‘೨೦.೪.೨೦೧೯ ರಂದು ನಾನು ಮತ್ತು ಶ್ರೀ. ಪ್ರಕಾಶ ಮರಾಠೆಕಾಕಾ (ಆಧ್ಯಾತ್ಮಿಕ ಮಟ್ಟ ಶೇ. ೬೭) ನಾವಿಬ್ಬರು ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಮಂತ್ರಪಠಣಕ್ಕಾಗಿ ಹೋಗಿದ್ದೆವು. ಮಂತ್ರಪಠಣ ಮಾಡಿದ ನಂತರ ನಾನು ಕ್ಷಮೆ ಯಾಚನೆಯನ್ನು ಮಾಡಿದೆನು. (ಮಂತ್ರಪಠಣದಲ್ಲಿ ಏನಾದರೂ ತಪ್ಪುಗಳಾಗಿದ್ದರೆ ಅಥವಾ ಉಚ್ಚರಿಸುವಾಗ ಏರು-ಇಳಿತವಾಗಿದ್ದರೆ ನಾನು ಕ್ಷಮೆ ಯಾಚನೆ ಮಾಡುತ್ತೇನೆ.) ಅನಂತರ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಮುಂದಿನಂತೆ ನನ್ನ ಸಂಭಾಷಣೆ ಆಯಿತು.
ಪರಾತ್ಪರ ಗುರು ಡಾ. ಆಠವಲೆ : ಕರ್ನಾಟಕದಲ್ಲಿ ಎಲ್ಲರೂ ಕ್ಷಮೆ ಯಾಚನೆಯನ್ನು ಮಾಡುತ್ತಾರೆಯೇ ?
ನಾನು : ಹೌದು, ಮಾಡುತ್ತಾರೆ.
ಪರಾತ್ಪರ ಗುರು ಡಾ. ಆಠವಲೆ : ನೀನು ಈಗೇಕೆ ಕ್ಷಮೆ ಯಾಚನೆಯನ್ನು ಮಾಡಿದೆ ?
ನಾನು : ಪಠಣವನ್ನು ಮಾಡುವಾಗ ಏನಾದರೂ ತಪ್ಪಾಗಿರಬಹುದೆಂದು ಮಾಡಿದೆನು.
ಪರಾತ್ಪರ ಗುರು ಡಾ. ಆಠವಲೆ : ಹಾಗೆ ಆಗಿದೆಯೇ ?
ನಾನು : ಇಲ್ಲ.
ಪರಾತ್ಪರ ಗುರು ಡಾ. ಆಠವಲೆ : ಹಾಗಾದರೆ ಏಕೆ ಕ್ಷಮೆ ಯಾಚನೆ ಮಾಡಿದೆ ?
ನಾನು : ಕೆಲವೊಮ್ಮೆ ಉಚ್ಚರಿಸುವಾಗ ಒಂದೇ ಲಯದಲ್ಲಿ ಬರುವುದಿಲ್ಲ. (ಸ್ವರಗಳು ಮೇಲೆ-ಕೆಳಗೆ ಆಗುತ್ತವೆ. ಅದಕ್ಕೆ.)
ಪರಾತ್ಪರ ಗುರು ಡಾ. ಆಠವಲೆ : ಹಾಗೆ ಆಗಿದೆಯೇ ?
ನಾನು : ಇಲ್ಲ.
ಪರಾತ್ಪರ ಗುರು ಡಾ. ಆಠವಲೆ : ಹಾಗಾದರೆ ಏಕೆ ಕ್ಷಮೆ ಯಾಚನೆ ಮಾಡಿದೆ ?
ಅನಂತರ ನಾನು ಏನು ಮಾತನಾಡದೇ ಸುಮ್ಮನೆ ನಿಂತೆನು. ನಂತರ ಅವರು ನನಗೆ, “ಯಾವಾಗ ತಪ್ಪಾಗುತ್ತದೆಯೋ, ಆಗಲೇ ಕ್ಷಮೆ ಯಾಚನೆಯನ್ನು ಮಾಡಬೇಕು. ತಪ್ಪಾಗದಿದ್ದರೆ, ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ಸುಮ್ಮನೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ ಮತ್ತು ಅದರ ಮಹತ್ವವು ಕಡಿಮೆಯಾಗುತ್ತದೆ. ಯಾವಾಗ ತಪ್ಪಾಗುವುದಿಲ್ಲವೋ ಆಗ ದೇವರಲ್ಲಿ, ‘ದೇವರೇ ನೀವೇ ಇನ್ನೂ ಉತ್ತಮ ರೀತಿಯಿಂದ ಮಾಡಿಸಿಕೊಳ್ಳಿರಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು” ಎಂದು ಹೇಳಿದರು.
– ಶ್ರೀ. ಚೇತನ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೪.೨೦೧೯)