಆಠವಲೆಯವರ ಗುರುಗಳು) ಡಾ. ಆಠವಲೆಯವರಿಗೆ, “ಹಣದಿಂದ ಈ ಕೆಲಸಗಳು ಆಗುವುದಿಲ್ಲ. ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಅಧಿಕ ಚೈತನ್ಯಮಯವಾಗಲು ಸಹಾಯವಾಗುತ್ತದೆ, ಅಲ್ಲದೇ ಗ್ರಂಥ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ” ಎಂದು ಹೇಳಿದ್ದರು. ಆದುದರಿಂದ ಪರಾತ್ಪರ ಗುರು ಡಾಕ್ಟರರು ಗ್ರಂಥಗಳ ಲೇಖನದ ಸೇವೆಯಿಂದ ಗ್ರಂಥಗಳ ವಿತರಣೆಯ ಸೇವೆಯ ವರೆಗೆ ಎಲ್ಲ ಸೇವೆಗಳಲ್ಲಿ ಸಾಧಕರನ್ನು ಸಹಭಾಗಿಗಳನ್ನಾಗಿ ಮಾಡಿಕೊಂಡಿದ್ದಾರೆ. ಇದೇ ದೃಷ್ಟಿಯಿಂದ ಅವರು ವರ್ಷ ೧೯೯೭ ರಲ್ಲಿ ಮಡಗಾವ್, ಗೋವಾದಲ್ಲಿ ಸನಾತನ ಸಂಸ್ಥೆಯ ಮುದ್ರಣಾಲಯವನ್ನು ಪ್ರಾರಂಭಿಸಿದ್ದರು. ನಂತರ ಕೆಲವು ಅಡಚಣೆಗಳಿಂದ ವರ್ಷ ೨೦೧೨ ರಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದ್ದು, ಈಗ ಗ್ರಂಥಗಳ ಮುದ್ರಣವನ್ನು ಹೊರಗಿನಿಂದ ಮಾಡಿಸಿಕೊಳ್ಳಲಾಗುತ್ತದೆ.
೬ ಆ. ಪರಾತ್ಪರ ಗುರು ಡಾಕ್ಟರರು ‘ಗ್ರಂಥಗಳನ್ನು ಸಾತ್ವಿಕ ಮಾಡುವ’ ಸಂಸ್ಕಾರವನ್ನು ಸಾಧಕರ ಮೇಲೆ ಮಾಡುವುದು : ಅಧ್ಯಾತ್ಮದ ಲೇಖನಗಳು ಮೂಲದಲ್ಲಿಯೇ ಸಾತ್ವಿಕವಾಗಿರುತ್ತವೆ. ಗ್ರಂಥಗಳ ಸಂಕಲನ ಮತ್ತು ವ್ಯಾಕರಣ ತಪ್ಪುಗಳು ಇಲ್ಲದೇ ಇದ್ದರೆ, ಲೇಖನದಲ್ಲಿರುವ ಸಾತ್ತ್ವಿಕತೆ ಕಡಿಮೆಯಾಗುವುದಿಲ್ಲ; ಆದ್ದರಿಂದ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಇವರೆಡೂ ವಿಷಯಗಳನ್ನು ಪರಿಪೂರ್ಣವಾಗಿ ಮಾಡಲು ಕಲಿಸಿದ್ದಾರೆ. ಅದರಂತೆ ಅವರು ಗ್ರಂಥಗಳ ಮುಖಪುಟ, ಗ್ರಂಥಗಳಲ್ಲಿ ಉಪಯೋಗಿಸುವ ಚಿತ್ರಗಳನ್ನು ಮತ್ತು ಆಕೃತಿ ಇತ್ಯಾದಿಗಳನ್ನು ಸಾತ್ತ್ವಿಕವಾಗಿ ಮಾಡಲು ಕಲಿಸಿದ್ದಾರೆ. (ಮುಂದುವರಿಯುವುದು)
– (ಪೂ.) ಸಂದೀಪ ಆಳಶಿ (ಸನಾತನದ ಗ್ರಂಥಗಳ ಸಂಕಲನಕಾರರು)