ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಅಪಾರ ಕ್ಷಮತೆಯಿರುವ ಮತ್ತು ಸತತ ಗುರುದೇವರ ಅನುಸಂಧಾನದಲ್ಲಿರುವ (ಜನ್ಮತಃ ಸಂತರಾಗಿರುವ) ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಭರತ ಪ್ರಭು (೪ ವರ್ಷ)

೧. ಗುರುಮಹಿಮೆಯನ್ನು ಸಮಷ್ಟಿಗೆ ತಲುಪಿಸುವ ಬಗ್ಗೆ ತೀವ್ರ ತಳಮಳವಿರುವ ಪೂ. ಭಾರ್ಗವರಾಮ !

ಪೂ. ಭಾರ್ಗವರಾಮ ಪ್ರಭು

 

ಸೌ. ಭವಾನಿ ಭರತ ಪ್ರಭು

‘ಒಮ್ಮೆ ನಮ್ಮ ದೂರದ ಆಪ್ತರು ಗುರುಪೂರ್ಣಿಮೆಯ ಮೊದಲು ನಮ್ಮ ಮನೆಗೆ ಬಂದಿದ್ದರು. ನಾವು ‘ಅವರಿಗೆ ಗುರುಪೂರ್ಣಿಮೆಯ ಬಗ್ಗೆ ಹೇಳೋಣ’, ಎಂದು ನಿಶ್ಚಯಿಸಿದ್ದೆವು. ಪೂ. ಭಾರ್ಗವರಾಮರಿಗೆ ಇದು ಗೊತ್ತಿರಲಿಲ್ಲ. ಆಪ್ತರರು ಮನೆಗೆ ಬಂದ ನಂತರ ಮೊದಲು ನಾವು ಅವರೊಂದಿಗೆ ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆವು. ಆಗ ಪೂ. ಭಾರ್ಗವರಾಮ ಆಪ್ತರ ಓರ್ವ ಹುಡುಗನಿಗೆ ಅವರ ಬಳಿಯಿರುವ ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥವನ್ನು ತೋರಿಸತೊಡಗಿದರು. ಅವರು ಆಪ್ತರ ಆ ಹುಡುಗನಿಗೆ ಗುರುದೇವರ ಕಾರ್ಯದ ಮಾಹಿತಿ ಇರುವ ಎಲ್ಲ ಪುಟಗಳನ್ನು ೨ ಬಾರಿ ತೋರಿಸಿದರು. ಅನಂತರ ಪೂ. ಭಾರ್ಗವರಾಮ ಆ ಹುಡುಗನಿಗೆ ಸಂಸ್ಥೆಯ ಬಗ್ಗೆ ಹೇಳುತ್ತಿದ್ದರು. ಆಗ ಪೂ. ಭಾರ್ಗವರಾಮರ ಗುರುಮಹಿಮೆಯನ್ನು ಸಮಷ್ಟಿಗೆ ತಲುಪಿಸುವ ತಳಮಳವಿರುವುದು ನಮ್ಮ ಗಮನಕ್ಕೆ ಬಂದಿತು.

೨. ಅಜ್ಜನಿಗೆ ಒತ್ತಡ ಬಂದಾಗ ಪೂ. ಭಾರ್ಗವರಾಮ ಅವರಿಗೆ ‘ಗುರುದೇವರು ಯಾವಾಗಲೂ ನಮ್ಮ ಜೊತೆಗೇ ಇರುತ್ತಾರೆ’ ಎಂದು ಹೇಳಿ ಅವರಿಗೆ ಸಕಾರಾತ್ಮಕವಾಗಿರಲು ಸಹಾಯ ಮಾಡುವುದು

ಆಪತ್ಕಾಲದ ಸ್ಥಿತಿಯಿಂದಾಗಿ ನನ್ನ ತಂದೆಯ ಮನೆಯ ಸ್ಥಳಾಂತರವನ್ನು ಮಾಡುವುದಿತ್ತು. ಆ ಸಮಯದಲ್ಲಿ ನನ್ನ ತಂದೆಗೆ ತುಂಬಾ ಒತ್ತಡ ಬಂದಿತ್ತು. ನಾನು ಮತ್ತು ಪೂ. ಭಾರ್ಗವರಾಮ ನನ್ನ ತವರುಮನೆಗೆ ಹೋಗಿದ್ದೆವು. ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ಪೂ. ಭಾರ್ಗವರಾಮರು ನಮ್ಮ ಮನೆಯಲ್ಲಿರುವ ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾ ಚಿತ್ರಮಯ ಜೀವನದರ್ಶನ’ ಈ ಗ್ರಂಥವನ್ನು ತಂದು ನನ್ನ ತಂದೆಯ ಕೈಯಲ್ಲಿ ಕೊಟ್ಟರು ಮತ್ತು ಅವರು ನನ್ನ ತಂದೆಗೆ, “ಚಿಂತಿಸಬೇಡಿ ಗುರುದೇವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದ್ದಾರೆ” ಎಂದು ಹೇಳಿದರು. ಆಗ ನನ್ನ ತಂದೆಯ ಕಣ್ಣುಗಳು ತುಂಬಿ ಬಂದವು. ಪೂ. ಭಾರ್ಗವರಾಮರು ನನ್ನ ತಂದೆಗೆ ಸಕಾರಾತ್ಮಕವಾಗಿರಲು ಸಹಾಯ ಮಾಡಿದರು ಮತ್ತು ‘ಗುರುದೇವರೇ ನಮಗೆ ಆಧಾರಸ್ತಂಭರಾಗಿದ್ದಾರೆ’, ಎಂದು ಅವರು ಸುಲಭ ಭಾಷೆಯಲ್ಲಿ ಹೇಳಿದರು.

೩. ಕೊರೊನಾದ ಕಾಲಾವಧಿಯಲ್ಲಿ ಸಾಧಕರು ಸೇವೆಯನ್ನು ಮಾಡುವ ವಾಸ್ತುವಿನಲ್ಲಿ ಬರಲು ಹಠ ಮಾಡುವ ಮಹಿಳೆಗೆ ‘ಗುರುದೇವರು ನಿಮ್ಮ ಮನೆಯಲ್ಲಿಯೂ ಇದ್ದಾರೆ’, ಎಂದು ಹೇಳುವುದು

ಕೊರೊನಾದ ಕಾಲಾವಧಿಯಲ್ಲಿ ಒಮ್ಮೆ ಓರ್ವ ಮಹಿಳೆಯು ಸಾಧಕರು ಸೇವೆಯನ್ನು ಮಾಡುವ ವಾಸ್ತುವಿನಲ್ಲಿ ಬರಲು ತುಂಬಾ ಹಠ ಮಾಡುತ್ತಿದ್ದಳು. ಪೂ. ಭಾರ್ಗವರಾಮರು ಈ ದೃಶ್ಯವನ್ನು ನೋಡಿದ್ದರು. ಮರುದಿನ ಆ ಮಹಿಳೆಯು ಪೂ. ಭಾರ್ಗವರಾಮರಿಗೆ ವಾಸ್ತುವಿನ ಗೇಟು ತೆರೆಯಲು ಹೇಳಿದಳು. ಆಗ ಪೂ. ಭಾರ್ಗವರಾಮರು ಆ ಮಹಿಳೆಗೆ, “ಗುರುದೇವರು ಎಲ್ಲ ಕಡೆಗೆ (ಸೂಕ್ಷ್ಮದಿಂದ) ಇದ್ದಾರೆ. ಅವರು ನಿಮ್ಮ ಮನೆಯಲ್ಲಿಯೂ ಇದ್ದಾರೆ. ಅವರು ನಿಮ್ಮ ಮನೆಗೆ ಪ್ರತಿದಿನ ಬರುತ್ತಾರೆ. ನೀವು ನೋಡಲಿಲ್ಲವೇ ?” ಎಂದು ಕೇಳಿದರು. ಅನಂತರ ಪೂ. ಭಾರ್ಗವರಾಮರು ಓಡಿ ಹೋಗಿ ಜವಾಬ್ದಾರ ಸಾಧಕರನ್ನು ಕರೆದುಕೊಂಡು ಬಂದರು.

೪. ಗುರುದೇವರ ಮೇಲಿನ ದೃಢ ಶ್ರದ್ಧೆ

ಕೊರೊನಾ ಮಹಾಮಾರಿಯ ಕಾಲದಲ್ಲಿ ಸಾಧಕ ಶ್ರೀ. ರೂಪೇಶ ಗೋಕರ್ಣರ ಜ್ವರ ಕಡಿಮೆ ಆಗುತ್ತಿರಲಿಲ್ಲ. ಅವರನ್ನು ಕೊರೊನಾದ ಪರೀಕ್ಷೆಯನ್ನು ಮಾಡಲು ಕರೆದುಕೊಂಡು ಹೋಗುವಾಗ ಪೂ. ಭಾರ್ಗವರಾಮ ನನಗೆ, “ಅವರು ಎಲ್ಲಿ ಹೋಗುತ್ತಿದ್ದಾರೆ ?” ಎಂದು ಕೇಳಿದರು. ಆಗ ನಾನು ಪೂ. ಭಾರ್ಗವರಾಮರಿಗೆ ಅದರ ಬಗ್ಗೆ ಹೇಳಿದೆ. ಆಗ ಪೂ. ಭಾರ್ಗವರಾಮರು ತಕ್ಷಣ “ಗುರುದೇವರು ಎಲ್ಲ ಸಾಧಕರ ರಕ್ಷಣೆಯನ್ನು ಮಾಡುತ್ತಿದ್ದಾರೆ. ರೂಪೇಶಣ್ಣನವರಿಗೆ ಕೊರೊನಾ ಆಗುವುದಿಲ್ಲ. ಅವರು ಬೇಗ ಗುಣಹೊಂದುವರು”, ಎಂದು ಹೇಳಿದರು. (ರೂಪೇಶಣ್ಣನವರಿಗೆ ಕೊರೊನಾ ಬರಲಿಲ್ಲ. – ಸೌ. ಭವಾನಿ ಪ್ರಭು)

೫. ಪ್ರತಿದಿನ ರಾತ್ರಿ ಮಲಗುವ ಮೊದಲು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಲ್ಲಿನ ಚಿತ್ರಗಳನ್ನು ಗಂಭೀರವಾಗಿ ಮತ್ತು ತುಂಬಾ ಹೊತ್ತು ನೋಡುವುದು ಹಾಗೂ ಅದರ ಬಗ್ಗೆ ಅವರು ಹೇಳಿದ ಕಾರಣ

ಪೂ. ಭಾರ್ಗವರಾಮ ಪ್ರತಿದಿನ ರಾತ್ರಿ ಮಲಗುವ ಮೊದಲು ೩೦ ನಿಮಿಷ ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ’ ಜೀವನದರ್ಶನ ಈ ಗ್ರಂಥವನ್ನು ನೋಡುತ್ತಾರೆ. ಅವರು ಬೇರೆ ಯಾವುದೇ ಪುಸ್ತಕವನ್ನು ನೋಡುವಾಗ ಸಹಜವಾಗಿ ಪುಟಗಳನ್ನು ತಿರುಗಿಸಿ ನೋಡುತ್ತಾರೆ; ಆದರೆ ಅವರು ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಲ್ಲಿನ ಪ್ರತಿಯೊಂದು ಚಿತ್ರವನ್ನು ತುಂಬಾ ಗಂಭೀರವಾಗಿ ಮತ್ತು ತುಂಬಾ ಹೊತ್ತು ನೋಡುತ್ತಾರೆ. ಇದರ ಬಗ್ಗೆ ಪೂ. ಭಾರ್ಗವರಾಮ ಇವರು, “ಈ ಗ್ರಂಥದಲ್ಲಿ ಗುರುದೇವರು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಛಾಯಾಚಿತ್ರಗಳಿವೆ. ಅವುಗಳನ್ನು ನೋಡಿ ‘ಅವರು ನಿಜವಾಗಲೂ ಇಲ್ಲಿಯೇ ಇದ್ದಾರೆ’, ಎಂದು ನನಗೆ ಅನಿಸುತ್ತದೆ ಮತ್ತು ನನ್ನ ಭಾವಜಾಗೃತವಾಗುತ್ತದೆ; ಆದುದರಿಂದ ನಾನು ಆ ಗ್ರಂಥವನ್ನು ನೋಡುತ್ತೇನೆ”, ಎಂದು ಹೇಳಿದರು.

೬. ಸೂಕ್ಷ್ಮ ವಿಷಯಗಳನ್ನು ಅರಿತುಕೊಳ್ಳುವ ಕ್ಷಮತೆ

೬ ಅ. ‘ಪರಾತ್ಪರ ಗುರು ಡಾ. ಆಠವಲೆಯವರ ಹೊಟ್ಟೆ ನೋಯುತ್ತಿರುವುದರಿಂದ ಅವರು ಊಟ ಮಾಡಲಿಲ್ಲ’, ಎಂಬುದನ್ನು ಸೂಕ್ಷ್ಮದಿಂದ ಗುರುತಿಸಿ ಅವರ ಛಾಯಾಚಿತ್ರಕ್ಕೆ ತಿಂಡಿಯನ್ನು ತಿನಿಸುವುದು : ೩೧.೩.೨೦೨೧ ರಂದು ರಾತ್ರಿ ೧೧ ಗಂಟೆಗೆ ಪೂ. ಭಾರ್ಗವರಾಮ ‘ಕ್ಲೆ’ದಿಂದ ಕೆಲವು ತಿಂಡಿಗಳ ಆಕಾರಗಳನ್ನು ತಯಾರಿಸಿದರು. (‘ಕ್ಲೆ’ ಅಂದರೆ ವಿವಿಧ ಆಕಾರಗಳನ್ನು ತಯಾರಿಸಲು ಉಪಯೋಗಿಸುವ ವಿಶಿಷ್ಟ ಪ್ರಕಾರದ ಮಣ್ಣು.) ಪೂ. ಭಾರ್ಗವರಾಮ ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದ ಎದುರಿಗೆ ಕುಳಿತು ಆ ತಿಂಡಿಯನ್ನು ಅವರ ಛಾಯಾಚಿತ್ರಕ್ಕೆ ಚಮಚದಿಂದ ತಿನ್ನಿಸುತ್ತಿದ್ದರು. ಅವರು ಗುರುದೇವರಿಗೆ ‘ನಿಮ್ಮ ಹೊಟ್ಟೆನೋವು ಕಡಿಮೆಯಾಗುವುದು’, ಎಂದು ಹೇಳುತ್ತಿದ್ದರು. ನಾನು ಅವರಿಗೆ, “ಏನು ಮಾಡುತ್ತಿರುವೆ ?” ಎಂದು ಕೇಳಿದೆನು. ಆಗ ಅವರು, “ಗುರುದೇವರ ಹೊಟ್ಟೆ ನೋಯುತ್ತಿದೆ ಮತ್ತು ಅವರು ಏನೂ ತಿನ್ನುತ್ತಿಲ್ಲ”, ಎಂದು ಹೇಳಿದರು. ಪೂ. ಭಾರ್ಗವರಾಮ ಗುರುದೇವರಿಗೆ ಪುನಃ ಪುನಃ ‘ಸ್ವಲ್ಪವಾದರೂ ತಿನ್ನಿ’, ಎಂದು ಹೇಳುತ್ತಿದ್ದರು. ನಾನು ಈ ಕುರಿತು ರಾಮನಾಥಿ ಆಶ್ರಮದಲ್ಲಿನ ಓರ್ವ ಸಾಧಕನಿಗೆ ಹೇಳಿದ ನಂತರ ಅವರು, “ಅಂದು ಗುರುದೇವರ ಹೊಟ್ಟೆ ನಿಜವಾಗಿಯೂ ಸರಿ ಇರಲಿಲ್ಲ. ಅವರಿಗೆ ಮಧ್ಯ ಮಧ್ಯದಲ್ಲಿ ಹೀಗೆ ತೊಂದರೆ ಆಗುತ್ತಿರುತ್ತದೆ’, ಎಂದು ಹೇಳಿದರು.

೬ ಆ. ಪರಾತ್ಪರ ಗುರು ಡಾ. ಆಠವಲೆಯವರಿಗೆ ತುಂಬಾ ದಣಿವು ಆಗಿರುವುದನ್ನು ಸೂಕ್ಷ್ಮದಿಂದ ಗುರುತಿಸಿ ಅವರ ಛಾಯಾಚಿತ್ರದ ಎದುರಿಗೆ ಔಷಧಿಗಳನ್ನು ಇಡುವುದು ಮತ್ತು ಪ್ರಾರ್ಥನೆ ಹಾಗೂ ನಾಮಜಪವನ್ನು ಮಾಡುವುದು : ೧.೭.೨೦೨೧ ರಂದು ಸಾಯಂಕಾಲ ೬ ಗಂಟೆಗೆ ಪೂ. ಭಾರ್ಗವರಾಮ ತುಂಬಾ ಗಂಭೀರ ರೀತಿಯಲ್ಲಿ ನನಗೆ, “ಗುರುದೇವರಿಗೆ ಔಷಧಿಯನ್ನು ಕೊಡುವುದಿದೆ”, ಎಂದು ಹೇಳಿದರು ಅನಂತರ ಪೂ. ಭಾರ್ಗವರಾಮರು ಶೀತಕಪಾಟಿನಲ್ಲಿರುವ ತುಳಸಿಯ ರಸವನ್ನು ಒಂದು ಲೋಟದಲ್ಲಿ ಹಾಕಿದರು ಮತ್ತು ಅದನ್ನು ದೇವರಕೋಣೆಯಲ್ಲಿನ ಗುರುದೇವರ ಛಾಯಾಚಿತ್ರದ ಎದುರಿಗೆ ಇಟ್ಟರು. ಅವರು ಕೈ ಜೋಡಿಸಿ ಮನಸ್ಸಿನಲ್ಲಿಯೇ ಭಾವಪೂರ್ಣ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವರು ಕುಳಿತುಕೊಂಡು ‘ಹಂ, ಹಂ’, ಎಂಬ ಜಪವನ್ನು ಮಾಡತೊಡಗಿದರು. ಈ ಕುರಿತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಹೇಳಿದ ನಂತರ ಅವರು, “ಗುರುದೇವರಿಗೆ ಅಂದು ತುಂಬಾ ದಣಿವು ಇತ್ತು” ಎಂದು ಹೇಳಿದರು. ಆಗ ‘ಪೂ. ಭಾರ್ಗವರಾಮರು ಸತತವಾಗಿ ಗುರುದೇವರ ಅನುಸಂಧಾನದಲ್ಲಿದ್ದು ಅದಕ್ಕನುಸಾರ ಕೃತಿಗಳನ್ನು ಮಾಡುತ್ತಾರೆ’, ಎಂಬುದು ನನ್ನ ಗಮನಕ್ಕೆ ಬಂದಿತು.

೭. ಪರಾತ್ಪರ ಗುರುದೇವರ ಜನ್ಮೋತ್ಸವದ ಸಮಾರಂಭದ ಸಮಯದಲ್ಲಿ ಪೂ. ಭಾರ್ಗವರಾಮ ಇವರ ಧ್ಯಾನಾವಸ್ಥೆ !   

೨೦೨೧ ರಲ್ಲಿ ಪರಾತ್ಪರ ಗುರುದೇವರ ಜನ್ಮೋತ್ಸವದ ಸಮಾರಂಭದ ಸಮಯದಲ್ಲಿ ಪೂ. ಭಾರ್ಗವರಾಮ ನಮಸ್ಕಾರದ ಮುದ್ರೆಯಲ್ಲಿ ಕುಳಿತಿದ್ದರು. ಆಗ ಅವರು ಧ್ಯಾನಾವಸ್ಥೆಗೆ ಹೋಗುತ್ತಿದ್ದರು. ಅವರ ಧ್ಯಾನದ ಇಂತಹ ಸ್ಥಿತಿಯನ್ನು ನನಗೆ ಮೊದಲ ಬಾರಿಯೇ ನೋಡಲು ಸಿಕ್ಕಿತು.

– ಸೌ. ಭವಾನಿ ಭರತ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು, ಕರ್ನಾಟಕ. (೨೧.೧೦.೨೦೨೧)