ಮನುಷ್ಯನು ಯುವ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮನಸ್ಸಿನ ಮೇಲೆ ಒಳ್ಳೆಯ ಆಧ್ಯಾತ್ಮಿಕ ಸಂಸ್ಕಾರಗಳನ್ನು ಮಾಡಿದರೆ ಮರಣವು ಕಡಿಮೆ ದುಃಖದಾಯಕ ಮತ್ತು ಸಹನೀಯವಾಗುತ್ತದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಅರ್ಬುದರೋಗವಾದ ನನ್ನ ಸಹೋದರಿಯು ಈ ಮೊದಲು ತುಂಬಾ ನಾಮಜಪ ಮತ್ತು ಪಾರಾಯಣಗಳನ್ನು ಮಾಡಿದ್ದಾಳೆ; ಆದರೆ ಈಗ ಅವಳಿಗೆ ನಾಮಜಪ ಮತ್ತು ದೇವರ ಬಗ್ಗೆ ಏನು ಮಾಡಲು ಬೇಡವೆನಿಸುತ್ತಿದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ನನ್ನ ಓರ್ವ ಸಹೋದರಿಗೆ ಅನಾರೋಗ್ಯವಿದ್ದು ಕಳೆದ ೨-೩ ತಿಂಗಳುಗಳಿಂದ ಅರ್ಬುದರೋಗದ ಯಾತನೆಗಳನ್ನು (ತೀವ್ರ ನೋವುಗಳನ್ನು) ಭೋಗಿಸುತ್ತಿದ್ದಾಳೆ. ನನ್ನ ತಾಯಿ (ಸನಾತನದ ೯೦ ನೇ ಸಂತಳಾದ ಪೂ. (ಸೌ.) ಶೈಲಜಾ ಪರಾಂಜಪೆ ಅಜ್ಜಿ) ಅವಳನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದಳು. ಆಗ ಪೂ. ತಾಯಿ ಅವಳಿಗೆ, “ನೀನು ನಾಮಜಪವನ್ನು ಮಾಡು. ನಾನು ನಿನ್ನ ಕಿವಿಯ ಹತ್ತಿರ ನಿನಗೆ ಕೇಳಿಸುವಂತೆ ನಾಮಜಪವನ್ನು ಹಾಕಿಡುತ್ತೇನೆ, ಎಂದು ಹೇಳಿದಳು. ಪೂ. ತಾಯಿಯು ಅವಳ ಕಿವಿಯ ಹತ್ತಿರ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ನಾಮಜಪವನ್ನು ಸಂಚಾರವಾಣಿಯಲ್ಲಿ ಹಾಕಿಟ್ಟಳು. ಆಗ ಸಹೋದರಿಯು ‘ಬೇಡ. ಅದನ್ನು ನಿಲ್ಲಿಸು’, ಎಂದು ಹೇಳಿ ಕೂಗಾಡ ತೊಡಗಿದಳು. ಈ ನನ್ನ ಸಹೋದರಿಗೆ ಈ ಮೊದಲು ನಾಮಜಪವನ್ನು ಮಾಡಲು ತುಂಬಾ ಇಷ್ಟವಾಗುತ್ತಿತ್ತು. ಅವಳು ಅನೇಕ ಬಾರಿ ರುದ್ರ ಮತ್ತು ಸಪ್ತಶತಿ ಪಾರಾಯಣಗಳನ್ನು ಮಾಡಿದ್ದಾಳೆ. ಅವಳು ಅನೇಕ ಬಾರಿ ನೃಸಿಂಹವಾಡಿಗೆ ಹೋಗಿ ದತ್ತ ಮಹಾರಾಜರ ದರ್ಶನವನ್ನು ಪಡೆದಿದ್ದಾಳೆ. ಅವಳು ಗೋವಾದಲ್ಲಿನ ರಾಮನಾಥಿ ಆಶ್ರಮಕ್ಕೆ ಬಂದು ಗುರುದೇವರನ್ನೂ (ಪರಾತ್ಪರ ಗುರು ಡಾ. ಆಠವಲೆಯವರನ್ನು) ಭೇಟಿಯಾಗಿದ್ದಾಳೆ; ಆದರೆ ಈಗ ಅವಳಿಗೆ ನಾಮಜಪ ಮತ್ತು ದೇವರ ಬಗ್ಗೆ ಏನೂ ಮಾಡಲು ಬೇಡವೆನಿಸುತ್ತಿದೆ.

೨. ಸಹೋದರಿಯ ಈ ವರ್ತನೆಯ ಹಿಂದಿನ ಕಾರಣಗಳು

ಮನುಷ್ಯನು ಕೊನೆಯ ಕ್ಷಣ ಶರೀರಕ್ಕೆ ಆಗುವ ಯಾತನೆಗಳಿಂದ ಬೇಸರಪಡುತ್ತಾನೆ ಮತ್ತು ‘ಈಗ ದೇವರ ಬಗ್ಗೆ ಏನೂ ಮಾಡುವುದು ಬೇಡ’, ಎಂದು ಹೇಳತೊಡಗುತ್ತಾನೆ. ‘ಈಶ್ವರನು ನನಗೆ ಏನು ಒಳ್ಳೆಯದನ್ನು ಮಾಡಿದ್ದಾನೆ ? ನಾನು ಜೀವನವಿಡಿ ದೇವರ ಬಗ್ಗೆ ಎಷ್ಟೊಂದು ಮಾಡಿದ್ದೇನೆ’, ಎಂದು ಆ ಮನುಷ್ಯನು ಹೇಳತೊಡಗುತ್ತಾನೆ.

೩. ಇದನ್ನು ತಪ್ಪಿಸಲು ಇಡಬೇಕಾದ ದೃಷ್ಟಿಕೋನ

೩ ಅ. ಅಧ್ಯಾತ್ಮವನ್ನು ಮೇಲುಮೇಲಿನಿಂದ ಜೀವಿಸದೇ  ಚಿತ್ತದ ಮೇಲೆ ಅಧ್ಯಾತ್ಮದ ಸಂಸ್ಕಾರಗಳನ್ನು ಮಾಡುವುದು ಆವಶ್ಯಕ ! : ಇದರ ಮೇಲಿನ ದೃಷ್ಟಿಕೋನ ಹೀಗಿದೆ, ‘ಅಧ್ಯಾತ್ಮವನ್ನು ಮೇಲುಮೇಲಿನಿಂದ ಜೀವಿಸದೇ, ಅದನ್ನು ಅಂತರ್ಮನಸ್ಸಿನಿಂದ ಜೀವಿಸಬೇಕು. ಅಂದರೆ ಅಧ್ಯಾತ್ಮದ ಆಸಕ್ತಿಯು ಕೇವಲ ‘ದೇವಸ್ಥಾನಕ್ಕೆ ಹೋಗುವುದು, ನಾಮಜಪ ಮಾಡುವುದು, ದೇವರಿಗೆ ಹೂವುಗಳನ್ನು ಅರ್ಪಿಸುವುದು ಅಥವಾ ಕಥೆ-ಪುರಾಣಗಳನ್ನು ಕೇಳುವುದು, ಇಷ್ಟಕ್ಕೇ ಸೀಮಿತವಾಗಿರಬಾರದು. ಇದಕ್ಕೆ ‘ಮಾನಸಿಕ ಸ್ತರದ ಅಧ್ಯಾತ್ಮ’ ಎನ್ನುತ್ತಾರೆ. ಮೇಲುಮೇಲಿನ  ಕರ್ಮಕಾಂಡಗಳನ್ನು ಮಾಡುವುದರಿಂದ ಮನಸ್ಸಿನಲ್ಲಿ ಕೇವಲ ಅಧ್ಯಾತ್ಮದ ಆಸಕ್ತಿ ನಿರ್ಮಾಣವಾಗುತ್ತದೆ; ಆದರೆ ಮನಸ್ಸಿನ ಮೇಲೆ ಅಧ್ಯಾತ್ಮದ ಸಂಸ್ಕಾರಗಳು ನಿರ್ಮಾಣವಾಗುವುದಿಲ್ಲ. ಇದಕ್ಕಾಗಿ ಪ್ರತ್ಯಕ್ಷ ಸೇವೆಯನ್ನು ಮಾಡುವುದು, ಹಾಗೆಯೇ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಅತ್ಯಂತ ಆವಶ್ಯಕವಾಗಿರುತ್ತದೆ.

೩ ಆ. ‘ಪ್ರಾರಬ್ಧಕ್ಕನುಸಾರ ದುಃಖಗಳನ್ನು ಭೋಗಿಸುತ್ತಿದ್ದೇನೆ’, ಎಂದು ಮನಸ್ಸಿಗೆ ಅರಿವು ಮಾಡಿಕೊಡಬೇಕು : ಜೀವನವಿಡಿ ನಮ್ಮ ಮನಸ್ಸಿಗೆ ‘ನಾನು ನನ್ನ ಪ್ರಾರಬ್ಧಕ್ಕನುಸಾರ ದುಃಖಗಳನ್ನು ಭೋಗಿಸುತ್ತಿದ್ದೇನೆ. ದೊಡ್ಡ ದೊಡ್ಡ ಸಂತರಿಗೂ ಪ್ರಾರಬ್ಧವು ತಪ್ಪಿಲ್ಲ, ಇನ್ನು ನನ್ನದು ಯಾವ ಲೆಕ್ಕ ?’ ಎಂದು ಅರಿವು ಮಾಡಿಕೊಡಬೇಕು.

೪. ಯುವವಯಸ್ಸಿನಲ್ಲಿ ಸಾಧನೆಯನ್ನು ಮಾಡಿ ಜೀವನದ ಕೊನೆಯ ದಿನದ ಸಿದ್ಧತೆಯನ್ನು ಮಾಡಿಡಬೇಕು

ಈ ದೃಷ್ಟಿಕೋನದಿಂದ ಜೀವನದ ಕೊನೆಯ ದಿನದ (ಮರಣದ ಸಮಯದ) ಸಿದ್ಧತೆಯನ್ನು ಯುವಾ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮಾಡಿಟ್ಟುಕೊಳ್ಳಬೇಕು, ಹೀಗಾದರೆ ಮಾತ್ರ ಮರಣದ ಮಾನಸಿಕ ಯಾತನೆಗಳು (ತೀವ್ರ ದುಃಖಗಳು) ಸುಲಭವಾಗುತ್ತವೆ ಮತ್ತು ಆ ಸಮಯದಲ್ಲಿ ಯಾತನೆಗಳು ಆಗುತ್ತಿರುವಾಗಲೂ ದೇವರ ನೆನಪಾಗುತ್ತದೆ. ಇದಕ್ಕಾಗಿ ಯುವಾ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮೃತ್ಯುವಿನ ಕ್ಷಣವನ್ನು ಜಯಿಸುವುದು ಆವಶ್ಯಕವಾಗಿರುತ್ತದೆ, ಇಲ್ಲದಿದ್ದರೆ ಸಮಯವು ಹೊರಟು ಹೋಗುತ್ತದೆ ಮತ್ತು ಈ ರೀತಿಯ ಮರಣದ ಮಾನಸಿಕ ಯಾತನೆಗಳನ್ನು ಎದುರಿಸಬೇಕಾಗುತ್ತದೆ.

ಸಾಧಕರೇ, ಕೇವಲ ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆ ಎಂದು  ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು. ಯುವಾ ವಯಸ್ಸಿನಲ್ಲಿಯೇ ತಮ್ಮ ಮನಸ್ಸನ್ನು ಎಲ್ಲ ರೀತಿಯ ಆಧ್ಯಾತ್ಮಿಕ ಸಂಸ್ಕಾರಗಳೊಂದಿಗೆ ತಯಾರಿಸಬೇಕು ಹೀಗೆ ಮಾಡಿದರೆ ಮಾತ್ರ ಮರಣವು ಸುಲಭ ಮತ್ತು ಆನಂದಮಯವಾಗುತ್ತದೆ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಕೊಳ್ಳಿಮಲೈ, ತಮಿಳುನಾಡು. (೧೫.೧.೨೦೨೧)