೧. ‘ಪೂ. ಭಾರ್ಗವರಾಮರ ತಾಯಿಗೆ ಅನಾರೋಗ್ಯ ಇದ್ದಾಗ ತಂದೆಯವರು ಸಂತರ ಕಾಳಜಿ ವಹಿಸುವುದು ಮತ್ತು ಪೂ. ಭಾರ್ಗವರಾಮರನ್ನು ಮಲಗಿಸುವ ಮುಂಚೆ ‘ಅವರು ಮಂಚದಿಂದ ಕೆಳಗೆ ಬೀಳಬಾರದೆಂದು’, ಎಲ್ಲ ಜಾಗರೂಕತೆಯನ್ನು ವಹಿಸುವುದು
‘ಒಮ್ಮೆ ಸೌ. ಭವಾನಿಗೆ (ನನ್ನ ಪತ್ನಿಯ) ಅನಾರೋಗ್ಯವಾಗಿತ್ತು. ಆಗ ಮನೆಯಲ್ಲಿ ಅವಳನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ನಾನು ಮನೆಗೆ ಬಂದ ನಂತರ ನನ್ನ ಇತರ ಎಲ್ಲ ಕೆಲಸಗಳನ್ನು ಬದಿಗಿಟ್ಟು ‘ಸೌ. ಭವಾನಿಗೆ ವಿಶ್ರಾಂತಿ ಸಿಗಬೇಕೆಂದು’, ಪೂ. ಭಾರ್ಗವರಾಮರನ್ನು (ಸನಾತನದ ಮೊದಲ ಬಾಲಕ ಸಂತರು) ಮಲಗಿಸುವ ಮೊದಲು ‘ಅವರು ಮಂಚದಿಂದ ಕೆಳಗೆ ಬೀಳಬಾರದೆಂದು’, ನಾನು ಎಲ್ಲ ರೀತಿಯ ಜಾಗರೂಕತೆಯನ್ನು ವಹಿಸಿದೆ. ನಾನು ಮಲಗುವ ಮೊದಲು ‘ಪೂ. ಭಾರ್ಗವರಾಮರು ಸ್ವಲ್ಪ ಏನಾದರೂ ಶಬ್ದ ಮಾಡಿದರೂ ನಾನು ತಕ್ಷಣ ಏಳುವೆನು’, ಎಂದು ನನಗೆ ಸ್ವಯಂಸೂಚನೆಯನ್ನು ಕೊಟ್ಟೆನು; ಏಕೆಂದರೆ ನಾನು ಒಮ್ಮೆ ಮಲಗಿದರೆ ಎಂತಹ ಶಬ್ದವಾದರೂ ನನಗೆ ಎಚ್ಚರವಾಗುವುದಿಲ್ಲ.
೨. ಕನಸಿನಲ್ಲಿ ಕಾಣಿಸಿದ ದೃಶ್ಯ – ‘ಪರಾತ್ಪರ ಗುರು ಡಾ. ಆಠವಲೆಯವರು ಅವರ ಮಂಚದಲ್ಲಿ ಮಲಗಲು ಹೇಳುವುದು ಹಾಗೂ ಅವರು ‘ನೀನು ಪೂ. ಭಾರ್ಗವರಾಮರನ್ನು ನಿನ್ನ ಮಂಚದಲ್ಲಿ ಮಲಗಿಸಿದೆ ಹಾಗೂ ಅವರ ಬಗ್ಗೆ ಎಲ್ಲ ರೀತಿಯ ಜಾಗರೂಕತೆಯನ್ನು ವಹಿಸಿದೆ, ಆದ್ದರಿಂದ ನಿನ್ನ ಬಗ್ಗೆ ನಾನು ಜಾಗರೂಕತೆ ವಹಿಸುವುದು ನನ್ನ ಕರ್ತವ್ಯವಾಗಿದೆ, ಎಂದು ಹೇಳುವುದು
ನಂತರ ‘ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಗೌರವ ಪೂರ್ವಕವಾಗಿ ಅವರ ಮಂಚದಲ್ಲಿ ಮಲಗಲು ಹೇಳುತ್ತಿರುವುದು’ ಕನಸಿನಲ್ಲಿ ಕಾಣಿಸಿತು. ಆಗ ನನಗೆ ಆಶ್ಚರ್ಯವೆನಿಸಿತು. ನಾನು ಅವರಿಗೆ ‘ನೀವು ನನಗೆ ನಿಮ್ಮ ಮಂಚದಲ್ಲಿ ಮಲಗಲು ಏಕೆ ಹೇಳುತ್ತಿದ್ದೀರಿ ?’, ಎಂದು ಕೇಳಿದೆ. ಆಗ ಅವರು ‘ನೀನು ಪೂ. ಭಾರ್ಗವರಾಮರನ್ನು ನಿನ್ನ ಮಂಚದಲ್ಲಿ ಮಲಗಿಸಿದೆ ಹಾಗೂ ಅವರ ಬಗ್ಗೆ ಚೆನ್ನಾಗಿ ಜಾಗರೂಕತೆ ವಹಿಸಿದ್ದಿ. ಆದ್ದರಿಂದ ನಿನ್ನ ಬಗ್ಗೆ ಜಾಗರೂಕತೆ ವಹಿಸುವುದು ನನ್ನ ಕರ್ತವ್ಯವಾಗಿದೆ’ ಎಂದು ನನಗೆ ಹೇಳಿದರು. ಪರಾತ್ಪರ ಗುರುದೇವರ ಈ ವಾಕ್ಯವನ್ನು ಕೇಳಿ ನನಗೆ ಬಹಳ ಭಾವಜಾಗೃತಿಯಾಯಿತು ಹಾಗೂ ನಾನು ಕನಸ್ಸಿನಲ್ಲಿಯೇ ಅಳಲು ಆರಂಭಿಸಿದೆನು.
೩. ‘ಭಗವಂತನು ತನ್ನ ಭಕ್ತರ ಬಗ್ಗೆ ಎಷ್ಟು ಜಾಗರೂಕತೆ ವಹಿಸುತ್ತಾನೆ !’, ಎಂಬುದು ನನಗೆ ಅರಿವಾಯಿತು
‘ಯಾರು ಭಗವಂತನ ಭಕ್ತರ ಯೋಗಕ್ಷೇಮವನ್ನು ವಹಿಸುತ್ತಾರೆಯೋ ಅವರ ಯೋಗಕ್ಷೇಮವನ್ನು ಭಗವಂತನೇ ವಹಿಸುತ್ತಾನೆ. ಪೂ. ಭಾರ್ಗವರಾಮರ ಎಲ್ಲ ಸೇವೆಗಳನ್ನು ಮಾಡುವುದೆಂದರೆ, ಇದು ಈಶ್ವರನ ಸೇವೆಯೇ ಆಗಿದೆ’, ಎಂಬುದು ನನಗೆ ಇದರಿಂದ ಕಲಿಯಲು ಸಿಕ್ಕಿತು.
೪. ಭಗವಂತನ ಸರ್ವವ್ಯಾಪಕತೆ !
‘ಪೂ. ಭಾರ್ಗವರಾಮರು ನನ್ನ ಪುತ್ರ ಆಗಿರುವುದರಿಂದ ಅವರನ್ನು ನೋಡಿಕೊಳ್ಳುವುದು, ನನ್ನ ಕರ್ತವ್ಯವೇ ಆಗಿದೆ. ಆದರೂ ಭಗವಂತ (ಪರಾತ್ಪರ ಗುರುದೇವರು) ನನಗೆ ಕನಸಿನಲ್ಲಿ ದರ್ಶನ ನೀಡಿದರು. ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು ! ಅವನು ಸರ್ವವ್ಯಾಪಿ ಯಾಗಿದ್ದಾನೆ; ‘ಅವನಿಗೆ ಪ್ರತಿಯೊಂದು ಜವಾಬ್ದಾರಿಯೂ ಅವನದ್ದೇ ಆಗಿದೆ’, ಎಂದು ಅನಿಸುತ್ತದೆ.
೫. ಕೃತಜ್ಞತೆ
‘ಭಗವಂತನು ನನಗೆ ನೀಡಿರುವ ಈ ಬೋಧನೆಯ ಬಗ್ಗೆ ನನಗೆ ತುಂಬಾ ಕೃತಜ್ಞತೆಯೆನಿಸಿತು. ಈ ಪ್ರಸಂಗದಿಂದ ‘ಪೂ. ಭಾರ್ಗವರಾಮರ ಸೇವೆಯು ಎಷ್ಟು ಮಹತ್ವಪೂರ್ಣವಾಗಿದೆ ಹಾಗೂ ನಾನು ಅದನ್ನು ಎಷ್ಟು ಗಾಂಭೀರ್ಯದಿಂದ ಮಾಡಬೇಕು !’, ಎಂಬುದು ನನಗೆ ಅರಿವಾಯಿತು. ಪರಾತ್ಪರ ಗುರುದೇವರ ಬಗ್ಗೆ ಕೃತಜ್ಞತೆಗಳು !’
– ಶ್ರೀ. ಭರತ ಪ್ರಭು (ಪೂ. ಭಾರ್ಗವರಾಮರ ತಂದೆ), ಮಂಗಳೂರು (೧೨.೧೨.೨೦೨೧)